ಭೀಮನ ಬಾವಿ ಸ್ವಚ್ಛತಾ ಕಾರ್ಯ


Team Udayavani, Jul 4, 2022, 3:03 PM IST

17well

ತಾಳಿಕೋಟೆ: ಖಾಸ್ಗತೇಶ್ವರ ಮಠದ ಗಂಗಸ್ಥಳದ ಮೂಲ ಸ್ಥಾನವಾಗಿರುವ ರಾಜವಾಡೆಯಲ್ಲಿಯ ಪುರಾತನ ಭೀಮನ ಬಾವಿ ಸ್ವತ್ಛತಾ ಕಾರ್ಯ ಶ್ರೀಮಠದ ಬಾಲ ಶಿವಯೋಗಿ ಸಿದ್ದಲಿಂಗ ದೇವರ ಸಮ್ಮುಖದಲ್ಲಿ ರವಿವಾರ ಬೆಳಗ್ಗೆ 7ರಿಂದ 10ರವರೆಗೆ ಭಕ್ತ ಸಮೂಹದಿಂದ ನಡೆಯಿತು.

ಸುಮಾರು ಮೂರು ವರ್ಷದಿಂದ ಕಾಡಿದ ಕೊರೊನಾದಿಂದ ಖಾಸ್ಗೇಶ್ವರ ಜಾತ್ರಾ ಮಹೋತ್ಸವವನ್ನು ಭಕ್ತರ ಆರೋಗ್ಯದ ಹಿತದೃಷ್ಟಿಯಿಂದ ಕೇವಲ ಪೂಜೆ ಸೀಮಿತಗೊಳಿಸಲಾಗಿತ್ತು. 3 ವರ್ಷಗಳಿಂದ ಗಂಗಸ್ಥಳ ಕಾರ್ಯ ಭೀಮನ ಬಾವಿಯಲ್ಲಿ ನಡೆಯದ ಕಾರಣ ಬಾವಿಯಲ್ಲಿ ಕಲ್ಲು ಚಿಪ್ಪಡಿಗಳು, ಕಪ್ಪೆ ಜೊಂಡು ಅಲ್ಲದೇ ಕಟ್ಟಿಗೆ ಇನ್ನಿತರಗಳಿಂದ ಹೂಳು ತುಂಬಿಕೊಂಡಿತ್ತು. ಇದನ್ನು ಗಮನಿಸಿದ ಖಾಸ್ಗತ ಭಕ್ತ ವೃಂದ ಹಾಗೂ ಸಾಮಾಜಿಕ ಕಾರ್ಯಕರ್ತರ ಪಡೆ ರವಿವಾರ ಬಾವಿ ಸ್ವತ್ಛತಾ ಕಾರ್ಯದಲ್ಲಿ ತೊಡಗಿದ್ದರು. ಬಾವಿಯಲ್ಲಿಯ ಶೇ. 90ರಷ್ಟು ಸ್ವಚ್ಛಗೊಳಿಸುವುದರೊಂದಿಗೆ ಬಾವಿಗೆ ಪುನಶ್ಚೇತನ ನೀಡುವ ಕಾರ್ಯವನ್ನು ಮಾಡಿರುವುದು ಜನರ ಪ್ರಶಂಸೆಗೆ ಕಾರಣವಾಗಿದೆ.

ಸುಮಾರು ನೂರಾರು ವರ್ಷಗಳ ಪುರಾತನ ಭೀಮನ ಬಾವಿ ಸ್ವಚ್ಛಂದವಾಗಿ ಮತ್ತು ಜನರ ಉಪಯೋಗಕ್ಕೆ ಬರುವಂತೆ ಸ್ವತ್ಛಗೊಳಿಸಲಾಯಿತು. ಈ ಬಾವಿಯಲ್ಲಿ ಕೇವಲ ಜಾತ್ರಾ ಉತ್ಸವಗಳ ಗಂಗಸ್ಥಳ ಅಷ್ಟೇ ಅಲ್ಲದೇ ಪಟ್ಟಣದಲ್ಲಿ ವಿವಿಧ ವೈಯಕ್ತಿಕ ಮದುವೆ, ಮುಂಜುವಿ ಇನ್ನಿತರ ಕಾರ್ಯಕ್ರಮಗಳಿಗೆ ಯೋಗ್ಯವಾಗಿರುವ ಬಾವಿ ಇದೊಂದೆ ಆಗಿದೆ. ಇದನ್ನು ಗಮನಿಸಿದ ಭಕ್ತರು ನಮ್ಮೂರಿನ ಹೆಮ್ಮೆಯ ಭೀಮನ ಬಾವಿಯನ್ನು ಸ್ವಚ್ಛಗೊಳಿಸಲು ವಿವಿಧ ರೀತಿಯ ತಂಡಗಳನ್ನು ರಚಿಸಿಕೊಂಡು ಸ್ವಚ್ಛತೆಗೆ ಮುಂದಾಗಿದ್ದು ಶ್ಲಾಘನೀಯವಾಗಿದೆ. ಈ ಬಾರಿ ಖಾಸ್ಗತೇಶ್ವರ ಜಾತ್ರಾ ಮಹೋತ್ಸವ ಜು. 4ರಿಂದ ಆರಂಭಗೊಳ್ಳಲಿದ್ದು ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲು ಎಲ್ಲ ರೀತಿಯ ತಯಾರಿ ಕೈಗೊಳ್ಳಲಾಗುತ್ತಿದೆ. ಸ್ವಚ್ಛತಾ ಕಾರ್ಯದಲ್ಲಿ ಪುರಸಭೆ ಸದಸ್ಯರು, ಖಾಸ್ಗತ ಭಕ್ತವೃಂದ ಅಲ್ಲದೇ ಶ್ರೀಮಠದ ಸೇವಕರು, ಸಾಮಾಜಿಕ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ

ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ

ಭ್ರಷ್ಟಾಚಾರ ನಿಲ್ಲಿಸುತ್ತಾರೆಂಬ ನಂಬಿಕೆ ನನಗಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಭ್ರಷ್ಟಾಚಾರ ನಿಲ್ಲಿಸುತ್ತಾರೆಂಬ ನಂಬಿಕೆ ನನಗಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ತೆರಿಗೆ ಪಾವತಿ ಮಾಡುವವರಿಗೆ ಅಟಲ್‌ ಪಿಂಚಣಿ ಇಲ್ಲ

ತೆರಿಗೆ ಪಾವತಿ ಮಾಡುವವರಿಗೆ ಅಟಲ್‌ ಪಿಂಚಣಿ ಇಲ್ಲ

ತೇಜಸ್ವಿ ಸೂರ್ಯ ಭೇಟಿ ವೇಳೆ ಗಲಭೆ: ಎಫ್ಐಆರ್‌ ದಾಖಲು

ತೇಜಸ್ವಿ ಸೂರ್ಯ ಭೇಟಿ ವೇಳೆ ಗಲಭೆ: ಎಫ್ಐಆರ್‌ ದಾಖಲು

cm-bommai

ಎಸಿಬಿ ರದ್ದು; ಚರ್ಚೆಯ ನಂತರ ಮುಂದಿನ ತೀರ್ಮಾನ: ಸಿಎಂ ಬೊಮ್ಮಾಯಿ

ಆವಾಸ್‌ ಯೋಜನೆ 2024ರವರೆಗೆ ವಿಸ್ತರಣೆ

ಆವಾಸ್‌ ಯೋಜನೆ 2024ರವರೆಗೆ ವಿಸ್ತರಣೆ

ಕೋವಿಡ್‌: ರಾಜ್ಯದಲ್ಲಿ ಮರಣ ಪ್ರಮಾಣ ಏರಿಕೆ

ಕೋವಿಡ್‌: ರಾಜ್ಯದಲ್ಲಿ ಮರಣ ಪ್ರಮಾಣ ಏರಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadad

ಬೈಕ್ ಢಿಕ್ಕಿ: ಮುದ್ದೇಬಿಹಾಳದ ಪುರವಂತ ಅಮರಣ್ಣವರ್ ಸಾವು

20-bridge

ಸೇತುವೆ ಮೇಲಿನ ಜಾಲಿ ಕಂಟಿ ತೆಗೆಯಲು ಕ್ರಮ

1-sddada

ಲೋಕಾಯುಕ್ತ ಬಿ.ಎಸ್.ಪಾಟೀಲ್ ಅವರಿಗೆ ಪಿತೃ ವಿಯೋಗ

16-drainage

ಒಳ ಚರಂಡಿ ಕಾಮಗಾರಿಗೆ 10 ಲಕ್ಷ ರೂ. ಅನುದಾನ: ಯತ್ನಾಳ

ವಿಜಯಪುರ ಮಹಾನಗರ ಪಾಲಿಕೆ : ವಾರ್ಡ್ ಮೀಸಲು ಪ್ರಕಟ

ವಿಜಯಪುರ ಮಹಾನಗರ ಪಾಲಿಕೆ : ವಾರ್ಡ್ ಮೀಸಲು ಪ್ರಕಟ

MUST WATCH

udayavani youtube

ರಸ್ತೆ ಗುಂಡಿಯ ಕೊಳಚೆ ನೀರಿನಲ್ಲೇ ಯೋಗ, ಸ್ನಾನ ಮಾಡಿದ ವ್ಯಕ್ತಿ

udayavani youtube

ಎಸಿಬಿ ರಚನೆ ಆದೇಶ ರದ್ದುಗೊಳಿಸಿ ಹೈಕೋರ್ಟ್ ಮಹತ್ವದ ಆದೇಶ

udayavani youtube

ವರ್ಗಾವಣೆಗೊಂಡ ಚಿಕ್ಕಮಗಳೂರು ಎಸ್.ಪಿ ಗೆ ಹೂಮಳೆಗೈದು ಬೀಳ್ಕೊಟ್ಟ ಸಿಬ್ಬಂದಿ…

udayavani youtube

3 ವರ್ಷಗಳ ಬಳಿಕ ಕೆಆರ್‌ಎಸ್ ಡ್ಯಾಂನಿಂದ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ರಿಲೀಸ್

udayavani youtube

ನಟ ದರ್ಶನ್‌ ವಿರುದ್ದ ದೂರು ದಾಖಲಿಸಿದ ನಿರ್ಮಾಪಕ

ಹೊಸ ಸೇರ್ಪಡೆ

ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ

ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ

tdy-38

ಮೋಹನದಾಸ್‌ ಪೈ ಅವರಿಗೆ ನುಡಿನಮನ

ಭ್ರಷ್ಟಾಚಾರ ನಿಲ್ಲಿಸುತ್ತಾರೆಂಬ ನಂಬಿಕೆ ನನಗಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಭ್ರಷ್ಟಾಚಾರ ನಿಲ್ಲಿಸುತ್ತಾರೆಂಬ ನಂಬಿಕೆ ನನಗಿಲ್ಲ: ಎಚ್‌.ಡಿ.ಕುಮಾರಸ್ವಾಮಿ

crime

ಕಲಬುರಗಿ: ತಾಯಿ, ಮೂವರು ಮಕ್ಕಳ ಶವ ಬಾವಿಯಲ್ಲಿ ಪತ್ತೆ

1-adadasd

ಮಹಾರಾಜ ಟಿ20 ಕೂಟ: ಮಂಗಳೂರಿಗೆ ಮೊದಲ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.