3.5 ಕೋಟಿ ರಸ್ತೆ ಕಾಮಗಾರಿಗೆ ಚಾಲನೆ

Team Udayavani, Sep 4, 2019, 11:20 AM IST

ಚಾಮರಾಜನಗರ: ತಾಲೂಕಿನ ಪುಣಜನೂರು-ಬೇಡಗುಳಿ ರಸ್ತೆ ಸರಪಳಿ, ಲೋಕೋಪಯೋಗಿ ಇಲಾಖೆ, ಬಂದರು, ಒಳನಾಡು ಜಲಸಾರಿಗೆ ವತಿಯಿಂದ 3. 50 ಕೋಟಿ.ರೂ ವೆಚ್ಚದಲ್ಲಿ ನಿವಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಾಜಿ ಸಚಿವ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕರು, ಪುಣಜನೂರು ಮುಖ್ಯರಸ್ತೆ ಯಿಂದ ಬೇಡಗುಳಿಗೆ ಹೋಗುವ 3.20 ಕಿ.ಮೀ. ನಿಂದ 8.00 ಕಿ.ಮೀ ವರೆಗಿನ ರಸ್ತೆಯ ಅಭಿವೃದ್ಧಿಗೆ ಈಗಾಗಲೇ 3.50 ಕೋಟಿ.ರೂಗಳು ಬಿಡುಗಡೆಯಾಗಿದೆ. ಭೂಮಿ ಪೂಜೆ ನೆರವೇರಿಸಲಾಗಿದೆ. ಈ ರಸ್ತೆ ಅಭಿವೃದ್ಧಿಯಿಂದ ಈ ಭಾಗದ ಜನರ ಸಂಚಾರ ಸುಗಮವಾಗಲಿದೆ ಎಂದರು.

ಗ್ರಾಮಸ್ಥರು ಇದಕ್ಕೆ ಕೈ ಜೋಡಿಸಿ ತಮ್ಮ ಗ್ರಾಮಗಳ ರಸ್ತೆ,ಚರಂಡಿ ಕಾಮಗಾರಿಗಳನ್ನು ಮುಂದೆ ನಿಂತು ನಿರ್ಮಿಸಿಕೊಳ್ಳಬೇಕು ಗುತ್ತಿಗೆದಾರರರು ಗುಣಮಟ್ಟದಿಂದ ಬಹು ವರ್ಷದವರೆಗೆ ಉಪಯೋಗಕ್ಕೆ ಬರುವಂತೆ ಕಾಮಗಾರಿ ಮಾಡಬೇಕೆಂದು ತಿಳಿಸಿದರು.

ಪುಣಜನೂರು – ಬೇಡಗುಳಿ ಈ ಭಾಗದಲ್ಲಿ ನೆನೆಗುದಿಗೆ ಬಿದ್ದಿದ್ದ ಸೇತುವೆ ಸಂಪರ್ಕಗಳಿಲ್ಲದೆ ಜನರು ಒಂದು ಕಡೆ ಯಿಂದ ಮತ್ತೂಂದು ಕಡೆಗೆ ಸಂಚರಿಸಲು ಕಷ್ಟಕರವಾಗಿತ್ತು. 1.50 ಕೋಟಿ ರೂ. ವೆಚ್ಚದಲ್ಲಿ ಇಲ್ಲಿನ ಜನರ ಬೇಡಿಕೆಯಂತೆ ಈಗಾಗಲೇ ಸೇತುವೆ ಅಭಿವೃದ್ದಿ ಕಾಮ ಗಾರಿ ಪ್ರಗತಿಯಲ್ಲಿದೆ ಎಂದರು

ಜನರಿಗೆ ಅಗತ್ಯವಾಗಿ ಬೇಕಾದ ಪ್ರತಿ ಯೊಂದು ಗ್ರಾಮಗಳಿಗೂ ಕುಡಿಯುವ ನೀರು ಆರೋಗ್ಯ, ಶಿಕ್ಷಣ, ಬೀದಿ ದೀಪ ರಸ್ತೆಗಳು ಬಡವರಿಗೆ ಆಶ್ರಯ ಮನೆಗಳು ಸೇರಿದಂತೆ ಮೂಲಭೂತ ಸೌಕರ್ಯ ಗಳನ್ನು ಕಲ್ಪಿಸಲಾಗಿದ್ದು ಇನ್ನೂ ಹೆಚ್ಚಿನ ಸವಲತ್ತುಗಳನ್ನು ಕಲ್ಪಿಸಲು ಕ್ರಮ ವಹಿಸ ಲಾಗಿದೆ ಎಂದ ಅವರು, ಗ್ರಾಮೀಣ ಪ್ರದೇಶಗಳ ಸರ್ವ ತೋಮುಖ ಅಭಿ ವೃದ್ದಿಗೆ ಹೆಚ್ಚು ಶ್ರಮಿಸುವುದಾಗಿ ತಿಳಿಸಿ ದರು. ತಾಪಂ ಸದಸ್ಯ ಪಿ.ಕುಮಾರ್‌ನಾಯಕ್‌, ಪಿಎಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಬಂಗಾರಶೆಟ್ಟಿ, ನಾಗರಾಜು ಆಲೂರು ಎ.ಎನ್‌. ರವಿ, ಎಇಇ ಸಿದ್ದಪ್ಪ ಇಂಜಿನಿ ಯರ್‌ ಮಧುಸೂದನ್‌ ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ