ಅವೈಜ್ಞಾನಿಕ ಫಾಗಿಂಗ್‌ ಭೀತಿ

•ಅಸ್ತಮಾ ರೋಗಿಗಳಿಗೆ ಕೆಮ್ಮು ಉಲ್ಬಣ •ಮಕ್ಕಳಲ್ಲಿ ಅಲರ್ಜಿಯಂತಹ ಸಮಸ್ಯೆ ಸಾಧ್ಯತೆ

Team Udayavani, Aug 20, 2019, 4:20 PM IST

vp-tdy-01

ನಿಡಗುಂದಿ: ಕಳೆದ ಹಲವಾರು ದಿನಗಳಿಂದ ನೆರೆ ಪೀಡಿತ ಗ್ರಾಮಗಳಲ್ಲಿ ಸ್ಥಳೀಯ ಸಂಸ್ಥೆಗಳು ಮಲೇರಿಯಾ, ಡೆಂಘೀಯಂತಹ ಕಾಯಿಲೆಗಳ ನಿಯಂತ್ರಣಕ್ಕಾಗಿ ಮಾಡುತ್ತಿರುವ ಫಾಗಿಂಗ್‌ ಸಾರ್ವಜನಿಕರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆಯೇ ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ.

ನಗರ, ಪಟ್ಟಣ ಸೇರಿದಂತೆ ಗ್ರಾಮಗಳ ಪ್ರದೇಶದಲ್ಲಿ ಫಾಗಿಂಗ್‌ ಮೂಲಕ ಸೊಳ್ಳೆ ನಿಯಂತ್ರಣ ಮಾಡಬೇಕೆನ್ನುವ ಉದ್ದೇಶವನ್ನು ಹೊಂದಿರಲಾಗುತ್ತದೆ. ಅದರಂತೆ ನೆರೆ ಪ್ರದೇಶದ ಬಹುತೇಕ ಕಡೆ ಫಾಗಿಂಗ್‌ ಮಾಡುವ ಮೂಲಕ ಸೊಳ್ಳೆ ನಿಯಂತ್ರಣ ನಡೆಸಲಾಗುತ್ತಿದೆ. ಪ್ರತಿನಿತ್ಯ ಎರಡು ಬಾರಿ ಸಾಂಕ್ರಾಮಿಕ ರೋಗ ತಡೆಗೆ ಫಾಗಿಂಗ್‌ ಮಾಡಲಾಗುತ್ತಿದೆ. ಆದರೆ ಅವೈಜ್ಞಾನಿಕವಾಗಿ ಫಾಗಿಂಗ್‌ ಕಾರ್ಯ ನಡೆದರೆ ಸಾರ್ವಜನಿಕರಿಗೆ ತೊಂದರೆ ಕಟ್ಟಿಟ್ಟ ಬುತ್ತಿಯಾಗಲಿದೆ.

ಬಹುತೇಕ ಸ್ಥಳೀಯ ಸಂಸ್ಥೆಗಳಿಂದ ನಡೆಸಲ್ಪಡುವ ಈ ಫಾಗಿಂಗ್‌ ಅವೈಜ್ಞಾನಿಕವಾಗಿದ್ದರೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹಲವು ರಾಸಾಯನಿಕ ಅಂಶಗಳನ್ನು ಬಳಸಿ ನಡೆಸುವ ಫಾಗಿಂಗ್‌ ಜನರ ಅನಾರೋಗ್ಯಕ್ಕೆ ಕಾರಣವಾಗಲಿದೆ. ಅಸ್ತಮಾ ಕಾಯಿಲೆ ಹೊಂದಿರುವವರಿಗೆ ಅತಿ ಬೇಗನೆ ಈ ಫಾಗಿಂಗ್‌ ತಕ್ಷಣ ಪರಿಣಾಮ ಬೀರಲಿದೆ, ಜೊತೆಗೆ ಕೆಮ್ಮು ಉಲ್ಬಣಗೊಳ್ಳುತ್ತದೆ. ಮಕ್ಕಳಲ್ಲಿ ಅಲರ್ಜಿಯಂತಹ ಸಮಸ್ಯೆಗಳು ಕಂಡು ಬರುತ್ತವೆ ಎನ್ನುತ್ತವೆ ವೈದ್ಯ ಮೂಲಗಳು.

ನಿಂತ ನೀರಲ್ಲಿ ಗೂಡು ಕಟ್ಟುವ ಲಾರ್ವಾ: ಡೆಂಘೀ, ಚಿಕೂನ್‌ ಗುನ್ಯಾ, ಮಲೇರಿಯಾ ಹರಡುವಂತಹ ಸೊಳ್ಳೆಗಳು ಶುದ್ಧ, ಅಶುದ್ಧ ನೀರಿನಲ್ಲಿ ಗೂಡು ಕಟ್ಟುತ್ತವೆ. ಗೂಡಿನಿಂದ ಎರಡನೇ ದಿನಕ್ಕೆ ಸೊಳ್ಳೆಯಾಗಿ ಹೊರ ಬರುತ್ತದೆ. ಕನಿಷ್ಠ ಒಂದು ವಾರದವರೆಗೂ ಸೊಳ್ಳೆಗಳು ಆಯುಷ್ಯ ಹೊಂದಿರುತ್ತವೆ.

ಕಳೆದೊಂದು ವಾರದಿಂದ ಪ್ರವಾಹ ಪೀಡಿತರ ಪ್ರದೇಶದಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡಿದಂತಾಗಿದೆ. ಕಳೆದ ಹಲವಾರು ದಿನಗಳಿಂದ ಮನೆಯನ್ನು ಆಕ್ರಮಿಸಿದ ಪ್ರವಾಹದ ನೀರು ಜನರ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಲು ಸಾಧ್ಯತೆ ಇದೆ. ಇಂತಹ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳು ಹೆಚ್ಚಿನ ನಿಗಾವಹಿಸಿ ಕಾರ್ಯ ನಡೆಸಬೇಕಿದೆ.

ಗಬ್ಬೆದ್ದು ನಾರುವ ಪ್ರವಾಹ ಪೀಡಿತ ಪ್ರದೇಶ: ಕಳೆದೆರಡು ದಿನಗಳಿಂದ ಪ್ರವಾಹ ಕಡಿಮೆಯಾಗಿ ಮೊದಲಿನ ಸ್ಥಿತಿಗೆ ಬರಲು ಹೆಜ್ಜೆ ಹಾಕುತ್ತಿದೆ. ಬಹುತೇಕ ಜಲಾವೃತವಾದ ಮನೆಗಳಲ್ಲಿ ನೀರು ಸರಿದಿದೆ. ಆದರೆ, ಹಲವಾರು ದಿನಗಳಿಂದ ನಿಂತ ನೀರಿನಲ್ಲಿ ಹಲವಾರು ಕೆಟ್ಟ ಅಂಶಗಳನ್ನು ಬಿಟ್ಟು ಹೋಗಿರುತ್ತದೆ. ಗ್ರಾಮದ ಕೆಲ ಪ್ರದೇಶ ಜಲಾವೃತದಿಂದ ಇಳಿಮುಖವಾಗಿ ನೀರು ಸರಿದು ಆ ಪ್ರದೇಶ ಗಬ್ಬೆದ್ದು ನಾರುತ್ತಿವೆ.

ವಾಸನೆ ಇಡಿ ಊರನ್ನೆ ಆವರಿಸಿದ್ದು ಜನತೆ ಅನಾರೋಗ್ಯಕ್ಕೆ ತುತ್ತಾಗುವ ಮೊದಲೇ ಸ್ಥಳೀಯ ಸಂಸ್ಥೆಗಳು ಸ್ವಚ್ಛತಾ ಕಾರ್ಯಕ್ಕೆ ಮುಂದಾಗಲು ಸೂಕ್ತ ನಿರ್ದೆಶನ ನೀಡಬೇಕು. ನೆರೆ ಪೀಡಿತ ಕೆಲ ಗ್ರಾಮಗಳಲ್ಲಿ ಮೊದಲಿನ ಪ್ರದೇಶ ಬಿಟ್ಟು ಬೇರೆಡೆ ಸ್ಥಳಾವಕಾಶ ನೀಡಿ ಎನ್ನುವ ಬೇಡಿಕೆಯೇ ಹೆಚ್ಚಾಗಿದೆ. ಹಿರಿಯ ಅಧಿಕಾರಿಗಳೆಲ್ಲ ಸುತ್ತಲಿನ ಗ್ರಾಮಗಳಲ್ಲಿ ಸೂಕ್ತ ಜಾಗೆಗಾಗಿ ಹುಡುಕಾಟ ನಡೆಸಿದ್ದು. ಜಾಗೆ ನೋಡಿ ಗುರುತಿಸುವವರೆಗೂ ತಾತ್ಕಾಲಿಕವಾಗಿ ಇರುವ ವ್ಯವಸ್ಥೆಯಲ್ಲಿಯೇ (ಪರಿಹಾರ ಕೇಂದ್ರದಲ್ಲಿ) ವಾಸಿಸುವಂತೆ ಸೂಚನೆ ನೀಡಿದ್ದಾರೆ. ಆದರೆ, ಜಲಾವೃತವಾದ ಪ್ರದೇಶದಲ್ಲಿ ನೀರು ಇಳಿಮುಖವಾದರೂ ಜನತೆ ವಾಸವಿರುವುದಿಲ್ಲ ಎನ್ನುವ ನೆಪವಿಟ್ಟು ಸ್ವಚ್ಛತೆಗೆ ಮುಂದಾಗದಿದ್ದಲ್ಲಿ ಆಮಲಿನ ಪ್ರದೇಶ ಇಡಿ ಊರಿನ ಜನರ ನೆಮ್ಮದಿ ಕಸಿಯಲು ಸಾಧ್ಯವಾಗುತ್ತದೆ. ಆ ಪ್ರದೇಶದಲ್ಲಿ ಜನ ವಾಸಿಸದಿದ್ದರೂ ಸ್ವಚ್ಛತೆ ಕಾರ್ಯ ಮಾತ್ರ ಅಚ್ಚುಕಟ್ಟಾಗಿ ನಡೆಯಬೇಕು ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು.

ಫಾಗಿಂಗ್‌ಗೆ ಹುಳು ಸಾಯುತ್ತವೆಯೇ?: ಅಷ್ಟಕ್ಕೂ ಈ ಫಾಗಿಂಗ್‌ ಕಾರ್ಯ ನಡೆಸುವುದರಿಂದ ಹುಳು ಸಾಯುತ್ತವೆ ಎನ್ನುವುದೇ ಹೆಚ್ಚು. ಆದರೆ, ಬಹುತೇಕ ಹೆಚ್ಚು ಶಕ್ತಿಯುವಾಗಿರುವ ಹುಳು ಫಾಗಿಂಗ್‌ನಿಂದ ತಪ್ಪಿಸಿಕೊಳ್ಳಲು ಆ ಪ್ರದೇಶ ಬಿಟ್ಟು ಹೋಗುತ್ತವೆ. ಇನ್ನೂ ವೃದ್ಧ ಹುಳುಗಳ ಶಕ್ತಿ ಕುಂದಿದ ಪರಿಣಾಮ ಫಾಗಿಂಗ್‌ಗೆ ಬಲಿಯಾಗುತ್ತವೆ. ಒಟ್ಟಾರೆ ಫಾಗಿಂಗ್‌ ಕಾರ್ಯ ಮಾಡುವ ಸ್ಥಳೀಯ ಸಂಸ್ಥೆಗಳು ಅದರಲ್ಲಿ ಬಿಡುವ ರಾಸಾಯನ ಅಂಶದ ಕುರಿತು ಹೆಚ್ಚಿನ ನಿಗಾ ವಹಿಸುವುದು ಅವಶ್ಯಕವಾಗಿದೆ ಎನ್ನುತ್ತಾರೆ ನಾಗರಿಕರು.

ನಿಡಗುಂದಿ: ಪ್ರವಾಹ ಪೀಡಿತ ಹೊಳೆ ಮಸೂತಿಯಲ್ಲಿ ಗ್ರಾಪಂದಿಂದ ಫಾಗಿಂಗ್‌ ಮಾಡುತ್ತಿರುವುದು. ಹೊಳೆ ಮಸೂತಿಯಲ್ಲಿ ಪ್ರವಾಹ ಇಳಿಕೆಯಾದ ಪ್ರದೇಶದಲ್ಲಿ ನಡೆದಿರುವ ಸ್ವಚ್ಛತಾ ಕಾರ್ಯ.

 

•ವಿಶೇಷ ವರದಿ

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.