ವಿಜಯಪುರದ ಕೋವಿಡ್-19 ಸೋಂಕಿತೆ ಸಾವು: ಸೋಂಕಿಗೆ ಜಿಲ್ಲೆಯಲ್ಲಿ 3ನೇ ಬಲಿ
Team Udayavani, May 5, 2020, 11:30 AM IST
ವಿಜಯಪುರ: ಜಿಲ್ಲೆಯಲ್ಲಿ ಸೋಮವಾರ ಕೋವಿಡ್-19 ಸೋಂಕು ದೃಢಪಟ್ಟಿದ್ದ P 640 ಸಂಖ್ಯೆಯ 62 ವರ್ಷದ ವೃದ್ಧೆ ಮಂಗಳವಾರ ಮೃತಪಟ್ಟಿದ್ದಾಳೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿಗೆ 3ನೇ ಬಲಿಯಾಗಿದೆ.
ನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸದರಿ ವೃದ್ದೆಗೆ ಮಂಗಳವಾರ ಸೋಂಕು ದೃಢಪಟ್ಟಿತ್ತು. ಸದರಿ ಸೋಂಕಿತೆ ಸೇರಿ ವಿಜಯಪುರ ಜಿಲ್ಲೆಯಲ್ಲಿ ಈವರೆಗೆ 47 ಜನರಿಗೆ ಸೋಂಕು ದೃಢಪಟ್ಡಿದ್ದು, 3 ಸಾವು ಸಂಭವಿಸಿದೆ. ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ 19 ಜನರು ಸೋಂಕು ಮುಕ್ತರಾಗಿ ಮನೆಗೆ ತೆರಳಿದ್ದಾರೆ.
ಮಂಗಳವಾರ ಮೃತಪಟ್ಟ ಸೋಂಕಿತೆ ಅಸ್ತಮಾ, ಶ್ವಾಸಕೋಶ ಕಾಯಿಲೆ, ಬೊಜ್ಜು ಸೇರಿ ಬಹು ಕಾಯಿಲೆಗಳಿಂದ ಬಳಲುತ್ತಿದ್ದು, ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ.
ಸೋಂಕಿತ ವೃದ್ಧೆಯ ಮೃತಪಟ್ಟ ಕೆಲವೇ ಸಮಯದಲ್ಲಿ ಸಕಲ ವೈದ್ಯಕೀಯ, ಧಾರ್ಮಿಕ ಶಿಷ್ಟಾಚಾರದಂತೆ ಅಧಿಕಾರಿಗಳ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಸೋಂಕಿತ ವೃದ್ಧೆಯ ಶವ ಸಂಸ್ಕಾರದ ವೇಳೆ ಅಧಿಕಾರಿಗಳು ಎಲ್ಲ ಶಿಷ್ಟಾಚಾರ ಪಾಲನೆ ಮಾಡಲಾಗಿದೆ ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯದಲ್ಲಿ 98 ಮಂದಿಗೆ ಕೋವಿಡ್ ಸೋಂಕು ದೃಢ
ಉತ್ತರ ಕೊರಿಯಾದಲ್ಲಿ ಮಿತಿಮೀರಿದ ಕೋವಿಡ್; ಮೂರು ದಿನದಲ್ಲಿ 820,620 ಪ್ರಕರಣಗಳು ಪತ್ತೆ!
ಭಾರತದಲ್ಲಿ 24 ಗಂಟೆಯಲ್ಲಿ 2,841 ಕೋವಿಡ್ ಪ್ರಕರಣ ಪತ್ತೆ, ಸಾವಿನ ಪ್ರಮಾಣ ಭಾರೀ ಇಳಿಕೆ
ಭಾರತದಲ್ಲಿ 24 ಗಂಟೆಯಲ್ಲಿ 2,827 ಕೋವಿಡ್ 19 ಸೋಂಕು ಪ್ರಕರಣ ಪತ್ತೆ, 24 ಮಂದಿ ಸಾವು
ಕೋವಿಡ್ ನಾಲ್ಕನೇ ಅಲೆ ಭೀತಿ: ಕಳೆದ 24 ಗಂಟೆಗಳಲ್ಲಿ 3,451 ಹೊಸ ಕೇಸ್ , 40 ಸಾವು