ವಾಜಪೇಯಿ ದೇಶಕಂಡ ಅಪ್ರತಿಮ ಪ್ರಧಾನಿ

Team Udayavani, Dec 26, 2017, 11:46 AM IST

ತಾಳಿಕೋಟೆ: ಚಿಕ್ಕಂದಿನಿಂದ ಹೋರಾಟಗಳ ಮೂಲಕ ಸಂಘಟನೆ ಮಾಡಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಂತಹ ದೇಶ ಕಂಡ ಅಪ್ರತಿಮ ಪ್ರಧಾನಿಯಾಗಿದ್ದಾರೆ ಅಟಲ್‌ಬಿಹಾರಿ ವಾಜಪೇಯಿ ಎಂದು ಭಾರತೀಯ ಜನತಾ ಪಕ್ಷದ ದೇವರಹಿಪ್ಪರಗಿ ಮಂಡಲದ ಉಪಾಧ್ಯಕ್ಷ ಹನುಮಂತ್ರಾಯ ಢವಳಗಿ ಹೇಳಿದರು.

ಸೋಮವಾರ ಪಟ್ಟಣದ ಕವೀ ಫೌಂಡೇಶನ್‌ ಆಯೋಜಿಸಿದ್ದ ಅಟಲ್‌ಬಿಹಾರಿ ವಾಜಪೇಯಿ ಅವರ 93ನೇ ಜನ್ಮದಿನ ಕಾರ್ಯಕ್ರಮದಲ್ಲಿ ಭಾರತಾಂಭೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ಬಡವರು, ದೀನ ದಲಿತರ ಕಲ್ಯಾಣಕ್ಕಾಗಿ ವಾಜಪೇಯಿ ಶ್ರಮಿಸಿದ್ದಾರೆ. ಅವರು ಪ್ರಧಾನಿ ಹುದ್ದೆ ಅಲಂಕರಿಸಿದ ನಂತರ ದೇಶದ ಮೂಲೆ ಮೂಲೆಗಳಲ್ಲಿದ್ದ ಎಲ್ಲ ಗ್ರಾಮಗಳಿಗೆ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆ ಮೂಲಕ ರಸ್ತೆ ಸಂಪರ್ಕ ಕಲ್ಪಿಸಿ ಅಭಿವೃದ್ಧಿಯ ದಾರಿ ತೋರಿಸಿಕೊಟ್ಟಿದ್ದಾರೆ.

ಅವರ ಆಡಳಿತಾವಧಿಯಲ್ಲಿ ನಿರ್ಮಾಣಗೊಂಡ ರಸ್ತೆಗಳು ಇನ್ನೂ ಅಜರಾಮರವಾಗಿವೆ. ದೇಶ ಕಂಡ ಪ್ರಧಾನಿಗಳಲ್ಲಿ ಅತ್ಯತಂತ ಶ್ರೇಷ್ಠ ಪ್ರಧಾನಿ ವಾಜಪೇಯಿ. ಸದ್ಯ ನರೇಂದ್ರ ಮೋದಿ ಆಡಳಿತ ನಡೆಸುತ್ತಿದ್ದು ಇಡಿ ವಿಶ್ವವೇ ಭಾರತದೆಡೆಗೆ
ನೋಡುವಂತೆ ಮಾಡುತ್ತಿದ್ದು ವಾಜಪೇಯಿ ಮಾರ್ಗದಲ್ಲಿ ಸಾಗುತ್ತಿದ್ದಾರೆ ಎಂದರು. 

ಅಧ್ಯಕ್ಷತೆ ವಹಿಸಿ ಕವೀ ಫೌಂಡೇಶನ್‌ ಸಂಸ್ಥಾಪಕ ನಿರ್ದೇಶಕ ವೀರೇಶ ಕೋರಿ ಮಾತನಾಡಿ, ಬಡಜನರ ಆಶಾಕಿರಣರಾಗಿ ಹೊರಹೊಮ್ಮಿ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಕೊಂಡ ವಾಜಪೇಯಿ ಸಾಧನೆ ಅನನ್ಯವಾಗಿದೆ ಎಂದು ಬಣ್ಣಿಸಿದರು. 

ಮುಖಂಡರಾದ ರಾಮನಗೌಡ ಕರಕಳ್ಳಿ, ವಿಠ್ಠಲ ಗಾಯಕವಾಡ, ರಮೇಶ ಪಾಟೀಲ, ಕಾಶೀನಾಥ ಅರಳಿಚಂಡಿ, ಬಸವರಾಜ ಕೋರಿ, ಮಲಕನಗೌಡ ಪಾಟೀಲ, ಶಿವನಗೌಡ ಉಕ್ಕಲಿ, ಸಿದ್ದು ಬಿರಾದಾರ, ನಾಗೇಶ ಭಜಂತ್ರಿ, ಸುರೇಶ ಪಾಟೀಲ, ಕುಮಾರ ಪಾಟೀಲ, ಆನಂದ ಮೇಟಿ, ಪುಂಡಲಿಂಗ ಬಿರಾದಾರ, ಸೋಮು ಹಿರೇಮಠ, ಕಾಶೀನಾಥ ಅರಳಿಚಂಡಿ ಇದ್ದರು. 

ಅಟಲ್‌ ಜನ್ಮದಿನಾಚರಣೆ 
ಮುದ್ದೇಬಿಹಾಳ: ಇಲ್ಲಿನ ಬಸ್‌ ನಿಲ್ದಾಣದಲ್ಲಿ ಸ್ವತ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಅವರ 93ನೇ ಜನ್ಮದಿನವನ್ನು ಬಿಜೆಪಿ ಯುವ ಘಟಕದ ನೇತೃತ್ವದಲ್ಲಿ ಸೋಮವಾರ ಆಚರಿಸಲಾಯಿತು. ಬಿಜೆಪಿಯ ಎಲ್ಲ ಮುಖಂಡರು, ಯುವ ಘಟಕದ ಕಾರ್ಯಕರ್ತರು ಭಾಗವಹಿಸಿ ನಿಲ್ದಾಣದಲ್ಲಿನ ಕಸ ಗೂಡಿಸುವ ಮೂಲಕ ಸ್ವತ್ಛಗೊಳಿಸಿದರು. ಈ ವೇಳೆ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಮಂಗಳಾದೇವಿ ಬಿರಾದಾರ ಅವರು ಅಟಲ್‌ಬಿಹಾರಿ ವಾಜಪೇಯಿ ಅವರ ಸರಳ, ನಿಗರ್ವಿ ಜೀವನ ಮತ್ತು ಅವರು ಪ್ರಧಾನಿಯಾಗಿದ್ದಾಗ ಜನಮಾನಸದಲ್ಲಿ ಸದಾ ಉಳಿಯುವ ಉತ್ತಮ ಆಡಳಿತ ನೀಡಿದ್ದರ ಕುರಿತು ಮಾತನಾಡಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್‌.ಎಸ್‌.ಪಾಟೀಲ ಕೂಚಬಾಳ, ಮುದ್ದೇಬಿಹಾಳ ಮಂಡಲ ಅಧ್ಯಕ್ಷ ವಕೀಲ ಎಂ.ಡಿ. ಕುಂಬಾರ, ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಶಾಂತಗೌಡ ಬಿರಾದಾರ, ಪ್ರಭು ಕಡಿ, ಬಿ.ಪಿ. ಕುಲಕರ್ಣಿ, ಪರಶುರಾಮ ಪವಾರ, ಕಾಶೀಬಾಯಿ ರಾಂಪುರ, ಅರವಿಂದ ಕಾಶಿನಕುಂಟಿ, ಸಿದ್ದು ಹೆಬ್ಟಾಳ, ಶೇಖರ ಢವಳಗಿ, ಜಗದೀಶ ಪಂಪಣ್ಣವರ, ರಾಜಶೇಖರ ಹೊಳಿ, ಬಸವರಾಜ ಗುಳಬಾಳ, ನಾಗಪ್ಪ ರೂಢಗಿ, ಬಿ.ಜಿ. ಜಗ್ಗಲ್‌, ರಫೀಕ್‌ ಕುಂಟೋಜಿ, ಮುತ್ತು ಪಾಟೀಲ ಇದ್ದರು.

ಬಿಜೆಪಿ ಕಾರ್ಯಾಲಯ: ಸ್ಥಳೀಯ ಬಿಜೆಪಿ ಕಾರ್ಯಾಲಯದಲ್ಲಿ ವಾಜಪೇಯಿ ಜನ್ಮದಿನ ಆಚರಿಸಲಾಯಿತು. ವಾಜಪೇಯಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಲಾಯಿತು. ಬಿಜೆಪಿ ಮುಖಂಡರಾದ ಪ್ರಭು ಕಡಿ, ಬಿ.ಪಿ. ಕುಲಕರ್ಣಿ, ಪರಶುರಾಮ ಪವಾರ ಮಾತನಾಡಿ ವಾಜಪೇಯಿ ಅವರ ಒಡನಾಟ, ಸರಳತೆ ಸ್ಮರಿಸಿದರು. ಮುಖಂಡರಾದ ಮಂಗಳಾದೇವಿ ಬಿರಾದಾರ, ಬಾಬುಲಾಲ ಓಸ್ವಾಲ್‌, ಎಂ.ಎಸ್‌. ಪಾಟೀಲ, ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.

ಅಟಲ್‌ಜೀ ಮಹಾನ್‌ ನಾಯಕ
ಚಡಚಣ: ಮಾಜಿ ಪ್ರಧಾನಿ, ಭಾರತ ರತ್ನ ಅಟಲ್‌ಬಿಹಾರಿ ವಾಜಪೇಯಿ ದೇಶ ಕಂಡ ಅಪರೂಪದ ಮಹಾನ್‌ ನಾಯಕ
ಎಂದು ಬಿಜೆಪಿ ಮುಖಂಡ ನಾಗೇಂದ್ರ ಮಾಯವಂಶಿ ಹೇಳಿದರು.  ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ಘೋಷಿತ ತಾಲೂಕು ಹೋರಾಟ ಸಮಿತಿಯ ವತಿಯಿಂದ ಆಯೋಜಿಸಿದ್ದ ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಅವರ 93ನೇಯ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಮುಖಂಡ ಗಂಗಾಧರ ಪಾವಲೆ, ನ್ಯಾಯವಾದಿ ಅಶೋಕ ಕುಲಕರ್ಣಿ ಮಾತನಾಡಿ, ಅಟಲಜೀ ಅವರ ದೂರದೃಷ್ಟಿ ಪರಿಣಾಮ ದೇಶ ಇಂದು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಅವರೊಬ್ಬ ಅಪರೂಪದ ರಾಜಕೀಯ ನಾಯಕರಾಗಿದ್ದಾರೆ ಎಂದರು.

ಜಿಪಂ ಸದಸ್ಯ ಭೀಮಾಶಂಕರ ಬಿರಾದಾರ, ನಾಗಠಾಣ ಮಂಡಲ ಬಿಜೆಪಿ ಅಧ್ಯಕ್ಷ ಕಲ್ಲು ಉಟಗಿ, ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ನಿರಾಳೆ, ತಾಲೂಕು ಹೋರಾಟ ಸಮೀತಿ ಅಧ್ಯಕ್ಷ ಪ್ರಭಾಕರ ನಿರಾಳೆ, ಮುಖಂಡರಾದ ರಾಮ ಅವಟಿ, ಮಹಾದೇವ ಯಂಕಂಚಿ, ರಾಮಚಂದ್ರ ಬಡಿಗೇರ, ಸಂಗಮೇಶ ಮುಂಡೋಡಗಿ, ಪ್ರಕಾಶಗೌಡ ಪಾಟೀಲ, ರಾಜು ಕ್ಷತ್ರಿ, ಪ್ರಮೋದ ಮಠ, ಮಲ್ಲು ಉಮರಾಣಿ,
ಬಸವರಾಜ ಭಮಶೆಟ್ಟಿ, ಚೇತನ ನಿರಾಳೆ, ಚೇತನ ಮಠ, ರಾಹುಲ್‌ ಬನಪಟ್ಟಿ, ರಾಹುಲ್‌ ಲೋಖಂಡೆ, ಅನಿಲ ಸಾಳುಂಕೆ ಇದ್ದರು. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಸಹಾಯಾನುದಾನ ಮತ್ತು ವಂತಿಗೆ ಹಾಗೂ ತೆರಿಗೆ ಪಾಲಿನ ಕಡಿತದ ಪರಿಣಾಮ 2020-21 ನೇ ಸಾಲಿನ ಬಜೆಟ್‌ ಮೇಲೆ ಪರಿಣಾಮ ಬೀರಲಿದ್ದು...

  • ಹುಬ್ಬಳ್ಳಿ: ಮಹದಾಯಿ ಕುರಿತು ಕೇಂದ್ರದಿಂದ ಅಧಿಸೂಚನೆ ಹೊರಡಿಸುವುದು ವಿಶೇಷವಾಗಿ ಇಬ್ಬರು ಸಚಿವರಿಗೆ ಪ್ರತಿಷ್ಠೆಯಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ,...

  • ಕಾರವಾರ: ಕೊರೊನಾ ವೈರಸ್‌ ಕಾರಣಕ್ಕೆ ಜಪಾನ್‌ನ ಯೊಕೊಹಾಮಾದಲ್ಲಿ ಡೈಮಂಡ್‌ ಪ್ರಿನ್ಸಸ್‌ ಎಂಬ ಕ್ರೂಸ್‌ ಹಡಗಿನಲ್ಲಿ ಬಂಧಿಯಾಗಿದ್ದ ಕಾರವಾರ ಮೂಲದ ಅಭಿಷೇಕ್‌...

  • ಮುದಗಲ್ಲ (ರಾಯಚೂರು): ಚೀನಾದಲ್ಲಿ ಮಾರಣಹೋಮ ನಡೆಸಿರುವ ಕೊರೊನಾ ವೈರಸ್‌ ಪರಿಣಾಮ ಇಲ್ಲಿನ ಕಲ್ಲು ಗಣಿಗಾರಿಕೆ ಮೇಲೂ ಆಗಿದೆ. ಕೊರೊನಾ ವೈರಸ್‌ ಪರಿಣಾಮ ಚೀನಾ ಸೇರಿ...

  • ಬೆಂಗಳೂರು: ಸಿದ್ದರಾಮಯ್ಯ ಹೇಳಿದ ಕೂಡಲೇ ಕಾಂಗ್ರೆಸ್‌ ಬಿಟ್ಟು ಹೋಗಿರುವವರು ವಾಪಸ್‌ ಬರ್ತಾರೆ ಎಂದು ಕಾಂಗ್ರೆಸ್‌ ಹಿರಿಯ ನಾಯಕಿ ಮಾರ್ಗರೇಟ್‌ ಆಳ್ವಾ ಹೇಳಿಕೆಯನ್ನು...