ನಡುರಾತ್ರಿ ಸ್ಲಂ ವಸ್ತಿ, ನಸುಕಿನ್ಯಾಗ ವಾಕಿಂಗ್‌!

Team Udayavani, Feb 12, 2018, 3:44 PM IST

bij-1.jpg

ವಿಜಯಪುರ: ಬಿಜೆಪಿ ನಾಯಕರು ರಾಜ್ಯಾದ್ಯಂತ ಆಯ್ದ ಕೆಲವು ಕೊಳಗೇರಿ ವಾಸ್ತವ್ಯದ ಭಾಗವಾಗಿ ಹಿರಿಯ ಶಾಸಕ ಗೋವಿಂದ ಕಾರಜೋಳ ಅವರು ವಿಜಯಪುರ ನಗರದ ಕೊಳಗೇರಿಯಲ್ಲಿ ವಾಸ್ತವ್ಯ ಹೂಡಿ ಸ್ಲಂ ನಿವಾಸಿಗಳ ಸಮಸ್ಯೆ ಆಲಿಸಿದರು.

ಕಾರಜೋಳ ಅವರು ಆನಿವಾರ ಇಂಡಿ ರಸ್ತೆಯಲ್ಲಿರುವ ಸಮಗಾರ ಓಣಿಯ ಕೊಳಗೇರಿಗೆ ರಾತ್ರಿ 11ಕ್ಕೆ ಆಗಮಿಸಿದರು. ಕಾರಜೋಳ ಆಗಮಿಸುತ್ತಲೇ ಕೊಳಗೇರಿಯಲ್ಲಿರುವ ಹರಳಯ್ಯ ಸಮಾಜದ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ನಿಗದಿಯಂತೆ ಶಂಕರ ಜಮಖಂಡಿ ಅವರ ಮನೆಗೆ ಆಗಮಿದಾದ ಶಂಕರ ಅವರ ಪತ್ನಿ ಶೈಲಶ್ರೀ ಅವರೊಂದಿಗೆ ಕುಟುಂಬ ಸದಸ್ಯರು ಆರತಿ ಎತ್ತಿ ಸಾಂಪ್ರದಾಯಿಕ ಸ್ವಾಗತಿಸಿದರು.

ಬಳಿಕ ಕಾರಜೋಳ ಅವರೊಂದಿಗೆ ಆಗಮಿಸಿದ್ದ ಬಿಜೆಪಿ ಮುಖಂಡರಾದ ಚಂದ್ರಶೇಖರ ಕವಟಗಿ, ಪಾಲಿಕೆ ಸದಸ್ಯರಾದ ಪರಶುರಾಮ ರಜಪೂತ, ಬಿಜೆಪಿ ಸ್ಲಂ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜು ಮಗಿಮಠ ಸೇರಿದಂತೆ ಹಲವರೊಂದಿಗೆ ರಾತ್ರಿ 11:30ಕ್ಕೆ ಕಾರಜೋಳ ಊಟ ಸೇವಿಸಿದರು. ತಡವಾಗಿ ಬಂದ ಕಾರಣ ನಿಗದಿತ ಸಮಯಕ್ಕೆ ಬರುತ್ತಾರೆಂದು ಸಿದ್ಧಪಡಿಸಿಕೊಂಡಿದ್ದ ಊಟ ತಣ್ಣಗಾಗಿತ್ತು!

ಕಾರಜೋಳ ಅವರಿಗಾಗಿ ಶಂಕರ ಅವರು ತಮ್ಮ ಮನೆಯ ಮೊದಲ ಮಹಡಿಯಲ್ಲಿ ಸಿದ್ಧಪಡಿಸಿದ್ದ ಮಂಚದ ಮೇಲೆ ಗಾದಿ ಹಾಸಿ ವಾಸ್ತವ್ಯಕ್ಕೆ ಸಿದ್ಧಪಡಿಸಿದ್ದರು. ರಾತ್ರಿ 12ಕ್ಕೆ ಅವರು ನಿದ್ರೆಗೆ ಜಾರಿದರು. ಕಾರಜೋಳ ಅವರೊಂದಿಗೆ ಅದೇ ಕೋಣೆಯ ಮತ್ತೂಂದು ಬದಿಗೆ ಶಂಕರ ಅವರ ತಂದೆ ನಿವೃತ್ತ ಶಿಕ್ಷಕ ಕಲ್ಲಪ್ಪ ಜಮಖಂಡಿ ಅವರೂ ಮಲಗಿಕೊಂಡಿದ್ದರು.

ರವಿವಾರ ಬೆಳಗ್ಗೆ 5:30ಕ್ಕೆ ಎದ್ದು ಶೈಲಶ್ರೀ ಅವರು ಮಾಡಿಕೊಟ್ಟ ಚಹಾ ಸೇವಿಸಿ ವಾಯುವಿಹಾರಕ್ಕೆ ತೆರಳಿದ ಕಾರಜೋಳ ಅವರು, ಒಂದು ಗಂಟೆ ತರುವಾಯ ಶಂಕರ ಮನೆಗೆ ಆಗಮಿಸಿ, ಸ್ನಾನಾದಿಗಳನ್ನು ಪೂರ್ಣಗೊಳಿಸಿದರು. ಬೆಳಗ್ಗೆ 9ಕ್ಕೆ ಶಂಕರ ಅವರ ತಂದೆ ಕಲ್ಲಪ್ಪ, ತಾಯಿ ಯಲ್ಲವ್ವ ಅವರೊಂದಿಗೆ ಶೈಲಶ್ರೀ ಅವರು ತಯಾರಿಸಿದ ಜೋಳದ ಬಿಸಿ ರೊಟ್ಟಿ, ರಾಜಗಿರಿ ಪಲ್ಲೆ, ಬಳ್ಳೊಳ್ಳಿ ಚಟ್ನಿ ಸವಿದರು. 

ಬಳಿಕ ಬೆಳಗ್ಗೆ 9:30ರ ಸುಮಾರಿಗೆ ಶಂಕರ ಅವರ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿದ ಕಾರಜೋಳ ಅವರು, ಕಲ್ಲಪ್ಪ ಜಮಖಂಡಿ ಅವರು ಶಿಕ್ಷಕಾರಿಗಿ ಸಲ್ಲಿಸಿದ ಸೇವೆ, ಹೋರಾಟ ಮನೋಭಾವದ ಹಲಗೆ ಹಳೆಯ ಕ್ಷಣಗಳನ್ನು ಸ್ಮರಿಸಿ, ಪರಸ್ಪರ ತಮ್ಮ ಅನುಭವ ಹಂಚಿಕೊಂಡರು. ಬಳಿಕ ಕೊಳಗೇರಿ ನಿವಾಸಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಸಮಗ್ರ ಪರಿಹಾರಕ್ಕೆ ತಮ್ಮ ಸರ್ಕಾರ ಅಧಿ ಕಾರಕ್ಕೆ ಬರುತ್ತಲೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ, ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದರು.

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.