ಸೈನಿಕರ ತ್ಯಾಗ ಸ್ಮರಣೀಯ: ಕುಂಟೋಜಿಶ್ರೀ

ಸೈನಿಕರ ಮನೆಗೇ ಹೋಗಿ ಅವರನ್ನು ಸತ್ಕರಿಸಿ ನಿಮ್ಮ ಜೊತೆ ಶ್ರೀಮಠ ಸದಾಕಾಲ ಇರುತ್ತದೆ

Team Udayavani, Dec 21, 2021, 6:15 PM IST

ಸೈನಿಕರ ತ್ಯಾಗ ಸ್ಮರಣೀಯ: ಕುಂಟೋಜಿಶ್ರೀ

ಮುದ್ದೇಬಿಹಾಳ: ನಮ್ಮ ಸೈನಿಕರನ್ನು, ದೇಶಕ್ಕಾಗಿ ಸೇವೆ ಸಲ್ಲಿಸಿ ಬಂದ ನಿವೃತ್ತ ಸೈನಿಕರನ್ನು ಸತ್ಕಾರ ಮಾಡುವುದು, ರಕ್ಷಣೆ ಮಾಡುವುದು ಮಠಾಧಿಶರ ಕರ್ತವ್ಯ. ಪಾಕಿಸ್ತಾನ ಯುದ್ಧದ ಸವಿ ನೆನಪಿನಲ್ಲಿ ದೇಶದೆಲ್ಲೆಡೆ ವಿಜಯ್‌ ದಿವಸ್‌ ಆಚರಿಸುತ್ತಿರುವ ಸಂಭ್ರಮದ ನಡುವೆ ಇಂಥ ಕಾರ್ಯ ದೇಶಭಕ್ತರಿಗೆ ಪ್ರೇರಕ ಶಕ್ತಿಯಾಗಬಹುದಾಗಿದೆ ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ| ಚನ್ನವೀರ ದೇವರು ಹೇಳಿದರು.

ಮುದೂರ ಗ್ರಾಮದಲ್ಲಿ ವಾಸವಾಗಿರುವ ಪಾಕಿಸ್ತಾನ ಯುದ್ಧದಲ್ಲಿ ಪಾಲ್ಗೊಂಡು ಮಡಿದ ಯೋಧ ಮಲ್ಲಪ್ಪನ ಪತ್ನಿ ಶಿವಗಂಗವ್ವ ಮಾದರ, ಸೇನೆಯಿಂದ ನಿವೃತ್ತರಾದ ಮುದ್ದೇಬಿಹಾಳ ಪಟ್ಟಣದಲ್ಲಿ ವಾಸವಾಗಿರುವ ಎಸ್‌ಬಿಐಬ್ಯಾಂಕ್‌ನ ನಿವೃತ್ತ ಅಧಿಕಾರಿ ಎಸ್‌.ಆರ್‌.ಕುಲಕರ್ಣಿ ಮತ್ತು ಎಸ್‌.ಎಸ್‌.ಹಿರೇಮಠ ಅವರನ್ನು ಶ್ರೀಮಠದ ವತಿಯಿಂದ ಸತ್ಕರಿಸಿ ಮಾತನಾಡಿದ ಅವರು, ಸೈನಿಕರ ತ್ಯಾಗ ಸ್ಮರಣೀಯ ಎಂದರು.

ಪತಿಯೊಂದಿಗೆ ಕೇವಲ 8 ತಿಂಗಳು ಸಂಸಾರ ನಡೆಸಿ, ಆತ ವೀರಮರಣವನ್ನಪ್ಪಿದ ಮೇಲೆ ಕಳೆದ 50 ವರ್ಷಗಳಿಂದ ಪತಿಯ ಸ್ಮರಣೆಯಲ್ಲೇ ಜೀವಿಸುತ್ತಿರುವ ಶಿವಗಂಗಮ್ಮ ಸೈನಿಕರ ಪತ್ನಿಯರಿಗೆ ಮಾದರಿಯಾಗಿದ್ದಾರೆ. ಸರ್ಕಾರದಿಂದ ಬರುವ ಅತ್ಯಲ್ಪ ಮಾಸಾಶನದಲ್ಲೇ ಜೀವನ ನಡೆಸುತ್ತಿರುವ ಇವರಂಥ ಅನೇಕ ವಿಧವೆಯರನ್ನು ಸರ್ಕಾರ ಗುರುತಿಸಿ ಈಗ ದೊರೆಯುವ ಸೌಲಭ್ಯಗಳನ್ನು ನೀಡಿ ಅವರ ಸೇವೆಯನ್ನು ಎತ್ತಿ ಹಿಡಿಯುವ ಅವಶ್ಯಕತೆ ಇದೆ ಎಂದರು. ಕರ್ನಾಟಕ ರಾಜ್ಯ ಯುವ ಸಂಘಟನೆಗಳ ಒಕ್ಕೂಟದ ಜಿಲ್ಲಾ ಮುಖಂಡರೂ ಆಗಿರುವ ಪತ್ರಕರ್ತ ಪುಂಡಲೀಕ ಮುರಾಳ ಮಾತನಾಡಿ, ಡಾ| ಚನ್ನವೀರ ದೇವರು ವಿನೂತನ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ಒಬ್ಬ ಮಠಾಧೀಶರಾಗಿ ಮಾಜಿ ಸೈನಿಕರ ಮನೆಗೇ ಹೋಗಿ ಅವರನ್ನು ಸತ್ಕರಿಸಿ ನಿಮ್ಮ ಜೊತೆ ಶ್ರೀಮಠ ಸದಾಕಾಲ ಇರುತ್ತದೆ ಎಂದು ಆಶೀರ್ವದಿಸಿ ಅವರಿಗೆ ಧೈರ್ಯ ತುಂಬಿರುವುದು ಶ್ಲಾಘನೀಯ. ಶ್ರೀಮಠದ ಈ ಸಮಾಜಮುಖೀ ಕಾರ್ಯಕ್ಕೆ ನಮ್ಮಂಥವರು ಸದಾ ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದರು.

ಮಾಜಿ ಸೈನಿಕರ ಸಂಘದ ಅಧ್ಯಕ್ಷ ಆರ್‌ .ಐ.ಹಿರೇಮಠ ಮಾತನಾಡಿ, ಡಾ| ಚನ್ನವೀರ ದೇವರು ಅತ್ಯಂತ ಸ್ತುತ್ಯರ್ಹ ಕಾರ್ಯ ಮಾಡಿದ್ದಾರೆ. ಪಾಕಿಸ್ತಾನ ಯುದ್ಧದಲ್ಲಿ ಪಾಲ್ಗೊಂಡ ಸೈನಿಕರ ಮನೆಗೆ ತೆರಳಿ ಅವರಿಗೆ ಸತ್ಕರಿಸಿದ್ದು ಇಡಿ ಸೈನ್ಯವಲಯಕ್ಕೆ ಸಂದಗೌರವವಾಗಿದೆ.ಇದೊಂದು ಅದ್ಭುತವಾದ ಕಾರ್ಯಕ್ರಮವಾಗಿದ್ದು ಎಂದಿಗೂ ಮರೆಯಲಾಗದಂಥದ್ದು. ಮಾಜಿ ಸೈನಿಕರ ಸಂಘವು ಸದಾ ಶ್ರೀಮಠದ ಜೊತೆಗಿದೆ ಎಂದರು.

ಸನ್ಮಾನಿತರ ಪರವಾಗಿ ಮಾತನಾಡಿದ ಎಸ್‌.ಆರ್‌.ಕುಲಕರ್ಣಿ, ನಮ್ಮಕುಲಕರ್ಣಿ ಮನೆತನಕ್ಕೂ ಕುಂಟೋಜಿ ಬಸವಣ್ಣನಿಗೂ ಅವಿನಾಭಾವ ಸಂಬಂಧ ಇದೆ. ಬಿದರಕುಂದಿ ಕುಲಕರ್ಣಿಯವರ ಮನೆಗೆ 16ನೇ ಶತಮಾನದಿಂದಲೂ ಕುಂಟೋಜಿ ಬಸವಣ್ಣ ಆರಾಧ್ಯದೈವವಾಗಿದ್ದಾರೆ. ನಮ್ಮ ಪೂರ್ವಜರೆಲ್ಲರೂ ಕುಂಟೋಜಿ ಬಸವಣ್ಣನಿಗೆ ನಡೆದುಕೊಳ್ಳುತ್ತಿದ್ದರು. ನಮ್ಮ ಮನೆಯ ದೇವರ ಕೋಣೆಯಲ್ಲೂ ಕುಂಟೋಜಿ ಬಸವಣ್ಣ ಇದ್ದಾನೆ. ನಮ್ಮ ಆರಾಧ್ಯದೈವದ ಸ್ಥಾನದಿಂದ ಬಂದು
ನಮ್ಮನ್ನು ಸತ್ಕರಿಸಿರುವ ಡಾ| ಚನ್ನವೀರ ದೇವರು 15-20 ವರ್ಷಗಳಿಂದ ಸದಾ ನಮ್ಮ ಹೃದಯದಲ್ಲಿ ಕುಳಿತು ನಮ್ಮನ್ನು ಕಾಪಾಡುತ್ತಿದ್ದಾರೆ ಎಂದರು.

ಎಸ್‌.ಆರ್‌.ಕುಲಕರ್ಣಿ ಮತ್ತು ಎಸ್‌.ಎಸ್‌ .ಹಿರೇಮಠರನ್ನು ದಂಪತಿ ಸಮೇತ, ಮುದೂರಿನ ಶಿವಗಂಗಮ್ಮ ಅವರಿಗೆ ಫಲಪುಷ್ಪ ನೀಡಿ ಗೌರವಿಸಲಾಯಿತು. ಶ್ರೀಮಠದ ಭಕ್ತರು, ಡಾ| ಚನ್ನವೀರ ದೇವರ ಅನುಯಾಯಿಗಳು, ಪುರಸಭೆ ಮಾಜಿ ಸದಸ್ಯ ಸತೀಶ ಕುಲಕರ್ಣಿ ಮತ್ತಿತರರು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

ganihara

Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.