Udayavni Special

ಅಗ್ನಿ ಆಕಸ್ಮಿಕ ತಡೆಗೆ ಮುಂಜಾಗ್ರತೆ ವಹಿಸಿ

ರಹೀಂ ನಗರ ಗುಡಿಸಲುಗಳಿಗೆ ಶೀಟ್ ಹಾಕಿಸುವ ವ್ಯವಸ್ಥೆ ಮಾಡಿ: ರಘುಮೂರ್ತಿ

Team Udayavani, Sep 16, 2019, 4:06 PM IST

Sepctember-22

ಚಳ್ಳಕೆರೆ: ರಹೀಂನಗರದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ ಸ್ಥಳಕ್ಕೆ ಶಾಸಕ ಟಿ. ರಘುಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚಳ್ಳಕೆರೆ: ಅಗ್ನಿ ಆಕಸ್ಮಿಕ ನಡೆಯದಂತೆ ಮುಂಜಾಗ್ರತೆ ವಹಿಸಬೇಕು. ವಿಶೇಷವಾಗಿ ರಹೀಂನಗರ ವ್ಯಾಪ್ತಿಯಲ್ಲಿ ತೆಂಗಿನ ಗರಿಯ ಗುಡಿಸಲುಗಳ ಸಂಖ್ಯೆ ಹೆಚ್ಚಿದ್ದು, ಗರಿಗಳನ್ನು ತೆರವುಗೊಳಿಸಿ ಶೀಟ್ ಹಾಕುವ ವ್ಯವಸ್ಥೆ ಆಗಬೇಕು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.

ರಹೀಂ ನಗರದ ನಾಗವೇಣಿ ಶ್ರೀನಿವಾಸ್‌ ಎಂಬುವವರ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಬಟ್ಟೆ, ಆಹಾರ ಪದಾರ್ಥ ಅಗ್ನಿಗೆ ಆಹುತಿಯಾಗಿತ್ತು. ಭಾನುವಾರ ಸ್ಥಳ ಪರಿಶೀಲನೆ ನಡೆಸಿದ ಶಾಸಕರು, ಈ ಭಾಗದ ಗುಡಿಸಲು ನಿವಾಸಿಗಳು ಶೆಡ್‌ ನಿರ್ಮಿಸಿಕೊಳ್ಳುವಂತೆ ಸೂಚಿಸಬೇಕೆಂದು ನಗರಸಭೆ ಪೌರಾಯುಕ್ತ ಜೆ.ಟಿ. ಹನುಮಂತರಾಜು ಅವರಿಗೆ ತಿಳಿಸಿದರು. ಅಗ್ನಿ ಅನಾಹುತದಲ್ಲಿ ಸಂತ್ರಸ್ತರಾದ ನಾಗವೇಣಿ ಶ್ರೀನಿವಾಸ್‌ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದರಲ್ಲದೆ ಸರ್ಕಾರದಿಂದ ನಿವೇಶನ ಕೊಡಿಸುವುದಾಗಿ ಭರವಸೆ ನೀಡಿದರು.

ನಗರಸಭೆ ಸದಸ್ಯೆ ಸುಜಾತಾ ಪಾಲಯ್ಯ ಮಾತನಾಡಿ, ರಹೀಂನಗರ ವ್ಯಾಪ್ತಿಯಲ್ಲಿರುವ ಗುಡಿಸಲು ವ್ಯಾಪ್ತಿಯ ಜನರಿಗೆ ಈಗಾಗಲೇ ಹಲವಾರು ಬಾರಿ ಮನವಿ ಮಾಡಲಾಗಿದೆ. ಈ ಹಿಂದೆ ಒಂದೇ ಹಂತದಲ್ಲಿ 5 ರಿಂದ 10 ಗುಡಿಸಲುಗಳು ಬೆಂಕಿಗೆ ಆಹುತಿಯಾಗಿವೆ. ಶಾಸಕರ ಅನುದಾನದಲ್ಲಿ ಇಲ್ಲಿರುವ ಗುಡಿಸಲು ವಾಸಿಗಳಿಗೆ ಶೆಡ್‌ ನಿರ್ಮಿಸಿಕೊಡುವಂತೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಶಾಸಕ ಟಿ. ರಘುಮೂರ್ತಿ, ಈ ಭಾಗದ ರಸ್ತೆ ಅಗಲೀಕರಣಕ್ಕೆ ಸೂಚನೆ ನೀಡಿದರು. ಕೇವಲ 7 ಮೀಟರ್‌ನಷ್ಟು ರಸ್ತೆ ಅಗಲೀಕರಣಗೊಳಿಸಲಾಗುತ್ತಿದ್ದು ಸಾರ್ವಜನಿಕರು ಸಹಕರಿಸುವಂತೆ ಕೋರಿದರು.

ಪೌರಾಯುಕ್ತ ಜೆ.ಟಿ. ಹನುಮಂತರಾಜು ಮಾತನಾಡಿ, ಸೋಮವಾರವೇ ಈ ರಸ್ತೆಯ ಎರಡೂ ಬದಿಗಳಲ್ಲಿ ಮತ್ತೂಮ್ಮೆ ಮಾರ್ಕಿಂಗ್‌ ಮಾಡಿ ರಸ್ತೆ ಅಗಲೀಕರಣ ಆರಂಭಿಸಲಾಗುವುದು. ಈಗಾಗಲೇ ರಸ್ತೆ ಬದಿಯ ಎರಡೂ ಬದಿಯ ನಿವಾಸಿಗಳಿಗೆ ಅಗಲೀಕರಣದ ಬಗ್ಗೆ ಮಾಹಿತಿ ನೀಡಲಾಗಿದೆ. 9 ಮೀಟರ್‌ ಅಗಲೀಕರಣ ಮಾಡಬೇಕಿತ್ತು. ಆದರೆ ಸಾರ್ವಜನಿಕರ ಮನವಿ ಮೇರೆಗೆ ಶಾಸಕರು 7 ಮೀಟರ್‌ ಮಾಡುವಂತೆ ನಿರ್ದೇಶನ ನೀಡಿದ್ದು, ಅದನ್ನು ಪಾಲಿಸುವುದಾಗಿ ತಿಳಿಸಿದರು.

ಜಿಪಂ ಮಾಜಿ ಸದಸ್ಯ ಬಾಬು ರೆಡ್ಡಿ, ನಗರಸಭಾ ಸದಸ್ಯರಾದ ಬಿ.ಟಿ. ರಮೇಶ್‌ ಗೌಡ, ಟಿ. ಮಲ್ಲಿಕಾರ್ಜುನ, ವೈ. ಪ್ರಕಾಶ್‌, ವಿರೂಪಾಕ್ಷಿ, ಮಾಜಿ ಸದಸ್ಯ ಎಸ್‌. ಮುಜೀಬುಲ್ಲಾ, ಕಾಂಗ್ರೆಸ್‌ ಮುಖಂಡ ಪಾಲಯ್ಯ, ಗ್ರಾಮಲೆಕ್ಕಿಗ ರಾಜೇಶ್‌, ನಗರಸಭೆ ಸಮನ್ವಯಾಧಿಕಾರಿ ಪಿ. ಪಾಲಯ್ಯ, ಸ್ವಾಮಿ ಮತ್ತಿತರರು ಇದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ವರದಿ ಬರುವ ಮುನ್ನವೇ ಕ್ವಾರಂಟೈನ್ ನಿಂದ ಬಿಡುಗಡೆ: ಬೆಳಗಾವಿಯ ಇಬ್ಬರಿಗೆ ಪಾಸಿಟಿವ್ ಶಂಕೆ

ವರದಿ ಬರುವ ಮುನ್ನವೇ ಕ್ವಾರಂಟೈನ್ ನಿಂದ ಬಿಡುಗಡೆ: ಬೆಳಗಾವಿಯ ಇಬ್ಬರಿಗೆ ಪಾಸಿಟಿವ್ ಶಂಕೆ

ಕೋವಿಡ್‌ ತಂದ ಆತಂಕ : ಶಸ್ತ್ರಚಿಕಿತ್ಸೆಯಿಂದ ಸಾವಿನ ಪ್ರಮಾಣ ಹೆಚ್ಚು?

ಕೋವಿಡ್‌ ತಂದ ಆತಂಕ : ಶಸ್ತ್ರಚಿಕಿತ್ಸೆಯಿಂದ ಸಾವಿನ ಪ್ರಮಾಣ ಹೆಚ್ಚು?

ರೋಗವಿದೆ, ಲಕ್ಷಣವಿಲ್ಲ! ; ಶೇ. 28ರಷ್ಟು ರೋಗಿಗಳಲ್ಲಿ ಕಂಡು ಬಂದ ಹೊಸ ವಿಚಾರ: ಐಸಿಎಂಆರ್‌

ರೋಗವಿದೆ, ಲಕ್ಷಣವಿಲ್ಲ! ; ಶೇ. 28ರಷ್ಟು ರೋಗಿಗಳಲ್ಲಿ ಕಂಡು ಬಂದ ಹೊಸ ವಿಚಾರ: ಐಸಿಎಂಆರ್‌

ನಾಯಕತ್ವದಲ್ಲಿ ನನ್ನ ಬೆಳವಣಿಗೆಗೆ ಧೋನಿಯೇ ಕಾರಣ ಎಂದ ವಿರಾಟ್

ನಾಯಕತ್ವದಲ್ಲಿ ನನ್ನ ಬೆಳವಣಿಗೆಗೆ ಧೋನಿಯೇ ಕಾರಣ ಎಂದ ವಿರಾಟ್

ಕೋವಿಡ್‌-19 ಕಾಟದ ಮಧ್ಯೆ : ಚಿಲಿಯಲ್ಲಿ ನೀರಿಗೆ ಪರದಾಟ

ಕೋವಿಡ್‌-19 ಕಾಟದ ಮಧ್ಯೆ : ಚಿಲಿಯಲ್ಲಿ ನೀರಿಗೆ ಪರದಾಟ

ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಗೆ ಸಾಮ್ಯತೆಯಿದೆ: ಅಂಪಾಯರ್ ಇಯಾನ್ ಗೂಲ್ಡ್

ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಗೆ ಸಾಮ್ಯತೆಯಿದೆ: ಅಂಪಾಯರ್ ಇಯಾನ್ ಗೂಲ್ಡ್

ಯುರೋಪ್‌: ಲಾಕ್‌ಡೌನ್‌ ಸಡಿಲ: ಜರ್ಮನಿಯಲ್ಲಿ ಫ‌ುಟ್ಬಾಲ್‌ ಶುರು

ಯುರೋಪ್‌: ಲಾಕ್‌ಡೌನ್‌ ಸಡಿಲ: ಜರ್ಮನಿಯಲ್ಲಿ ಫ‌ುಟ್ಬಾಲ್‌ ಶುರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಸ್ತೆ ಕಾಮಗಾರಿಗೆ ಭೂಮಿಪೂಜೆ

ರಸ್ತೆ ಕಾಮಗಾರಿಗೆ ಭೂಮಿಪೂಜೆ

ವರದಿ ಬರುವ ಮುನ್ನವೇ ಕ್ವಾರಂಟೈನ್ ನಿಂದ ಬಿಡುಗಡೆ: ಬೆಳಗಾವಿಯ ಇಬ್ಬರಿಗೆ ಪಾಸಿಟಿವ್ ಶಂಕೆ

ವರದಿ ಬರುವ ಮುನ್ನವೇ ಕ್ವಾರಂಟೈನ್ ನಿಂದ ಬಿಡುಗಡೆ: ಬೆಳಗಾವಿಯ ಇಬ್ಬರಿಗೆ ಪಾಸಿಟಿವ್ ಶಂಕೆ

31-May-09

ಗ್ರಾಪಂಗಳಿಗೆ ನಾಮನಿರ್ದೇಶನ ಮಾಡಿದರೆ ಹೋರಾಟ: ಶಾಸಕ ಗಣೇಶ

31-May-08

ಸ್ವಗ್ರಾಮಕ್ಕೆ ತೆರಳಿದ 639 ಕಾರ್ಮಿಕರು

31-May-07

ಹೋಂ ಕ್ವಾರಂಟೈನ್‌ ವಿರೋಧಿಸುವಂತಿಲ್ಲ

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

ರಸ್ತೆ ಕಾಮಗಾರಿಗೆ ಭೂಮಿಪೂಜೆ

ರಸ್ತೆ ಕಾಮಗಾರಿಗೆ ಭೂಮಿಪೂಜೆ

ವರದಿ ಬರುವ ಮುನ್ನವೇ ಕ್ವಾರಂಟೈನ್ ನಿಂದ ಬಿಡುಗಡೆ: ಬೆಳಗಾವಿಯ ಇಬ್ಬರಿಗೆ ಪಾಸಿಟಿವ್ ಶಂಕೆ

ವರದಿ ಬರುವ ಮುನ್ನವೇ ಕ್ವಾರಂಟೈನ್ ನಿಂದ ಬಿಡುಗಡೆ: ಬೆಳಗಾವಿಯ ಇಬ್ಬರಿಗೆ ಪಾಸಿಟಿವ್ ಶಂಕೆ

ಕೋವಿಡ್‌ ತಂದ ಆತಂಕ : ಶಸ್ತ್ರಚಿಕಿತ್ಸೆಯಿಂದ ಸಾವಿನ ಪ್ರಮಾಣ ಹೆಚ್ಚು?

ಕೋವಿಡ್‌ ತಂದ ಆತಂಕ : ಶಸ್ತ್ರಚಿಕಿತ್ಸೆಯಿಂದ ಸಾವಿನ ಪ್ರಮಾಣ ಹೆಚ್ಚು?

ಬಹುನಿರೀಕ್ಷಿತ ಕೆಜಿಎಫ್-2ನಲ್ಲಿ ಮತ್ತೊಬ್ಬ ಹಿರಿಯ ನಟಿ ಎಂಟ್ರಿ

ಬಹುನಿರೀಕ್ಷಿತ ಕೆಜಿಎಫ್-2ನಲ್ಲಿ ಮತ್ತೊಬ್ಬ ಹಿರಿಯ ನಟಿ ಎಂಟ್ರಿ

ರೋಗವಿದೆ, ಲಕ್ಷಣವಿಲ್ಲ! ; ಶೇ. 28ರಷ್ಟು ರೋಗಿಗಳಲ್ಲಿ ಕಂಡು ಬಂದ ಹೊಸ ವಿಚಾರ: ಐಸಿಎಂಆರ್‌

ರೋಗವಿದೆ, ಲಕ್ಷಣವಿಲ್ಲ! ; ಶೇ. 28ರಷ್ಟು ರೋಗಿಗಳಲ್ಲಿ ಕಂಡು ಬಂದ ಹೊಸ ವಿಚಾರ: ಐಸಿಎಂಆರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.