ಬೇಡಿಕೆ ಈಡೇರಿಕೆಗೆ ಗ್ರಾಮ ಲೆಕ್ಕಾಧಿಕಾರಿಗಳ ಮನವಿ


Team Udayavani, Jan 22, 2022, 5:40 PM IST

22villageaccountant

ಮುದ್ದೇಬಿಹಾಳ: ಕಂದಾಯ ಇಲಾಖೆಯ ಆಡಳಿತ ಸುಧಾರಣೆಗೆ ಹಾರ್ನಳ್ಳಿ ರಾಮಸ್ವಾಮಿ ಅಧ್ಯಕ್ಷತೆಯ ಮೊದಲ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ವರದಿಗಳ ಶಿಫಾರಸನ್ನು ಅನುಷ್ಠಾನಗೊಳಿಸುವುದು ಮತ್ತು ತಮ್ಮ ಬೇಡಿಕೆ ಈಡೇರಿಕೆ ಕುರಿತು ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಮುದ್ದೇಬಿಹಾಳ ತಾಲೂಕು ಘಟಕದ ಸದಸ್ಯರು ತಹಶೀಲ್ದಾರ್‌ ಬಿ.ಎಸ್‌. ಕಡಕಭಾವಿ ಅವರಿಗೆ ಮನವಿ ಸಲ್ಲಿಸಿದರು.

ಶಿಫಾರಸು ಕುರಿತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರು ಎಲ್ಲ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದು ವರದಿ ನೀಡುವಂತೆ ಸೂಚಿಸಿದ್ದಾರೆ. ಈಗಾಗಲೇ ಪ್ರಾದೇಶಿಕ ಆಯುಕ್ತರು ಸಲ್ಲಿಸಿರುವ ವರದಿಯಲ್ಲಿನ ಎಲ್ಲ ಅಂಶಗಳಿಗೂ ಸಂಘವು ಆಕ್ಷೇಪಣೆ ಸಲ್ಲಿಸುತ್ತದೆ ಎಂದು ತಿಳಿಸಿ ಪ್ರತಿಯೊಂದು ಶಿಫಾರಸಿಗೂ ಸಕಾರಣ ಸಹಿತ ಆಕ್ಷೇಪಣೆಯ ವಿವರಗಳನ್ನು ಮನವಿಯಲ್ಲಿ ತಿಳಿಸಲಾಗಿದೆ.

ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಸಂಖ್ಯೆಯನ್ನು ಸೀಮಿತಗೊಳಿಸುವುದು, ಗ್ರಾಮ ಲೆಕ್ಕಾಧಿಕಾರಿಗಳ 3101 ಹುದ್ದೆಗಳನ್ನು ಹೆಚ್ಚುವರಿ ಎಂದು ಪರಿಗಣಿಸಿ ಹಾಗೆ ಹೆಚ್ಚುವರಿಯಾದವರನ್ನು ಗ್ರಾಪಂಗಳಲ್ಲಿ ಖಾಲಿ ಇರುವ ಕಾರ್ಯದರ್ಶಿ ಹುದ್ದೆಗೆ ಮರು ನೇಮಿಸುವುದು, ಗ್ರಾಮ ಲೆಕ್ಕಾಧಿಕಾರಿಗಳನ್ನೂ ಸಹ ಭೂಮಾಪನ ವಿಧಾನಗಳಲ್ಲಿ ತರಬೇತಿಗೊಳಿಸಿ ಅವರು ದ್ವಿತೀಯ ದರ್ಜೆ ಮಾಪಕರಾಗಿ ಕಾರ್ಯನಿರ್ವಹಿಸುವುದು ಹಾಗೂ ಗ್ರಾಮ ಸಹಾಯಕರ ಹುದ್ದೆಗಳನ್ನು ರದ್ದುಪಡಿಸುವುದರ ಬಗ್ಗೆ ಆಡಳಿತ ಸುಧಾರಣಾ ಆಯೋಗ ವರದಿ ಸಲ್ಲಿಸಿದ್ದು ಇದಕ್ಕೆ ಆಕ್ಷೇಪಣೆಯ ವರದಿ ನೀಡುವುದು ಹೀಗೆ ಒಟ್ಟು 4 ಪ್ರಮುಖ ಶಿಫಾರಸುಗಳಿಗೆ ಸಂಘದ ತಕರಾರುಗಳನ್ನು ಮನವಿ ಪತ್ರದಲ್ಲಿ ವಿವರಿಸಲಾಗಿದೆ.

ಕಂದಾಯ ಇಲಾಖೆಯು ಎಲ್ಲ ಇಲಾಖೆಗಳ ಮಾತೃ ಇಲಾಖೆಯಾಗಿದೆ. ಆಯೋಗವು ಕಂದಾಯ ಇಲಾಖೆಯ ಆಡಳಿತ ಯಂತ್ರಕ್ಕೆ ಸಂಬಂಧಿಸಿದಂತೆ ಕೆಲವು ವ್ಯತಿರಿಕ್ತ ವರದಿಗಳನ್ನು ನೀಡಿದ್ದು ಅವುಗಳನ್ನು ಜಾರಿಗೊಳಿಸಬಾರದು ಮತ್ತು ಈ ಬಗ್ಗೆ ಶಿಫಾರಸು ಮಾಡಬಾರದು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಸಂಘದ ಅಧ್ಯಕ್ಷ ಗಂಗಾಧರ ಜೂಲಗುಡ್ಡ, ಪ್ರಧಾನ ಕಾರ್ಯದರ್ಶಿ ಸಂಜು ಜಾಧವ, ಸದಸ್ಯರಾದ ಎಸ್‌.ಬಿ.ಗೌಡರ, ಕೆ.ಎಂ. ಆಲಗೂರ, ಆರ್‌.ಎಸ್‌.ನಾಯ್ದೊಡಿ, ಎ.ಬಿ.ಬಳವಾಟ, ಎ.ಎನ್‌.ಪೂಜಾರ, ವಿ.ಸಿ.ವಾಲಿಕಾರ, ಬಿ.ಎಸ್‌.ಕೊಪ್ಪದ, ಕೆ.ಗಂಗಮ್ಮ, ಸಿ.ಬಿ.ಚವ್ಹಾಣ, ಆರ್‌.ಎನ್‌. ಮುಲ್ಲಾ, ಆರ್‌.ಎಸ್‌.ಹೊಸೂರ, ವೈ. ಎಂ.ವಾಘೇ, ಎ.ಎಸ್‌.ಬಾಬಾನಗರ, ಡಿ.ಎಸ್‌.ಮಠಪತಿ ಇದ್ದರು.

ಟಾಪ್ ನ್ಯೂಸ್

1-adasda

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ : ಮೂರೂವರೆ ಗಂಟೆಗಳ ಹುಡುಕಾಟ

thumb 6

ಎಲ್ಲಾದರು ಇರು…ಕೆನಡಾ ಸಂಸತ್ ನಲ್ಲಿ ಕನ್ನಡ ಕಲರವ; ವಿಡಿಯೋ ವೈರಲ್

ಎರಡು ವರ್ಷಗಳ ಜೈಲುವಾಸದ ನಂತರ ಅಜಂ ಖಾನ್ ಸೀತಾಪುರ್ ಕಾರಾಗೃಹದಿಂದ ಬಿಡುಗಡೆ

ಎರಡು ವರ್ಷಗಳ ಜೈಲುವಾಸದ ನಂತರ ಅಜಂ ಖಾನ್ ಸೀತಾಪುರ್ ಕಾರಾಗೃಹದಿಂದ ಬಿಡುಗಡೆ

ಹಾವೇರಿ ಜಿಲ್ಲೆಯಾದ್ಯಂತ ಮಳೆ ಎಲ್ಲ ಶಾಲೆಗಳಿಗೆ ಎರಡು ದಿನ ರಜೆ ಘೋಷಣೆ

ಹಾವೇರಿ ಜಿಲ್ಲೆಯಾದ್ಯಂತ ಮಳೆ ಎಲ್ಲ ಶಾಲೆಗಳಿಗೆ ಎರಡು ದಿನ ರಜೆ ಘೋಷಣೆ

ಪಠ್ಯಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರ: ಸ್ಪಷ್ಟನೆ ನೀಡಿದ ಸಚಿವ ಕೋಟ

ಪಠ್ಯಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರ: ಸ್ಪಷ್ಟನೆ ನೀಡಿದ ಸಚಿವ ಕೋಟ

heavy rain; holiday for schools in dharwad

ಮುಂದುವರಿದ ಮಳೆ: ಧಾರವಾಡ ಜಿಲ್ಲೆಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಹೊಸ ಪ್ರಕರಣ: ಲಾಲು ಪ್ರಸಾದ್ ಯಾದವ್ ಗೆ ಸಂಬಂಧಿಸಿದ 15 ಸ್ಥಳಗಳಲ್ಲಿ ಸಿಬಿಐ ದಾಳಿ

ಹೊಸ ಪ್ರಕರಣ: ಲಾಲು ಪ್ರಸಾದ್ ಯಾದವ್ ಗೆ ಸಂಬಂಧಿಸಿದ 15 ಸ್ಥಳಗಳಲ್ಲಿ ಸಿಬಿಐ ದಾಳಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sf-s-d-fsf

ಸಾಧನೆಗೆ ಬಡತನವೇ ಪ್ರೇರಣೆ :ಗೋವಾಕ್ಕೆ ಗುಳೆ ಹೋಗಿರುವ ಕಾರ್ಮಿಕನ‌ ಮಗ ಟಾಪರ್

ಎಸ್ಎಸ್ಎಲ್ ಸಿ ಸಾಧಕ: ಅಮಿತ ಸವಾಲುಗಳನ್ನು ಸೋಲಿಸಿ ಸಾಧನೆಗೈದ ಅಮಿತ್

ಎಸ್ಎಸ್ಎಲ್ ಸಿ ಸಾಧಕ: ಅಮಿತ ಸವಾಲುಗಳನ್ನು ಸೋಲಿಸಿ ಸಾಧನೆಗೈದ ವಿಜಯಪುರದ ಅಮಿತ್

ವಿಜಯಪುರ : ಸಿಡಿಲಿಗೆ 14 ಕುರಿಗಳು ಸಾವು : ಸೂಕ್ತ ಪರಿಹಾರಕ್ಕೆ ಒತ್ತಾಯ

ವಿಜಯಪುರ : ಸಿಡಿಲಿಗೆ 14 ಕುರಿಗಳು ಸಾವು : ಸೂಕ್ತ ಪರಿಹಾರಕ್ಕೆ ಒತ್ತಾಯ

21teachers

ಶಿಕ್ಷಕರ ಸಮಸ್ಯೆ ಅರಿವಿದೆ: ಚಂದ್ರಶೇಖರ

20-protest

ಬಾಣಂತಿಯರ ಪ್ರಕರಣ: ಕೆಆರ್‌ಎಸ್‌ ಪಕ್ಷ ಪ್ರತಿಭಟನೆ

MUST WATCH

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

udayavani youtube

ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋಗುತ್ತಿದ್ದ ಉಡುಪಿಯ ವಿದ್ಯಾರ್ಥಿಗೆ 625 ಅಂಕ

udayavani youtube

ಕೃಷಿ ಚಟುವಟಿಕೆ ಕಂಡು ಖುಷಿ ಪಟ್ಟ ರಾಶಿ ರಾಶಿ ಕೊಕ್ಕರೆಗಳು !!

udayavani youtube

ಶಿವಮೊಗ್ಗದಲ್ಲಿ ರಸ್ತೆ ತುಂಬೆಲ್ಲಾ ನೀರು… ಅಪಾಯಕ್ಕೆ ಅಹ್ವಾನ ನೀಡುತ್ತಿವೆ ಗುಂಡಿಗಳು..

ಹೊಸ ಸೇರ್ಪಡೆ

1-adasda

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ : ಮೂರೂವರೆ ಗಂಟೆಗಳ ಹುಡುಕಾಟ

tobacco

ತಂಬಾಕು ವ್ಯಸನ ನಿಯಂತ್ರ ಣಕ್ಕೆ ಮಾನಿಟರಿಂಗ್‌ ಸ್ಕ್ವ್ಯಾಡ್‌

thumb 6

ಎಲ್ಲಾದರು ಇರು…ಕೆನಡಾ ಸಂಸತ್ ನಲ್ಲಿ ಕನ್ನಡ ಕಲರವ; ವಿಡಿಯೋ ವೈರಲ್

6

ಕೆಎಂಎಫ್: ದಾಖಲೆ ಪ್ರಮಾಣದ ಹಾಲು ಉತ್ಪಾದನೆ

udupi1

ಧಾರಾಕಾರ ಮಳೆ: ತಗ್ಗು ಪ್ರದೇಶಗಳಲ್ಲಿ ನೀರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.