ಇದ್ದೂ ಇಲ್ಲದಂತಾದ ಗ್ರಂಥಾಲಯ

Team Udayavani, Jan 16, 2019, 10:28 AM IST

ಹೂವಿನಹಿಪ್ಪರಗಿ: ಹಲವು ವರ್ಷಗಳಿಂದ ಹಿಂದೆ ಇಲ್ಲಿನ ಗ್ರಾಪಂ ಕಾರ್ಯಾಲಯದಲ್ಲಿ ಪ್ರಾರಂಭವಾಗಿರುವ ಸಾರ್ವಜನಿಕ ಗ್ರಾಮೀಣ ಗ್ರಂಥಾಲಯ ಸೌಕರ್ಯಗಳಿಲ್ಲದೆ ಕಾಯಕಲ್ಪಕ್ಕಾಗಿ ಕಾಯುತ್ತಿದೆ.

ಸಮೀಪದ ಕುದರಿ ಸಾಲವಾಡಗಿ ಗ್ರಾಮದ ಗ್ರಂಥಾಲಯ ಸುಮಾರು ತಿಂಗಳಗಳಿಂದ ತನ್ನ ಸೇವೆ ನಿಲ್ಲಿಸಿದೆ. ಗ್ರಂಥಾಲಯ ಕಟ್ಟಡ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಮುರಿದ ಕಿಟಕಿ, ಕಿತ್ತಿ ಹೋದ ವಿದ್ಯುತ್‌ ವೈರಿಂಗ್‌, ಕುಳಿತುಕೊಳ್ಳಲು ಸುಸಜ್ಜಿತ ಸ್ಥಳದ ಕೊರತೆ, ಓದಲು ಪತ್ರಿಕೆ ಇಲ್ಲ. ಇವುಗಳನ್ನೆಲ್ಲ ನೋಡಿದರೆ ಇದು ಸರಕಾರ ಗ್ರಂಥಾಲಯವೇ ಎಂದು ಪ್ರಶ್ನಿಸಬಹುದು.

ಇಲಾಖೆಯಿಂದ ಪ್ರತಿ ತಿಂಗಳು ನಾಲ್ಕು ನೂರು ರೂ. ಸಾಹಾಯ ಧನ ಬರುತ್ತಿದ್ದು, ಈ ಮೊತ್ತದಲ್ಲಿ ನಿರ್ವಾಹಣೆಗೆ ಮಾಡಬೇಕಿದೆ. ಸದ್ಯ ಇಲ್ಲಿಗೆ ಎರಡು ದಿನ ಪತ್ರಿಕೆಗಳು ಮಾತ್ರ ಬರುತ್ತಿದ್ದು, ಗ್ರಾಮದಲ್ಲಿ ಐದು ಪ್ರಾಥಮಿಕ ಶಾಲೆ, ಮೂರು ಪ್ರೌಢ ಶಾಲೆ, ವಸತಿ ನಿಲಯ ಹೀಗೆ ವಿದ್ಯಾ ಮಂದಿರಗಳಿವೆ. ಎಲ್ಲರಿಗೂ ಗ್ರಂಥಾಲಯವೇ ಆಧಾರವಾಗಿದೆ. ಇಲ್ಲಿ ಎಲ್ಲ ಪತ್ರಿಕೆಗಳು, ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟ ಪುಸ್ತಕಗಳು ಲಭ್ಯವಿಲ್ಲ.

ಗ್ರಂಥಾಲಯ ನಿರ್ವಹಣೆಗೆ ತಿಂಗಳಿಗೆ ಕನಿಷ್ಠ 2000ದಿಂದ 3000 ರೂ. ಅನುದಾನ ನೀಡಬೇಕು. ಸರಕಾರ ಕಳೆದ ಎರಡು ವರ್ಷದಿಂದ ನಮ್ಮ ಸೇವೆಯ ಸಮಯವನ್ನು 8 ಗಂಟೆಯಿಂದ ನಾಲ್ಕು ಗಂಟೆಗೆ ಇಳಿಸಿದೆ. ಮೊದಲಿನಂತೆ ನಮ್ಮ ಸೇವೆಯನ್ನು ಮುಂದುವರಿಸಬೇಕು ಅದಕ್ಕೆ ತಕ್ಕ ಸಂಭಾವನೆ ನೀಡಬೇಕು. ನಾವು ದಿನ ಪೂರ್ತಿ ಸೇವೆ ಮಾಡಲು ಸಿದ್ಧರಿದ್ದೇವೆ. ತಕ್ಕ ಸಂಬಳ ನೀಡಲು ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಒಟ್ಟಿನಲ್ಲಿ ರಾಜ್ಯದ 6,500ಕ್ಕೂ ಹೆಚ್ಚು ಗ್ರಂಥಾಲಯದ ಮೇಲ್ವಿಚಾರಕರಿದ್ದು ಅವರ ಹಿತ ಕಾಪಾಡಿ ನೆರವಿಗೆ ನಿಲ್ಲಲು ಗ್ರಂಥಾಲಯದ ಹಲವು ಮೇಲ್ವಿಚಾರಕರು ಆಗ್ರಹಿಸಿದ್ದಾರೆ.

ಸರಕಾರ ನೀಡುವ 7 ಸಾವಿರ ರೂ. ಗೌರವ ಧನ ನಮ್ಮ ಸಂಸಾರ ನಿರ್ವಹಣೆಗೆ ಸಾಲುತ್ತಿಲ್ಲ. 8 ಗಂಟೆ ಸೇವೆ ಮುಂದುವರಿಸಿ ನಮ್ಮಿಂದ ಇಲಾಖೆಯ ಬೇರೆ ಕೆಲಸವಿದ್ದರೆ ನೀಡಿ. ನಮಗೆ ಕನಿಷ್ಠ ತಿಂಗಳಿಗೆ 15 ಸಾವಿರ ರೂ. ಸಂಬಳ ನೀಡಬೇಕು. ಅಂದರೇ ಮಾತ್ರ ಹೆಂಡತಿ ಹಾಗೂ ಮಕ್ಕಳೊಂದಿಗೆ ಬದುಕಲು ಸಾಧ್ಯ.
ಶಿವಾನಂದ ದೇಸಾಯಿ, ಜಿಲ್ಲಾಧ್ಯಕ್ಷ, ಗ್ರಂಥಾಲಯಮೇಲ್ವಿಚಾರಕ ಸಂಘ

ಗ್ರಂಥಾಲಯ ಮೇಲ್ವಿಚಾರಕರ ಸಂಬಳವನ್ನು ನವೆಂ¸ರ್‌ ತಿಂಗಳ‌ವರೆಗೆ ನೀಡಲಾಗಿದೆ. ಇನ್ನೂಳಿದಂತೆ ಅವರ ಸಂಬಳ ಹಾಗೂ ನಿರ್ವಾಹಣಾ ವೆಚ್ಚ ಹೆಚ್ಚಳ ಮಾಡುವ ಕುರಿತು ಸರಕಾರದ ಗಮನಕ್ಕಿದೆ. ಅದು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಬಿಟ್ಟ ವಿಚಾರ.
ಅಜಯಕುಮಾರ ಡಿ. ಜಿಲ್ಲಾ ಆಧಿಕಾರಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ

ದಯಾನಂದ ಬಾಗೇವಾಡಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಸಿಂದಗಿ: ಸರ್ಕಾರ ಭೂ ಮಾಪಕರಿಗೆ ಮಾಸಿಕ 30 ಕಡತಗಳ ಗುರಿ ನಿಗದಿಪಡಿಸಿ ಹೊರಡಿಸಿರುವ ಸುತ್ತೋಲೆ ಹಿಂಪಡೆದು ಮೊದಲಿದ್ದ 23 ಕಡತಗಳ ಗುರಿ ಮುಂದುವರಿಸಬೇಕು ಎಂದು ಒತ್ತಾಯಿಸಿ...

  • ಮುದ್ದೇಬಿಹಾಳ: ದೇಶದ ಸಂವಿಧಾನದ ಮೂರು ಅಂಗಗಳ ಜೊತೆಗೆ ನಾಲ್ಕನೇ ಅಂಗ ಎನ್ನಿಸಿಕೊಂಡಿರುವ ಮಾಧ್ಯಮವೂ ಕಲುಷಿತಗೊಂಡಿದೆ ಎನ್ನುವುದಕ್ಕೆ ವಿಷಾದಿಸುತ್ತೇನೆ...

  • ಬಸವನಬಾಗೇವಾಡಿ: ಇಲ್ಲಿನ ಮೂಲನಂದೀಶ್ವರ (ಬಸವೇಶ್ವರ) ಜಾತ್ರೆಯ ಮೂರನೇ ದಿನ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಕಸರತ್ತಿನ ಹಾಗೂ ಭಾರ ಎತ್ತುವ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜಯಪುರ...

  • ರಮೇಶ ಪೂಜಾರ ಸಿಂದಗಿ: ಹಳ್ಳಿಗಳ ಅಭಿವೃದ್ಧಿ ಜೊತೆಗೆ ಪಟ್ಟಣದ ಅಭಿವೃದ್ಧಿಗೆ ಸರಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡಿದರೂ ಅಲ್ಲಿ ಅಭಿವೃದ್ಧಿ ಮರಿಚಿಕೆಯಾಗಿವೆ....

  • ಜಿ.ಎಸ್‌. ಕಮತರ ವಿಜಯಪುರ: ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ವಿಷಯದಲ್ಲಿ ರಾಜ್ಯ ಸರ್ಕಾರ ವಿಜಯಪುರ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಿದ್ದು ರೈಲ್ವೇ ಸೇವೆಯಲ್ಲೂ...

ಹೊಸ ಸೇರ್ಪಡೆ