ಮಹಿಳಾ ಕ್ರಿಕೆಟರ್ ರಾಜೇಶ್ವರಿ ವಿರುದ್ಧ ಸೂಪರ್ ಮಾರ್ಕೆಟ್ ನಲ್ಲಿ ದಾಂಧಲೆ ಆರೋಪ
Team Udayavani, Dec 1, 2022, 3:43 PM IST
ವಿಜಯಪುರ: ಭಾರತೀಯ ಮಹಿಳಾ ಕ್ರಿಕೆಟರ್ ರಾಜೇಶ್ವರಿ ಗಾಯಕವಾಡ ವಿರುದ್ಧ ಸೂಪರ್ ಮಾರ್ಕೆಟ್ ಮಾಲೀಕರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.
ನಗರದ ಸೋಲಾಪುರ ರಸ್ತೆಯಲ್ಲಿನ ಉಮದಿ ಸೂಪರ್ ಮಾರ್ಕೆಟ್ ಗೆ ರಾಜೇಶ್ವರಿ ಶಾಪಿಂಗ್ ಗೆ ತೆರಳಿದ್ದರು. ಈ ವೇಳೆ ರಾಜೇಶ್ವರಿ ಗಾಯಕವಾಡ ಸೌಂದರ್ಯವರ್ಧಕ ಬಾಟಲಿಗಳ ಸೀಲ್ ತೆಗೆದು ಪರೀಕ್ಷಿಸಲು ಮುಂದಾದಾಗ ಸಿಬ್ಬಂದಿ ಆಕ್ಷೇಪಿಸಿದ್ದಾರೆ. ಇದರಿಂದ ಕುಪಿತರಾದ ರಾಜೇಶ್ವರಿ ಕೂಗಾಟ ಆರಂಭಿಸಿದಾಗ ಮಾಲೀಕರು ಮಧ್ಯಪ್ರವೇಶ ಮಾಡಿದ್ದಾರೆ. ಈ ಹಂತದಲ್ಲಿ ಮೊಬೈಲ್ ಕರೆ ಮಾಡಿ ತನ್ನ ಬೆಂಬಲಿಗರನ್ನು ಕರೆಸಿಕೊಂಡಿರುವ ರಾಜೇಶ್ವರಿ ಗಾಯಕವಾಡ ಹಲ್ಲೆ ನಡೆಸಿದ್ದಾಗಿ ಮಲ್ಲಿಕಾರ್ಜುನ ಎಂಬವರು ದೂರಿದ್ದಾರೆ.
ರಾಜೇಶ್ವರಿ ಗಾಯಕವಾಡ ಉಮದಿ ಸೂಪರ್ ಮಾರ್ಕೆಟ್ ಭೇಟಿ, ಗಲಾಟೆ, ಬೆಂಬಲಿಗರಿಂದ ಹಲ್ಲೆ ನಡೆಸಿದ ಘಟನೆಗಳು ಸಿಸಿ ಕೆಮೆರಾದಲ್ಲಿ ದಾಖಲಾಗಿವೆ.
ಈ ಕುರಿತು ಉಮದಿ ಸೂಪರ್ ಮಾರ್ಕೆಟ್ ಮುಖ್ಯಸ್ಥ ಮಲ್ಲಿಕಾರ್ಜುನ ಪೊಲೀಸರಿಗೆ ಮಾಹಿತಿ ನೀಡಿದ್ದರೂ, ಯಾರೂ ಲಿಖಿತ ದೂರು ನೀಡದ ಕಾರಣ ದೂರು ದಾಖಲಾಗಿಲ್ಲ ಎಂದು ಎಸ್ಪಿ ಆನಂದಕುಮಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ನಗರದ ಆದರ್ಶನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?
ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು
ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani
ಹೊಸ ಸೇರ್ಪಡೆ
ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ: ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ ಸುಪ್ರೀಂ
ಅರಮನೆ ಹುಡುಕಾಟದಲ್ಲಿ ಜೋಗಪ್ಪ; ಕಂಬ್ಳಿಹುಳ ನಾಯಕನ ಹೊಸ ಚಿತ್ರ
ಅದಾನಿ ಗ್ರೂಪ್ ವಿಚಾರದಲ್ಲಿ ಸಂಸತ್ ಉಭಯ ಸದನದಲ್ಲಿ ಕೋಲಾಹಲ
ರಾಜ್ಯಸಭೆಯ ಕೊನೆಯ ಸಾಲಿಗೆ ಶಿಫ್ಟ್ ಆದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್
ರಣಜಿ ಟ್ರೋಫಿ: ಉತ್ತರಾಖಂಡ್ ವಿರುದ್ಧ ಗೆದ್ದು ಸೆಮಿ ಫೈನಲ್ ಪ್ರವೇಶಿಸಿದ ಕರ್ನಾಟಕ