Udayavni Special

ಮೂಢನಂಬಿಕೆ ಕಿತ್ತೂಗೆಯಲು ಬದುಕು ಸವೆಸಿದ ವೀರೇಶ್ವರರು


Team Udayavani, Feb 19, 2019, 9:56 AM IST

vij-2.jpg

ನಾಲತವಾಡ: ಸಮಾಜದಲ್ಲಿ ಮೂಢನಂಬಿಕೆಯನ್ನು ಬುಡ ಸಮೇತ ಕಿತ್ತೂಗೆಯಬೇಕು. ಸರ್ವ ಸಮಾಜದಲ್ಲಿ ಸಮನ್ವತೆ, ಸಹಕಾರ, ಜಾತಿ ಭೇದ ಭಾವಗಳನ್ನು ತೊಲಗಿಸಿ ಪ್ರಾಣಿ ಬಲಿಗೆ ಕಡಿವಾಣ ಹಾಕುವಲ್ಲಿ ತಮ್ಮ ದಿನ ನಿತ್ಯದ ಕಾಯಕದೊಂದಿಗೆ ಅವಿರತವಾಗಿ ಶ್ರಮಿಸಿದ ನಾಲತವಾಡದ ಶರಣ ವೀರೇಶ್ವರರು ದೇಹ ತೊರೆಯುವವರೆಗೂ ಸಂಕಷ್ಟದ ಬದುಕನ್ನೇ ನಡೆಸಿದವರು. ಬರದ ನಾಡು, ಸಂತ ಶರಣ ಬೀಡು ಎಂಬ ಖ್ಯಾತಿ ಪಡೆದ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅಂದಿನ ಲಿಲಾವತಿ ಪಟ್ಟಣ ಎಂದು ಕರೆಸಿಕೊಂಡ ಗ್ರಾಮವು ವೀರೇಶ್ವರರ ಸುಮಾರು 40 ಪವಾಡಗಳಿಂದ ನಲವತ್ತವಾಡ ಎಂದು ಕರೆಸಿಕೊಂಡಿತು.

ಕಂಠಿಮಠದ ದೊಡ್ಡಾರ್ಯ ಹಾಗೂ ರುದ್ರಾಂಬೆ ತಾಯಿಯವರ ಉದರಲ್ಲಿ 1848ರಲ್ಲಿ ಮುದ್ದೇಬಿಹಾಳ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಜನಿಸಿದರು. ಪಟ್ಟಣದ ಹಿರೇಮಠದ ರಾಮಗಿರಿ ನಾಥರನ್ನು ವೀರೇಶ್ವರರು ಗುರುವಾಗಿ ಸ್ವೀಕರಿಸಿ, ಚಿಕ್ಕಂದಿನಿಂದಲೇ ಮನೆ ಸಂಸ್ಕಾರದಂತೆ ಗುರುಸೇವೆ
ಲಿಂಗಪೂಜೆ ಜಂಗಮ ಪೂಜೆಯೊಂದಿಗೆ ಅಂದಿನ ಮುಲ್ಕಿ ಪರೀಕ್ಷೆ ಪಾಸಾದರು. ನಂತರ ಪಕ್ಕದ ಸಿದ್ದಾಪುರ ಗ್ರಾಮದ ಗಾಂವಠಿ ಶಾಲೆಯಲ್ಲಿ ದುಡಿಯುತ್ತ ಬಿದರಕುಂದಿಯ ಗುರುದೇವಿ ತಾಯಿಯವರನ್ನು ಮದುವೆಯಾದರು. ನಂತರ ವೃತ್ತಿ ಬಿಟ್ಟ ಶರಣರು, ಭಿಕ್ಷಾಟನೆ ಮೂಲಕ ದಿನಕ್ಕೆ 5 ಮನೆಗಳಿಗೆ
ಹೋಗಿ ಭಿಕ್ಷೆ ಮಾಡುವ ಕಾಯಕ ಶುರು ಮಾಡಿ, ಬೇಕು ಬೇಡ ಎಂಬಂತೆ ಜಂಗಮಗೆ ಬದುಕು ನಡೆಸಿದರು. ಬದುಕಿನಲ್ಲಿ ಹೆಚ್ಚಿದ ಸಂಕಷ್ಟಗಳಿಗೆ ನೊಂದ ಶರಣರು, ಸಂಸಾರದ ಸುಗಮಕ್ಕೆ ನೇಗಿಲು ಹಿಡಿದರು.

ಸಂಸಾರದ ನಡೆಸುತ್ತಲೇ ಗ್ರಾಮದಲ್ಲಿ ಪ್ಲೇಗ್‌ ರೋಗ ಹರಡಿದ್ದ ವೇಳೆ ನಿವಾರಣೆಗೆ ಗ್ರಾಮಸ್ಥರು ಗ್ರಾಮ ದೇವತೆಗೆ ಕೋಣ ಬಲಿಗೆ ಮುಂದಾಗಿದ್ದರು. ಇದನ್ನರಿತ ಶರಣ ವೀರೇಶ್ವರರು, ಕೋಣ ಬಲಿ ತಡೆಗೆ ಯತ್ನಿಸಿದರು. ಆದರೆ ಅದು ಫಲ ನೀಡದ ಕಾರಣ ಮನನೊಂದು ಪತ್ನಿಯೊಂದಿಗೆ ಗ್ರಾಮವನ್ನು ತೊರೆದು ಸೊಲ್ಲಾಪುರಕ್ಕೆ ಹೋದರು. ಅಲ್ಲಿಯೂ ಸಹ ಜನರಿಂದ ಅನೇಕ ಬಾರಿ ಹೊಡೆತಗಳಿಂದ ಸಂಕಷ್ಟಕ್ಕಿಡಾದರು. ಅಪಮಾನ ನಿಂದನೆಗೆ
ಒಳಗಾದ ಇವರು ಅಲ್ಲಿಯ ವಾರದ ಮಲ್ಲಪ್ಪ ಎಂಬುವರಿಗೆ ಸಂತಾನ ಭಾಗ್ಯ ನೀಡುವುದರ ಮೂಲಕ ಪವಾಡ ಮಾಡಿದರು.

ನಂತರ ಕೊಡೆಕಲ್‌ ಗ್ರಾಮದ ಶಿವಯೋಗಿಗಳ ಅಪ್ಪಣೆಯಂತೆ ಪತ್ನಿ ಸಂಗ ತೊರೆದು ಪರಮಾರ್ಥ ಜೀವನ ಪ್ರಾರಂಭಿಸಿದರು. ಇಡೀ ಜೀವನವನ್ನೇ ಸಮಾಜದ ತಿದ್ದುಪಡಿಗಾಗಿ, ಮೂಢನಂಬಿಕೆ ತಡೆಯುವಲ್ಲಿ ನಿರತರಾದ ಶರಣರು 1920ರಲ್ಲಿ ದೇಹ ತೊರೆಯುವ ಮುನ್ನ ಹಾನಗಲ್ಲ ಕುಮಾರ ಸ್ವಾಮಿಗಳ ದರ್ಶನಕ್ಕೆ ಆಸೆ ಹೊಂದಿದರು. ವಿಷಯ ತಿಳಿದ ಹಾನಗಲ್‌ ಶ್ರೀಗಳು ಎಂದೂ ವಾಹನಗಳಲ್ಲಿ ಪ್ರಯಾಣ ಮಾಡದ ಅವರು ವೀರೇಶ್ವರರನ್ನು
ಕಾಣಲು ರೈಲ್ವೆ ಮೂಲಕ ಬಂದು ವೀರೇಶ್ವರರನ್ನು ಕಂಡರು. ನಂತರ 72 ವರ್ಷಗಳ ಸಾರ್ಥಕ ಬದುಕನ್ನು ಮುಗಿಸಿದ ವೀರೇಶ್ವರ ಶರಣರು ಇಂದಿಗೂ ಸಹ ಹೊರ ರಾಜ್ಯ ಮಹಾರಷ್ಟ್ರದಲ್ಲೂ ಸಹ ಅಲ್ಲಿನ ಜನರು ಇವರನ್ನು ಆರಾಧಿಸುತ್ತಿದ್ದಾರೆ.

ಪಟ್ಟಣದಲ್ಲಿರುವ ಶರಣ ದಂಪತಿಗಳ ದೇವಸ್ಥಾನವನ್ನು ಹಿರಿಯರ ಸಹಾಯದಿಂದ ಹಾಗೂ ವೀರೇಶ್ವರರ ಮಹಾಮನೆಯನ್ನು ಅದ್ಭುತ ರೀತಿಯಲ್ಲಿ ನಿರ್ಮಿಸಲಾಗಿದೆ. ಶರಣರ ದೇವಸ್ಥಾನದ ಗೋಪುರವು ಅನುಭವ ಮಂಟಪದಲ್ಲಿ 120ಕ್ಕೂ ಹೆಚ್ಚು ಶರಣರ ಮೂರ್ತಿಗಳನ್ನು ಕೆತ್ತಲಾಗಿದೆ. ವಿವಿಧ
ದಾರ್ಶನಿಕ ಶರಣ ಮೂರ್ತಿಗಳಿಂದ ನಿರ್ಮಾಣಗೊಂಡ ಮಹಾಮನೆ ನೋಡಲು ಜಿಲ್ಲೆ ಸೇರಿದಂತೆ ಹೊರ ರಾಜ್ಯದಿಂದ ಭಕ್ತರು ಆಗಮಿಸುತ್ತಿರವುದಕ್ಕೆ ನಿಜಕ್ಕೂ ಶರಣರ 40 ಪವಾಡಗಳೇ ಕಾರಣ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ನನ್ನನ್ನು ಸಚಿವ ಸ್ಥಾನದಿಂದ ಕೈ ಬಿಡಲು ಸಾಧ್ಯವಿಲ್ಲ: ಜೊಲ್ಲೆ

ನನ್ನನ್ನು ಸಚಿವ ಸ್ಥಾನದಿಂದ ಕೈ ಬಿಡಲು ಸಾಧ್ಯವಿಲ್ಲ: ಜೊಲ್ಲೆ

ಗಾಳಿಯಲ್ಲಿ ಗುಂಡು ಹಾರಿಸುವ ರಮೇಶ ಜಾರಕಿಹೊಳಿ: ಖಂಡ್ರೆ

ಗಾಳಿಯಲ್ಲಿ ಗುಂಡು ಹಾರಿಸುವ ರಮೇಶ ಜಾರಕಿಹೊಳಿ: ಖಂಡ್ರೆ

ಚರ್ಚೆ ನಡೆದ ಮಾತ್ರಕ್ಕೆ ಭಿನ್ನಮತ ಎನ್ನಲಾಗದು: ಲಕ್ಷ್ಮಣ ಸವದಿ

ಚರ್ಚೆ ನಡೆದ ಮಾತ್ರಕ್ಕೆ ಭಿನ್ನಮತ ಎನ್ನಲಾಗದು: ಲಕ್ಷ್ಮಣ ಸವದಿ

ನಿಗದಿತ ಅವಧಿಯಲ್ಲಿ ಮೌಲ್ಯಮಾಪನ ಕಾರ್ಯಪೂರ್ಣ: ಸಚಿವ ಸುರೇಶ್‌ ಕುಮಾರ್‌

ನಿಗದಿತ ಅವಧಿಯಲ್ಲಿ ಮೌಲ್ಯಮಾಪನ ಕಾರ್ಯಪೂರ್ಣ: ಸಚಿವ ಸುರೇಶ್‌ ಕುಮಾರ್‌

ಅಸಮಾಧಾನ ಬಹಿರಂಗ ಚರ್ಚೆ ಬೇಡ: ಶೆಟ್ಟರ್‌

ಅಸಮಾಧಾನ ಬಹಿರಂಗ ಚರ್ಚೆ ಬೇಡ: ಶೆಟ್ಟರ್‌

ಸರಕಾರದ ಅನುಮತಿ ಪಡೆದು ‘ಪ್ರತಿಜ್ಞಾ’ ಕಾರ್ಯಕ್ರಮ: ಡಿಕೆಶಿ

ಸರಕಾರದ ಅನುಮತಿ ಪಡೆದು ‘ಪ್ರತಿಜ್ಞಾ’ ಕಾರ್ಯಕ್ರಮ: ಡಿಕೆಶಿ

ಮಳೆ ಅನಾಹುತ ತಡೆಗೆ ವಿಶೇಷ ತಂಡ ರಚನೆ; ಆರ್‌. ಅಶೋಕ್‌

ಮಳೆ ಅನಾಹುತ ತಡೆಗೆ ವಿಶೇಷ ತಂಡ ರಚನೆ; ಆರ್‌. ಅಶೋಕ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

01-June-23

ಕೋವಿಡ್ ಮುಂಜಾಗ್ರತೆ ಅಗತ್ಯ

01-June-04

ಕೋವಿಡ್ : ಬಸವನಾಡಲ್ಲಿ ಮಹಾ ಸ್ಪೋಟ

ವೈದ್ಯಕೀಯ ವರದಿ ಬರುವ ಮುನ್ನವೇ ಶಂಕಿತರು ಮನೆಗೆ

ವೈದ್ಯಕೀಯ ವರದಿ ಬರುವ ಮುನ್ನವೇ ಶಂಕಿತರು ಮನೆಗೆ

31-May-25

31ರ ವರೆಗೆ ಆಸ್ತಿ ತೆರಿಗೆ ಪಾವತಿ ರಿಯಾಯ್ತಿ ಕಾಲಾವಧಿ ವಿಸ್ತರಣೆ

31-May-24

ಮುಫತ್‌ ಗೈರಾಣ ಪ್ರದೇಶ ಅರಣ್ಯ ಇಲಾಖೆಗೆ ವಾಪಸ್‌

MUST WATCH

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

ಹೊಸ ಸೇರ್ಪಡೆ

amar rishabh

ಭೂಗತ ಲೋಕದ ಕಥೆಯಲ್ಲಿ ರಿಷಭ್!

push mantra

ಪುಷ್ಕರ್‌ ಮಲ್ಲಿಕಾರ್ಜುನಯ್ಯ ಕೃಷಿ ಮಂತ್ರ!

chitra hosa

ಹೊಸಚಿತ್ರಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿರುವ ನಿರ್ದೇಶಕ ನಾಗಶೇಖರ್

jaggi twwee

ಜಗ್ಗೇಶ್ ಹೇಳಿದ ಮೇಕಪ್ ಹಿಂದಿನ ಕಥೆ

akki-su;lu

ಸುಳ್ಳು ಸುದ್ದಿಗಳ ಬಗ್ಗೆ ಸ್ಪಷ್ಟನೆ ಕೊಟ್ಟ ನಟ ಅಕ್ಷಯ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.