ವಿಜಯಪುರ: ಮನೆ ಮುಂದೆ ಕಟ್ಟಿದ್ದ ಕುರಿಗಳ ಕಳ್ಳತನ

Team Udayavani, Sep 12, 2019, 9:59 AM IST

ಸಾಂದರ್ಭಿಕ ಚಿತ್ರ

ವಿಜಯಪುರ : ಮನೆಯ ಮುಂದೆ ಕಟ್ಟಿದ್ದ 13 ಕುರಿಗಳ ಕಳ್ಳತನ ಮಾಡಿರುವ ಘಟನೆ ವಿಜಯಪುರ ತಾಲೂಕಿನ ಕವಲಗಿ ಗ್ರಾಮದಲ್ಲಿ ಜರುಗಿದೆ.

ರಮೇಶ ಇಂಗಳೇಶ್ವರ ಎಂಬವರು ತಮ್ಮ ಕುರಿಗಳನ್ನು ಮನೆಯ ಮುಂದೆ ಕಟ್ಟಿಹಾಕಿ, ತಾವು ಮನೆಯಲ್ಲಿ ಮಲಗಿದ್ದರು. ಮಾಲೀಕ ಮನೆಯ ಒಳಗೆ ಮಲಗಿದ್ದರಿಂದ ಸುಲಭವಾಗಿ ಕುರಿಗಳ್ಳತನ ಮಾಡಿದ್ದಾರೆ.

ಕೆಲ ತಿಂಗಳ ಮೊದಲು ಕೂಡ ರಮೇಶ ಅವರ 10 ಕುರಿಗಳನ್ನು ಇದೇ ರೀತಿ ಕಳ್ಳತನ ಮಾಡಲಾಗಿತ್ತು. ವಿಜಯಪುರ ಗ್ರಾಮೀಣ ಠಾಣೆ ಪೊಲೀಸರಿಗೆ ದೂರು‌ ನೀಡಿದ್ದರೂ ಕುರಿಗಳ್ಳರ ಬಂಧನವಾಗಿಲ್ಲ.

ಈ ಪ್ರಕರಣ ಪತ್ತೆಯಾಗುವ ಮುನ್ನವೇ ಇದೀಗ ಮತ್ತೆ ರಮೇಶ ಕುರಿಗಳ ಕಳ್ಳತನ ನಡೆದಿರುವುದು ರಮೇಶ ಸೇರಿದಂತೆ ಗ್ರಾಮದ ರೈತರಲ್ಲಿ ಆತಂಕ ಮೂಡಿಸಿದೆ.

ಕೂಡಲೇ ಕುರಿಗಳ್ಳರನ್ನು ಬಂಧಿಸಿ ಗ್ರಾಮದಲ್ಲಿ ಮೂಡಿರುವ ಭಯ ಹೋಗಲಾಡಿಸುವಂತೆ ರೈತರು ಆಗ್ರಹಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ