3.16 ಕೋಟಿ ಮೌಲ್ಯದ ನಕಲಿ ನೋಟು ಪತ್ತೆ


Team Udayavani, Aug 18, 2019, 3:17 PM IST

CN-TDY-1

ಚಾಮರಾಜನಗರ: ತಾಲೂಕಿನ ಚಿಕ್ಕಹೊಳೆ- ಸುವರ್ಣಾವತಿ ಬಳಿ ಶುಕ್ರವಾರ ಸಂಜೆ 2 ಸಾವಿರ ಮುಖಬೆಲೆಯ 3.16 ಕೋಟಿ ರೂ. ಮೊತ್ತದ ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ನಕಲಿ ನೋಟು ಸಾಗಾಣಿಕೆಯಲ್ಲಿ ಬೆಂಗಳೂರು-ತಮಿಳುನಾಡು ಸಂಪರ್ಕ ಹೊಂದಿರುವ ತಂಡ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಬೆಂಗಳೂರಿನಿಂದ ಚಾಮರಾಜನಗರ ಮಾರ್ಗ ತಮಿಳುನಾಡಿಗೆ ಸಾಗಿಸುತ್ತಿದ್ದ 3.16 ಕೋಟಿ ಮೌಲ್ಯದ, ಕಲರ್‌ ಜೆರಾಕ್ಸ್‌ ಮಾಡಿದ 2 ಸಾವಿರ ರೂ. ಮುಖಬೆಲೆಯ, ನಕಲಿ ನೋಟುಗಳನ್ನು ತಾಲಕ್ಕಹೊಳೆ-ಅಟ್ಟುಗುಳಿಪುರದ ಬಳಿ ಶುಕ್ರವಾರ ಸಂಜೆ ಪೂರ್ವ ಠಾಣೆ ಪೊಲೀಸರು ವಶಪಡಿಸಿಕೊಂಡು ಒಬ್ಬನನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ: ಬೊಲೆರೋ ಪಿಕಪ್‌ ವಾಹನದಲ್ಲಿ ನಕಲಿ ನೋಟುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೂರ್ವ ಪೊಲೀಸ್‌ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ಬಿ. ಪುಟ್ಟಸ್ವಾಮಿ ನೇತೃತ್ವದ ತಂಡ ಶುಕ್ರವಾರ ಮಧ್ಯಾಹ್ನ ಕಾರ್ಯಾಚರಣೆ ನಡೆಸಿತು. ಚಿಕ್ಕಹೊಳೆ ಸುವರ್ಣಾವತಿ ಜಲಾಶಯದ ಹತ್ತಿರ ವಾಹನಗಳ ತಪಾಸಣೆ ಮಾಡಲಾಯಿತು. ಈ ವೇಳೆ ಕೆ.ಎ. 05 ಎಜೆ 0374 ನಂಬರಿನ ಬೊಲೆರೋ ಪಿಕಪ್‌ ವಾಹನ ತಪಾಸಣೆ ಮಾಡಿದಾಗ ನಕಲಿ ನೋಟುಗಳು ಕಂಡು ಬಂದವು.

ಬೊಲೆರೋ ವಾಹನದಲ್ಲಿ ನೋಟು ಸಾಗಣೆ: ಬೊಲೆರೋ ಪಿಕಪ್‌ನ ಕೆಳಭಾಗದಲ್ಲಿ ರಹಸ್ಯ ಫ್ಲಾಟ್ಫಾರಂ ಮಾಡಿ ಅದರೊಳಗೆ ಸಾಗಿಸಲಾಗುತ್ತಿತ್ತು. ಪೊಲೀಸರು ಕೂಲಂಕಷವಾಗಿ ತಪಾಸಣೆ ಮಾಡಿದಾಗ ನಕಲಿ ನೋಟುಗಳನ್ನು ಇಟ್ಟಿರುವುದು ಪತ್ತೆಯಾಯಿತು. ಎರಡು ಸಾವಿರ ರೂ. ಮುಖಬೆಲೆಯ 3.16 ಕೋಟಿ ರೂ. ಮೌಲ್ಯದ ನೋಟುಗಳನ್ನು ಇದರಲ್ಲಿ ಸಾಗಿಸಲಾಗುತ್ತಿತ್ತು. ಈ ನೋಟುಗಳನ್ನು ತಮಿಳುನಾಡಿಗೆ ಸಾಗಿಸಿ, ಅಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಚಲಾವಣೆಗೆ ಬಿಡುವ ಉದ್ದೇಶವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಒಂದೇ ಸಂಖ್ಯೆಯ ನೋಟುಗಳು!: ಇವು ಮುದ್ರಣ ಮಾಡಿದ ಖೋಟಾ ನೋಟುಗಳಲ್ಲ, ಬದಲಾಗಿ ಕಲರ್‌ ಜೆರಾಕ್ಸ್‌ ಮೆಷೀನಿನಲ್ಲಿ ಎರಡು ಸಾವಿರ ರೂ. ನೋಟನ್ನು ಜೆರಾಕ್ಸ್‌ ಮಾಡಲಾದ ನಕಲಿ ನೋಟುಗಳು. ಹಾಗಾಗಿ ಎಲ್ಲವೂ ಒಂದೇ ಸಂಖ್ಯೆಯನ್ನು ಹೊಂದಿವೆ!

ಬೇರೆ ಬೇರೆ ನಂ. ಪ್ಲೇಟ್‌ಗಳು: ಬೆಂಗಳೂರಿನಿಂದ ತಮಿಳುನಾಡಿಗೆ ಸಾಗಿಸುವಾಗ, ಚೆಕ್‌ ಪೋಸ್ಟ್‌ ಗಳಲ್ಲಿ ಅನುಮಾನ ಬಂದು, ಮುಂದಿನ ಚೆಕ್‌ಪೋಸ್ಟ್‌ಗೆ ಮಾಹಿತಿ ನೀಡಿದರೆ ತಪ್ಪಿಸಿಕೊಳ್ಳುವ ಸಲುವಾಗಿ ಬೇರೆ ಬೇರೆ ಸಂಖ್ಯೆಯ ನಂಬರ್‌ ಪ್ಲೇಟ್‌ಗಳನ್ನು ಈ ಪಿಕಪ್‌ ವಾಹನದಲ್ಲಿ ಬದಲಿಸಲಾಗುತ್ತಿತ್ತು! ಹೀಗಾಗಿ ವಾಹನದಲ್ಲಿ ಎರಡು ಭಿನ್ನ ಸಂಖ್ಯೆಯ, ಬೇರೆ ವಿನ್ಯಾಸವುಳ್ಳ ಮೂರು ಬಗೆಯ ನೇಮ್‌ ಪ್ಲೇಟ್‌ಗಳು ದೊರೆತಿವೆ! (ಕೆ.ಎ. 05 ಎಜೆ 0374, ಕೆ.ಎ. 04 ಎಜೆ 0384 ನೇಮ್‌ಪ್ಲೇಟ್‌ಗಳನ್ನು ಬಳಸಲಾಗಿದೆ. ಇದರಲ್ಲಿ 0384 ರಿಂದ ಅಂತ್ಯವಾಗುವ ಪ್ಲೇಟ್ ಅನ್ನು ಎರಡು ಬೇರೆ ವಿನ್ಯಾಸದಲ್ಲಿ ಬರೆಯಲಾಗಿದೆ!

ಚಾಲಕನ ಬಂಧನ: ಪ್ರಕರಣದ ಸಂಬಂಧ ಬೊಲೆರೋ ಚಾಲಕ ಕಾರ್ತಿಕ್‌ (23) ಅಲಿಯಾಸ್‌ ಕರಡಿ ಎಂಬಾತನನ್ನು ಬಂಧಿಸಲಾಗಿದೆ. ವಾಹನದಲ್ಲಿದ್ದ ಇನ್ನೋರ್ವ ಪರಾರಿಯಾಗಿದ್ಧಾನೆ. ಈತ ಮೂಲತಃ ಮೈಸೂರು ಜಿಲ್ಲೆಯ ಸರಗೂರು ಪಟ್ಟಣದವನು. ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣದಲ್ಲಿ ಕ್ಷೌರಿಕ ವೃತ್ತಿ ನಡೆಸುತ್ತಿದ್ಧಾನೆ. ತಾನು ಡ್ರೈವಿಂಗ್‌ ಕಲಿತಿದ್ದು, ಬೆಂಗಳೂರಿನಿಂದ ವಾಹನ ಮಾಲೀಕರು ಕರೆದಾಗ ಚಾಲಕನಾಗಿ ಬಾಡಿಗೆಗೆ ಹೋಗುತ್ತಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.

ಕಾರ್ಯಾಚರಣೆಯಲ್ಲಿ ಪೂರ್ವ ಪೊಲೀಸ್‌ ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ ಬಿ. ಪುಟ್ಟಸ್ವಾಮಿ, ಎಎಸ್‌ಐ ಮಾದೇಗೌಡ, ಮುಖ್ಯಪೇದೆಗಳಾದ ನಾಗನಾಯ್ಕ, ಶಾಂತರಾಜು, ಚಂದ್ರ, ಪೇದೆಗಳಾದ ಬಂಟಪ್ಪ, ನಿಂಗರಾಜು, ಅಶೋಕ್‌, ವೆಂಕಟೇಶ್‌, ಸುರೇಶ, ಮಹೇಶ್‌ ಮತ್ತು ಚಾಲಕ ಮಹೇಶ್‌ ಪಾಲ್ಗೊಂಡಿದ್ದರು.

ನಕಲಿ ನೋಟು ಜಾಲದ ಶಂಕೆ:

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ್‌ ಮಾತನಾಡಿ, ಈ ದೊರೆತಿರು ಪ್ರತಿ ನೋಟು ಕೂಡ ಕಲರ್‌ ಜೆರಾಕ್ಸ್‌ ಮಾಡಿದವಾಗಿವೆ. ಪ್ರಕರಣದಿಂದಾಗಿ ನಕಲಿ ನೋಟುಗಳನ್ನು ತಯಾರಿಸುವ ಜಾಲ ಇದರ ಹಿನ್ನೆಲೆಯಲ್ಲಿ ಇರಬಹುದೆಂಬ ಶಂಕೆಯಿದೆ. ಬಂಧಿತ ಚಾಲಕನಿಂದ ನಮಗೆ ಹೆಚ್ಚಿನ ಮಾಹಿತಿ ದೊರೆತಿಲ್ಲ. ವಾಹನದ ಬಾಡಿಗೆಗೆ ಕರೆದಿದ್ದರು ಹೋಗಿದ್ದೆ. ವಾಹನದಲ್ಲೇನಿದೆ ಎಂದು ನನಗೆ ಗೊತ್ತಿರಲಿಲ್ಲ ಎನ್ನುತ್ತಿದ್ದಾನೆ. ಜೊತೆಯಲ್ಲಿದ್ದಾತನ ಬಗ್ಗೆಯೂ ನನಗೆ ಗೊತ್ತಿಲ್ಲ ಎನ್ನುತ್ತಿದ್ದಾನೆ. ನಾನಾ ಬಗೆಯ ತನಿಖೆಗಳನ್ನು ನಡೆಸಿ ಇದರ ಹಿಂದಿರುವ ವ್ಯಕ್ತಿಗಳನ್ನು ಜಾಲವನ್ನು ಪತ್ತೆ ಹಚ್ಚಲಾಗುವುದು ಎಂದರು. ನಕಲಿ ನೋಟಿನ ಹಿಂದೆ ದೊಡ್ಡ ಜಾಲದ ಶಂಕೆಯಿದೆ. ತನಿಖೆ ಚುರುಕುಗೊಳಿಸಿ ಹಿಂದಿರುವ ಜಾಲವನ್ನು ಭೇದಿಸಿ, ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಲಾಗುವುದು ಎಂದು ಹೇಳಿದರು.
● ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

ಚಾಮರಾಜನಗರ ಕ್ಷೇತ್ರದ ಜನರ ಧ್ವನಿಯಾಗುವೆ : ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌

ಚಾಮರಾಜನಗರ ಕ್ಷೇತ್ರದ ಜನರ ಧ್ವನಿಯಾಗುವೆ : ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.