ಚಿಲಕವಾಡಿಯಲ್ಲಿ 8 ಕೋಟಿ ವೆಚ್ಚದಲ್ಲಿ ಕಾಲೇಜು ನಿರ್ಮಾಣ

ಪಾಲಿಟೆಕ್ನಿಕ್‌ ಕಾಲೇಜು ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಮಹೇಶ್‌

Team Udayavani, Aug 10, 2019, 12:15 PM IST

ಕೊಳ್ಳೇಗಾಲ ತಾಲೂಕಿನ ಚಿಲಕವಾಡಿ ಗ್ರಾಮದಲ್ಲಿ ಸುಮಾರು 8 ಕೋಟಿ ರೂ. ಅನುದಾನದಲ್ಲಿ ಪಾಲಿಟೆಕ್ನಿಕ್‌ ಕಾಲೇಜು ನಿರ್ಮಾಣಕ್ಕೆ ಶಾಸಕ ಎನ್‌.ಮಹೇಶ್‌ ಭೂಮಿಪೂಜೆ ಸಲ್ಲಿಸಿದರು.

ಕೊಳ್ಳೇಗಾಲ: ತಾಲೂಕಿನ ಚಿಲಕವಾಡಿ ಗ್ರಾಮದಲ್ಲಿ ಸುಮಾರು 8 ಕೋಟಿ ರೂ. ಅನುದಾನದಲ್ಲಿ ಪಾಲಿಟೆಕ್ನಿಕ್‌ ಕಾಲೇಜು ನಿರ್ಮಾಣಕ್ಕೆ ಶಾಸಕ ಎನ್‌.ಮಹೇಶ್‌ ಶುಕ್ರವಾರ ಭೂಮಿಪೂಜೆ ಸಲ್ಲಿಸಿದರು.

ನಂತರ ಮಾತನಾಡಿ, ಸರ್ಕಾರ 2018ರಂದು ನೂತನ ಪಾಲಿಟೆಕ್ನಿಕ್‌ ಕಾಲೇಜು ನಿರ್ಮಾಣಕ್ಕೆ 8 ಕೋಟಿ ರೂ. ಮಂಜೂರು ಮಾಡಿತ್ತು. ಮೊದಲನೇ ಯ ಕಂತಿನಲ್ಲಿ 6 ಕೋಟಿ ರೂ. ಬಿಡುಗಡೆ ಆಗಿದೆ. ಉಳಿದ 2 ಕೋಟಿ ರೂ. ಅನುದಾನವನ್ನು ಶೀಘ್ರದಲ್ಲೇ ಮಂಜೂರು ಮಾಡಿಸಲಾಗುವುದು ಎಂದರು.

ಉಪ ವಿಭಾಗ ಕೇಂದ್ರದಲ್ಲಿ ಪಾಲಿಟೆಕ್ನಿಕ್‌ ಕಾಲೇಜು ಇಲ್ಲದೆ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಜಿಲ್ಲಾ ಕೇಂದ್ರಕ್ಕೆ ಮತ್ತು ಮೈಸೂರು ಸೇರಿದಂತೆ ವಿವಿಧ ಜಿಲ್ಲೆ ಗಳಿಗೆ ತೆರಳಬೇಕಾಗಿತ್ತು. ಈಗ ಸರ್ಕಾರ ತಾಲೂ ಕು ಕೇಂದ್ರದಲ್ಲಿ ಕಾಲೇಜು ತೆರೆಯಲು ತೀಮಾ ರ್ನಿಸಿದ್ದು, ಸರ್ಕಾರ ಮಂಜೂರಾತಿ ಮಾಡಿದ್ದು, ವಿದ್ಯಾಥಿ ರ್ಗಳು ಬಳಕೆ ಮಾಡಿಕೊಳ್ಳ ಬೇಕು ಎಂದು ತಿಳಿಸಿದರು.

ಹಾಸ್ಟೆಲ್ಗೆ ಅನುದಾನ ಮಂಜೂರು: ಸರ್ಕಾರ ಕೇವಲ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಮಂಜೂರು ಮಾಡಿದೆ. ವಿವಿಧೆಡೆಗಳಿಂದ ಬರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲು ಬೇಕಾಗುವ ಅನುದಾನ ಸರ್ಕಾರದ ವತಿ ಯಿಂದ ಮಂಜೂರು ಮಾಡಿಸುವುದಾಗಿ ಹೇಳಿದರು.

ತಹಶೀಲ್ದಾರ್‌ಗೆ ಸೂಚನೆ: ಕಾಲೇಜಿಗೆ ನೇರವಾಗಿ ಬರಲು ರಸ್ತೆಯ ಕೊರತೆ ಇದ್ದು, ಕೂಡಲೇ ಚಿಲಕವಾಡಿ ಬೆಟ್ಟದ ಸಮೀಪ ರಸ್ತೆಗೆ ಬೇಕಾದಷ್ಟು ಜಮೀನು ಮಂಜೂರು ಮಾಡುವಂತೆ ತಹಶೀ ಲ್ದಾರ್‌ಗೆ ಸೂಚನೆ ನೀಡಲಾಗುವುದು ಎಂದರು.

ಕಾಲೇಜು ಕಟ್ಟಡ ಕಾಮಗಾರಿಯನ್ನು ಮೈಸೂರಿನ ಆರ್ಯನ್‌, ಅಶ್ವಿ‌ನ್‌ಪಾಳ್ಯ ಗುತ್ತಿಗೆ ಪಡೆದುಕೊಂಡಿದ್ದು, ಸರ್ಕಾರ ಸೂಚಿಸಿರುವಂತೆ ಒಂದೂವರೆ ವರ್ಷದ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಂಶುಪಾಲ ಮಹೇಶ್‌, ಜಿಪಂ ಸದಸ್ಯ ನಾಗರಾಜು, ಕುಂತೂರು ಗ್ರಾಪಂ ಸದಸ್ಯರಾದ ಪ್ರಮೋದ್‌, ದಿನೇಶ್‌, ಮುಖಂಡರಾದ ಜಗದೀಶ್‌, ಪ್ರಸಾದ್‌, ಮತ್ತು ಬೋಧಕ- ಬೋಧಕೇತರ ವರ್ಗ ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ