ಬಕ್ರೀದ್‌: ಕುರಿ, ಮೇಕೆಗೆ ಬೇಡಿಕೆ ಹೆಚ್ಚು


Team Udayavani, Aug 6, 2019, 3:00 AM IST

bakrid

ಸಂತೆಮರಹಳ್ಳಿ: ತ್ಯಾಗ ಬಲಿದಾನಗಳು ಸಂಕೇತವಾಗಿ ಮುಸ್ಲಿಮರು ಆಚರಿಸುವ ಬಕ್ರೀದ್‌ ಹಬ್ಬಕ್ಕೆ ಇನ್ನೊಂದು ವಾರ ಬಾಕಿ ಇದೆ. ಹಾಗಾಗಿ ಮಾರುಕಟ್ಟೆಯಲ್ಲಿ ಕುರಿಗಳ ಬೆಲೆ ಏಕಾಏಕಿ ಏರಿಕೆಯಾಗಿದೆ.

ಬಕ್ರೀದ್‌ನಲ್ಲಿ ಬೇಡಿಕೆ ಹೆಚ್ಚು: ಬಕ್ರೀದ್‌ ಹಬ್ಬದಲ್ಲಿ ಕುರಿಗಳಿಗೆ ಬಹುಬೇಡಿಕೆ. ಬಂಡೂರು, ಕಿರುಗಾವಲು ಕುರಿಗಳ ಜೊತೆಯಲ್ಲಿ ಮೇಕೆಗಳಿಗೂ ಬೇಡಿಕೆ ಹೆಚ್ಚಿದೆ. ಚಿಕ್ಕ ತಾಲೂಕು ಹಾಗೂ ಪಟ್ಟಣವಾಗಿರುವ ಯಳಂದೂರಿನಲ್ಲೇ ನೂರಾರು ಕುರಿಗಳು ಪ್ರತಿನಿತ್ಯ ಮಾರಾಟವಾಗುತ್ತವೆ. ಇದಕ್ಕೆ ಮಾರುಕಟ್ಟೆಯಾಗಿ ಪಕ್ಕದ ಸಂತೆಮರಹಳ್ಳಿ ಸಂತೆ ಹಾಗೂ ಗ್ರಾಮೀಣ ಪ್ರದೇಶದ ರೈತರಿಂದಲೇ ಹೆಚ್ಚು ಕುರಿಗಳು ಮಾರಾಟವಾಗುತ್ತವೆ. ಒಂದು ಕುರಿ ತೂಕಕ್ಕೆ ತಕ್ಕಂತೆ 10 ರಿಂದ 25 ಸಾವಿರ ರೂ. ವರೆಗೂ ಮಾರಾಟವಾಗುತ್ತವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕುರಿ ಮಾಂಸದ ದರ 450 ರಿಂದ 500 ರೂ. ವರೆಗೆ ಇದೆ. ಆದರೆ ಕುರಿ ಕೊಂಡುಕೊಳ್ಳುವವರು ಇಡೀ ಉಂಡೆ ಕುರಿಯನ್ನೇ ತೂಕಕ್ಕೆ ಹಾಕಿ ಕಿಲೋಗೆ 1 ಸಾವಿರದಂತೆ ಬೆಲೆ ನಿಗದಿ ಮಾಡಿ ಮಾರಾಟ ಮಾಡುತ್ತಾರೆ.

ಕುರಿ ಸಾಕಾಣಿಕ ಸವಾಲಿನ ಕೆಲಸ: ಮಾರಾಟ ಮಾಡಲು ಹಲವು ತಿಂಗಳಿಂದಲೂ ಕುರಿಗಳನ್ನು ತಯಾರು ಮಾಡಲಾಗುತ್ತದೆ. ಕೊಬ್ಬಿದ, ಹೆಚ್ಚು ತೂಕವುಳ್ಳ, ಕೊಂಬಿರುವ ಕುರಿಗಳಿಗೆ ಬೇಡಿಕೆ ಹೆಚ್ಚಾಗುವ ಕಾರಣ ನಾವು ಇದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಹಬ್ಬ ಒಂದು ತಿಂಗಳು ಇದೇ ಎನ್ನುವಾಗಲೇ ಇದರ ಹಾರೈಕೆ ಕಡೆ ಹೆಚ್ಚಿನ ಗಮನ ನೀಡುತ್ತೇವೆ. ಇದಕ್ಕೆ ಹುರುಳಿ ಕಾಳಿನಂತಹ ಪೌಷ್ಟಿಕ ಆಹಾರ ನೀಡುವುದು. ಪ್ರತಿನಿತ್ಯ ತಾಜಾ ಹುಲ್ಲನ್ನು ನೀಡುವುದು. ಯಾವುದೇ ಕಾರಣಕ್ಕೂ ಮೇವಿನಲ್ಲಿ ಕೊರತೆ ಬಾರದ ಹಾಗೆ ನೋಡಿಕೊಳ್ಳುವುದಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತದೆ. ಅಲ್ಲದೆ ಕುರಿಗಳು ಸಂಘ ಜೀವಿಗಳಾಗಿರುತ್ತದೆ. ಆದರೂ ಕೆಲವೊಮ್ಮೆ ಜಗಳ ನಡೆದಾಗ ಇದಕ್ಕೆ ಗಾಯಗಳಾಗುವ ಅಪಾಯವಿದೆ.

ಗಾಯವಾದ ಕುರಿ ಬಲಿ ನೀಡಲ್ಲ: ಗಾಯವಾಗಿ ಕುರಿಯ ಯಾವುದಾದರೂ ಅಂಗ ಊನವಾದರೆ ಇದನ್ನು ಬಕ್ರೀದ್‌ ಹಬ್ಬದ ಬಲಿಗೆ ಕೊಂಡುಕೊಳ್ಳುವುದಿಲ್ಲ. ಇದಕ್ಕೆ ಇಸ್ಲಾಂನಲ್ಲಿ ಆದ್ಯತೆ ಇಲ್ಲ. ಅಲ್ಲದೆ ರೋಗಗ್ರಸ್ತವಾಗಿರುವ ಕುರಿಯನ್ನು ಬಲಿ ನೀಡುವುದಿಲ್ಲ. ಹಾಗಾಗಿ ಈ ಸಮಯ ಗಾಳಿ, ಮಳೆಗಾಲವಾಗಿದ್ದು ಇದನ್ನು ಶೀತದಿಂದ ರಕ್ಷಿಸುವುದು. ಅಂಗಗಳಿಗೆ ಗಾಯವಾಗದಂತೆ ನೋಡಿಕೊಳ್ಳುವುದು ಸವಾಲಿನ ಕೆಲಸ ಎನ್ನುತ್ತಾರೆ ಕುರಿ ಸಾಕಾಣಿದಾರ ಬಸವೇಗೌಡ.

ಕುರಿ ಸಾಗಾಣಿಕೆದಾರರಿಗೆ ಹೆಚ್ಚು ಲಾಭ: ಬಕ್ರೀದ್‌ ಹಬ್ಬ ಬಂತೆಂದರೆ ಕುರಿ ಸಾಗಾಣಿಕೆದಾರರಿಗೆ ಹೆಚ್ಚು ಲಾಭವಾಗುತ್ತದೆ. ನಾನು ಹಲವು ವರ್ಷಗಳಿಂದ ಕುರಿ ಸಾಕುತ್ತಿದ್ದೇನೆ. ಸಂತೆಮರಹಳ್ಳಿ, ತಿ.ನರಸೀಪುರ, ಮೈಸೂರಿನ ಮಾರುಕಟ್ಟೆಗಳಿಗೂ ಕುರಿಯನ್ನು ಕೊಂಡೊಯ್ಯುತ್ತೇನೆ. ಮೈಸೂರು ಇದಕ್ಕೆ ಈ ಸಮಯದಲ್ಲಿ ಕುರಿಗಳಿಗೆ ದೊಡ್ಡ ಮಾರುಕಟ್ಟೆಯಾಗುತ್ತದೆ. ಕೊಬ್ಬಿದ ದಷ್ಟಪುಷ್ಟವಾದ ಹಾಗೂ ಆರೋಗ್ಯಯುತವಾದ ಯಾವುದೇ ಗಾಯಗಳಲ್ಲಿದ ಕುರಿಗಳಿಗೆ ಬೇಡಿಕೆ ಹೆಚ್ಚು.

ನಮ್ಮ ಕುರಿ ಮಂದೆಯಲ್ಲಿ ಇಂತಹ ಕುರಿಗಳನ್ನು ಆಯ್ದುಕೊಂಡು ಆಟೋ, ಇತರೆ ಗೂಡ್ಸ್‌ ವಾಹನಗಳಲ್ಲಿ ಮಾರುಕಟ್ಟೆಗೆ ಸಾಗಿಸಲಾಗುತ್ತದೆ. ಬಕ್ರೀದ್‌ ಹಬ್ಬದಲ್ಲಿ ಕುರಿಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಬೇರೆ ದಿನಗಳ ಹೊರತಾಗಿ ಈ ದಿನಗಳ ಮಾರಾಟದಲ್ಲಿ ಕುರಿಯೊಂದಕ್ಕೆ ಕನಿ ಷ್ಠ 1000 ರೂ. ದಿಂದ 5000 ರೂ. ಹೆಚ್ಚಾಗಿ ಲಾಭ ಸಿಗುತ್ತದೆ ಎಂದು ಕುರಿ ಸಾಕಾಣಿಕೆದಾರ ಗುಂಬಳ್ಳಿಯ ಮಹಾದೇವೇಗೌಡ ಉದಯವಾಣಿಗೆ ಮಾಹಿತಿ ನೀಡಿದರು.

* ಫೈರೋಜ್‌ ಖಾನ್‌

ಟಾಪ್ ನ್ಯೂಸ್

Ravichandran Ashwin Surpasses Harbhajan Singh

418 ಟೆಸ್ಟ್ ವಿಕೆಟ್ ಗಳೊಂದಿಗೆ ಹರ್ಭಜನ್ ಸಿಂಗ್ ದಾಖಲೆ ಮುರಿದ ರವಿ ಅಶ್ವಿನ್

premam poojyam

ಪ್ರೇಮಂ ಪೂಜ್ಯಂನತ್ತ ಸ್ಟೂಡೆಂಟ್ಸ್‌ ಗ್ಯಾಂಗ್‌: ಮನಗೆದ್ದ ಪ್ಯೂರ್‌ ಲವ್‌ ಸ್ಟೋರಿ

12panchayath

ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ ಘೋಷಣೆ

ಒಮಿಕ್ರಾನ್ ಎಫೆಕ್ಟ್: ಹಲವು ದೇಶಗಳಲ್ಲಿ ಗಡಿ ಬಂದ್, ಎಷ್ಟು ದೇಶಗಳಲ್ಲಿ ವೈರಸ್ ಪತ್ತೆಯಾಗಿದೆ?

ಒಮಿಕ್ರಾನ್ ಎಫೆಕ್ಟ್: ಹಲವು ದೇಶಗಳಲ್ಲಿ ಗಡಿ ಬಂದ್, ಎಷ್ಟು ದೇಶಗಳಲ್ಲಿ ವೈರಸ್ ಪತ್ತೆಯಾಗಿದೆ?

ಕೆ.ಎಲ್.ರಾಹುಲ್ ಕಾರಣಕ್ಕೆ ಲಕ್ನೋ ಫ್ರಾಂಚೈಸಿ ವಿರುದ್ಧ ದೂರು ನೀಡಿದ ಐಪಿಎಲ್ ತಂಡಗಳು!

ಕೆ.ಎಲ್.ರಾಹುಲ್ ಕಾರಣಕ್ಕೆ ಲಕ್ನೋ ಫ್ರಾಂಚೈಸಿ ವಿರುದ್ಧ ದೂರು ನೀಡಿದ ಐಪಿಎಲ್ ತಂಡಗಳು!

ಇಷ್ಟು ಬೇಗ ಹಳಸಿತೇ ಕಮಲಾ-ಬೈಡೆನ್‌ ಸಂಬಂಧ?

ಇಷ್ಟು ಬೇಗ ಹಳಸಿತೇ ಕಮಲಾ-ಬೈಡೆನ್‌ ಸಂಬಂಧ?

1-dk

ಯಾರು ಮುಳುಗುತ್ತಿದ್ದಾರೆ? ಬಿಜೆಪಿಗೆ ಡಿ.ಕೆ. ಶಿವಕುಮಾರ್ ಪ್ರಶ್ನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಾಮರಾಜ ನಗರ

ಅವೈಜಾನಿಕ ತೆರಿಗೆಯೇ ತೈಲಬೆಲೆ ಹೆಚಳಕ್ಕೆ ಕಾರಣ

ವಾರಸುದಾರರಿಗೆ ಪೊಲೀಸರಿಂದ ವಸ್ತು ಹಸ್ತಾಂತರ

ವಾರಸುದಾರರಿಗೆ ಪೊಲೀಸರಿಂದ ವಸ್ತು ಹಸ್ತಾಂತರ

ಬಿಆರ್‌ಟಿ ಕಾನನ ರಸ್ತೆಗಳಲ್ಲಿ ವನ್ಯ ಪ್ರಾಣಿಗಳ ಸಚ್ಛಂದ ವಿಹಾರ

ಬಿಆರ್‌ಟಿ ಕಾನನ ರಸ್ತೆಗಳಲ್ಲಿ ವನ್ಯ ಪ್ರಾಣಿಗಳ ಸಚ್ಛಂದ ವಿಹಾರ

ಚಾಮರಾಜನಗರ: ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ಡಿಕ್ಕಿ ಮೂವರು ಸಾವು

ಚಾಮರಾಜನಗರ: ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ಡಿಕ್ಕಿ ಮೂವರು: ಸಾವು

ಜಾತ್ರೆ

ಪಾರ್ವತಾಂಬ ಜಾತ್ರೆಗೆ ಬಂಡಿ ಜತೆ ಬಂದ ಭಕರು

MUST WATCH

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

udayavani youtube

Suratkal : ಮತ್ತೆ ATM ಕೇಂದ್ರ ಪುಡಿ ಪುಡಿ! 2ತಿಂಗಳ ಅಂತರದಲ್ಲಿ ನಡೆದ 2ನೇ ಘಟನೆ

udayavani youtube

ದಾಂಡೇಲಿ : ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು, ಮನೆಯ ವಸ್ತುಗಳೆಲ್ಲ ಚೆಲ್ಲಾಪಿಲ್ಲಿ

udayavani youtube

ಭೀಕರ ರಸ್ತೆ ಅಪಘಾತ : ಅಂತ್ಯಕ್ರಿಯೆಗೆ ತೆರಳುತ್ತಿದ್ದ 18 ಮಂದಿ ದುರ್ಮರಣ

udayavani youtube

ಬೂದು ಬಾಳೆ ಸೇವನೆಯಿಂದ ಆರೋಗ್ಯವಾಗಿರುವುದು ನಿಮ್ಮ ನಾಳೆ

ಹೊಸ ಸೇರ್ಪಡೆ

Ravichandran Ashwin Surpasses Harbhajan Singh

418 ಟೆಸ್ಟ್ ವಿಕೆಟ್ ಗಳೊಂದಿಗೆ ಹರ್ಭಜನ್ ಸಿಂಗ್ ದಾಖಲೆ ಮುರಿದ ರವಿ ಅಶ್ವಿನ್

14develop

ಬಾಕಿ ಕೆಲಸ ಪೂರ್ಣಗೊಳಿಸುವೆ: ಚನಶೆಟ್ಟಿ

kolara politics

“ಕೈ’ ಅಭ್ಯರ್ಥಿ ಸೋಲಿಸುವುದೇ ನನ್ನ ಗುರಿ..!

13political

ಸಮಸ್ಯೆ ಮುಕ್ತ ಗ್ರಾಪಂ ನಿರ್ಮಾಣಕ್ಕೆ ಬಿಜೆಪಿ ಬೆಂಬಲಿಸಿ

ಬೆಟ್ಟ

ಅವನತಿಯ ಅಂಚಿನಲ್ಲಿ ಸುರಸದ್ಮಗಿರಿ ಬೆಟ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.