ಬಾಲಕಿಯರ ವಸತಿ ನಿಲಯದಲ್ಲಿ ಅವ್ಯವಸ್ಥೆ

Team Udayavani, Dec 30, 2017, 4:00 PM IST

ಸಿಂದಗಿ: ಪಟ್ಟಣದ ಖಾಸಗಿ ಕಟ್ಟಡದಲ್ಲಿರುವ ವಿಜಯಪುರ ಜಿಪಂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ ಅವ್ಯವಸ್ಥೆ ಆಗರವಾಗಿದೆ.

ವಸತಿ ನಿಲಯಗಳು ಅದರಲ್ಲಿ ಬಾಲಕಿಯರ ವಸತಿ ನಿಲಯಗಳು ಮೂಲಭೂತ ಸೌಕರ್ಯಗಳೊಂದಿಗೆ ವಸತಿ ನಿಲಯ ವಿದ್ಯಾರ್ಥಿಗಳ ಆರೈಕೆ, ರಕ್ಷಣೆ ನೀಡುವುದು ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಮತ್ತು ವಸತಿ ನಿಲಯದ ಮೇಲ್ವಿಚಾರ ಕರ್ತವ್ಯ. ವಸತಿ ನಿಲಯದ ಮೇಲ್ವಿಚಾರಕಿ ಆಗೊಮ್ಮೆ ಈಗೊಮ್ಮೆ ಬಂದು ಹೋದರೆ ರಾತ್ರಿ ಕಾವಲುಗಾರತಿ (ನೈಟ್‌ ವಾಚ್‌ಮನ್‌) ಸಾಯಂಕಾಲ 6ಕ್ಕೆ ಬರುವ ಬದಲು ರಾತ್ರಿ 9ರ ನಂತರ ವಸತಿ ನಿಲಯಕ್ಕೆ ಬಂದರೇ ವಿದ್ಯಾರ್ಥಿಯರಿಗೆ ರಕ್ಷಣೆ ಮಾಡುವವರಾರು? ಏನಾದರು ಅವಘಡಗಳು ಸಂಭವಿಸಿದರೇ ಉತ್ತರ ನೀಡುವವರಾರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಖಾಸಗಿ ಕಟ್ಟಡದಲ್ಲಿದ್ದರೂ ಕಟ್ಟಡ ಸುರಕ್ಷಿತವಾಗಿದೆ. ನೀರಿನ ಸೌಲಭ್ಯವಿದೆ. ಆದರೆ ವಸತಿ ನಿಲಯದ ನಿರ್ವಹಣೆ ಮಾತ್ರ ತಪ್ಪಿದೆ. ವಸತಿ ನಿಲಯದ ಮೇಲ್ವಿಚಾರಕಿ ನಂದಾಜ್ಯೋತಿ ನಾಸಿ ಅವರಿಗೆ ಸಿಂದಗಿ ಪಟ್ಟಣದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ, ಮೆಟ್ರಿಕ್‌ ನಂತರದ ಬಾಲಕಿಯರ ನಿಲಯ ಮತ್ತು ಜಾಲವಾದದಲ್ಲಿನ ವಸತಿ ನಿಲಯದ ಮೇಲ್ವಿಚಾರಣೆಯ ಜವಾಬ್ದಾರಿಯಿದೆ ಎಂದು ನೇಪ ಹೇಳಿ ವಸತಿ ನಿಲಯದಲ್ಲಿ ಇರುವುದಿಲ್ಲ. ಅವರು ಸರಿಯಾಗಿ ಕಾಯಿಪಲ್ಲೆ ಸಂತಿ ಮಾಡುವುದಿಲ್ಲ ಇದರಿಂದ ಇಲ್ಲಿ ಊಟ ಮತ್ತು ರಕ್ಷಣೆಯ ವ್ಯವಸ್ಥೆ ಅವ್ಯವಸ್ಥಿತವಾಗಿದೆ ಎಂದು ವಸತಿ ನಿಲಯದ ಬಾಲಕಿಯರು ದೂರಿದ್ದಾರೆ.

ವಸತಿ ನಿಲಯದಲ್ಲಿ ಗ್ರಂಥಗಳನ್ನು ಇಡುವ ಕಪಾಟಿದ್ದರೂ ಪುಸ್ತಕಗಳಿಲ್ಲ. ಇರುವ ಪುಸ್ತಕಗಳು ರೂಮಿನೊಳಗೆ ಕಟ್ಟಿ ಇಟ್ಟಿದ್ದಾರೆ. ನಮಗೆ ಓದಲು ಪುಸ್ತಕ ನೀಡುವುದಿಲ್ಲ . ವಸತಿ ನಿಲಯದಲ್ಲಿ 50 ವಿದ್ಯಾರ್ಥಿಗಳ ಹೆಸರು ಇರುತ್ತದೆ. 30-35
ವಿದ್ಯಾರ್ಥಿಗಳು ಇರುತ್ತಾರೆ. ಉಳಿದವರು ತಿಂಗಳಿಗೊಮ್ಮೆ ಬಂದು ಕಿಟ್‌ ಪಡೆದುಕೊಂಡು ಹೋಗುತ್ತಾರೆ. ದಿನಕ್ಕೆ ಬೆಳಗ್ಗೆ 7ಕ್ಕೆ ಚಹಾ, 8:45ರಿಂದ 9:35ರವರೆಗೆ ಊಟ, ಸಂಜೆ 5 ರಿಂದ 5:30ರವರೆಗೆ ಚಹಾ, ಉಪಾಹಾರ ಮತ್ತು ರಾತ್ರಿ 7:30 ರಿಂದ 8:30 ರವರೆಗೆ ಊಟ ನೀಡಬೇಕು. ಅದು ಕೇವಲ ವೇಳಾ ಪಟ್ಟಿಯಲ್ಲಿ ಇದೆ. 

ನಮಗೆ ಬೆಳಗ್ಗೆ 9ಕ್ಕೆ ಉಪಹಾರ ನೀಡಿ ಒಮ್ಮೆಲೆ ರಾತ್ರಿ ಊಟ ಹಾಕುತ್ತಾರೆ. ತಿಂಗಳಲ್ಲಿ ವಿಶೇಷ ಊಟ ಕೊಟ್ಟರೆ ಕೊಟ್ಟರು ಇಲ್ಲಾಂದ್ರ ಇಲ್ಲ. ಏನಾದರು ಕೇಳಿದರೆ ಮಧ್ಯಾಹ್ನ ಶಾಲೆಯಲ್ಲಿ ಬಿಸಿಯೂಟ ಕೊಡುತ್ತಾರಲ್ಲ ಎಂದು ಹೇಳುತ್ತಾರೆ. ಹೆಚ್ಚಿಗೆ ಕೇಳಿದಲ್ಲಿ ನಮ್ಮ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೆದರಿಸುತ್ತಾರೆ ಎಂದು ವಿದ್ಯಾರ್ಥಿನಿಯರು ದೂರಿದರು

ಇಂದಿನ ಕಾಲದಲ್ಲಿ ಅಪ್ರಾಪ್ತ ಬಾಲಕಿಯರನ್ನು ಹೊರಗೆ ಬಿಡುವುದು ಕಷ್ಟವಾಗಿದೆ. ವಸತಿ ನಿಲಯದ ಇಲಾಖೆ ಮತ್ತು ಮೇಲ್ವಿಚಾರಕರನ್ನು ನಂಬಿ ಪಾಲಕರು ತಮ್ಮ ಮಕ್ಕಳನ್ನು ಬಿಟ್ಟಿರುತ್ತಾರೆ. ಇವರಿಗೆ ಮೂಲಭೂತ ಸೌಕರ್ಯ ಒದಗಿಸುವ
ಜೊತೆಗ ಪೌಷ್ಟಿಕ ಆಹಾರ ನೀಡುವ ಜೊತೆಗೆ ರಕ್ಷಣೆ ನೀಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. 
 ಶೈಲಜಾ ಸ್ಥಾವರಮಠ, ಮಹಿಳಾ ಜಾಗರಣಾ ವೇದಿಕೆ ಅಧ್ಯಕೆ 

ವಸತಿ ನಿಲಯದಲ್ಲಿ 50 ವಿದ್ಯಾರ್ಥಿಗಳ ಹಾಜರಾತಿಯಿದೆ. ಅವರಲ್ಲಿ 30-35 ವಿದ್ಯಾರ್ಥಿಗಳು ವಸತಿ ನಿಲಯದಲ್ಲಿರುತ್ತಾರೆ. ಇನ್ನುಳಿದವರು ತಿಂಗಳಿಗೆ ಬಂದು ಇಲಾಖೆ ನೀಡುವ ಕಿಟ್‌ ತಗೆದುಕೊಂಡು ಹೋಗುತ್ತಾರೆ. ವಸತಿ ನಿಲಯದಲ್ಲಿ ಒಬ್ಬ ರಾತ್ರಿ ಕಾವಲುಗಾರರನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ. ಅವರು ಸರಿಯಾಗಿ ಬರುತ್ತಿಲ್ಲ ಎಂದು ತಿಳಿದು ಬಂದಿದ್ದು ಎಚ್ಚರಿಕೆ ನೀಡಲಾಗಿದೆ.
ದಾಜ್ಯೋತಿ ನಾಸಿ, ವಸತಿ ನಿಲಯದ ಮೇಲ್ವಿಚಾರಕಿ

ವಸತಿ ನಿಲಯದಲ್ಲಿನ ಮಕ್ಕಳ ಹಾಜರಾತಿ ಸಂಖ್ಯೆಯನ್ನು ನೋಡುತ್ತೇನೆ. ಅಲ್ಲಿನ ಅವ್ಯವಸ್ಥೆ ನನಗೆ ತಿಳಿದಿಲ್ಲ. ಈ ಕುರಿತು ಮೇಲ್ವಿಚಾರಕಿಯರನ್ನು ವಿಚಾರ ಮಾಡಲಾಗುವುದು. 
ಬಸಯ್ಯ ಗೋಳಮಠ, ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ಸಿಂದಗಿ.

ರಮೇಶ ಪೂಜಾರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಚಡಚಣ: ತಾಲೂಕಿನ ಹಲಸಂಗಿ ಗ್ರಾಮದಿಂದ ನಂದ್ರಾಳವರೆಗಿನ 6 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಿದ್ಯಾರ್ಥಿಗಳು, ರೈತರು ಹಾಗೂ ವಾಹನ ಸವಾರರು ತೀವೃ ತೊಂದರೆ...

  • ಚಡಚಣ: ಮನೆಗೊಂದು ಶೌಚಾಲಯ ಎಷ್ಟು ಮುಖ್ಯವೋ ಅಷ್ಟೇ ಗ್ರಾಮಕ್ಕೊಂದು ಗ್ರಂಥಾಲಯ ಮುಖ್ಯ. ಗ್ರಾಮದಲ್ಲಿ ಗ್ರಂಥಾಲಯವಿದ್ದರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುವುದರ...

  • ವಿಜಯಪುರ: ವಿಜಯಪುರದಲ್ಲಿ ಸ್ಯಾಟ್‌ ಲೈಟ್‌ ಬಸ್‌ ನಿಲ್ದಾಣದಿಂದ ಸಂಚಾರ ದಟ್ಟಣೆ ಅತ್ಯಂತ ಕಡಿಮೆಯಾಗಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ವಿಜಯಪುರದ...

  • ಆಲಮಟ್ಟಿ: ಈ ಭಾಗದ ಶ್ರೀಕ್ಷೇತ್ರಗಳಲ್ಲೊಂದಾಗಿರುವ ಯಲಗೂರ ಗ್ರಾಮದ ಯಲಗೂರೇಶ್ವರ ಕಾರ್ತಿಕೋತ್ಸವ ಅಂಗವಾಗಿ ಸತತ ಎರಡು ದಿನ ರಾಜ್ಯದ ಪ್ರಸಿದ್ಧ ಸಂಗೀತ ಕಲಾವಿದರಿಂದ...

  • ವಿಜಯಪುರ: ಬಹು ವರ್ಷಗಳ ಬೇಡಿಕೆಯಾಗಿದ್ದ ವಿಜಯಪುರ - ಹುಬ್ಬಳ್ಳಿ ಇಂಟರ್ ಸಿಟಿ ಪ್ರಯಾಣಿಕರ ರೈಲು ಸೇವೆಗೆ ಸೋಮವಾರ ನಗರದ ಕೇಂದ್ರ ರೈಲ್ವೇ ನಿಲ್ದಾಣದಲ್ಲಿ ಚಾಲನೆ...

ಹೊಸ ಸೇರ್ಪಡೆ