Udayavni Special

ಆಲಮಟ್ಟಿ ಜಲಾಶಯಕ್ಕೆ ಭರಪೂರ ನೀರು


Team Udayavani, Jun 19, 2021, 6:52 PM IST

xಚವಬನಬವಚಷಚವಬನಮನಗ್ದ್ಗಹಜಮ

ಆಲಮಟ್ಟಿ: ಕೃಷ್ಣೆಯ ಉಗಮಸ್ಥಾನ ಹಾಗೂ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು ಹಾಗೂ ಜಿಲ್ಲೆಯಲ್ಲಿ ತುಂತುರು ಮಳೆ ಪರಿಣಾಮ ಮುಂಗಾರು ಹಂಗಾಮಿಗೆ ಜಮೀನಿಗೆ ನೀರು ಹರಿಸುವ ಅವ ಧಿಯನ್ನು ಯಾವಾಗ ನಿಗದಿ ಮಾಡಲಾಗುತ್ತದೆ ಎಂದು ರೈತರು ನೀರಾವರಿ ಸಲಹಾ ಸಮಿತಿಯತ್ತ ಚಿತ್ತ ನೆಟ್ಟಿದ್ದಾರೆ.

ಶುಕ್ರವಾರ ಸಾಯಂಕಾಲದ ಮಾಹಿತಿಯಂತೆ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯಕ್ಕೆ 1,46,211 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ತೌಕ್ತೆ ಚಂಡಮಾರುತದ ಪರಿಣಾಮ ಪ್ರತಿ ವರ್ಷಕ್ಕಿಂತಲೂ ಈ ಬಾರಿ ಜಲಾಶಯಕ್ಕೆ ಮುಂಚಿತವಾಗಿ ನೀರು ಹರಿದು ಬರುತ್ತಿದೆ. ಮೇ ತಿಂಗಳಿನಿಂದ ನಿರಂತರ ನೀರು ಹರಿದು ಬರುತ್ತಿದ್ದು ಜಲಾಶಯ ವಾಡಿಕೆಗಿಂತ ಮುಂಚಿತವಾಗಿ ತುಂಬಲಿದೆ ಎಂದು ರೈತರು ಆಶಾಭಾವ ಹೊಂದಿದ್ದಾರೆ. ಕಳೆದ ಬಾರಿ ಮುಂಗಾರು ಹಂಗಾಮಿನಲ್ಲಿ ರೈತರ ಜಮೀನಿಗೆ ಕಾಲುವೆ ನೀರು ಹರಿಸಬೇಕು ಎಂದು ಸರ್ಕಾರ ಯೋಚನೆ ಮಾಡುವ ವೇಳೆ ಮಳೆಗಾಲ ಆರಂಭವಾಗಿತ್ತು.

ನಿರಂತರ ಮಳೆ ಸುರಿದ ಪರಿಣಾಮ ಮೆಕ್ಕೆಜೋಳ, ಸಜ್ಜೆ, ಉಳ್ಳಾಗಡ್ಡಿ ಸೇರಿದಂತೆ ಬಹುತೇಕ ಬೆಳೆಗಳು ತೇವಾಂಶ ಹೆಚ್ಚಾಗಿ ಬೆಳೆ ಹಾನಿಯಾಗುವಂತಾಗಿತ್ತು. ಇನ್ನು ಹಿಂಗಾರು ಬಿತ್ತನೆಗೆ ನಿರಂತರ ಮಳೆ ಅವಕಾಶ ನೀಡಿರಲಿಲ್ಲ. ಈ ಬಾರಿ ಕೃಷ್ಣೆಯ ಉಗಮ ಸ್ಥಾನ ಹಾಗೂ ಕೃಷ್ಣಾ ನದಿಯ ಉಪ ನದಿಗಳ ಜಲಾನಯನ ಪ್ರದೇಶದಲ್ಲಿ ವಾಡಿಕೆಗಿಂತಲೂ ಮುಂಚಿತವಾಗಿ ತೌಕ್ತೆ ಚಂಡಮಾರುತದ ಪರಿಣಾಮ ಮೇ 22ರಿಂದ ಆಲಮಟ್ಟಿ ಜಲಾಶಯಕ್ಕೆ ಒಳ ಹರಿವು ಆರಂಭವಾಗಿದೆ. 519.60 ಮೀ. ಎತ್ತರವಾಗಿ 123.081 ಟಿಎಂಸಿ ಅಡಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಶುಕ್ರವಾರ 510.60 ಮೀ. ಎತ್ತರವಾಗಿ 32.922 ಟಿಎಂಸಿ ಅಡಿ ನೀರು ಸಂಗ್ರಹವಾಗಿ 1,46,211ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದರೂ ಹೊರ ಬಿಡುತ್ತಿಲ್ಲ.

ಕ್ಲೋಸರ್‌ ಕಾಮಗಾರಿ: ಪ್ರತಿ ಬಾರಿ ಮಳೆಗಾಲಕ್ಕೂ ಮುಂಚಿತವಾಗಿ ಕಾಲುವೆಗಳ ದುರಸ್ತಿ ಹಾಗೂ ಹೂಳು ಮತ್ತು ಗಿಡಗಂಟಿಗಳನ್ನು ತೆರವು ಮಾಡಲಲಾಗುತ್ತಿತ್ತು. ಜೂನ್‌ ಅಥವಾ ಜುಲೈ ತಿಂಗಳಿನಲ್ಲಿ ಜಲಾಶಯ ಭರ್ತಿಯಾಗುವುದರಿಂದ ಕೃ.ಮೇ.ಯೋ. ನೀರಾವರಿ ಸಲಹಾ ಸಮಿತಿ ಸಭೆ ನಡೆದು ಕಾಲುವೆಗಳಿಗೆ ನೀರು ಹರಿಸುವುದು ವಾಡಿಕೆ. ಆದರೆ ಈ ಬಾರಿ ರೋಹಿಣಿ ಹಾಗೂ ಮೃಗಶಿರಾ ಮಳೆಯಾಗಿದ್ದು ಕಾಲುವೆಗಳಲ್ಲಿ ನೀರು ಸಂಗ್ರಹವಾಗಿದೆ.

ಇದರ ಮಧ್ಯೆ ಕೆಬಿಜೆನ್ನೆಲ್‌ನ ವಿವಿಧ ವಿಭಾಗಗಳಿಂದ ಸ್ಪೇಷಲ್‌ ರಿಪೇರಿ ಹಾಗೂ ಕ್ಲೋಸರ್‌ ಕಾಮಗಾರಿಗಳಿಗೆ ಟೆಂಡರ್‌ ಕರೆಯಲಾಗಿದೆ. ಇದರಿಂದ ನೀರಿನಲ್ಲಿ ಹೂಳು ತಗೆಯುವದಾದರೂ ಹೇಗೆ ಎನ್ನುವ ಪ್ರಶ್ನೆ ಒಂದೆಡೆಯಾದರೆ ಸರ್ಕಾರ ನಿಗದಿ ಮಾಡಿರುವ ದರಕ್ಕಿಂತಲೂ ಶೇ. 50 ಕಡಿಮೆ ದರದಲ್ಲಿ ಗುತ್ತಿಗೆದಾರರು ಕಾಮಗಾರಿಗಳನ್ನು ಪಡೆಯುತ್ತಿರುವುದು ಕೂಡ ಕಾಮಗಾರಿಯ ಗುಣಮಟ್ಟದ ಬಗ್ಗೆ ಸಂಶಯ ಮೂಡುವಂತಾಗಿದೆ.

 

ಟಾಪ್ ನ್ಯೂಸ್

fghfhfvcxx

ರಾಜ್ಯಕ್ಕೆ ನ್ಯಾಯ ಒದಗಿಸುವ ಕೆಲಸ ನಿಮ್ಮ ಆದ್ಯತೆಯಾಗಲಿ : ಬೊಮ್ಮಾಯಿಗೆ ಸಿದ್ದರಾಮಯ್ಯ ಸಲಹೆ

uiyui7uyta

ನೂತನ ಸಿಎಂ ಮೊದಲ ಸಂಪುಟ ಸಭೆ : ಬಂಪರ್ ಆಫರ್ ಘೋಷಿಸಿದ ಬೊಮ್ಮಾಯಿ..!

bidar-news-3

ಜಮೀನಿನ ಮ್ಯುಟೇಶನ್ ಮಾಡಲು 15 ಲಕ್ಷ ರೂ.‌ ಲಂಚ : ಗ್ರೇಡ್ 1 ತಹಸೀಲ್ದಾರ್ ಎಸಿಬಿ ಬಲೆಗೆ..!

ಬುಡಮೇಲಾದ ವಿರೋಧಿ ಬಣದ ಲೆಕ್ಕಾಚಾರ….ರಾಜೀನಾಮೆ ಕೊಟ್ಟು ಗೆದ್ದ ಬಿಎಸ್ ವೈ!

ಬುಡಮೇಲಾದ ವಿರೋಧಿ ಬಣದ ಲೆಕ್ಕಾಚಾರ….ರಾಜೀನಾಮೆ ಕೊಟ್ಟು ಗೆದ್ದ ಬಿಎಸ್ ವೈ!

hfgjfyhgdf

ಶುಕ್ರವಾರ ಸಂಪುಟ ವಿಸ್ತರಣೆ ಸಾಧ್ಯತೆ : ದೆಹಲಿಗೆ ತೆರಳಲು ಕಾಲಾವಕಾಶ ಕೇಳಿದ ಬೊಮ್ಮಾಯಿ

Govt closely monitoring situation in Kishtwar, Kargil following cloudbursts: PM Modi

ಜಮ್ಮು ಕಾಶ್ಮೀರ ಮೇಘ ಸ್ಪೋಟ : ಸರ್ಕಾರ ಪರಿಸ್ಥಿತಿಯನ್ನು ಗಮನಿಸುತ್ತಿದೆ : ಪ್ರಧಾನಿ

uijykjykjkj

ಸಿಎಂ ಬದಲಾಗಿದ್ದಾರೆಯೇ ಹೊರತು ಪಕ್ಷವಲ್ಲ : ಬಿ.ಸಿ.ಪಾಟೀಲ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hinniru

ಬಸವಸಾಗರ ಹಿನ್ನೀರಿನ ಪ್ರಮಾಣದಲ್ಲಿ ಏರಿಕೆ : ಬೆಳೆಗಳು ಜಲಾವೃತ

ಸಂಭಾವನೆ ನೀಡದ ಅಧಿಕಾರಿಗಳು: ಪ್ರತಿಭಟನೆ ಎಚ್ಚರಿಕೆ ನೀಡಿದ ಶಿಕ್ಷಕರು

ಸಂಭಾವನೆ ನೀಡದ ಅಧಿಕಾರಿಗಳು: ಪ್ರತಿಭಟನೆ ಎಚ್ಚರಿಕೆ ನೀಡಿದ ಶಿಕ್ಷಕರು

ಎಚ್.ಸಿ. ಮಹದೇವಪ್ಪ

ದಲಿತ ಸಿಎಂ ಎಂಬುದು ದಲಿತರ ಮನಸ್ಸು ವಿಭಜಿಸುವ ತಂತ್ರ‌: ಎಚ್.ಸಿ. ಮಹದೇವಪ್ಪ

ರಾಜ್ಯದಲ್ಲಿ ಜನಾದೇಶ ಇಲ್ಲದ ಪ್ರಜಾಪ್ರಭುತ್ವ ವಿರೋಧಿ ಸರ್ಕಾರ: ಎಚ್.ಸಿ.ಮಹದೇವಪ್ಪ

ರಾಜ್ಯದಲ್ಲಿ ಜನಾದೇಶ ಇಲ್ಲದ ಪ್ರಜಾಪ್ರಭುತ್ವ ವಿರೋಧಿ ಸರ್ಕಾರ: ಎಚ್.ಸಿ.ಮಹದೇವಪ್ಪ

ghfghtrttr

ರಸ್ತೆ ಬದಿ ನರಳುತ್ತಾ ಬಿದ್ದಿದ್ದ ಅನಾಥ ವೃದ್ಧ ಸಾವು

MUST WATCH

udayavani youtube

ಸಿಎಂ ಪಟ್ಟ ಅಲಂಕರಿಸಿದ ಬೊಮ್ಮಾಯಿ: ಕುಟುಂಬ ಸದಸ್ಯರಿಂದ ಸಂಭ್ರಮ

udayavani youtube

ಧೈರ್ಯದಿಂದ ಕೋವಿಡ್ ಲಸಿಕೆ ಪಡೆಯಿರಿ : ಗರ್ಭಿಣಿಯರಿಗೆ ನಟಿ ಚೈತ್ರಾ ರೈ ಸಲಹೆ

udayavani youtube

ನೆಲನೆಲ್ಲಿ ಗಿಡದ ಬಗ್ಗೆ ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ಸಂಪೂರ್ಣ ಮಾಹಿತಿ

udayavani youtube

ರಾಜ್ ಕುಂದ್ರಾನಿಗೆ 14 ದಿನ ನ್ಯಾಯಾಂಗ ಬಂಧನ

udayavani youtube

ಕೊರೊನ ಅಂತ ನನ್ನ ಬಾಯಲ್ಲಿ ಹೇಳಲಿಕ್ಕೆ ಇಷ್ಟ ಇಲ್ಲ !

ಹೊಸ ಸೇರ್ಪಡೆ

ಭಾರತದಲ್ಲಿ “ಗ್ಯಾಲಾಕ್ಸಿ ಎ 22′ ಬಿಡುಗಡೆ

ಭಾರತದಲ್ಲಿ “ಗ್ಯಾಲಾಕ್ಸಿ ಎ 22′ ಬಿಡುಗಡೆ

fghfhfvcxx

ರಾಜ್ಯಕ್ಕೆ ನ್ಯಾಯ ಒದಗಿಸುವ ಕೆಲಸ ನಿಮ್ಮ ಆದ್ಯತೆಯಾಗಲಿ : ಬೊಮ್ಮಾಯಿಗೆ ಸಿದ್ದರಾಮಯ್ಯ ಸಲಹೆ

ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ತಗುಲಿ ಅಪಾರ ನಷ್ಟ ; ಪರಿಹಾರ ನಿರೀಕ್ಷೆಯಲ್ಲಿ ಕುಟುಂಬ

ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ತಗುಲಿ ಅಪಾರ ನಷ್ಟ ; ಪರಿಹಾರ ನಿರೀಕ್ಷೆಯಲ್ಲಿ ಕುಟುಂಬ

uiyui7uyta

ನೂತನ ಸಿಎಂ ಮೊದಲ ಸಂಪುಟ ಸಭೆ : ಬಂಪರ್ ಆಫರ್ ಘೋಷಿಸಿದ ಬೊಮ್ಮಾಯಿ..!

ಕಳಪೆ ಕಾಮಗಾರಿ :ಮುಖ್ಯ ಅಭಿಯಂತರರಿಂದ ಗುತ್ತಿಗೆದಾರನ ತರಾಟೆ

ಕಳಪೆ ಕಾಮಗಾರಿ :ಮುಖ್ಯ ಅಭಿಯಂತರರಿಂದ ಗುತ್ತಿಗೆದಾರನ ತರಾಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.