Udayavni Special

ಪಕ್ಷಾಂತರಿ ಸದಸ್ಯರ ವಿರುದ್ಧ ಕಾರ್ಯಕರ್ತರ ಆಕ್ರೋಶ

ಪ್ರತಿಭಟಿಸಿ ಕಲ್ಲು ತೂರಿದವರಿಗೆ ಪೊಲೀಸರ ಲಾಠಿ ರುಚಿ

Team Udayavani, Jul 1, 2020, 2:37 PM IST

01-July-23

ವಿಜಯಪುರ: ಜಿಪಂ ಅಧ್ಯಕ್ಷ ಚುನಾವಣೆ ವೇಳೆ ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ಮಧ್ಯೆ ನಡೆದ ಪ್ರತಿಭಟನೆ.

ವಿಜಯಪುರ: ಜಿಪಂ ಅಧ್ಯಕ್ಷರ ಚುನಾವಣೆಯಲ್ಲಿ ಪಕ್ಷ ನಿಷ್ಠೆ ಇಲ್ಲದೇ ಪಕ್ಷಾಂತರ ಮಾಡಿದ ತಮ್ಮ ಪಕ್ಷದ ಸದಸ್ಯರ ವಿರುದ್ಧ ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪೊಲೀಸರ ಲಾಠಿ ರುಚಿ ನೋಡಿದ ಘಟನೆ ನಡೆಯಿತು.

ಮತದಾನದ ಸಂದರ್ಭದಲ್ಲಿ ಸಭೆಗೆ ತೆರಳುತ್ತಿದ್ದ ವೇಳೆ ಕಾಂಗ್ರೆಸ್‌ ಪಕ್ಷದೊಂದಿಗೆ ಬಂದ ಬಿಜೆಪಿ ಸದಸ್ಯರು ಹಾಗೂ ಬಿಜೆಪಿ ನಾಯಕರೊಂದಿಗ ಕಾಂಗ್ರೆಸ್‌ ಸದಸ್ಯರು ಬಸ್‌ನಲ್ಲಿ ಬರುವಾಗ ಜಿಪಂ ಪ್ರವೇಶ ಮಹಾದ್ವಾರದಲ್ಲಿ ಜಮಾಯಿಸಿದ್ದ ಆಯಾ ಪಕ್ಷಗಳ ಕಾರ್ಯಕರ್ತರು ಗದ್ದಲ ಎಬ್ಬಿಸಿ, ಧಿಕ್ಕಾರ ಕೂಗುತ್ತಿದ್ದರು. ಒಂದು ಹಂತದಲ್ಲಿ ಉದ್ರಿಕ್ತ ಉಭಯ ಪಕ್ಷಗಳ ಕಾಯರ್ತಕರ್ತರು ಎಸ್ಪಿ ಅನುಪಮ್‌ ಅಗರವಾಲ್‌ ಅವರಿಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಲಾಠಿಚಾರ್ಜ್‌ ಮಾಡಿ ಪರಿಸ್ಥಿತಿ ತಹಬದಿಗೆ ತಂದರು.

ಬಿಗುವಿನಿಂದ ಕೂಡಿದ್ದ ಪರಿಸ್ಥಿತಿ ಸುಧಾರಿಸಲ ರಾಜಕೀಯ ಪಕ್ಷಗಳ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಇದರಿಂದ ಇನ್ನಷ್ಟು ಕುಪಿತರಾದ ಕಾರ್ಯಕರ್ತರಲ್ಲಿ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ಆರಂಭಿಸಿದರು. ಇದರಿಂದಾಗಿ ಕರ್ತವ್ಯ ನಿರತ ಐಆರ್‌ಬಿ ಪೇದೆ ಹಾಗೂ ಮುದ್ರಣ ಮಾಧ್ಯಮದ ಛಾಯಾಗ್ರಾಹಕ ಸೇರಿದಂತೆ ಹಲವರಿಗೆ ಸಣ್ಣಪುಟ್ಟ ಗಾಯಗಳಾದವು.

ಜಿಪಂ ಪಕ್ಷಾಂತರ ಪರ್ವದ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಜಿಪಂ ಸಭಾಂಗಣಕ್ಕೆ ಸುಮಾರು 500 ಮೀ. ಅಂತರದಲ್ಲಿರುವ ಪ್ರವೇಶ ಮಹಾದ್ವಾರದಲ್ಲೇ ಸದಸ್ಯರು ಹಾಗೂ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ಹೊರತಾಗಿ ಇತರರ ಪ್ರವೇಶ ಸಂಪೂರ್ಣ ನಿರ್ಬಂಧಿಸಲಾಗಿತ್ತು. ಬಿಜೆಪಿ ಅಭ್ಯರ್ಥಿ ಭೀಮಾಶಂಕರ ಅವರೊಂದಿಗೆ ಆಗಮಿಸುತ್ತಿದ್ದ ಜಿಪಂ ಸದಸ್ಯರಿದ್ದ ವಾಹನವನ್ನು ತಪಾಸಣೆ ನಡೆಸಿ ಒಳಬಿಡಲಾಗಿದೆ. ಆದರೆ ಕಾಂಗ್ರೆಸ್‌ ಅಭ್ಯರ್ಥಿ ಸುಜಾತಾ ಕಳ್ಳಿಮನಿ ಬೆಂಬಲಿತ ಸದಸ್ಯರು ಇರುವ ಬಸ್‌ ಪರಿಶೀಲನೆ ಮಾಡದೇ ಬಿಡಲಾಗುತ್ತಿದೆ ಎಂದು ಪ್ರವೇಶ ಮಹಾದ್ವಾರದಲ್ಲೇ ಬಿಜೆಪಿ ಕಾರ್ಯಕರ್ತರು ಗಲಾಟೆ ಆರಂಭಿಸಿದರು. ಅಲ್ಲದೇ ಕಾಂಗ್ರೆಸ್‌ ಸದಸ್ಯರನ್ನು ಹೊತ್ತು ಬಂದಿದ್ದ ಬಸ್‌ ತಡೆಯಲು ಮುಂದಾದರು ಈ ಹಂತದಲ್ಲಿ ಪರಿಸ್ಥಿತಿ ಬಿಗುನಿಂದ ಕೂಡಲಾರಂಭಿಸಿತು. ಈ ಹಂತದಲ್ಲಿ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಅನಿವಾರ್ಯವಾಗಿ ಲಘು ಲಾಠಿ ಪ್ರಹಾರ ನಡೆಸಿ, ಜನರನ್ನು ಚದುರಿಸುವ ಮೂಲಕ ಉದ್ರಿಕ್ತ ಪರಿಸ್ಥಿತಿ ನಿರ್ಮಾಣ ತಡೆದರು.

ಬಿಜೆಪಿಯಿಂದ ಆಯ್ಕೆಯಾಗಿ, ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ಸೂಚಿಸಿದ ನಾಲ್ವರು ಸದಸ್ಯರ ವಿರುದ್ಧ ಜಿಪಂ ಪ್ರವೇಶದ್ವಾರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸದಸ್ಯರ ಭಾವಚಿತ್ರ ಪ್ರದರ್ಶಿಸಿ “ಪಕ್ಷ ದ್ರೋಹಿಗಳು…ಪಕ್ಷ ದ್ರೋಹಿಗಳು…’ ಎಂಬ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ಮಾಜಿ ಶಾಸಕ ರಮೇಶ ಭೂಸನೂರ, ಬಿಜೆಪಿ ಮುಖಂಡರಾದ ವಿಜಯಕುಮಾರ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್‌. ಪಾಟೀಲ ಕೂಚಬಾಳ ಇತರರು ತಮ್ಮ ಕಾರ್ಯಕರ್ತರ ನಡೆಗೆ ಬೆಂಬಲವಾಗಿ ನಿಂತಿದ್ದರು.

ಟಾಪ್ ನ್ಯೂಸ್

PM Narendra Modi to address nation at 10 am today

ಬೆಳಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ

rwytju11111111111

ಶುಕ್ರವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಇನ್‌ವೆಸ್ಟ್‌ ಕರ್ನಾಟಕ: 10 ಲಕ್ಷ ಕೋ.ರೂ. ಹೂಡಿಕೆ ನಿರೀಕ್ಷೆ

ಇನ್‌ವೆಸ್ಟ್‌ ಕರ್ನಾಟಕ: 10 ಲಕ್ಷ ಕೋ.ರೂ. ಹೂಡಿಕೆ ನಿರೀಕ್ಷೆ

ಕೇರಳದಲ್ಲಿ ಮತ್ತೆ ಮಳೆ

ಕೇರಳದಲ್ಲಿ ಮತ್ತೆ ಮಳೆ

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

muddebihala news

ಚನ್ನವೀರ ದೇವರು ಅವರಿಗೆ ಗೌರವ ಡಾಕ್ಟರೇಟ್

ವಿಜಯಪುರ: ನೀರು ಕೊಟ್ಟ ಶಾಸಕರಿಗೆ ಹಣ್ಣು ಕೊಟ್ಟ ರೈತ

ವಿಜಯಪುರ: ನೀರು ಕೊಟ್ಟ ಶಾಸಕರಿಗೆ ಹಣ್ಣು ಕೊಟ್ಟ ರೈತ

incident held at vijayapura news

ಪತಿಯ ಹತ್ಯೆಗೆ 8 ಲಕ್ಷ ರೂ. ಸುಪಾರಿ ನೀಡಿದ ಪತ್ನಿ

23

ವಿದ್ಯುತ್ ಕೊಡದಿದ್ದರೆ ಕ್ರಿಮಿನಾಶಕ ಸೇವಿಸಿ ಕಚೇರಿ ಎದುರು ಆತ್ಮಹತ್ಯೆ

21

ಶರಣರು, ಸಂತರು, ಮಹಾತ್ಮರ ನುಡಿಗಳಲ್ಲಿರಲಿ ವಿಶ್ವಾಸ: ಪಾಟೀಲ

MUST WATCH

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

ಹೊಸ ಸೇರ್ಪಡೆ

PM Narendra Modi to address nation at 10 am today

ಬೆಳಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ

rwytju11111111111

ಶುಕ್ರವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಇನ್‌ವೆಸ್ಟ್‌ ಕರ್ನಾಟಕ: 10 ಲಕ್ಷ ಕೋ.ರೂ. ಹೂಡಿಕೆ ನಿರೀಕ್ಷೆ

ಇನ್‌ವೆಸ್ಟ್‌ ಕರ್ನಾಟಕ: 10 ಲಕ್ಷ ಕೋ.ರೂ. ಹೂಡಿಕೆ ನಿರೀಕ್ಷೆ

ಕೇರಳದಲ್ಲಿ ಮತ್ತೆ ಮಳೆ

ಕೇರಳದಲ್ಲಿ ಮತ್ತೆ ಮಳೆ

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.