ವಿಜಯಪುರ: ಗಾಂಜಾ, ಮಾದಕ ವಸ್ತು ವಶ; ನಾಲ್ವರ ಬಂಧನ
Team Udayavani, Sep 16, 2022, 3:54 PM IST
ಸಾಂದರ್ಭಿಕ ಚಿತ್ರ
ವಿಜಯಪುರ: ಪಟ್ಟಣದ ಹೊರವಲಯದಲ್ಲಿರುವ ಮಂಡಿಬೆಲೆ ಬಳಿಯ ಸರ್ಕಾರಿ ಅರಣ್ಯ ಪ್ರದೇಶದಲ್ಲಿ 50,000 ಮೌಲ್ಯದ ಗಾಂಜಾ ಹಾಗೂ 18,000 ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿರುವ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ವಿಜಯಪುರ ರಾಜೀವ್ ನಗರದ ನಿವಾಸಿ ಚೇತನ್, ಮಂಡಿಬೆಲೆ ರಸ್ತೆಯ ನಿವಾಸಿ ವಿನೋದ್, ಬೈಯಮ್ಮ ಬಡಾವಣೆಯ ವಿಜಯ್, ಮತ್ತು ಕೆರೆಕೋಡಿ ರಸ್ತೆಯ ಸುಮನ್ ಬಂಧಿತ ಆರೋಪಿಗಳು.
ಇವರಿಂದ 1.87 ಕೆ.ಜಿ. ಗಾಂಜಾ, 9 ಗ್ರಾಂ ಎಂಡಿಎಂಎ ವಶ ಪಡಿಸಿಕೊಳ್ಳಲಾಗಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಎಸ್. ಆರ್. ವಿರೇಂದ್ರ ಪ್ರಸಾದ್ ತಿಳಿಸಿದ್ದಾರೆ. ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.