Udayavni Special

ನಡಹಳ್ಳಿಯಿಂದ ಬಿಜೆಪಿಯ 2 ವಿಕೆಟ್‌ ಪತನ


Team Udayavani, Apr 12, 2018, 5:46 PM IST

vij-1.jpg

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ವಲಸಿಗರಿಗೆ ಟಿಕೆಟ್‌ ಘೋಷಣೆ ಆಗುತ್ತಲೇ ಬಿಜೆಪಿಯಲ್ಲಿ ಬಂಡಾಯದ ಕಹಳೆ ಜೋರಾಗಿದೆ. ಸದ್ದಿಲ್ಲದೇ ಬಿಜೆಪಿ ನಡೆಸಿದ ಸರ್ಜಿಕಲ್‌ ತಂತ್ರಕ್ಕೆ, ಜೆಡಿಎಸ್‌ ಆಪರೇಶನ್‌ ಬಿಜೆಪಿ ನಡೆಸಿ ರಾಜಕೀಯ ಪ್ರತಿತಂತ್ರ ಹೆಣದು ಸಫಲತೆ ಮೆರೆದಿದೆ. ಜಿಲ್ಲೆಯಲ್ಲಿ ಜೆಡಿಎಸ್‌ ವಲಸಿಗರಿಗೆ ಮಣೆ ಹಾಕಿದ ಬಿಜೆಪಿಗೆ ಜೆಡಿಎಸ್‌ ಕೂಡ ಪ್ರತಿ ತಂತ್ರವನ್ನೇ ಹೆಣೆದು ಬಿಜೆಪಿ ತೊರೆದವರಿಗೆ ಟಿಕೆಟ್‌ ನೀಡಿ ತಿರುಗೇಟು ನೀಡಿದೆ.

ಮತ್ತೂಂದೆಡೆ ಬಿಜೆಪಿ ಸೇರ್ಪಡೆ ಜೊತೆಗೆ ಎ.ಎಸ್‌. ಪಾಟೀಲ ನಡಹಳ್ಳಿ ಕಣ್ಣಿಟ್ಟಿರುವ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಇಬ್ಬರು ನಾಯಕರು ಜೆಡಿಸ್‌ ಸೇರಿ ಸ್ಪರ್ಧೆಗೆ ಅಣಿಯಾಗಿದ್ದಾರೆ. ಮತ್ತೂಂದು ಕ್ಷೇತ್ರದಲ್ಲಿ ಬಿಜೆಪಿಯ ಪ್ರಮುಖ ವಿಕೆಟ್‌ ಪತನಗೊಳಿಸಲು ಜೆಡಿಎಸ್‌ ಸಿದ್ಧತೆ ನಡೆಸಿದೆ.
 
ಕಾಂಗ್ರೆಸ್‌ ಉಚ್ಛಾಟಿತ ದೇವರಹಿಪ್ಪರಗಿ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿಗೆ ಮುದ್ದೇಬಿಹಾಳ ಕ್ಷೇತ್ರದಲ್ಲಿ ಜೆಡಿಎಸ್‌ ಟಿಕೆಟ್‌ ಘೋಷಣೆ ಆಗಿತ್ತು. ಆದರೂ ಅವರು ಸದ್ದಿಲ್ಲದೇ ಬಿಜೆಪಿ ಸೇರಿದರು. ಇದರ ಬೆನ್ನಹಿಂದೆಯೇ ದೇವರಹಿಪ್ಪರಗಿ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ರಾಜುಗೌಡ ಕುದರಿಸಾಲವಾಡಗಿ ಜೆಡಿಎಸ್‌ ಘೋಷಿತ ಅಭ್ಯರ್ಥಿಯಾಗಿದ್ದಾರೆ. ಇತ್ತ ಮುದ್ದೇಬಿಹಾಳ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಯಡಿಯೂರಪ್ಪ ಆಪ್ತ ಬಣದ ಮಂಗಳಾದೇವಿ ಬಿರಾದಾರ ಬುಧವಾರ ಹುಬ್ಬಳ್ಳಿಗೆ ತೆರಳಿ ಜೆಡಿಎಸ್‌ ಸೇರಿದ್ದಾರೆ. ಜೊತೆಗೆ ಮುದ್ದೇಬಿಹಾಳ ಕ್ಷೇತ್ರದಿಂದಲೇ ಜೆಡಿಎಸ್‌ ಅಭ್ಯರ್ಥಿ ಆಗುವುದು ಕೂಡ ಖಚಿತವಾಗಿದೆ. ಆ ಮೂಲಕ ಬಿಜೆಪಿ ಎರಡು ಪ್ರಮುಖ ವಿಕೆಟ್‌ ಪತನವಾಗಿವೆ. ವಿಧಾನಸಭೆ ಚುನಾವಣೆಯಾದ ಮೊದಲ ವಾರದಲ್ಲಿ ಬಿಜೆಪಿ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ವಿಜಯಪುರ ಜಿಲ್ಲೆಯ ನಾಲ್ಕು ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಘೋಷಣೆ ಆಗಿದ್ದವು.

ಅದರಲ್ಲಿ ಬಿಜೆಪಿ ಉಚ್ಛಾಟಿತ ಪಕ್ಷೇತರ ಮೇಲ್ಮನೆ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ನಗರ ಕ್ಷೇತ್ರಕ್ಕೆ ಹಾಗೂ ಮುದ್ದೇಬಿಹಾಳ ಕ್ಷೇತ್ರಕ್ಕೆ ಜೆಡಿಎಸ್‌ ತೊರೆದು ಬಂದಿರುವ ಕಾಂಗ್ರೆಸ್‌ ಉಚ್ಛಾಟಿತ ಶಾಸಕ ಎ.ಎಸ್‌. ಪಾಟೀಲ ಅವರಿಗೆ ಮುದ್ದೇಬಿಹಾಳ ಕ್ಷೇತ್ರಕ್ಕೆ ಟಿಕೆಟ್‌ ಪ್ರಕಟಿಸಿದ್ದು ಸ್ಥಳೀಯ ನಾಯಕರಲ್ಲಿ ಬಂಡಾಯ ಏಳುವಂತೆ ಮಾಡಿದೆ.

ವಿಜಯಪುರ ನಗರ ಕ್ಷೇತ್ರದಲ್ಲಿ ಬಸನಗೌಡ ಪಾಟೀಲ ಯತ್ನಾಳ ಹೆಸರು ಘೋಷಣೆ ಆಗುತ್ತಲೇ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಬಂಡಾಯ ಎದ್ದಿದ್ದಾರೆ. ಈಗಾಗಲೇ ಬಹಿರಂಗ ಬಂಡಾಯ ಸಾರಿ ಹಲವು ರೀತಿಯ ಪ್ರತಿಭಟನೆ ಮಾಡಿದ್ದಾರೆ. ಪಕ್ಷದ ಹಿತದಿಂದ ನಾನು ಪಕ್ಷ ತೊರೆಯುವುದಿಲ್ಲ ಎನ್ನುತ್ತಲೇ, ನನ್ನನ್ನು ನಂಬಿರುವ ಕಾರ್ಯಕರ್ತರ ರಾಜಕೀಯ ಭವಿಷ್ಯಕ್ಕಾಗಿ ಅವರ ನಿರ್ಧಾರದಂತೆ ನಡೆಯುತ್ತೇನೆ ಎನ್ನುವ ಮಾತೂ ಸೇರಿದ್ದಾರೆ. 

ಇದರಿಂದ ಮೊದಲ ಪಟ್ಟಿಯಲ್ಲಿ ನಾಲ್ಕು ಟಿಕೆಟ್‌ ಘೋಷಿಸಿ ಬಿಜೆಪಿ ಈಗಾಗಲೇ ಮೂಲ ಎರಡು ಪ್ರಮುಖ ವಿಕೆಟ್‌ ಕಳೆದುಕೊಂಡಿದೆ. ಇದೀಗ ವಿಜಯಪುರ ನಗರ ಕ್ಷೇತ್ರದಲ್ಲೂ ಮತ್ತೂಂದು ವಿಕೆಟ್‌ ಪತನ ಖಚಿತ ಎಂಬ ಮಾತು ಪಟ್ಟಣಶೆಟ್ಟಿ ಅವರ ಮಾತಿನಿಂದಲೇ ಸ್ಪಷ್ಟವಾಗಿದೆ.

ಜಿ.ಎಸ್‌. ಕಮತರ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

* ಉಡುಪಿ: ಶಾರ್ಟ್ ಸರ್ಕ್ಯೂಟ್ ನಿಂದ ಬ್ಯಾಂಕ್ ನಲ್ಲಿ ಅಗ್ನಿ ಆಕಸ್ಮಿಕ

ಉಡುಪಿ: ಶಾರ್ಟ್ ಸರ್ಕ್ಯೂಟ್ ನಿಂದ ಬ್ಯಾಂಕ್ ನಲ್ಲಿ ಅಗ್ನಿ ಆಕಸ್ಮಿಕ, ಕಡತಗಳಿಗೆ ಹಾನಿ

ಕೊನೆಗೂ ಸಿಕ್ಕಿ ಬಿದ್ದ ಎಂಟು ಕಾನ್ಪುರ ಪೊಲೀಸರ ಹತ್ಯೆ ಆರೋಪಿ ವಿಕಾಸ್ ದುಬೆ!

ಕೊನೆಗೂ ಸಿಕ್ಕಿ ಬಿದ್ದ ಎಂಟು ಕಾನ್ಪುರ ಪೊಲೀಸರ ಹತ್ಯೆ ಆರೋಪಿ ವಿಕಾಸ್ ದುಬೆ!

ಅಮೆರಿಕದ ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್ ಪ್ರತಿಮೆಗೆ ಬೆಂಕಿ

ಅಮೆರಿಕದ ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್ ಪ್ರತಿಮೆಗೆ ಬೆಂಕಿ

ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿ: ಕೇವಲ 17.4 ಓವರ್ ಗೆ ಮುಗಿದ ಮೊದಲ ದಿನದ ಪಂದ್ಯ

ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿ: ಕೇವಲ 17.4 ಓವರ್ ಗೆ ಮುಗಿದ ಮೊದಲ ದಿನದ ಪಂದ್ಯ

ವಾಸೀಂ ಬರಿ ಹತ್ಯೆ ಪ್ರಕರಣ: ರಕ್ಷಣೆಗೆ ನಿಯೋಜಿಸಲಾಗಿದ್ದ ಎಂಟು ಪೊಲೀಸರ ಬಂಧನ

ವಾಸೀಂ ಬರಿ ಹತ್ಯೆ ಪ್ರಕರಣ: ರಕ್ಷಣೆಗೆ ನಿಯೋಜಿಸಲಾಗಿದ್ದ ಎಂಟು ಪೊಲೀಸರ ಬಂಧನ

kanpura

ಕಾನ್ಪುರ ಎನ್ ಕೌಂಟರ್: ವಿಕಾಸ್ ದುಬೆಯ ಮತ್ತಿಬ್ಬರು ಸಹಚರರನ್ನು ಹತ್ಯೆಗೈದ ಪೊಲೀಸ್ ಪಡೆ

ರಾ. ಹೆದ್ದಾರಿ-73ರ ಮುಂಡಾಜೆ ಬಳಿ ರಸ್ತೆಗುರುಳಿದ ಮರ: ಸಂಚಾರ ಅಸ್ತವ್ಯಸ್ತ

ರಾ. ಹೆದ್ದಾರಿ-73ರ ಮುಂಡಾಜೆ ಬಳಿ ರಸ್ತೆಗುರುಳಿದ ಮರ: ಸಂಚಾರ ಅಸ್ತವ್ಯಸ್ತ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-July-19

ಕೋವಿಡ್ ವಾರಿಯರ್ಸ್‌ ನಿಜವಾದ ದೇವರು

8-July-18

ಜಿಪಂ ಅಧ್ಯಕ್ಷೆ ಸುಜಾತಾಗೆ ಸನ್ಮಾನ

8-July-05

22 ಜನರಿಗೆ ಸೋಂಕು; 1 ಸಾವು

ಹಡಪದ ಅಪ್ಪಣ್ಣ ಬಸವಣ್ಣನ ಪ್ರತಿರೂಪ: ಪಾಟೀಲ

ಹಡಪದ ಅಪ್ಪಣ್ಣ ಬಸವಣ್ಣನ ಪ್ರತಿರೂಪ: ಪಾಟೀಲ

ಮತ್ಸ್ಯ ಸಂಪದ ಯೋಜನೆ ಸಕಾಲಕ್ಕೆ  ಜಾರಿಯಾಗಲಿ: ಡಿಸಿ

ಮತ್ಸ್ಯ ಸಂಪದ ಯೋಜನೆ ಸಕಾಲಕ್ಕೆ ಜಾರಿಯಾಗಲಿ: ಡಿಸಿ

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani


ಹೊಸ ಸೇರ್ಪಡೆ

ಕೋವಿಡ್‌ ಎಫೆಕ್ಟ್ : ಡಬ್ಲ್ಯುಎಚ್‌ಒಗೆ ಅಮೆರಿಕ ವಿದಾಯ

ಕೋವಿಡ್‌ ಎಫೆಕ್ಟ್ : ಡಬ್ಲ್ಯುಎಚ್‌ಒಗೆ ಅಮೆರಿಕ ವಿದಾಯ

* ಉಡುಪಿ: ಶಾರ್ಟ್ ಸರ್ಕ್ಯೂಟ್ ನಿಂದ ಬ್ಯಾಂಕ್ ನಲ್ಲಿ ಅಗ್ನಿ ಆಕಸ್ಮಿಕ

ಉಡುಪಿ: ಶಾರ್ಟ್ ಸರ್ಕ್ಯೂಟ್ ನಿಂದ ಬ್ಯಾಂಕ್ ನಲ್ಲಿ ಅಗ್ನಿ ಆಕಸ್ಮಿಕ, ಕಡತಗಳಿಗೆ ಹಾನಿ

9-July-03

ಮತ್ತೆ 18 ಮಂದಿಗೆ ಸೋಂಕು

9-July-02

3 ಗ್ರಾಮ ಸೀಲ್‌ಡೌನ್‌: ತಹಶೀಲ್ದಾರ್‌ ಭೇಟಿ

“ಧಾರ್ಮಿಕ ದತ್ತಿ ಪ್ರಕರಣಗಳ ಇತ್ಯರ್ಥಕ್ಕೆ ಹೆಚ್ಚುವರಿ ವಕೀಲರ ನೇಮಕ’

“ಧಾರ್ಮಿಕ ದತ್ತಿ ಪ್ರಕರಣಗಳ ಇತ್ಯರ್ಥಕ್ಕೆ ಹೆಚ್ಚುವರಿ ವಕೀಲರ ನೇಮಕ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.