ಹಳ್ಳ ದಾಟಲು ಹರಸಾಹಸ

Team Udayavani, Feb 18, 2020, 1:15 PM IST

ಚಡಚಣ: ತಾಲೂಕಿನ ಹಲಸಂಗಿ ಗ್ರಾಮದಿಂದ ನಂದ್ರಾಳವರೆಗಿನ 6 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಿದ್ಯಾರ್ಥಿಗಳು, ರೈತರು ಹಾಗೂ ವಾಹನ ಸವಾರರು ತೀವೃ ತೊಂದರೆ ಅನುಭವಿಸುವಂತಾಗಿದೆ.
ಸುಮಾರು ಮೂರು ವರ್ಷಗಳ ಹಿಂದೆ ಕೆಬಿಜಿಎನ್‌ ಎಲ್‌ ವತಿಯಿಂದ ಖಡೀಕರಣ ಮಾಡಲಾಗಿತ್ತು. ಆದರೆ ರಸ್ತೆ ದುರಸ್ತಿ ಮಾಡಿದ ಆರು ತಿಂಗಳುಗಳಲ್ಲಿ ಅದು ಕಿತ್ತು ಹೋಗಿ, ದಾರಿ ತುಂಬೆಲ್ಲ ಕಲ್ಲು ಬಂಡೆಗಳು ತುಂಬಿಕೊಂಡಿವೆ. ರಸ್ತೆ ಇಕ್ಕೆಲೆಗಳಲ್ಲಿ ಬೆಳೆದು ನಿಂತ ಜಾಲಿ ಮುಳ್ಳು ಕಂಟಿಗಳು ರಸ್ತೆ ಆವರಸಿರುವುದರಿಂದ ಈ ಮಾರ್ಗದ ಮೂಲಕ ಹಾದು ಹೋಗುವ ವಾಹನ ಸವಾರರು, ಪಾದಚಾರಿಗಳು ರೈತರು ಹಿಡಿಶಾಪ ಹಾಕುವಂತಾಗಿದೆ.

ರಸ್ತೆ ಮಧ್ಯದಲ್ಲಿರುವ ಹಳ್ಳದಲ್ಲಿ ನಿರಂತರ ನೀರು ಹರಿಯುತ್ತದೆ. ಮಳೆಗಾಲ ಬಂತೆಂದರೆ ಸಾಕು, ವಿದ್ಯಾರ್ಥಿಗಳು ಶಾಲೆಗೆ ಬರುವುದೇ ದುಸ್ತರವಾಗಿದೆ. ಹಲಸಂಗಿ ಗ್ರಾಮಕ್ಕೆ ಸೈಕಲ್‌ ಮೂಲಕ ಬರುವ ಅಡವಿ ವಸ್ತಿ ಹಾಗೂ ನಂದ್ರಾಳ ಗ್ರಾಮದ ಶಾಲಾ ವಿದ್ಯಾರ್ಥಿಗಳು ಶಾಲೆ ತಲುಪವುದೇ ಪಾಲಕರಿಗೆ ದೊಡ್ಡ ಚಿಂತೆಯಾಗಿದೆ. ಈ ರಸ್ತೆ ಡಾಂಬರೀಕರಣ ಮಾಡುವಂತೆ ಸ್ಥಳಿಯ ಗ್ರಾಪಂ ಮತ್ತೆ ಕಳೆದ ಸಾಲಿನಲ್ಲಿ ಸುಮಾರು 3.50 ಕೋಟಿ ರೂ. ಕ್ರಿಯಾ ಯೋಜನೆ ಸಿದ್ಧಪಡಿಸಿ ಮತ್ತೆ ಕೆಬಿಜಿಎನ್‌ಎಲ್‌ ಇಲಾಖೆಗೆ ಕಳುಹಿಸಿಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತು ಭಾಗದ ಜನಪ್ರತಿನಿಧಿಗಳು, ಶಾಸಕರಿಗೆ ಮನವಿ ಸಲ್ಲಿಸಿದರೂ ಯರೋಬ್ಬರೂ ಸ್ಪಂದಿಸುತ್ತಿಲ್ಲ ಎಂಬುದು ನಂದ್ರಾಳ ಗ್ರಾಮಸ್ಥರ ಆರೋಪವಾಗಿದೆ.

ಇನ್ನೂ ರಸ್ತೆಗಳ ಸುಧಾರಣೆ ಮಾಡಬೇಕಾದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗಂತೂ ಈ ರಸ್ತೆ ಎಲ್ಲಿದೆ ಎಂಬುದು ಗೊತ್ತೆ ಇಲ್ಲ ಎಂಬುದು ಪ್ರಜ್ಞಾವಂತರ ಅನಿಸಿಕೆ. ಇನ್ನದರೂ ಈ ರಸ್ತೆ ಸುಧಾರಣೆ ಹಾಗೂ ಡಾಂಬರೀಕರಣಕ್ಕೆ ಸಂಬಂಧಿಸಿದ ಇಲಾಖೆ, ಶಾಸಕರು ಹಾಗೂ ಭಾಗದ ಜನಪ್ರತಿನಿಧಿಗಳು ಗಮನ ಹರಿಸಿ, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವರೇ ಎಂಬುದನ್ನು ಕಾದು ನೋಡುತ್ತಿದ್ದಾರೆ ಹಲಸಂಗಿ, ನಂದ್ರಾಳ ಗ್ರಾಮಸ್ಥರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ