ಕಾವೇರಮ್ಮ ಕಾಪಾಡಮ್ಮ ಈ ದೋಣಿಯ ತೇಲಿಸು

Team Udayavani, May 10, 2021, 6:03 PM IST

article about covid effect

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ಪ್ರಕರಣಗಳ ಸಂಖ್ಯೆ ಮಿತಿ ಮೀರಿ, ಸಾವುಗಳುಹೆಚ್ಚಳವಾಗಿರುವ ಪರಿಸ್ಥಿತಿಹಾಗೂ ಆಮ್ಲಜನಕ ದುರಂತಪ್ರಕರಣಗಳ ನಂತರ ಜನರುಹಿಂದಿನ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿಯವರನ್ನು ನೆನೆಯುತ್ತಿದ್ದಾರೆ.

ಅವರಿದ್ದರೆ ಕೋವಿಡ್‌ ಪರಿಸ್ಥಿತಿಯನ್ನು ಸಮರ್ಥವಾಗಿನಿಭಾಯಿಸು ತ್ತಿದ್ದರು ಎಂದುಅನೇಕರು ಹೇಳುತ್ತಿದ್ದಾರೆ.ಕಾವೇರಿ ಅವರು ಕೋವಿಡ್‌ ಮೊದಲ ಅಲೆಆರಂಭವಾದಾಗಿನಿಂದ ಜಿಲ್ಲೆಯಲ್ಲಿದ್ದರೆ, ಈಪರಿಸ್ಥಿತಿಯನ್ನು ಬಹಳ ಸಮರ್ಥವಾಗಿ ನಿರ್ವಹಣೆ ಮಾಡುತ್ತಿದ್ದರು.

ಎರಡನೇ ಅಲೆಯಲ್ಲೂ ಸಹಇಷ್ಟೊಂದು ಪ್ರಕರಣಗಳು ವರದಿಯಾಗಲು ಅವಕಾಶನೀಡುತ್ತಿರಲಿಲ್ಲ. ಮೊದಲ ಅಲೆಯ ಅನುಭವದಿಂದಎರಡನೇ ಅಲೆಗೆ ಸಜ್ಜಾಗುತ್ತಿದ್ದರು. ಕೋವಿಡ್‌ ಕೇರ್‌ಸೆಂಟರ್‌ಗಳನ್ನು ತೆರೆಯುತ್ತಿದ್ದರು. ತಾವೇ ನಿಂತುಉಸ್ತುವಾರಿ ವಹಿಸುತ್ತಿದ್ದರು.

ಅವರಿದ್ದರೆ ಆಕ್ಸಿಜನ್‌ಕೊರತೆಯಂತಹ ದುರಂತ ನಡೆಯುತ್ತಲೇ ಇರಲಿಲ್ಲಎಂದು ಹಲವರು ನೆನೆಸಿಕೊಳ್ಳುತ್ತಿದ್ದಾರೆ.ಬಿ.ಬಿ.ಕಾವೇರಿ ಅವರು 2018ರ ಮಾರ್ಚ್‌ 12ರಿಂದ 2020ರ ಜನವರಿ 30ರವರೆಗೆ ಚಾಮರಾಜನಗರಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.ಅವರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದು 1 ವರ್ಷ11 ತಿಂಗಳ ಕಾಲ. ಈ ಕಡಿಮೆ ಅವಧಿಯಲ್ಲಿಯೇಅವರು ತಮ್ಮ ಪ್ರಾಮಾಣಿಕತೆ, ಪಾರದರ್ಶಕ ಆಡಳಿತ,ಸಮರ್ಥ ನಿರ್ವಹಣೆ, ಜನೋಪಕಾರಿ, ಮಾತೃಹೃದಯಿಅಧಿಕಾರಿಯಾಗಿ ಜನರ ಮನ ಗೆದ್ದರು. ಅವರಿಗೆವರ್ಗಾವಣೆಯಾಗಿ ಬೀಳೆ ನೀಡುವ ಸಂದರ್ಭದಲ್ಲಿಸಿಬ್ಬಂದಿ ಕಣ್ಣೀರು ಹಾಕಿದರು.

ಸುಳ್ವಾಡಿ ಪ್ರಕರಣದ ಸಮರ್ಥ ನಿರ್ವಹಣೆ:2018ರ ಡಿಸೆಂಬರ್‌ 14ರಂದು ಹನೂರು ತಾಲೂಕಿನಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ನಡೆದ ವಿಷಪ್ರಸಾದ ದುರಂತದಲ್ಲಿ 17 ಮಂದಿಮೃತಪಟ್ಟರು. 124 ಮಂದಿ ಅಸ್ವಸ್ಥ ರಾದರು. ಈಘಟನೆಯನ್ನು ಕಾವೇರಿಯವರು ನಿಭಾಯಿಸಿದ ರೀತಿಅವರೆಷ್ಟು ಸಮರ್ಥ ಅಧಿಕಾರಿ ಎಂಬುದನ್ನುಸಾಬೀತುಪಡಿಸಿತು.

ಘಟನೆ ನಡೆದ ಬಳಿಕ ವಿಷ ಸೇವಿಸಿ ಅಸ್ವಸ್ಥಗೊಂಡವರನ್ನು ಕಾಮಗೆರೆಯ ಹೋಲಿಕ್ರಾಸ್‌ ಆಸ್ಪತ್ರೆ ಹಾಗೂಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿಸಿತ್ತು. ಈಎರಡೂ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ ಇರಲಿಲ್ಲ.ಇದನ್ನು ಮನಗಂಡ ಕಾವೇರಿ ಅವರು ಎಲ್ಲ ಗಾಯಾಳುಗಳನ್ನೂ ಮೈಸೂರಿನ ಕೆ.ಆರ್‌. ಆಸ್ಪತ್ರೆ ಮಾತ್ರವಲ್ಲದೇ,ವೆಂಟಿಲೇಟರ್‌ ಸೌಲಭ್ಯಯುಳ್ಳ ವಿವಿಧ ಖಾಸಗಿಆಸ್ಪತ್ರೆಗಳಿಗೆ ದಾಖಲು ಮಾಡಿಸಿದರು.

ಅಲ್ಲದೇಪರಿಸ್ಥಿತಿ ತಹಬದಿಗೆ ಬರುವವರೆಗೂ ತಾವೇ ಖುದ್ದುಆಸ್ಪತ್ರೆಗಳಿಗೆ ತೆರಳಿ ರೋಗಿಗಳ ದೇಖರೇಕಿ ನೋಡಿಕೊಂಡರು. ಇದರಿಂದಾಗಿ ಇನ್ನೂ ಹೆಚ್ಚುವ ಆತಂಕವಿದ್ದಸಾವಿನ ಪ್ರಕರಣಗಳು 17ಕ್ಕೆ ಸೀಮಿತಗೊಂಡವು.ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುಟುಂಬಗಳಕಷ್ಟ ಕಂಡು ತಮ್ಮ ಕಷ್ಟ ಎಂಬಂತೆ ಕಾವೇರಿಮರುಗಿದರು. ಬಾಲಕಿಯೊಬ್ಬಳ ಗೋಳಾಟ ನೋಡಲಾಗದೇ ತಾವೂ ಅತ್ತುಬಿಟ್ಟರು.

ಇಷ್ಟೆಲ್ಲ ಕೆಲಸ ಮಾಡಿದರೂ ಅವರು ಒಂದುದಿನವೂ ಇದಕ್ಕೆ ಪ್ರಚಾರ ಬಯಸಲಿಲ್ಲ. ತಾವು ಆಸ್ಪತ್ರೆಯಲ್ಲಿ ಖುದ್ದಾಗಿ ನಿಂತು ಉಸ್ತುವಾರಿ ನೋಡಿಕೊಂಡಫೋಟೋ ಹಾಕಿಸಿಕೊಳ್ಳಲಿಲ್ಲ.ಕಾವೇರಿ ಪ್ರವಾಹ ನಿರ್ವಹಣೆ: ಬಳಿಕ 2019ರಮಳೆಗಾಲದಲ್ಲಿ ಕಾವೇರಿ ಹಾಗೂ ಕಬಿನಿ ನದಿಗಳುತುಂಬಿ ಪ್ರವಾಹ ಪರಿಸ್ಥಿತಿ ಉಂಟಾದಾಗ ಕೊಳ್ಳೇಗಾಲತಾಲೂಕಿನ ಕಾವೇರಿ ನದಿ ಪಾತ್ರದ ಗ್ರಾಮಗಳ ಜನರಸುರಕ್ಷತೆಗೆ ತಾವೇ ಖುದ್ದು ಹಾಜರಾದರು.

ನದಿಯಲ್ಲಿಪ್ರವಾಹ ಕಾಣಿಸಿಕೊಳ್ಳುವ ಮುನ್ನ ಕೆಲ ಗ್ರಾಮಗಳನ್ನುಕೊಳ್ಳೇಗಾಲದ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿದರು. ಪ್ರವಾಹದ ಸಂದರ್ಭದಲ್ಲಿ ದೋಣಿಯಲ್ಲಿಕುಳಿತು ಪರಿಸ್ಥಿತಿ ಅವಲೋಕಿಸಿದರು. ಅವರಮುಂಜಾಗ್ರತೆಯಿಂದಾಗಿ ಅಂದಿನ ಪ್ರವಾಹಪರಿಸ್ಥಿತಿಯಿಂದ ನದಿಪಾತ್ರದ ಜನರಿಗೆ ಹೆಚ್ಚಿನತೊಂದರೆ ಉಂಟಾಗಲಿಲ್ಲ.ಪ್ರಸ್ತುತ ಬಿ. ಬಿ. ಕಾವೇರಿ ಅವರು ಚಾಮರಾಜನಗರಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಗಿದ್ದಾರೆ.ಇತ್ತೀಚಿಗೆ ಚಾಮರಾಜನಗರ ಜಿಲ್ಲಾ ಪಂಚಾಯಿತಿಆಡಳಿತಾಧಿಕಾರಿಯಾಗಿ ನೇಮಕವಾಗಿದ್ದಾರೆ.

ಕೆ.ಎಸ್‌.ಬನಶಂಕರ ಆರಾಧ್ಯ

ಟಾಪ್ ನ್ಯೂಸ್

ಮಂಗಳೂರು : ಠಾಣೆ ಮಟ್ಟದಲ್ಲಿ ಯುವಕರ ಸಮಿತಿ: ಎಡಿಜಿಪಿ

ಮಂಗಳೂರು : ಠಾಣೆ ಮಟ್ಟದಲ್ಲಿ ಯುವಕರ ಸಮಿತಿ: ಎಡಿಜಿಪಿ

ಉಡುಪಿಯಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಳ : “ಹೊರಗಿಂದ ಬರುವವರ ಮೇಲೆ ವಿಶೇಷ ನಿಗಾ’

ಕ್ರೀಡಾಂಗಣದ ಮಣ್ಣು ಕುಸಿತಕ್ಕೆ ಪರಿಹಾರ : ಅಧಿಕಾರಿಗಳಿಗೆ ನಿರ್ದೇಶ

ಕ್ರೀಡಾಂಗಣದ ಮಣ್ಣು ಕುಸಿತಕ್ಕೆ ಪರಿಹಾರ : ಅಧಿಕಾರಿಗಳಿಗೆ ನಿರ್ದೇಶ

ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ

ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ

ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

ಕುಖ್ಯಾತ ನಕ್ಸಲ್‌ ನಾಯಕನ ಶವ ಪತ್ತೆ

ಕುಖ್ಯಾತ ನಕ್ಸಲ್‌ ನಾಯಕನ ಶವ ಪತ್ತೆ

ಏಕಾಂಗಿ ಪ್ರವಾಸ: ಭಾರತೀಯ ಕಾಣೆ

ಏಕಾಂಗಿ ಪ್ರವಾಸ: ಭಾರತೀಯ ಕಾಣೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿ ಘೋಷಿಸಬೇಡಿ; ಸೋಲಿಗರ ಪ್ರತಿಭಟನೆ

ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿ ಘೋಷಿಸಬೇಡಿ; ಸೋಲಿಗರ ಪ್ರತಿಭಟನೆ

8cylinder

ಮಲಗಿದ್ದ ವೇಳೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಸಿಲಿಂಡರ್ ಸ್ಫೋಟ: ಯುವಕ ಸಾವು

ಕಾಂಗ್ರೆಸ್ ಪಕ್ಷವೇ ನಾಶವಾಗುತ್ತೆ ಎಂಬ ಭಯ ಪಕ್ಷದ ನಾಯಕರಿಗೆ ಕಾಡತೊಡಗಿದೆ : ಬಿ.ಸಿ. ನಾಗೇಶ್

ಕಾಂಗ್ರೆಸ್ ಪಕ್ಷವೇ ನಾಶವಾಗುತ್ತೆ ಎಂಬ ಭಯ ಪಕ್ಷದ ನಾಯಕರಿಗೆ ಕಾಡತೊಡಗಿದೆ : ಬಿ.ಸಿ. ನಾಗೇಶ್

ಭಾರತದಲ್ಲಿರುವ ಬಸ್ಟರ್ಡ್‌ ಹಕ್ಕಿ ಕೇವಲ 95: ವನ್ಯಜೀವಿ ಛಾಯಾಗ್ರಾಹಕ ಮಧು

ಭಾರತದಲ್ಲಿರುವ ಬಸ್ಟರ್ಡ್‌ ಹಕ್ಕಿ ಕೇವಲ 95: ವನ್ಯಜೀವಿ ಛಾಯಾಗ್ರಾಹಕ ಮಧು

ಮೂರು ತಿಂಗಳಿಗೊಮ್ಮೆ ಎಸ್‌ಸಿ, ಎಸ್‌ಟಿ ಹಿತರಕ್ಷಣಾ ಸಭೆ

ಮೂರು ತಿಂಗಳಿಗೊಮ್ಮೆ ಎಸ್‌ಸಿ, ಎಸ್‌ಟಿ ಹಿತರಕ್ಷಣಾ ಸಭೆ

MUST WATCH

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

udayavani youtube

ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್

udayavani youtube

ಒಂದು ಲಕ್ಷದ ಎಂಟು ವಡೆಗಳಿಂದ ಅಲಂಕೃತಗೊಂಡ ಮೈಸೂರಿನ ಶ್ರೀ ಅಂಜನೇಯ ಸ್ವಾಮಿ

udayavani youtube

ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ

udayavani youtube

IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್

ಹೊಸ ಸೇರ್ಪಡೆ

ಮಂಗಳೂರು : ಠಾಣೆ ಮಟ್ಟದಲ್ಲಿ ಯುವಕರ ಸಮಿತಿ: ಎಡಿಜಿಪಿ

ಮಂಗಳೂರು : ಠಾಣೆ ಮಟ್ಟದಲ್ಲಿ ಯುವಕರ ಸಮಿತಿ: ಎಡಿಜಿಪಿ

ಉಡುಪಿಯಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಳ : “ಹೊರಗಿಂದ ಬರುವವರ ಮೇಲೆ ವಿಶೇಷ ನಿಗಾ’

ಕ್ರೀಡಾಂಗಣದ ಮಣ್ಣು ಕುಸಿತಕ್ಕೆ ಪರಿಹಾರ : ಅಧಿಕಾರಿಗಳಿಗೆ ನಿರ್ದೇಶ

ಕ್ರೀಡಾಂಗಣದ ಮಣ್ಣು ಕುಸಿತಕ್ಕೆ ಪರಿಹಾರ : ಅಧಿಕಾರಿಗಳಿಗೆ ನಿರ್ದೇಶ

ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ

ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ

ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.