ಅನ್ಯ ಕೆಲಸಕ್ಕೆ ನಿಯೋಜನೆ ಬೇಡ

ಮಾತೃ ಇಲಾಖೆ ಕೆಲಸ ಮಾತ್ರ ನೀಡಿ ಅಂಗನವಾಡಿ ಕಾರ್ಯಕರ್ತೆಯರ ಅಳಲು

Team Udayavani, Nov 21, 2019, 3:26 PM IST

21-November-17

ಬ್ಯಾಡಗಿ: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಸಂಬಂಧಿಸಿದ ಮಾತೃ ಇಲಾಖೆ ಕೆಲಸವನ್ನು ಹೊರತುಪಡಿಸಿ, ಇನ್ನಿತರ ಇಲಾಖೆಗಳ ಕೆಲಸಕ್ಕೆ ನಿಯೋಜಿಸದಂತೆ ಆಗ್ರಹಿಸಿ ತಹಶೀಲ್ದಾರ್‌ ಶರಣಮ್ಮ ಕಾರಿ ಅವರಿಗೆ ಮನವಿ ಸಲ್ಲಿಸಿದರು.

ಅಂಗನವಾಡಿ ಕಾರ್ಯಕರ್ತೆಯರ ಮುಖ್ಯಸ್ಥೆ ಹೇಮಾ ಅಸಾದಿ ಮಾತನಾಡಿ, ಸಂಬಂಧಿ ಸಿದ ಇಲಾಖೆಗಳ ಕೆಲಸಗಳನ್ನೇ ನಿಭಾಯಿಸಲು ಸಾಧ್ಯವಾಗದಷ್ಟು ಕಾರ್ಯಕರ್ತೆಯರಿಗೆ ಕೆಲಸದ ಹೊರೆಯಾಗುತ್ತಿದೆ ಹೀಗಿದ್ದರೂ ಸಹ ಇನ್ನಿತರ ಕೆಲಸಗಳಿಗೆ ನಿಯೋಜಿಸುತ್ತಿರುವುದು ವಿಪರ್ಯಾಸ. ಇದರಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತಿದೆ ಎಂದರು.

ತಹಶೀಲ್ದಾರ್‌ ಕಾರ್ಯಾಲಯದಿಂದ ಬಿಎಲ್‌ಒ ಕೆಲಸಕ್ಕೆ ಕಾರ್ಯಕರ್ತೆಯರನ್ನು ನಿಯೋಜಿಸಿ ಕೊಳ್ಳಲಾಗುತ್ತಿದೆ, ಅಷ್ಟಕ್ಕೂ ಇತ್ತೀಚೆಗೆ ಮತದಾರರ ಗುರ್ತಿನ ಚೀಟಿ ಪರಿಶೀಲನೆಗೆ ತೊಡಗಿಸಿರುವುದರಿಂದ ಅಂಗನವಾಡಿ ಗಳಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಕಾರ್ಯಕರ್ತೆಯರೆಲ್ಲರೂ ಮಹಿಳೆಯರು ಆಗಿದ್ದರಿಂದ ಕುಟುಂಬದ ಜವಾಬ್ದಾರಿ ಅವರ ಮೇಲಿರುತ್ತದೆ. ಕಾರಣ ಮಾನವೀಯ ದೃಷ್ಟಿಕೋನದಿಂದ ಅವಲೋಕಿಸಿ ಕೂಡಲೇ ಬಿಎಲ್‌ಒ ಜವಾಬ್ದಾರಿಯಿಂದ ತೆರೆವುಗೊಳಿಸುವಂತೆ ಆದೇಶಿಸಲು ಮನವಿ ಮಾಡಿದರು.

ಛಾಯಾ ದೇಸೂರ ಮಾತನಾಡಿ, ಮಾತೃ ಇಲಾಖೆಯ ಕೆಲಸ ಹೊರತುಪಡಿಸಿ ಬೇರೊಂದು ಇಲಾಖೆಯಲ್ಲಿ ಜವಾಬ್ದಾರಿ ನಿಭಾಯಿಸುವಂತಿಲ್ಲ. ಈ ಕುರಿತು ರಾಜ್ಯ ಸರ್ಕಾರದ ಸ್ಪಷ್ಟ ಆದೇಶವಿದ್ದರೂ ಸಹ ಇಂದಿಗೂ ಅದು ಪಾಲನೆಯಾಗುತ್ತಿಲ್ಲ. ಕೇಂದ್ರ ಸರ್ಕಾರವೂ ಸಹ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಳ್ಳದಂತೆ ಸೂಚನೆ ನೀಡಿದೆ. ಆದಾಗ್ಯೂ ಸಹ ನಮ್ಮನ್ನು ಎಲ್ಲೆಂದರಲ್ಲಿ ನಿಯೋಜನೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ತಹಶೀಲ್ದಾರ್‌ ಶರಣಮ್ಮ ಕಾರಿ ಮೇಲಾಧಿಕಾರಿಗಳ ಗಮನಕ್ಕೆ ತರವುದಾಗಿ ತಿಳಿಸಿದರು. ಅಂಗನವಾಡಿ ಕಾರ್ಯಕರ್ತೆಯರಾದ ಸುಧಾ ಅಂಗಡಿ, ಮಂಜುಳಾ ಪಾಟೀಲ, ಅನಿತಾ ಮೋಟೆಬೆನ್ನೂರ, ಕುಸುಮಾ ತೆವರಿ, ಚನ್ನಮ್ಮ ಹಿರೇಮಠ, ಹನುಮವ್ವ ಬಾಣಾಪುರ, ನಿರ್ಮಾಲ ಕರ್ಮೂಡಿ, ಶಿಲ್ಪಾ ಬನ್ನಿಹಟ್ಟಿ, ಹನುಮಕ್ಕ ಗುರೇಮಟ್ಟಿ, ಫಾತೀಮಾ ಹುಬ್ಬಳ್ಳಿ, ಬಸವಣ್ಣೆವ್ವ ಮುಳಗುಂದ, ರೇಣುಕಾ ದೀಪದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

basavaraj horatti

ವಿಧಾನಪರಿಷತ್ ಸಭಾಪತಿ‌ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ

ಬಜರಂಗದಳದ ಬಗ್ಗೆ ಮಾತಾನಾಡುವ ನೈತಿಕ ಹಕ್ಕು ಇವರಿಗಿಲ್ಲ: ರಘು ಸಕಲೇಶಪುರ ವಾಗ್ದಾಳಿ

ಬಜರಂಗದಳದ ಬಗ್ಗೆ ಮಾತಾನಾಡುವ ನೈತಿಕ ಹಕ್ಕು ಇವರಿಗಿಲ್ಲ: ರಘು ಸಕಲೇಶಪುರ ವಾಗ್ದಾಳಿ

jameer-ak

ರಾಷ್ಟ್ರಗೀತೆಯನ್ನು ನಮಗೆ ಮುತಾಲಿಕ್ ಹೇಳಿ ಕೊಡಬೇಕಾ?: ಜಮೀರ್ ಅಹ್ಮದ್ ಕಿಡಿ

Ashok Gehlot questions PM Modi’s ‘silence on communal clashes

ದೇಶದಲ್ಲಿನ ಕೋಮು ಘರ್ಷಣೆಗಳ ಬಗ್ಗೆ ಪ್ರಧಾನಿ ಮೌನವೇಕೆ?: ಅಶೋಕ್ ಗೆಹ್ಲೋಟ್ ಪ್ರಶ್ನೆ

ಗರುಡ ಜೊತೆ ಐಂದ್ರಿತಾ ಎಂಟ್ರಿ; ಮೇ 20ಕ್ಕೆ ಚಿತ್ರ ತೆರೆಗೆ

ಗರುಡ ಜೊತೆ ಐಂದ್ರಿತಾ ಎಂಟ್ರಿ; ಮೇ 20ಕ್ಕೆ ಚಿತ್ರ ತೆರೆಗೆ

ಒಬಿಸಿಗಳಿಗೆ ಆದ್ಯತೆ ನೀಡಿದ್ರೂ; ನ್ಯಾಯ ಸಿಗೋದು ಅನುಮಾನ

ಒಬಿಸಿಗಳಿಗೆ ಆದ್ಯತೆ ನೀಡಿದ್ರೂ; ನ್ಯಾಯ ಸಿಗೋದು ಅನುಮಾನ

ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಕಾರು ಕದ್ದವ ಮೂರು ತಿಂಗಳ ಬಳಿಕ ಸಿಕ್ಕಿ ಬಿದ್ದಿದ್ದೇಗೆ ?

ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಕಾರು ಕದ್ದವ ಮೂರು ತಿಂಗಳ ಬಳಿಕ ಸಿಕ್ಕಿ ಬಿದ್ದಿದ್ದೇಗೆ ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18social

ಶಿಕ್ಷಣದಿಂದ ಮಾತ್ರ ಸಮಾಜ ಅಭಿವೃದ್ದಿ

12

ಆದರ್ಶ ದಂಪತಿಗಳಾಗಿ ಮಾದರಿ ಜೀವನ ಸಾಗಿಸಿ

ಬಜರಂಗದಳದ ಬಗ್ಗೆ ಮಾತಾನಾಡುವ ನೈತಿಕ ಹಕ್ಕು ಇವರಿಗಿಲ್ಲ: ರಘು ಸಕಲೇಶಪುರ ವಾಗ್ದಾಳಿ

ಬಜರಂಗದಳದ ಬಗ್ಗೆ ಮಾತಾನಾಡುವ ನೈತಿಕ ಹಕ್ಕು ಇವರಿಗಿಲ್ಲ: ರಘು ಸಕಲೇಶಪುರ ವಾಗ್ದಾಳಿ

mayor

ಎಸ್ಸೆಸ್ಸೆಂ ಹೇಳಿಕೆ ಹಾಸ್ಯಾಸ್ಪದ: ಮೇಯರ್‌

ಒಬಿಸಿಗಳಿಗೆ ಆದ್ಯತೆ ನೀಡಿದ್ರೂ; ನ್ಯಾಯ ಸಿಗೋದು ಅನುಮಾನ

ಒಬಿಸಿಗಳಿಗೆ ಆದ್ಯತೆ ನೀಡಿದ್ರೂ; ನ್ಯಾಯ ಸಿಗೋದು ಅನುಮಾನ

MUST WATCH

udayavani youtube

ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?

udayavani youtube

ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಬಾಡ್ಮಿಂಟನ್ ತಾರೆಯರು

udayavani youtube

ಅಮೃತಕಾಲದಲ್ಲಿ ದೇಶ ವಿಶ್ವಗುರು – ನಿರ್ಮಲಾ ಸೀತಾರಾಮನ್‌

udayavani youtube

ದೇಶದಲ್ಲಿ ಭ್ರಷ್ಟಾಚಾರ ಬಿತ್ತಿದ್ದು, ಬೆಳೆಸಿದ್ದು ಕಾಂಗ್ರೆಸ್ ಪಕ್ಷ : ಸಿ.ಟಿ.ರವಿ

udayavani youtube

ಪಿಲಿ ಬತ್ತ್ಂಡ್‌ ಪಿಲಿ… ಬಲಿಪುಲೇ… ಕಾಪುವಿನಲ್ಲಿ ದ್ವೈ ವಾರ್ಷಿಕ ಪಿಲಿಕೋಲ…

ಹೊಸ ಸೇರ್ಪಡೆ

basavaraj horatti

ವಿಧಾನಪರಿಷತ್ ಸಭಾಪತಿ‌ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ

18social

ಶಿಕ್ಷಣದಿಂದ ಮಾತ್ರ ಸಮಾಜ ಅಭಿವೃದ್ದಿ

12

ಆದರ್ಶ ದಂಪತಿಗಳಾಗಿ ಮಾದರಿ ಜೀವನ ಸಾಗಿಸಿ

ಬಜರಂಗದಳದ ಬಗ್ಗೆ ಮಾತಾನಾಡುವ ನೈತಿಕ ಹಕ್ಕು ಇವರಿಗಿಲ್ಲ: ರಘು ಸಕಲೇಶಪುರ ವಾಗ್ದಾಳಿ

ಬಜರಂಗದಳದ ಬಗ್ಗೆ ಮಾತಾನಾಡುವ ನೈತಿಕ ಹಕ್ಕು ಇವರಿಗಿಲ್ಲ: ರಘು ಸಕಲೇಶಪುರ ವಾಗ್ದಾಳಿ

jameer-ak

ರಾಷ್ಟ್ರಗೀತೆಯನ್ನು ನಮಗೆ ಮುತಾಲಿಕ್ ಹೇಳಿ ಕೊಡಬೇಕಾ?: ಜಮೀರ್ ಅಹ್ಮದ್ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.