ಗ್ರಂಥಾಲಯಕ್ಕೆಬೇಕಿದೆ ಸ್ವಂತ ಕಟ್ಟಡ

Team Udayavani, Nov 3, 2019, 3:20 PM IST

ಬಸವನಬಾಗೇವಾಡಿ: ಸರ್ಕಾರ 1973ರಲ್ಲಿ ಜಿಲ್ಲಾ ಸಾರ್ವಜನಿಕ ಗ್ರಂಥಾಲಯದ ಶಾಖೆಯೊಂದನ್ನು ಪಟ್ಟಣದಲ್ಲಿ ಸ್ಥಾಪಿಸಿ 46 ವರ್ಷ ಗತಿಸಿದರೂ ಸಹ ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿಲ್ಲ. ಬೇರೆ ಬೇರೆ ಇಲಾಖೆ ಜಾಗೆಗಳಲ್ಲಿ ಬಾಡಿಗೆ ರೂಪದಲ್ಲಿ ಅಲೆದಾಡುವ ಸ್ಥಿತಿಯಿದ್ದು ಪುಸ್ತಕಗಳು, ಅಮೂಲ್ಯ ಗ್ರಂಥಗಳು ಮೂಲೆಯಲ್ಲಿ ಕೊಳೆಯುವಂತಾಗಿದೆ.

10 ವರ್ಷದ ಹಿಂದೆ ಪುರಸಭೆಯಿಂದ ಸಾರ್ವಜನಿಕ ಗ್ರಂಥಾಲಯಕ್ಕೆ 40×60 ಜಾಗೆ ದೊರಕಿತ್ತು. ಗ್ರಂಥಾಲಯದ ನಿರ್ಮಾಣಕ್ಕಾಗಿ ರಾಜ್ಯ ಸರಕಾರ 18 ಲಕ್ಷ ಅನುದಾನ ಕೂಡಾ ಬಿಡುಗಡೆ ಮಾಡಿತ್ತು. ಆದರೆ ಪುರಸಭೆ ನೀಡಿರುವ ಜಾಗೆ ಪಟ್ಟಣದ ಮಧ್ಯ ಸ್ಥಳದಿಂದ ಸ್ವಲ್ಪ ದೂರ ಇರುವ ಕಾರಣಕ್ಕಾಗಿ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಿದ್ದರಿಂದ ಆ ಜಾಗೆಯನ್ನು ಬಿಟ್ಟು ಈಗ ಪುರಸಭೆ ಕೆಳ ಮಹಡಿಯಲ್ಲೇ ಕಾರ್ಯ ನಿರ್ವಹಿಸುತ್ತಿದೆ.

ವಿವಿಧ ಗ್ರಾಮಗಳಿಂದ ಬರುವ ಜನರಿಗೆ ಗ್ರಂಥಾಲಯದಲ್ಲಿ ಕುಳಿತುಕೊಂಡು ಓದಲು ಸ್ಥಳದ ಅಭಾವ ಕಾಡುತ್ತಿದೆ. ಹೀಗಾಗಿ ಅನೇಕ ಪುಸ್ತಕಗಳನ್ನು ಗಂಟು ಮೂಟೆ ಕಟ್ಟಿ ಒಂಡೆಡೆ ಇಟ್ಟಿದ್ದಾರೆ. ಗ್ರಂಥಾಲಯದಲ್ಲಿ ಕುಡಿಯುವ ನೀರು, ಶೌಚಾಲಯ, ಆಸನದ ವ್ಯವಸ್ಥೆ ಸಮರ್ಪಕವಾಗಿಲ್ಲ. ಸಾರ್ವಜನಿಕ ಗ್ರಂಥಾಲಯ 2,330 ಸದಸ್ಯರನ್ನು ಹೊಂದಿದ್ದು 32 ಸಾವಿರಕ್ಕೂ ಅ ಧಿಕ ಪುಸ್ತಕಗಳಿವೆ. 8 ಕನ್ನಡ ದಿನಪತ್ರಿಕೆಗಳು, 2 ಆಂಗ್ಲ ಪತ್ರಿಕೆಗಳು, 12 ವಾರ, ಮಾಸ, ತ್ತೈ ಮಾಸಿಕ ಪತ್ರಿಕೆಗಳು ಬರುತ್ತವೆ. ಗ್ರಂಥಾಲಯ ನಿರ್ವಹಣೆಗಾಗಿ ಓರ್ವ ಶಾಖಾ ಗ್ರಂಥ ಪಾಲಕರು, ಒಬ್ಬ ಸಹಾಯಕರು ಇದ್ದಾರೆ. ಸಮಯಕ್ಕೆ ತಕ್ಕಂತೆ ಗ್ರಂಥಾಲಯ ಓದುಗರಿಗೆ ಲಭ್ಯವಿದ್ದು ಜ್ಞಾನಾಮೃತ ನೀಡುತ್ತಿದೆ. ಆದರೆ ಇದಕ್ಕೆ ಒಂದು ಸ್ವಂತ ಸೂರಿಲ್ಲಾ ಎಂಬುದೇ ವಿಪರ್ಯಾಸದ ಸಂಗತಿಯಾಗಿದೆ. ಬೆಳಗ್ಗೆ 8:30ರಿಂದ 11:30ರವರೆಗೆ ಸಂಜೆ 4ರಿಂದ ರಾತ್ರಿ 8ರವರೆಗೆ ಗ್ರಂಥಾಲಯ ಕಾರ್ಯ ನಿರ್ವಹಿಸುತ್ತದೆ. ಪ್ರತಿ ಸೋಮವಾರ ರಜೆ ಹಾಗೂ ತಿಂಗಳ ಎರಡನೇ ಮಂಗಳವಾರ ಹಾಗೂ ಸರಕಾರಿ ರಜೆ ದಿನಗಳಲ್ಲಿ ಗ್ರಂಥಾಲಯಕ್ಕೆ ರಜೆ ಇರುತ್ತದೆ.

 

-ಪ್ರಕಾಶ ಬೆಣ್ಣೂರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ವಿಜಯಪುರ: ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಹಿರಿಯ-ಕಿರಿಯ ಕವಯಿತ್ರಿಯರ ಅಪೂರ್ವ ಸಂಗಮವು ಸಾಹಿತ್ಯಾಸಕ್ತರ ಗಮನ ಸೆಳೆಯಿತು. ನವ ಕವಯತ್ರಿಯರು...

  • ಮುದ್ದೇಬಿಹಾಳ: ಅಂತೂ ಇಂತೂ ಸುದೀರ್ಘ‌ ಲೆಕ್ಕಾಚಾರದ ನಂತರ ಬಿಗಿ ನಿಲುವು ತಳೆದ ಪುರಸಭೆ ಅ ಧಿಕಾರಿಗಳು ಪೊಲೀಸ್‌ ಬಂದೋಬಸ್ತ್ ಮಧ್ಯೆ ಪಟ್ಟಣದ ಪ್ರಮುಖ ರಸ್ತೆಗಳ...

  • ಶಂಕರ ಜಲ್ಲಿ ಆಲಮಟ್ಟಿ: ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿದ್ದ ಕೆಲ ಕಚೇರಿಗಳನ್ನು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಸ್ಥಳಾಂತರಗೊಳಿಸಿ ಸರ್ಕಾರ ಆದೇಶ ನೀಡಿದ್ದರೂ...

  • ವಿಜಯಪುರ: ಜಾತೀಯತೆ, ಮೂರ್ತಿ ಪೂಜೆ ವಿರುದ್ಧ ಹೋರಾಡಿ ಅದನ್ನು ಹೋಗಲಾಡಿಸಲು ಕನಕದಾಸರು ಪ್ರಯತ್ನಿಸಿದ್ದಾರೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ಈ ಎಲ್ಲ ಮಹಾನ್‌...

  • ವಿಜಯಪುರ: ದೇಶದ ಏಳ್ಗೆ ಮಕ್ಕಳ ಕೈಯಲ್ಲಿದೆ. ನಾವೆಲ್ಲರೂ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಬೇಕಾಗಿದೆ. ದೇಶದ ಅಭಿವೃದ್ಧಿಗೆ ಪ್ರತಿಜ್ಞೆ ಮಾಡಬೇಕಿದೆ ಎಂದು...

ಹೊಸ ಸೇರ್ಪಡೆ