Udayavni Special

ಹೊಳೆ ಬಬಲಾದಿ ಸ್ವಾಮೀಜಿ ವಾಣಿ ಅಪಾರ್ಥ ಮಾಡಿಕೊಂಡ ಭಕ್ತರು: ಮಠಕ್ಕೆ ಬಂದ ಸಾವಿರಾರು ಭಕ್ತರು

Team Udayavani, May 24, 2021, 6:04 PM IST

ಹೊಳೆ ಬಬಲಾದಿ ಸ್ವಾಮೀಜಿ ವಾಣಿ ಅಪಾರ್ಥ ಮಾಡಿಕೊಂಡ ಭಕ್ತರು: ಮಠಕ್ಕೆ ಬಂದ ಸಾವಿರಾರು ಭಕ್ತರು

ವಿಜಯಪುರ: ಜಿಲ್ಲೆಯ ಸ್ವಾಮೀಜಿಯೊಬ್ಬರು ಭಕ್ತರಿಗೆ ನೀಡಿದ ವಿಡಿಯೋ ಸಂದೇಶದ ಸಾರ ಅರಿಯದೇ ಅಪಾರ್ಥ ಮಾಡಿಕೊಂಡ ಭಕ್ತರು ಕೋವಿಡ್ ಕರ್ಫ್ಯೂ ಮೀರಿ ಸಾವಿರಾರು ಸಂಖ್ಯೆಯಲ್ಲಿ ಅಂಬಲಿ ನೈವೃದ್ಯ ಸಮರ್ಪಿಸಲು ಬಬಲಾದಿ ಮಠಕ್ಕೆ ಆಗಮಿಸಿದ ಘಟನೆ ಜರುಗಿದೆ.

ವಿಜಯಪುರ ಜಿಲ್ಲೆಯಲ್ಲಿ ಮದ್ಯದ ನೈವೇದ್ಯ ಜಾತ್ರೆ ನಡೆಯುವ ಮಠ ಎಂದೇ ಹೆಸರಾಗಿರುವ ಬಬಲೇಶ್ವರ ತಾಲೂಕಿನ ಹೊಳೆಬಬಲಾದಿ ಸದಾಶಿವ‌ ಮುತ್ಯಾನ ಮಠದ ಸಿದ್ಧರಾಮಯ್ಯ ಶ್ರೀಗಳು ಈ ಬಾರಿ ಕೋವಿಡ್ ಕರ್ಫ್ಯೂ ಮೀರಿ ಜನರು ಮನೆಯಿಂದ ಹೊರಗೆ ಬರಬೇಡಿ. ಬದಲಾಗಿ ಮನೆಯಲ್ಲೇ ಅಂಬಲಿ ನೈವೇದ್ಯ ಮಾಡಿ  ಮುತ್ಯಾನಿಗೆ ಸಮರ್ಪಿಸಿ ಎಂದು ಸಂದೇಶ ನೀಡಿದ್ದರು.

ಮದ್ಯದ ನೈವೇದ್ಯ ಬೇಡ ಬೇಡ ಎಂದು ಕಾರ್ಣಿಕ ಹೇಳಿದರೂ ಶ್ರೀಗಳ ಹೇಳಿಕೆಯನ್ನು ಅರ್ಥೈಸಿಕೊಳ್ಳುವಲ್ಲಿ ಎಡವಿದ ಭಕ್ತ ಸಮೂಹ,  ಕೋವಿಡ್ ಕರ್ಫ್ಯೂ ಮೀರಿ ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತರು ಸೋಮವಾರ ಅಂಬಲಿ ನೈವೇದ್ಯ ಅರ್ಪಿಸಲು ಬಬಲಾದಿ ಮಠಕ್ಕೆ ಧಾವಿಸಿದ್ದು, ಪೊಲೀಸರು, ಮಠಕ್ಕೆ ಬಂದ ಭಕ್ತರನ್ನು ಮರಳಿ ಕಳಿಸುವಲ್ಲಿ ಹೆಣಗಾಡುವಂತೆ ಮಾಡಿದೆ.

ಹೊಳೆ ಬಬಲಾದಿ ಮಠದ ಸದಾಶಿವ ಮಠದ ಸಿದ್ಧರಾಮಯ್ಯ ಶ್ರೀಗಳು  ಎರಡು ವರ್ಷಗಳ ಹಿಂದೆ ಸದಾಶಿವ ಮಠದ ಕಾರ್ಣಿಕದ ಸಂದರ್ಭದಲ್ಲಿ  ವೈದ್ಯರಿಗೂ ಮದ್ದು ತಿಳಿಯದ  ರೋಗ ಜನರನ್ನು ಕಾಡಲಿದೆ ಎಂದು ಕಾರ್ಣಿಕ ಹೇಳಿದ್ದರು. ಭವಿಷ್ಯದ ದಿನಗಳಲ್ಲಿ ಔಷಧಿಯೇ ಸಿಗದ ಕೋವಿಡ್ ಸಾಂಕ್ರಾಮಿಕ ಸೋಂಕು ರೋಗ ಬಾಧಿಸಿತ್ತು. ಇದೀಗ ಕೋವಿಡ್ ಎರಡನೇ ಅಲೆ ಜೋರಾಗಿರುವ ಸಂದರ್ಭದಲ್ಲಿ ಸರ್ಕಾರ ರೋಗ ನಿಗ್ರಹಕ್ಕಾಗಿ ಕೋವಿಡ್ ಕರ್ಫ್ಯೂ ಜಾರಿಗೆ ತಂದಿದೆ. ಹೀಗಾಗಿ ಶ್ರೀಗಳು ಆತಂಕದಲ್ಲಿರುವ ಭಕ್ತರು ಈ ಬಾರಿ ರೋಗ ಇನ್ನೂ ಉಲ್ಬಣಗೊಂಡಿದೆ.  ನಿಯಂತ್ರಣಕ್ಕೆ ಪರಿಹಾರ ನೀಡಿ ಎಂದು ಹಲವು ಭಕ್ತರು ಮೊರೆ ಇಟ್ಟಿದ್ದರು.

ಹೀಗಾಗಿ ಬಬಲಾದಿ ಸಿದ್ದರಾಮಯ್ಯ  ಶ್ರೀಗಳು, ಸೋಮವಾರ ಭಕ್ತರು ಮದ್ಯಕ್ಕೆ ಬದಲಾಗಿ ಅಂಬಲಿ ನೈವೇದ್ಯ ಮಾಡಿ ಮನೆಯಲ್ಲೇ ಸಮರ್ಪಿಸಿ, ಎರಡು ಬೋಳು ಕಾಯಿ ಒಡೆಯಿರಿ. ಹುರಿದ, ಕರಿದ ಅಡುಗೆ ಮಾಡಬೇಡಿ ಹಾಗೂ ಮನೆಯಿಂದ ಹೊರಗೆ ಬರಬೇಡಿ. ಮನೆಯಲ್ಲೇ ನೆಮ್ಮದಿಯಾಗಿರಿ ಎಂದು ವಿಡಿಯೋ ಮೂಲಕ ಮೂಲಕ ಸಾತ್ವಿಕ ಸಂದೇಶ ನೀಡಿದ್ದರು.

ಆದರೆ ಸಿದ್ದರಾಮಯ್ಯ ಶ್ರೀಗಳ ಸಂದೇಶವನ್ನು ಅರ್ಥೈಸಿಕೊಳ್ಳುವಲ್ಲಿ ಎಡವಿದ ಭಕ್ತರು, ಸೋಮವಾರ ಸಾವಿರಾರು ಸಂಖ್ಯೆಯಲ್ಲಿ ಅಂಬಲಿ ನೈವೇದ್ಯ ಸಮೇತ ಗುಂಪು ಗುಂಪಾಗಿ ಶ್ರೀಮಠಕ್ಕೆ ಬಂದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಬಲೇಶ್ವರ ಪೊಲೀಸರು ಭಕ್ತರ ಮನವೊಲಿಸಿ ಮರಳಿ ಮನೆಗೆ ಕಳಿಸಲು ಹರಸಾಹಸ ಪಡುವಂತೆ ಮಾಡಿದೆ.

ಇದರಿಂದ ಮತ್ತೊಂದು ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಸಿದ್ಧರಾಮಯ್ಯ ಶ್ರೀಗಳು, ಭಕ್ತರು ಯಾರೂ ಕೋವಿಡ್ ಸಂದರ್ಭದಲ್ಲಿ ಮನೆಯಿಂದ ಹೊರಗೆ ಬರಬೇಡಿ. ಮಠಕ್ಕೂ ಆಗಮಿಸಬೇಡಿ. ಕೋವಿಡ್ ಕರ್ಫ್ಯೂ ಉಲ್ಲಂಘಿಸದೇ ಮನೆಯಲ್ಲೇ ಪೂಜೆ ಮಾಡಿ, ನೈವೇದ್ಯ ಸಮರ್ಪಿಸಿ ಎಂದು ಸಂದೇಶ ನೀಡಿದ್ದಾರೆ.

ಇದನ್ನೂ ಓದಿ : ಜನ ಜಂಗುಳಿ ನಿಯಂತ್ರಿಸದೇ ಕೋವಿಡ್‌ ತಡೆ ಅಸಾಧ್ಯ

ಅಂಬಲಿ ಎಂದರೆ  ಜೋಳದ‌ ನುಚ್ವಿಗೆ ಮಜ್ಜಿಗೆ, ಬೆಳ್ಳುಳ್ಳಿ ‌ಬೆರೆಸಿದ ಗಂಜಿ ರೂಪದ ತೆಳುವಾದ ಆಹಾರವೇ ಅಂಬಲಿ.  ಈ‌ ಅಂಬಲಿ ಸೇವನೆ ಆರೋಗ್ಯ ವೃದ್ಧಿಗೆ ಸಹಕಾರಿ ಎಂಬ ಕಾರಣಕ್ಕೆ ಶ್ರೀಗಳು ಅಂಬಲಿ ಸಂದೇಶ ನೀಡಿದ್ದರು.

ಕೋವಿಡ್ ಸಂಕಷ್ಟ ಕಾಲದಲ್ಲಿ ಮನೆಯಲ್ಲಿಯೇ ಇರಿ ಎಂದು ಹಾಗೂ ಪೌಷ್ಠಿಕ ಆಹಾರವಾದ ಅಂಬಲಿ ತಯಾರಿಸಿ ನೈವೇದ್ಯ ಮಾಡಿ ಕುಡಿಯಿರಿ ಎಂದು ನೀಡಿದ ಸಂದೇಶ ಮುಗ್ದ ಭಕ್ತರು ಅರ್ಥೈಸುವಿಕೆಯಲ್ಲಿ  ಮಾಡಿಕೊಂಡ ಗೊಂದಲ ಶ್ರೀಗಳನ್ನು, ಪೊಲೀಸರನ್ನು ಹೈರಾಣು ಮಾಡಿದೆ.

ಟಾಪ್ ನ್ಯೂಸ್

ಹೊಸಬರ ಭಾರತಕ್ಕೆ ಕೊನೆಯಲ್ಲೊಂದು ಸೋಲು

ಹೊಸಬರ ಭಾರತಕ್ಕೆ ಕೊನೆಯಲ್ಲೊಂದು ಸೋಲು : ಕ್ಲೀನ್ ಸ್ವೀಪ್ ನಿಂದ ಪಾರಾದ ಲಂಕಾ

ಕ್ರೀಡೆಯ ಹೊಂಬೆಳಕಲ್ಲಿ ಜಗಮಗಿಸಿತು ಜಪಾನ್‌

ಕ್ರೀಡೆಯ ಹೊಂಬೆಳಕಲ್ಲಿ ಜಗಮಗಿಸಿತು ಜಪಾನ್‌

ಟೋಕಿಯೊ ಒಲಿಂಪಿಕ್ಸ್‌ : ಆರ್ಚರಿ ರೌಂಡ್‌ : ದೀಪಿಕಾ ನಂ.9

ಟೋಕಿಯೊ ಒಲಿಂಪಿಕ್ಸ್‌ : ಆರ್ಚರಿ ರೌಂಡ್‌ : ದೀಪಿಕಾ ನಂ.9

ಒಲಿಂಪಿಕ್ಸ್‌ ಹಾಕಿ : ನೀಗಲಿ ಭಾರತದ ಪದಕ ಬರಗಾಲ

ಒಲಿಂಪಿಕ್ಸ್‌ ಹಾಕಿ : ನೀಗಲಿ ಭಾರತದ ಪದಕ ಬರಗಾಲ

ಹೊಸಬರ ಭಾರತ 225ಕ್ಕೆ ಆಲೌಟ್‌ : ಏಕಕಾಲಕ್ಕೆ ಐದು ಕ್ರಿಕೆಟಿಗರ ಪದಾರ್ಪಣೆ!

ಹೊಸಬರ ಭಾರತ 225ಕ್ಕೆ ಆಲೌಟ್‌ : ಏಕಕಾಲಕ್ಕೆ ಐದು ಕ್ರಿಕೆಟಿಗರ ಪದಾರ್ಪಣೆ!

ತಿಮ್ಮಪ್ಪನ ದೇಗುಲಕ್ಕೆ ಡ್ರೋನ್‌ ನಿಗ್ರಹ ವ್ಯವಸ್ಥೆ : ರಕ್ಷಣಾ ವ್ಯವಸ್ಥೆ ಪಡೆದ ಮೊದಲ ದೇಗುಲ

ತಿಮ್ಮಪ್ಪನ ದೇಗುಲಕ್ಕೆ ಡ್ರೋನ್‌ ನಿಗ್ರಹ ವ್ಯವಸ್ಥೆ : ರಕ್ಷಣಾ ವ್ಯವಸ್ಥೆ ಪಡೆದ ಮೊದಲ ದೇಗುಲ

ಆಕಾಶ್‌ ಕ್ಷಿಪಣಿಯನ್ನು ಮತ್ತೆ ಮರುಪರೀಕ್ಷೆ ನಡೆಸಿದ ಡಿಆರ್‌ಡಿಒ

ಆಕಾಶ್‌ ಕ್ಷಿಪಣಿಯನ್ನು ಮತ್ತೆ ಮರುಪರೀಕ್ಷೆ ನಡೆಸಿದ ಡಿಆರ್‌ಡಿಒಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tamate1

ಕೃಷ್ಣಾ ನದಿ ತೀರದ ಹಳ್ಳಿಗರಿಗೆ ಡಂಗುರದ ಎಚ್ಚರಿಕೆ : ನೆರವಿಗೆ ಸಹಾಯವಾಣಿ ಆರಂಭ

ಗಹಜಹಗಜ್‍‍ದಸ

ಆಲಮಟ್ಟಿ ಶಾಸ್ತ್ರೀ ಜಲಾಶಯದಿಂದ ಕೃಷ್ಣಾನದಿಗೆ 3 ಲಕ್ಷ ಕ್ಯೂಸೆಕ್ ನೀರು

dfdfgdf

ಆಲಮಟ್ಟಿ ಜಲಾಶಯಕ್ಕೆ ಒಳ ಹರಿವು ಹೆಚ್ಚಳ: ಕೃಷ್ಣಾ ನದಿಗೆ ಲಕ್ಷ‌ ಕ್ಯೂಸೆಕ್ ನೀರು

ನಾನು ಬಿಜೆಪಿ ತೊರೆಯುವುದಿಲ್ಲ: ಎ.ಎಸ್.ಪಾಟೀಲ ನಡಹಳ್ಳಿ

ನಾನು ಬಿಜೆಪಿ ತೊರೆಯುವುದಿಲ್ಲ: ಎ.ಎಸ್.ಪಾಟೀಲ ನಡಹಳ್ಳಿ

ವಿಜಯಪುರ ಜಿಲ್ಲೆಯ ಮಠಾಧೀಶರಿಂದ ಯಡಿಯೂರಪ್ಪಗೆ ಬೆಂಬಲ

ವಿಜಯಪುರ ಜಿಲ್ಲೆಯ ಮಠಾಧೀಶರಿಂದ ಯಡಿಯೂರಪ್ಪಗೆ ಬೆಂಬಲ

MUST WATCH

udayavani youtube

ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ 1ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿದೆ.

udayavani youtube

ಮುಖ ಕೊರಗಜ್ಜನದ್ದು ದೇಹ ಗಂಡನದ್ದು.. ಹೀಗೊಂದು ಕತೆ !

udayavani youtube

ಬ್ರಾಹ್ಮಣನಾದ ಕಾರಣ ಚೆನ್ನೈ ಸಂಸ್ಕೃತಿ ಅರಿತೆ ಎಂದ ಸುರೇಶ್ ರೈನಾ ವಿರುದ್ಧ ನೆಟ್ಟಿಗರು ಗರಂ

udayavani youtube

ಹಳಿ ಮೇಲೆ ನಿಂತ ಮಳೆ ನೀರು : ಸಾಗರದಿಂದ ಹೊರಡಲಿದೆ ತಾಳಗುಪ್ಪ-ಮೈಸೂರು ರೈಲು

udayavani youtube

ಒಂದು ವರ್ಷ ತುಂಬಿದ ಶಿವಾನಿಯ ದಿನಚರಿ ನೋಡಿ

ಹೊಸ ಸೇರ್ಪಡೆ

ಹೊಸಬರ ಭಾರತಕ್ಕೆ ಕೊನೆಯಲ್ಲೊಂದು ಸೋಲು

ಹೊಸಬರ ಭಾರತಕ್ಕೆ ಕೊನೆಯಲ್ಲೊಂದು ಸೋಲು : ಕ್ಲೀನ್ ಸ್ವೀಪ್ ನಿಂದ ಪಾರಾದ ಲಂಕಾ

ಕ್ರೀಡೆಯ ಹೊಂಬೆಳಕಲ್ಲಿ ಜಗಮಗಿಸಿತು ಜಪಾನ್‌

ಕ್ರೀಡೆಯ ಹೊಂಬೆಳಕಲ್ಲಿ ಜಗಮಗಿಸಿತು ಜಪಾನ್‌

ಟೋಕಿಯೊ ಒಲಿಂಪಿಕ್ಸ್‌ : ಆರ್ಚರಿ ರೌಂಡ್‌ : ದೀಪಿಕಾ ನಂ.9

ಟೋಕಿಯೊ ಒಲಿಂಪಿಕ್ಸ್‌ : ಆರ್ಚರಿ ರೌಂಡ್‌ : ದೀಪಿಕಾ ನಂ.9

ಒಲಿಂಪಿಕ್ಸ್‌ ಹಾಕಿ : ನೀಗಲಿ ಭಾರತದ ಪದಕ ಬರಗಾಲ

ಒಲಿಂಪಿಕ್ಸ್‌ ಹಾಕಿ : ನೀಗಲಿ ಭಾರತದ ಪದಕ ಬರಗಾಲ

ಹೊಸಬರ ಭಾರತ 225ಕ್ಕೆ ಆಲೌಟ್‌ : ಏಕಕಾಲಕ್ಕೆ ಐದು ಕ್ರಿಕೆಟಿಗರ ಪದಾರ್ಪಣೆ!

ಹೊಸಬರ ಭಾರತ 225ಕ್ಕೆ ಆಲೌಟ್‌ : ಏಕಕಾಲಕ್ಕೆ ಐದು ಕ್ರಿಕೆಟಿಗರ ಪದಾರ್ಪಣೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.