ಬಾಣಂತಿಯನ್ನು ಮಗು ಸಮೇತ ಊರು ತಲುಪಿಸಿ ಮಾನವೀಯತೆ ಮೆರೆದ ಸಾರಿಗೆ ಸಿಬ್ಬಂದಿ

Team Udayavani, Aug 1, 2021, 11:18 AM IST

Vijayapura Muddebihala News

ಮುದ್ದೇಬಿಹಾಳ: ನವಜಾತ ಶಿಶುವಿನೊಂದಿಗೆ ತಮ್ಮೂರಿಗೆ ಹೋಗಲು ಬಸ್ ಇಲ್ಲದೆ ಪರದಾಡುತ್ತಿದ್ದ ಬಾಣಂತಿ ಶಂಕ್ರಮ್ಮ ನಾಲತವಾಡ ಎಂಬಾಕೆಯನ್ನು ಆಕೆಯ ಕುಟುಂಬದ ಸದಸ್ಯರ ಸಮೇತವಾಗಿ ಬಸ್ ವ್ಯವಸ್ಥೆ ಕಲ್ಪಿಸಿ ಆಕೆಯ ಊರಿಗೆ ತಲುಪಿಸುವ ಮೂಲಕ ಇಲ್ಲಿನ ಸಾರಿಗೆ ಘಟಕದ ಸಿಬ್ಬಂದಿ ಮಾನವೀಯತೆ ಮೆರೆದ ಘಟನೆ ಶನಿವಾರ(ಜುಲೈ 31)ತಡ ರಾತ್ರಿ ನಡೆದಿದೆ.

ಮುದ್ದೇಬಿಹಾಳದಿಂದ ತಮ್ಮೂರು ನಾರಾಯಣಪೂರಕ್ಕೆ  ಹೋಗಲು ಬಸ್ಸಿಲ್ಲದೇ  ರಾತ್ರಿ 10 ಗಂಟೆ ಸುಮಾರಿಗೆ ಇವರೆಲ್ಲ ಬಸ್ ನಿಲ್ದಾಣದಲ್ಲಿ ಉಳಿದುಕೊಂಡಿದ್ದರು. ಮಗುವಿನ ಆರೋಗ್ಯ ಸರಿ ಇರಲಿಲ್ಲ. ಚಳಿಯಲ್ಲೆ ನಡುಗುತ್ತ  ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡು ತನ್ನ ಗಂಡ ಹಾಗೂ ತಾಯಿಯ ಜೊತೆ ಕುಳಿತಿದ್ದರು. ಕೋವಿಡ್ ಕಾರಣದಿಂದ ರಾತ್ರಿ 9.30 ಕ್ಕೆ ಮುದ್ದೇಬಿಹಾಳ ಘಟಕದಿಂದ ನಾರಾಯಣಪುರವರೆಗೆ ಹೋಗುತ್ತಿದ್ದ ವಸ್ತೀ ಬಸ್ ರದ್ದಾಗಿ ಬೇರೆ ಸೌಕರ್ಯ ಇರಲಿಲ್ಲ. ರಾತ್ರಿಯೇ ಹೋಗುತ್ತಿದ್ದ ಸೊಲ್ಲಾಪುರ ರಾಯಚೂರು ಬಸ್ ಕೂಡ ರದ್ದಾಗಿ ತೀವ್ರ ಚಿಂತೆಯಲ್ಲಿದ್ದರು.

ಇದನ್ನೂ ಓದಿ : ಜುಲೈ ಮುಗಿದಿದೆ,ಲಸಿಕೆಗಳ ಕೊರತೆ ಇನ್ನೂ ನೀಗಿಲ್ಲ : ಕೇಂದ್ರದ ವಿರುದ್ಧ ರಾಹುಲ್ ಟ್ವೀಟಾಸ್ತ್ರ

ಪರ್ಯಾಯ ವ್ಯವಸ್ಥೆಯೂ ಇಲ್ಲದೆ ಮಗು ಸಮೇತ  ನಿಲ್ದಾಣದಲ್ಲಿಯೇ ರಾತ್ರಿ ಕಳೆಯಬೇಕಾದ ಸ್ಥಿತಿ ತಲೆದೋರಿತ್ತು. ವಿಷಯ ತಿಳಿದ ಹಸಿರು ತೋರಣ ಬಳಗದ ಸದಸ್ಯ ಮಹಾಬಲೇಶ್ವರ ಗಡೇದರು ಘಟಕ ವ್ಯವಸ್ಥಾಪಕರಿಗೆ ಕರೆ  ಮಾಡಿ ಬಾಣಂತಿ ಹಾಗೂ ಮಗುವನ್ನು ಅವರೂರಿಗೆ ಕಳಿಸುವ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು. ಪರಿಸ್ಥಿತಿ ಅರಿತ ಘಟಕ ವ್ಯವಸ್ಥಾಪಕ ರಾಹುಲ ಹೊನಸೂರೆ ಅವರು ರಾತ್ರಿಯ ವೇಳೆ ಘಟಕದಲ್ಲಿ ಕರ್ತವ್ಯದ ಮೇಲಿದ್ದ ನಿಯಂತ್ರಣಾಧಿಕಾರಿ ನಿಂಗಣ್ಣ ತಳವಾರ ಅವರಿಗೆ ಸೂಚಿಸಿ ಏನಾದರೂ ಪ್ರಯತ್ನ ಮಾಡಿ ಯಾವುದಾದರೂ ಬಸ್ ಮಾಡಿ ಕಳಿಸುವಂತೆ ಸೂಚಿಸಿದರು.

ತಣ್ಣನೆಯ ಗಾಳಿ ಬೀಸುತ್ತ ಚಳಿಯಲ್ಲಿ ಚಡಪಡಿಸುತ್ತಿದ್ದ ಮಗುವನ್ನು ಕಂಡಾಕ್ಷಣ ನಿಂಗಣ್ಣ ತಳವಾರ ಅವರೂ ತಡ ಮಾಡದೇ ಅವರಿವರನ್ನು ವಿಚಾರಿಸುತ್ತ ನಡೆದರು. ಹೊರಗಿನಿಂದ ಬಂದು ವಸ್ತಿ ಮಾಡಿರುವ ಬಸ್ಸಿನವರು ಈ ಕೆಲಸ ಮಾಡಲು ಒಪ್ಪುವುದಿಲ್ಲ  ನಮ್ಮ ಡಿಪೋದವರೇ ಇದನ್ನು ಮಾಡಬೇಕು ಎನ್ನುವ ವಿಚಾರ ತಿಳಿದುಕೊಂಡರು.  ಒಪ್ಪಂದದ ಮೇಲೆ ( ಸಿಸಿ) ಬೇರೆ ಕಡೆ ಹೊರಟಿದ್ದ ಬಸ್ಸಿನ ಚಾಲಕ ಆರ್.ಎಸ್.ಹೂಗಾರ  ಅವರು ನೆರವಿಗೆ ಬಂದರು.

ತಳವಾರ ಅವರು ಬಾಣಂತಿ ಸಮೇತ ಬಸ್ಸಿಗಾಗಿ ಕಾಯುತ್ತಿದ್ದ 13 ಜನರಿಗೆ ತಾವೇ ಟಿಕೇಟ್ ಕೊಟ್ಟು ಊರು ತಲುಪಿಸುವ ವ್ಯವಸ್ಥೆ ಮಾಡಿದರು. ರಾತ್ರಿ 8.30 ರ ನಂತರ ನಾಲತವಾಡ, ವೀರೇಶ ನಗರ, ನಾರಾಯಣಪೂರಕ್ಕೆ  ಹೋಗುವವರಿಗೆ ಮೊದಲು ಇದ್ದ ರಾತ್ರಿ 9.30 ರ ನಾರಾಯಣಪೂರ ವಸ್ತಿ ಬಸ್ ಮತ್ತೆ ಶುರು ಮಾಡಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ.

ಇದನ್ನೂ ಓದಿ : ಒಂದು ಗಂಟೆಯೊಳಗೆ ಮೂರು ಸಂಶಯಾತ್ಮಕ ಡ್ರೋನ್ ಗಳ ಹಾರಾಟ ಪತ್ತೆ!

ಟಾಪ್ ನ್ಯೂಸ್

“ಕಲಾವಿದರನ್ನು ಜೋಡಿಸಲು ದಿಲ್ಲಿಯಿಂದ ಗಲ್ಲಿಗೆ’: ಡಾ| ಸಂಧ್ಯಾ ಪುರೇಚ

“ಕಲಾವಿದರನ್ನು ಜೋಡಿಸಲು ದಿಲ್ಲಿಯಿಂದ ಗಲ್ಲಿಗೆ’: ಡಾ| ಸಂಧ್ಯಾ ಪುರೇಚ

ಭಾರತೀಯ ಸಂಸ್ಕೃತಿಯಲ್ಲಿದೆ ಜಗತ್ತಿನ ಶಾಂತಿ: ಡಾ| ಸಂಧ್ಯಾ ಪುರೇಚ

ಭಾರತೀಯ ಸಂಸ್ಕೃತಿಯಲ್ಲಿದೆ ಜಗತ್ತಿನ ಶಾಂತಿ: ಡಾ| ಸಂಧ್ಯಾ ಪುರೇಚ

ತುಳು ಮಾತನಾಡಲು ನಾಚಿಕೆ ಬೇಡ: ಒಡಿಯೂರು ಶ್ರೀ

ತುಳು ಮಾತನಾಡಲು ನಾಚಿಕೆ ಬೇಡ: ಒಡಿಯೂರು ಶ್ರೀ

ಸಾವಯವ ಕೃಷಿಗಾಗಿ ಜಾಗೃತಿ: ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿಣಿ ನಿರ್ಣಯ

ಸಾವಯವ ಕೃಷಿಗಾಗಿ ಜಾಗೃತಿ: ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿಣಿ ನಿರ್ಣಯ

ಖೇಲೋ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ಅವ್ಯವಸ್ಥೆ

ಖೇಲೋ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ಅವ್ಯವಸ್ಥೆ

ವಿಶ್ವಕಪ್‌ನಲ್ಲಿ ಭಾರತ‌ ಕಳಪೆ ಸಾಧನೆ: ಹಾಕಿ ಕೋಚ್‌ ರೀಡ್‌ ರಾಜೀನಾಮೆ

ವಿಶ್ವಕಪ್‌ನಲ್ಲಿ ಭಾರತ‌ ಕಳಪೆ ಸಾಧನೆ: ಹಾಕಿ ಕೋಚ್‌ ರೀಡ್‌ ರಾಜೀನಾಮೆ

ವನಿತಾ ಟಿ20 ತ್ರಿಕೋನ ಸರಣಿ: ಭಾರತ ತಂಡದ ಅಜೇಯ ಅಭಿಯಾನ

ವನಿತಾ ಟಿ20 ತ್ರಿಕೋನ ಸರಣಿ: ಭಾರತ ತಂಡದ ಅಜೇಯ ಅಭಿಯಾನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tikota

ಕೌಟುಂಬಿಕ ಕಲಹ: ಮೂರು ಮಕ್ಕಳನ್ನು ನೀರಿನ ಸಂಪ್ ಗೆ ಎಸೆದು ತಾಯಿ ಆತ್ಮಹತ್ಯೆ

ವಿಜಯೇಂದ್ರ

ಕಾಂಗ್ರೆಸ್ ಪಕ್ಷವು ದೇಶದಾದ್ಯಂತ ಜನಮನದಿಂದ ದೂರವಾಗಿದೆ: ವಿಜಯೇಂದ್ರ

vijayendra

ಬಿಎಸ್ ವೈ ವಿರುದ್ಧ ಮಾತನಾಡಲ್ಲ ಎಂದಿರುವ ಯತ್ನಾಳ್ ನಡೆ ಒಳ್ಳೆಯದು: ವಿಜಯೇಂದ್ರ

ಗುಮ್ಮಟನಗರಿಯಲ್ಲಿ ಕಸ ನಿರ್ವಹಣೆ ಲೋಪ: ಲೋಕಾಯುಕ್ತರ ಅಸಮಾಧಾನ

ಗುಮ್ಮಟನಗರಿಯಲ್ಲಿ ಕಸ ನಿರ್ವಹಣೆ ಲೋಪ: ಲೋಕಾಯುಕ್ತರ ಅಸಮಾಧಾನ

3-muddebihala

ಮುದ್ದೇಬಿಹಾಳ: ಖೈದಿ ಸುಳಿವು ನೀಡಿದರೆ ಲಕ್ಷ ರೂ. ಬಹುಮಾನ !

MUST WATCH

udayavani youtube

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

udayavani youtube

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

udayavani youtube

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

udayavani youtube

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

udayavani youtube

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು

ಹೊಸ ಸೇರ್ಪಡೆ

ಯಕ್ಷಗಾನ ಜೀವನ ಧರ್ಮ ಬೋಧಿಸಿದ ಕಲೆ: ಅಶೋಕ್‌ ಭಟ್‌

ಯಕ್ಷಗಾನ ಜೀವನ ಧರ್ಮ ಬೋಧಿಸಿದ ಕಲೆ: ಅಶೋಕ್‌ ಭಟ್‌

“ಕಲಾವಿದರನ್ನು ಜೋಡಿಸಲು ದಿಲ್ಲಿಯಿಂದ ಗಲ್ಲಿಗೆ’: ಡಾ| ಸಂಧ್ಯಾ ಪುರೇಚ

“ಕಲಾವಿದರನ್ನು ಜೋಡಿಸಲು ದಿಲ್ಲಿಯಿಂದ ಗಲ್ಲಿಗೆ’: ಡಾ| ಸಂಧ್ಯಾ ಪುರೇಚ

ಭಾರತೀಯ ಸಂಸ್ಕೃತಿಯಲ್ಲಿದೆ ಜಗತ್ತಿನ ಶಾಂತಿ: ಡಾ| ಸಂಧ್ಯಾ ಪುರೇಚ

ಭಾರತೀಯ ಸಂಸ್ಕೃತಿಯಲ್ಲಿದೆ ಜಗತ್ತಿನ ಶಾಂತಿ: ಡಾ| ಸಂಧ್ಯಾ ಪುರೇಚ

ತುಳು ಮಾತನಾಡಲು ನಾಚಿಕೆ ಬೇಡ: ಒಡಿಯೂರು ಶ್ರೀ

ತುಳು ಮಾತನಾಡಲು ನಾಚಿಕೆ ಬೇಡ: ಒಡಿಯೂರು ಶ್ರೀ

ಸಾವಯವ ಕೃಷಿಗಾಗಿ ಜಾಗೃತಿ: ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿಣಿ ನಿರ್ಣಯ

ಸಾವಯವ ಕೃಷಿಗಾಗಿ ಜಾಗೃತಿ: ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿಣಿ ನಿರ್ಣಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.