Udayavni Special

ನನ್ನ ಸೋಲಿಗೆ ಬಹುಜನ ವಿದ್ಯಾರ್ಥಿ ಸಂಘದ ಅಪಪ್ರಚಾರವೂ ಕಾರಣ : ಆರ್‌. ಧ್ರುವನಾರಾಯಣ

Team Udayavani, Feb 28, 2021, 12:13 PM IST

ನನ್ನ  ಸೋಲಿಗೆ ಬಹುಜನ ವಿದ್ಯಾರ್ಥಿ ಸಂಘದ ಅಪಪ್ರಚಾರವೂ ಕಾರಣ : ಆರ್‌. ಧ್ರುವನಾರಾಯಣ

ಚಾಮರಾಜನಗರ: ದೇಶಕ್ಕೆ ಕಾಂಗ್ರೆಸ್‌ ನೀಡಿರುವ ಕೊಡುಗೆ ಹಿರಿಯರಾದವರಿಗೆ ಗೊತ್ತಿದೆ. ಯುವಕರಿಗೆ ಸರಿಯಾಗಿ ತಿಳಿದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಕಾಂಗ್ರೆಸ್‌ನ ಐಡಿಯಾಲಜಿ ಮತ್ತು ಕೊಡುಗೆಗಳನ್ನು ತಿಳಿಸಲು ಎನ್‌ಎಸ್‌ಯುಐ(ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್‌ ಘಟಕ) ಅನ್ನು ಬಲಪಡಿಸಬೇಕಾದ ಅಗತ್ಯವಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ ಸಲಹೆ ನೀಡಿದರು.

ನಗರದ ಶಿವಕುಮಾರಸ್ವಾಮಿ ಭವನದ ಆವರಣದಲ್ಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಇಂದು ರಾಜಕಾರಣದಲ್ಲಿ ಯುವಕರ ಪಾತ್ರ ಬಹಳ ಪ್ರಮುಖವಾಗಿದೆ. ನಾನು ಕಳೆದ ಸಂಸತ್‌ ಚುನಾವಣೆಯಲ್ಲಿ ಸೋಲುವುದಕ್ಕೆ ಬಹುಜನ ವಿದ್ಯಾರ್ಥಿ ಸಂಘದ ಅಪಪ್ರಚಾರವೂ ಕಾರಣ. ಕಾಂಗ್ರೆಸ್‌ ಅಂಬೇಡ್ಕರ್‌ ಅವರಿಗೆ ಅನ್ಯಾಯ ಮಾಡಿದೆ ಎಂದು ಅವರು ಪ್ರಚಾರ ಮಾಡಿದರು. ನೆಹರು ಸಚಿವ ಸಂಪುಟದಲ್ಲಿ ಡಾ. ಅಂಬೇಡ್ಕರ್‌ ಅವ ರಿಗೆ ಕಾನೂನು ಸಚಿವ ಸ್ಥಾನ ನೀಡಲಾಗಿತ್ತು. ಹಿಂದೂ ಕೋಡ್‌ ಬಿಲ್‌ ಪಾಸಾಗಲಿಲ್ಲ. ಅದನ್ನು ವಿರೋಧಿಸಿದವರು ಇದೇ ಆರೆಸ್ಸೆಸ್‌, ಜನಸಂಘ ದವರು. ಪಾರ್ಲಿಮೆಂಟ್‌ನಲ್ಲಿ ಸೋತ ಕಾರಣ ರಾಜೀನಾಮೆ ನೀಡಿದರು. ಆದರೆ ಇದಕ್ಕೆ ಕಾಂಗ್ರೆಸ್‌ ಕಾರಣ ಎಂದು ಬಿವಿಎಸ್‌ನವರು ಅಪಪ್ರಚಾರ ಮಾಡುತ್ತಿದ್ದಾರೆ. ಇವತ್ತಿಗೂ ಕೂಡ ಆರ್‌ಎಸ್‌ಎಸ್‌ ನಲ್ಲಿ ಮಹಿಳೆಯರಿಗೆ ಪ್ರವೇಶ ಇಲ್ಲ. ಅವರ ಕಚೇರಿ ಗಳಲ್ಲಿ ಮಹಾತ್ಮಗಾಂಧಿ ಫೋಟೋ ಹಾಕುವುದಿಲ್ಲ ಎಂದರು.

ಕಾಂಗ್ರೆಸ್‌ ಪಕ್ಷ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ. ಬಸವಣ್ಣನವರ ಅನುಭವ ಮಂಟಪ, ಕಾಯಕದ ಕಲ್ಪನೆ ಏನಾದರೂ ಇದ್ದರೆ ಅದು ಕಾಂಗ್ರೆಸ್‌ನಲ್ಲಿಮಾತ್ರ. ಹಾಗಾಗಿ ಎಲ್ಲ ಕಾಲೇಜುಗಳಲ್ಲಿ ಎನ್‌ಎಸ್‌ ಐಯು ಅನ್ನು ಬಲಪಡಿಸಬೇಕು. ವಿದ್ಯಾರ್ಥಿ ದೆಸೆಯಿಂದಲೇ ಕಾಂಗ್ರೆಸ್‌ ಐಡಿಯಾಲಜಿ ಹಾಗೂಕೆಲಸಗಳನ್ನು ಯುವಕರಿಗೆ ತಿಳಿಸಬೇಕು ಎಂದು ಅವರು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡಿರುವುದಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ರಾಹುಲ್‌ ಗಾಂಧಿ, ವೇಣುಗೋಪಾಲ್‌, ಸುಜೇìವಾಲ್‌,ವಿಷ್ಣುನಾಥನ್‌, ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯಅವರಿಗೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಡಿ.ಕೆ. ಶಿವಕುಮಾರ್‌ ಅವರು 2004ರಲ್ಲಿಸಂತೆಮರಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಿದರು. ಆರೋಗ್ಯ ಹಸ್ತ ಕಾರ್ಯಕ್ರಮದ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷನಾಗಲು ಅವಕಾಶ ನೀಡಿದ್ದಾರೆ ಎಂದು ಸ್ಮರಿಸಿದರು.

ಗೆಲ್ಲಿಸುವ ಹುಮ್ಮಸ್ಸು: ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು, ಉತ್ತಮ ಫ‌ಲಿತಾಂಶ ನೀಡಿದ್ದೀರಿ. ಗುಂಡ್ಲುಪೇಟೆಯಲ್ಲಿ ನೋಡಿದರೆ ವಿಧಾನಸಭೆ ಚುನಾವಣೆ ಈಗಲೇ ನಡೆದರೂ ಕಾಂಗ್ರೆಸ್‌ ಅನ್ನು ಗೆಲ್ಲಿಸುವ ಹುಮ್ಮಸ್ಸು ಇದೆ. ಚಾ.ನಗರ. ಕೊಳ್ಳೇಗಾಲ, ಹನೂರಿನಲ್ಲಿ ಉತ್ತಮಫ‌ಲಿತಾಂಶ ದೊರೆತಿದೆ. ಇದೇ ಫ‌ಲಿತಾಂಶಮುಂಬರುವ ಜಿಪಂ, ತಾಪಂ ಚುನಾವಣೆ ಹಾಗೂನಂತರದ ವಿಧಾನಸಭಾ ಚುನಾವಣೆಯಲ್ಲೂ ದೊರಕಲು ನೀವೆಲ್ಲ ನಮ್ಮ ಜೊತೆ ಕೈಜೋಡಿಸಬೇಕು ಎಂದು ಧ್ರುವನಾರಾಯಣ ಮನವಿ ಮಾಡಿದರು.

ಸಂಸತ್‌ನಲ್ಲಿ ಪ್ರಸಾದ್‌ ದನಿ ಎತ್ತಲಿ :  ಬಸವೇಶ್ವರರ ಕಾಯಕ ತತ್ವದಲ್ಲಿ ನಂಬಿಕೆ ಇಟ್ಟವನು ನಾನು. ಜಮೀನಿನಲ್ಲಿ ಮಣ್ಣು ಹದ ಮಾಡಿ, ದುಡಿಯದಿದ್ದರೆ ಫ‌ಲ ದೊರಕುವುದಿಲ್ಲ. ಹಾಗೆ ರಾಜಕಾರಣದಲ್ಲಿ ಸಹ ಶ್ರಮ ಮುಖ್ಯ. ಶಾಸಕನಾಗಿ, ಸಂಸದನಾಗಿ ಶ್ರಮ ವಹಿಸಿ ಕೆಲಸ ಮಾಡಿದ್ದೇನೆ. ನಮ್ಮ ಹಲವಾರು ಯೋಜನೆಗಳುಈಗ ನನೆಗುದಿಗೆ ಬಿದ್ದಿವೆ. ರಾ.ಹೆದ್ದಾರಿ 209ರಕಾಮಗಾರಿ 2019ರಲ್ಲೇ ಮುಗಿಯಬೇಕಿತ್ತು. ಇವತ್ತು ಮಂದಗತಿಯಲ್ಲಿ ಸಾಗುತ್ತಿದೆ. ಸಂಸದ ವಿ. ಶ್ರೀನಿವಾಸ ಪ್ರಸಾದ್‌ ಅವರಿಗೆ ಮನವಿಮಾಡುತ್ತೇನೆ. ಇನ್ನೂ 3 ವರ್ಷ ಅಧಿಕಾರ ಇದೆ.ಅವರು ಇಲ್ಲಿ ಪತ್ರಿಕಾಗೋಷ್ಠಿ ಮಾಡಿದರೆಪ್ರಯೋಜನವಿಲ್ಲ. ದೆಹಲಿಯಲ್ಲಿ ಧ್ವನಿ ಎತ್ತಬೇಕು.ಬಜೆಟ್‌ನಲ್ಲಿ ಕೇಂದ್ರ ತ.ನಾಡು, ಪ.ಬಂಗಾಳ,ಕೇರಳಕ್ಕೆ ಸಾವಿರಾರು ಕೋಟಿ ರೂ. ಕೊಟ್ಟಿದೆ. ಕರ್ನಾಟಕದ ರಸ್ತೆ ಗಳ ಅಭಿವೃದ್ಧಿಗೆ ಅನುದಾನನೀಡಿಲ್ಲ. ಹಿರಿಯ ಸಂಸದರಾಗಿ ಇವರು ದನಿಯೆತ್ತಬೇಕಿತ್ತು ಎಂದು ಧ್ರುವನಾರಾಯಣ ತಿಳಿಸಿದರು.

ಟಾಪ್ ನ್ಯೂಸ್

ಗೆರಟೆಯಲ್ಲಿ ಕಲಾಕೃತಿ ರಚಿಸುವ ದಂಪತಿ : ಲಾಕ್‌ಡೌನ್‌ ಸಂದರ್ಭದಲ್ಲಿ ಮೂಡಿದ ಯೋಚನೆ

ಗೆರಟೆಯಲ್ಲಿ ಕಲಾಕೃತಿ ರಚಿಸುವ ದಂಪತಿ : ಲಾಕ್‌ಡೌನ್‌ ಸಂದರ್ಭದಲ್ಲಿ ಮೂಡಿದ ಯೋಚನೆ

ಹೆಚ್ಚುತ್ತಿರುವ ಕೋವಿಡ್ ಎರಡನೇ ಅಲೆ : ಜಿ.ಪಂ., ತಾ.ಪಂ. ಚುನಾವಣೆ ಮುಂದೂಡಿಕೆ?

ಹೆಚ್ಚುತ್ತಿರುವ ಕೋವಿಡ್ ಎರಡನೇ ಅಲೆ : ಜಿ.ಪಂ., ತಾ.ಪಂ. ಚುನಾವಣೆ ಮುಂದೂಡಿಕೆ?

ಕರಾವಳಿ ಭಾಗದಲ್ಲಿ ಸಿಡಿಲು ಸಹಿತ ಮಳೆ, ಕೆಲವೆಡೆ ಹಾನಿ

ಕರಾವಳಿ ಭಾಗದಲ್ಲಿ ಸಿಡಿಲು ಸಹಿತ ಮಳೆ, ಕೆಲವೆಡೆ ಹಾನಿ

ಪಂಜಾಬ್‌ ಕಿಂಗ್ಸ್‌ ಮೇಲೆ ಡೆಲ್ಲಿ ಸವಾರಿ : ಪಂಜಾಬ್ ವಿರುದ್ಧ ಡೆಲ್ಲಿಗೆ 6 ವಿಕೆಟ್ ಗಳ ಜಯ

ಪಂಜಾಬ್‌ ಕಿಂಗ್ಸ್‌ ಮೇಲೆ ಡೆಲ್ಲಿ ಸವಾರಿ : ಪಂಜಾಬ್ ವಿರುದ್ಧ ಡೆಲ್ಲಿಗೆ 6 ವಿಕೆಟ್ ಗಳ ಜಯ

ಏಶ್ಯನ್‌ ಕುಸ್ತಿ ಚಾಂಪಿಯನ್‌ಶಿಪ್ : ರಜತ ಪದಕ ಗೆದ್ದ ದೀಪಕ್‌ ಪೂನಿಯ

ಏಶ್ಯನ್‌ ಕುಸ್ತಿ ಚಾಂಪಿಯನ್‌ಶಿಪ್ : ರಜತ ಪದಕ ಗೆದ್ದ ದೀಪಕ್‌ ಪೂನಿಯ

ರೋಗ ಪತ್ತೆ ಹಚ್ಚುವ ವಿಚಾರದಲ್ಲಿ ಸರ್ಕಾರ ಜನರ ಜೊತೆ ಚೆಲ್ಲಾಟವಾಡುತ್ತಿದೆ : ಡಿ.ಕೆ.ಸುರೇಶ್‌

ರೋಗ ಪತ್ತೆ ಹಚ್ಚುವ ವಿಚಾರದಲ್ಲಿ ಸರ್ಕಾರ ಜನರ ಜೊತೆ ಚೆಲ್ಲಾಟವಾಡುತ್ತಿದೆ : ಡಿ.ಕೆ.ಸುರೇಶ್‌

ಅಧಿಕ ಬೆಲೆಗೆ ರೆಮ್‌ಡಿಸಿವಿಯರ್‌ ಮಾರಾಟ: ಸಿಸಿಬಿಯಿಂದ ಮೂವರ ಬಂಧನ

ಅಧಿಕ ಬೆಲೆಗೆ ರೆಮ್‌ಡಿಸಿವಿಯರ್‌ ಮಾರಾಟ: ಸಿಸಿಬಿಯಿಂದ ಮೂವರ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DYSP, SI Infection

ಡಿವೈಎಸ್ಪಿ, ಎಸ್‌ಐಗೆ ಸೋಂಕು: 90 ಸಿಬ್ಬಂದಿಗೂ ಟೆಸ್ಟ್‌

Get tested for fever

ಜ್ವರ ಬಂದರೆ ಪರೀಕ್ಷೆಗೊಳಗಾಗಿ

For a month devotees have no darshan of Srikantheshwara

ಒಂದು ತಿಂಗಳು ಭಕ್ತರಿಗೆ ಶ್ರೀಕಂಠೇಶ್ವರನ ದರ್ಶನವಿಲ್ಲ

programme held at yalandooru

ಬಿಳಿಗಿರಿರಂಗನಬೆಟ್ಟದ ನೂತನ ತೇರಿಗೆ ಪೂಜೆ

5,422 Vaccines Vaccination in Changanagar District

ಚಾ.ನಗರ ಜಿಲ್ಲೆಯಲ್ಲಿ 5,422 ಮಂದಿಗೆ ಲಸಿಕೆ

MUST WATCH

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

udayavani youtube

COVID 2ನೇ ಅಲೆ ಎಚ್ಚರ ತಪ್ಪಬೇಡಿ

ಹೊಸ ಸೇರ್ಪಡೆ

ಗೆರಟೆಯಲ್ಲಿ ಕಲಾಕೃತಿ ರಚಿಸುವ ದಂಪತಿ : ಲಾಕ್‌ಡೌನ್‌ ಸಂದರ್ಭದಲ್ಲಿ ಮೂಡಿದ ಯೋಚನೆ

ಗೆರಟೆಯಲ್ಲಿ ಕಲಾಕೃತಿ ರಚಿಸುವ ದಂಪತಿ : ಲಾಕ್‌ಡೌನ್‌ ಸಂದರ್ಭದಲ್ಲಿ ಮೂಡಿದ ಯೋಚನೆ

ಹೆಚ್ಚುತ್ತಿರುವ ಕೋವಿಡ್ ಎರಡನೇ ಅಲೆ : ಜಿ.ಪಂ., ತಾ.ಪಂ. ಚುನಾವಣೆ ಮುಂದೂಡಿಕೆ?

ಹೆಚ್ಚುತ್ತಿರುವ ಕೋವಿಡ್ ಎರಡನೇ ಅಲೆ : ಜಿ.ಪಂ., ತಾ.ಪಂ. ಚುನಾವಣೆ ಮುಂದೂಡಿಕೆ?

ಕರಾವಳಿ ಭಾಗದಲ್ಲಿ ಸಿಡಿಲು ಸಹಿತ ಮಳೆ, ಕೆಲವೆಡೆ ಹಾನಿ

ಕರಾವಳಿ ಭಾಗದಲ್ಲಿ ಸಿಡಿಲು ಸಹಿತ ಮಳೆ, ಕೆಲವೆಡೆ ಹಾನಿ

ಪಂಜಾಬ್‌ ಕಿಂಗ್ಸ್‌ ಮೇಲೆ ಡೆಲ್ಲಿ ಸವಾರಿ : ಪಂಜಾಬ್ ವಿರುದ್ಧ ಡೆಲ್ಲಿಗೆ 6 ವಿಕೆಟ್ ಗಳ ಜಯ

ಪಂಜಾಬ್‌ ಕಿಂಗ್ಸ್‌ ಮೇಲೆ ಡೆಲ್ಲಿ ಸವಾರಿ : ಪಂಜಾಬ್ ವಿರುದ್ಧ ಡೆಲ್ಲಿಗೆ 6 ವಿಕೆಟ್ ಗಳ ಜಯ

ಏಶ್ಯನ್‌ ಕುಸ್ತಿ ಚಾಂಪಿಯನ್‌ಶಿಪ್ : ರಜತ ಪದಕ ಗೆದ್ದ ದೀಪಕ್‌ ಪೂನಿಯ

ಏಶ್ಯನ್‌ ಕುಸ್ತಿ ಚಾಂಪಿಯನ್‌ಶಿಪ್ : ರಜತ ಪದಕ ಗೆದ್ದ ದೀಪಕ್‌ ಪೂನಿಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.