ಅಕಾಲಿಕ ಮಳೆ: ಜನಜೀವನ ಅಸ್ತವ್ಯಸ್ಥ

Team Udayavani, May 12, 2018, 4:36 PM IST

ನಿಡಗುಂದಿ: ಶುಕ್ರವಾರ ಸಂಜೆ ಸುರಿದ ಮಳೆ, ಬೀಸಿದ ಭಾರಿ ಗಾಳಿಗೆ ಪಟ್ಟಣ ಸೇರಿದಂತೆ ನಾನಾ ಕಡೆ ಪತ್ರಾಸ್‌ಗಳು ಹಾರಿ, ಗಿಡಗಳು ನೆಲಕ್ಕುರುಳಿದ ಘಟನೆ ನಡೆದಿದೆ. ಪಟ್ಟಣದ ಹೊರವಲಯದ ಮುದ್ದೇಬಿಹಾಳ ಕ್ರಾಸ್‌ ಬಳಿ ಇರುವ ಅಂಗಡಿಯ ಪತ್ರಾಸ್‌ಗಳು ಹಾರಿ ಹೋಗಿವೆ. ಸುರಿದ ಮಳೆ ಕಮದಾಳ ಪುನರ್ವಸತಿ ಕೇಂದ್ರದ ಹಲವಾರು ಮನೆಗಳಿಗೆ
ಚರಂಡಿ ನೀರು ಒಮ್ಮಲೆ ನುಗ್ಗಿದೆ. ಶಂಕ್ರಯ್ಯ ಹಿರೇಮಠ ಅವರಿಗೆ ಸೇರಿದ ಮನೆಗಳು, ಅಂಗಡಿಗಳಿಗೆ ನೀರು ಹೊಕ್ಕಿದೆ. ಕೆಲ ಗಿಡಗಳು ಕೂಡಾ ನೆಲಕ್ಕುರುಳಿವೆ. ಇನ್ನೂ ಆಲಮಟ್ಟಿ, ಬೇನಾಳ, ವಂದಾಲ, ಗೊಳಸಂಗಿ ಭಾಗದಲ್ಲಿಯೂ ಭಾರಿ
ಪ್ರಮಾಣದಲ್ಲಿ ಗಾಳಿ ಬೀಸಿದ್ದು, ಮಳೆ ಕೂಡಾ ಸುರಿದಿದೆ. ಸಂಜೆಯವರೆಗೂ ಜಿಟಿ ಜಿಟಿ ಮಳೆಯ ಅಬ್ಬರ ಮುಂದುವರಿದಿತ್ತು. ನಿಡಗುಂದಿ ಪಟ್ಟಣದಲ್ಲಿ ಹಲವೆಡೆ ವಿದ್ಯುತ್‌ ತಂತಿಗಳು ಹರಿದು ಬಿದ್ದಿವೆ. ಹೀಗಾಗಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿ¨ 

ಅಪಾರ ಹಾನಿ
ಆಲಮಟ್ಟಿ: ಪಟ್ಟಣವೂ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುಡುಗು, ಮಿಂಚು ಮಿಶ್ರಿತ ಬಿರುಗಾಳಿ ಸಮೇತ ಸುರಿದ ಮಳೆಗೆ ಅಪಾರ ಹಾನಿ ಸಂಭವಿಸಿದೆ. ಶುಕ್ರವಾರ ಸಂಜೆ ಸುರಿದ ಮಳೆಗೆ ಆಲಮಟ್ಟಿ, ಅರಳದಿನ್ನಿ, ಬೇನಾಳ, ಚಿಮ್ಮಲಗಿ, ವಂದಾಲ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿರುಗಾಳಿಗೆ ಗಿಡ, ಮರ, ವಿದ್ಯುತ್‌ ಕಂಬಗಳು
ಧರೆಗುರುಳಿದ್ದಲ್ಲದೇ ಶೆಡ್ಡುಗಳಿಗೆ ಹಾಕಲಾಗಿದ್ದ ತಗಡು ಹಾರಿ ಎಲ್ಲೆಂದರಲ್ಲಿ ಬಿದ್ದಿರುವ ಬಗ್ಗೆ ವರದಿಯಾಗಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ವಿಜಯಪುರ: ಈ ಭಾಗದಲ್ಲಿ ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳನ್ನು ಸಂಸ್ಕರಿಸಿ ಆಕರ್ಷಕ ಪ್ಯಾಕೆಜಿನೊಂದಿಗೆ ರಫ್ತು ಮಾಡಲು ವಿಫುಲ ಅವಕಾಶಗಳಿದ್ದು ಇದರ ಸದುಪಯೋಗ...

  • ವಿಜಯಪುರ: ಸೈಕ್ಲಿಂಗ್‌ ತವರು ಎನಿಸಿಕೊಂಡಿರುವ ಗುಮ್ಮಟ ನಗರಿ ವಿಜಯಪುರದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ 15ನೇ ಮೌಂಟೇನ್‌ ಬೈಕ್‌ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌...

  • ಜಿ.ಎಸ್‌. ಕಮತರ ವಿಜಯಪುರ: ತ್ಯಾಜ್ಯಗಳಿಂದಾಗಿ ಕೊಳಕು ನಾರುತ್ತಿರುವ ನಗರದ ಅರೆಕಿಲ್ಲಾ ಪ್ರದೇಶದಲ್ಲಿರುವ ಐತಿಹಾಸಿಕ ಗಗನ ಮಹಲ್ ಕಂದಕದಲ್ಲಿ ಬೋಟಿಂಗ್‌ ಆರಂಭಿಸಿ...

  • ವಿಜಯಪುರ: ಭಾರತೀಯ ರಂಗಭೂಮಿಯಲ್ಲೇ ಅತ್ಯಂತ ಜೀವಂತಿಕೆ ಉಳಿಸಿಕೊಂಡಿರುವ ಕ್ರಿಯಾಶೀಲತೆ ಮೈಗೂಡಿಸಿಕೊಂಡಿರುವ ಏಕೈಕ ರಂಗ ಎಂದರೆ ಕನ್ನಡ ರಂಗಭೂಮಿ ಮಾತ್ರ ಎಂದು...

  • ಆಲಮಟ್ಟಿ: ದೇಶದಲ್ಲಿ ಜಾತಿ ವ್ಯವಸ್ಥೆ ನಿರ್ಮೂಲನೆ ಆಗುವವರೆಗೂ ಸಂವಿಧಾನದಲ್ಲಿ ನೀಡಿರುವ ಮೀಸಲಾತಿ ಮುಂದುವರಿಸಬೇಕು ಎಂದು ದಲಿತ ಸಂಘರ್ಷಸಮಿತಿ ರಾಜ್ಯ ಸಂಚಾಲಕ...

ಹೊಸ ಸೇರ್ಪಡೆ