ಕಾನೂನು ಉಲ್ಲಂಘಿಸಿದರೆ ಹುಷಾರ್‌: ಡಿಸಿ

ಜಿಲ್ಲೆಯಲ್ಲಿರುವ ಮೂರು ಗೋ ಶಾಲೆಗಳು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿವೆ.

Team Udayavani, Jan 26, 2021, 6:17 PM IST

ಕಾನೂನು ಉಲ್ಲಂಘಿಸಿದರೆ ಹುಷಾರ್‌: ಡಿಸಿ

ವಿಜಯಪುರ: ಪ್ರಾಮಾಣಿಕ ಕೃಷಿಕನಿಗೆ ಹಾಗೂ ಜಾನುವಾರು ಸಾಗಾಣಿಕೆದಾರರಿಗೆ ಯಾವುದೇ ತೊಂದರೆ ಆಗಬಾರದು. ಕರ್ನಾಟಕ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿರುವ ಕಾನೂನು ಉಲ್ಲಂಘನೆ ಆಗಬಾರದು. ಇದಕ್ಕಾಗಿ ಸರ್ಕಾರದ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಪ್ರಾಣಿ ದಯಾ ಸಂಘದ ಜಿಲ್ಲಾಧ್ಯಕ್ಷರೂ ಆಗಿರುವ ಜಿಲ್ಲಾಧಿ ಕಾರಿ ಪಿ.ಸುನೀಲಕುಮಾರ ಅಧಿಕಾರಿಗಳಿಗೆ ಸೂಚಿಸಿದರು.

ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಪ್ರಾಣಿದಯಾ ಸಂಘದ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಸದ್ಭಾವನೆಯಿಂದ ಕೈಗೊಂಡ ಸಮಕ್ಷ ಪ್ರಾಧಿಕಾರಿ ಅಧಿಕಾರ ಚಲಾಯಿಸುವಾಗ ಯಾವುದೇ ವ್ಯಕ್ತಿ ವಿರುದ್ಧ, ದಾವೆ ಅಥವಾ ಇತರ ಕಾನೂನುಗಳು ವ್ಯವಹಾರ ಹೂಡತಕ್ಕದ್ದಲ್ಲ ಎಂದು ಸೂಚಿಸಿದರು.

ಗೋಮಾಂಸ ಎಂದರೆ ಜಾನುವಾರುಗಳ ಮಾಂಸವು ಎಲ್ಲ ವಯಸ್ಸಿನ ಆಕಳು, ಕರು, ಗೂಳಿ ಮತ್ತು ಎತ್ತು ಹಾಗೂ 13 ವಯಸ್ಸಿನ ಕೋಣ, ಎಮ್ಮೆ ಸಮಕ್ಷ ಪ್ರಾ
ಧಿಕಾರದ 3ರ ಅಡಿಯಲ್ಲಿ ಜಾನುವಾರು ಹತ್ಯೆ ನಿಷೇಧ ಹಾಗೂ ಜಾನುವಾರು ಸಾಗಾಣಿಕೆ ಮೇಲೆ ನಿಬಂಧ, ಜಾನುವಾರು ಹತ್ಯೆಗಾಗಿ, ಜಾನುವಾರು ಮಾರಾಟ,
ಖರೀದಿ ಮಾಡತಕ್ಕದ್ದಲ್ಲ ಎಂದು ವಿವರಿಸಿದರು.

ಶೋಧಿಸುವ, ಜಪ್ತಿ ಮಾಡುವಾಗ ಕಾರಣದ ಆಧಾರದ ಮೇಲೆ ಅಪರಾಧ ವಿಚಾರಣೆ ಮಾಡಲು ಅಧಿಕಾರ ವ್ಯಾಪ್ತಿಗೆ ಬರುತ್ತದೆ. ಸರಕಾರದ ಈ ಕರ್ನಾಟಕ
ಆದ್ಯಾದೇಶ 1ರಡಿಯಲ್ಲಿ ವಿವಾದಗಳ ತ್ವರಿತ ವಿಲೆಯ ಉದ್ದೇಶಕ್ಕಾಗಿ ಅಧಿ ಸೂಚನೆ ಮೂಲಕ ಜಿಲ್ಲೆಯಲ್ಲಿ ವಿಶೇಷ ನ್ಯಾಯಾಲಯದ ರಚನೆ ಮಾಡಲಾಗಿದೆ
ಎಂದು ವಿವರಿಸಿದರು.

ನಿಯಮದಂತೆ ರಚಿಸಲಾದ ಅಪರಾಧಕ್ಕಾಗಿ ಬಳಸಲಾದ ವಸ್ತುಗಳ ಮುಟ್ಟುಗೋಲುಗಳು ಆಪಾದಿತನ್ನು ಅಪರಾಧ ನಿಣೇರ್ಧಿತನಾದ ಮೇಲೆ ವಶಪಡಿಸಿಕೊಂಡ ಜಾನುವಾರು, ವಾಹನ (ಆರ್‌ಟಿಒ ಆಫೀಸ್‌ನಿಂದ ಅನುಮತಿ ಪಡೆಯದೆ ಇದ್ದಲ್ಲಿ) ಆವರಣ ಗಳು ಮತ್ತು ಸಾಮಗ್ರಿಗಳನ್ನು ನ್ಯಾಯಾಲಯಗಳು ಮುಟ್ಟುಗೋಲು ಮಾಡಬೇಕು ಎಂದು ತಿಳಿಸಿದರು. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜಾನುವಾರು ಹತ್ಯೆ ಅಗತ್ಯವಾಗಿರುವುದೆಂದು  ರಾಜ್ಯ ಸರ್ಕಾರ ಅಧಿ ಕೃತಗೊಳಿಸಿದ ಪಶು ವೈದ್ಯಾಧಿಕಾರಿಗಳು ಪ್ರಾಮಾಣೀಕರಿಸಬೇಕು. ಯಾವುದೇ ಜಾನುವಾರುಗಳಿಗೆ ಸಾಂಕ್ರಾಮಿಕ, ಮಾರಕ ರೋಗಗಳು ಕಂಡು ಬಂದಲ್ಲಿ ಪಶು ವೈದ್ಯಾ ಧಿಕಾರಿಗಳು ಪ್ರಾಮಾಣೀ ಕರಿಸಬೇಕು. ಅಧಿಕಾರಿಗಳು ಗೈರು ಹಾಜರಿದ್ದಲ್ಲಿ ಇನ್ನೊಬ್ಬ ದರ್ಜೆಗೆ ಕಡಿಮೆ ಇಲ್ಲದ ಬೇರೊಬ್ಬ ಅಧಿಕಾರಿ
ಪ್ರಾಮಾಣೀಕರಿಸಬೇಕು ಎಂದರು.

ಜಿಲ್ಲೆಯಲ್ಲಿರುವ ಮೂರು ಗೋ ಶಾಲೆಗಳು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿವೆ. ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡಂತೆ ಯಾವುದೇ ಜಾನುವಾರುಗಳನ್ನು ಸಂರಕ್ಷಿಸಲು ಗೋಶಾಲೆಗಳು ಬದ್ಧವಾಗಿವೆ. ಜಾನುವಾರುಗಳ ಸಾಗಾಣಿಕೆ ಕುರಿತಂತೆ ಜಿಲ್ಲಾ ಧಿಕಾರಿಗಳು ಈಗಿರುವ 15 ಕಿ.ಮೀ. ವ್ಯಾಪ್ತಿ ಸಮಂಜಸವಲ್ಲ. ಕೃಷಿಕರಿಗೆ ಹಾಗೂ ಜಾನುವಾರು ಸಾಕಾಣಿಕೆದಾರರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು. ನಗರದಲ್ಲಿ ಸಂಚರಿಸುವ ಬಿಡಾಡಿ
ದನಗಳ ನಿಯಂತ್ರಣ ಮಾಡಲು ಸೂಕ್ತ ಕ್ರಮ ಕೈಗೊಳ್ಳಲು ಆಯುಕ್ತರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿಲ್ಲೆಗೆ ಮಹಾರಾಷ್ಟ್ರದಿಂದ ಬರುವ ಜಾನುವಾರುಗಳನ್ನು ಪರೀಕ್ಷಿಸಿ ಖರೀದಿ ಮಾಡುವವರು ಕಡ್ಡಾಯವಾಗಿ ಕಿವಿ ಓಲೆ ಅಳವಡಿಸಿ, ಜಾನುವಾರು ಮಾತ್ರ ಸಂತೆಯಲ್ಲಿ ಮಾರುವಂತೆ ಕೃಷಿ ಮಾರುಕಟ್ಟೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಪಶು ವೈದ್ಯರು ಎಲ್ಲ ಜಾನುವಾರುಗಳಿಗೆ ಶೇಕಡಾ ನೂರರಷ್ಟು ಎತ್ತು ಮತ್ತು ಹೋರಿಗಳ ಮಾಲೀಕರನ್ನು ಮನವೊಲಿಸಿ ಕಿವಿ ಓಲೆ ಅಳವಡಿಸಬೇಕು. ಗೋಹತ್ಯೆ ಸಂಬಂಧಿಸಿದ ಪ್ರಸಂಗದಲ್ಲಿ ಆಹಾರ ಸುರಕ್ಷಾ ಅಧಿಕಾರಿಗಳು ಆಹಾರ ಮಾಂಸದ ಪರೀಕ್ಷೆ ಹಾಗೂ ಅದರ ಮೂಲವನ್ನು ಕಂಡು ಹಿಡಿಯಲು ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು.

ಸಾರಿಗೆ ಇಲಾಖೆಯ ಚೆಕ್‌ಪೋಸ್ಟ್‌ಗಳಲ್ಲಿ ಇತರ ರಾಜ್ಯಗಳಿಂದ ಬರುವ ಜಾನುವಾರುಗಳ ಸಾಗಾಣಿಕೆ ವಾಹನಗಳ ಮೇಲೆ ನಿಗಾವಹಿಸಿ ಕಾನೂನು ಉಲ್ಲಂಘನೆ
ಆಗದಂತೆ ಕ್ರಮ ಕೈಗೊಳ್ಳಬೇಕು. ಪೊಲೀಸರು ಗೋಹತ್ಯೆ ತಡೆಯಲು ಕಾನೂನು ಉಲ್ಲಂಘಿಸಿದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಮುಂಬರುವ ದಿನಗಳಲ್ಲಿ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ನೀಡುವ ನಿರ್ದೇಶನದನ್ವಯ ಪ್ರಾಣಿ ಕಲ್ಯಾಣ ಕಾರ್ಯಕ್ರಮದಲ್ಲಿ ತೊಡಗಿದ ಎಲ್ಲ ಸದಸ್ಯರಿಗೆ
ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಿ ಮಾಹಿತಿ ನೀಡಬೇಕು. ಗೋಶಾಲೆ ಆಡಳಿತ ಮಂಡಳಿ ಅವರನ್ನು ಮತ್ತು ಅಧಿಕಾರಿ ವರ್ಗದವರನ್ನು ಸೇರಿಸಿ ಸಭೆ ನಡೆಸಿ, ಜಿಲ್ಲಾ ಪ್ರಾಣಿ ದಯಾ ಸಂಘ ಕೈಗೊಳ್ಳಬೇಕಾದ ಚಟುವಟಿಕೆ ಕುರಿತು ಚರ್ಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಡಿಎಚ್‌ಒ ಡಾ| ಮಹೇಂದ್ರ ಕಾಪ್ಸೆ, ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ| ಪ್ರಾಣೇಶ ಜಾಗೀರದಾರ, ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ
ಸೇರಿದಂತೆ ಜಿಲ್ಲೆಯ ಪ್ರಾಣಿ ದಯಾ ಸಂಘದ ಸದಸ್ಯರು, ಗೋ ಶಾಲೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.