ಕೊರೊನಾ: ತುರ್ತು ಚಿಕಿತ್ಸೆಗೆ ಸಕಲ ಸಿದ್ಧತೆ


Team Udayavani, Mar 11, 2020, 3:00 AM IST

corona-turtu

ಕೊಳ್ಳೇಗಾಲ: ಕೊರೊನಾ ವೈರಸ್‌, ಕೊರೊನಾ ವೈರಸ್‌ ಎಲ್ಲೆಲ್ಲೂ ವೈರಸ್‌ ಸದ್ದು ಮಾಡುತ್ತಿದೆ. ಜನರಲ್ಲಿ ಹೃದಯ ನಡುಕ ಉಂಟು ಮಾಡಿದ್ದು, ಮಹಾಮಾರಿ ಕೊರೊನಾ ವೈರಸ್‌ ಕೊಲ್ಲುವ ಔಷಧಿ ಯಾವುದು? ಇದರಿಂದ ಮುಕ್ತಿ ಯಾವಾಗ ಎಂದು ಸಾರ್ವಜನಿಕರು ಎಲ್ಲೆಡೆ ಪ್ರಶ್ನಿಸುವುದರ ಜೊತೆಗೆ ಭಯಭೀತರಾಗಿದ್ದಾರೆ.

ಕೊರೊನಾ ವೈರಸ್‌ ವಿಶ್ವದಾದ್ಯಂತ ಹರಡಿ ಬಳಿಕ ರಾಜ್ಯಕ್ಕೂ ಕಾಲಿಟ್ಟಿರುವ ವೈರಸ್‌ನಿಂದಾಗಿ ಮತ್ತಷ್ಟು ಭಯಕ್ಕೆ ಒಳಗಾಗಿರುವ ಸಾರ್ವಜನಿಕರು ಇದಕ್ಕೆ ಔಷಧಿ ಇಲ್ಲವೆ ಇದನ್ನು ಕೊಲ್ಲುವ ಶಕ್ತಿ ಯಾವ ದೇಶಕ್ಕೆ ಇದೆ. ಇದರ ಔಷಧಿ ಶೀಘ್ರದಲ್ಲೇ ಮಾರುಕಟ್ಟೆಗೆ ಬಂದು ವೈರಸ್‌ ಒಳಗಾಗದವರಿಗೆ ಸೂಕ್ತ ಚಿಕಿತ್ಸೆ ಲಭ್ಯಗೊಂಡು ಪ್ರಾಣ ಭಯದಿಂದ ಪಾರಾಗಲು ಸಾಧ್ಯವೇ ಎಂದು ಎಲ್ಲೆಡೆ ಚರ್ಚೆ ಭರಾಟೆಯಾಗಿ ನಡೆಯುತ್ತಿದೆ.

ಬೇಸಿಗೆ ಬಿಸಿಲು: ರಾಜ್ಯದಲ್ಲಿ ಬೇಸಿಗೆಯ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಬಿಸಿಲಿನ ತಾಪಕ್ಕೆ ಕೊರೊನಾ ವೈರಸ್‌ ಹರಡಲು ಸಾಧ್ಯವಿಲ್ಲ ಎಂದು ಕೆಲವರು ನಿಟ್ಟುಸಿರು ಬಿಟ್ಟರೆ, ಮತ್ತೆ ಕೆಲವರು ಯಾವುದೆ ಬಿಸಿಲಿನ ತಾಪವಿದ್ದರೂ ಅಲ್ಲೊಮ್ಮೆ, ಇಲ್ಲೊಮ್ಮೆ ಹರಡುವುದರಿಂದ ಪ್ರಾಣ ಹೋಗುವುದಂತೂ ಶತಸಿದ್ಧವಾಗಿದೆ. ಈ ವೈರಸ್‌ ಯಾರಿಗೂ ತಗಲುದಂತೆ ಆದರೆ ಸಾಕು ಎಂದು ದೇವರಲ್ಲಿ ಪ್ರಾರ್ಥನೆ ಮಾಡುವಲ್ಲಿ ಮುಂದಾಗಿದ್ದಾರೆ.

ತುರ್ತು ಚಿಕಿತ್ಸೆಗೆ ಸಿದ್ಧ: ಕೊರೊನಾ ವೈರಸ್‌ ಎಲ್ಲಾದರೂ ಕಾಣಿಸಿಕೊಂಡ ಕೂಡಲೇ ಅಂತಹವರಿಗೆ ಕೂಡಲೇ ತುರ್ತು ಚಿಕಿತ್ಸೆ ನೀಡಲಾಗುವುದು. ಇದಕ್ಕಾಗಿ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯಲ್ಲಿ ಐದು ಗಂಡಸರ ಹಾಸಿಗೆ, ಐದು ಹೆಂಗಸರ ಹಾಸಿಗೆಯನ್ನು ಸಿದ್ಧಪಡಿಸಿ, ಅಲ್ಲಿ ನೀಡಬೇಕಾಗಿರುವ ಎಲ್ಲಾ ತುರ್ತು ಚಿಕಿತ್ಸಾ ಯಂತ್ರಗಳನ್ನು ಅಳವಡಿಸಲಾಗಿದೆ.

ಎಲ್ಲೆಡೆ ಕಟ್ಟೆಚ್ಚರ: ಸರ್ಕಾರಕೊರೊನಾ ವೈರಸ್‌ ಪತ್ತೆಯಾದಲ್ಲಿ ಕೂಡಲೇ ಅಂತಹವರ ಮೇಲೆ ನಿಗಾವಹಿಸಿ, ಅದು ಎಲ್ಲೂ ಮತ್ತೂಬ್ಬರಿಗೆ ಹರಡದಂತೆ ತಡೆಗಟ್ಟಬೇಕು ಎಂದು ಸೂಚನೆ ನೀಡಿದೆ. ಹೀಗಾಗಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳನ್ನು ನಾಲ್ಕು ದಿಕ್ಕುಗಳಲ್ಲಿ ಇಬ್ಬರನ್ನು ನೇಮಕ ಮಾಡಿ, ತಮಿಳುನಾಡಿನಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುವವರ ತಪಾಸಣೆ ಒಂದೆಡೆಯಾದರೆ, ಮತ್ತೂಂದೆಡೆ ಬೆಂಗಳೂರಿನಿಂದ ಬರುವವರ ತಪಾಸಣೆ ಹೀಗೆ ಹೊರಗಡೆ ಹಾಗೂ ಹೊರ ರಾಜ್ಯಗಳಿಂದ ಬರುವವರ ತಪಾಸಣೆ ಮಾಡುತ್ತಿದ್ದಾರೆ. ಎಲ್ಲೆಡೆ ಕಟ್ಟೆಚ್ಚರ ವಹಿಸಿ ತಪಾಸಣಾ ಕಾರ್ಯ ನಡೆಯುತ್ತಿದೆ.

ಔಷಧಿ ಅಂಗಡಿಗಳ ಮೇಲೆ ನಿಗಾ ಅಗತ್ಯ: ಕೊರೊನಾ ವೈರಸ್‌ನಿಂದ ಭಯಭೀತರಾಗಿರುವ ಸಾರ್ವಜನಿಕರು, ವೈರಸ್‌ನಿಂದ ತಪ್ಪಿಸಿಕೊಳ್ಳಲು ಔಷಧಿ ಅಂಗಡಿಗಳಲ್ಲಿ ಮಾರಾಟ ಮಾಡುವ ಮಾಸ್ಕ್ (ಮುಖಗವಸು), ಹ್ಯಾಂಡ್‌ ಸ್ಯಾನಿಟೈಜರ್‌ಗೆ ಬೇಡಿಕೆ ಹೆಚ್ಚಾಗಿದೆ. ಕೇವಲ ಔಷಧಿ ಅಂಗಡಿಗಳಲ್ಲಿ ನಿಗದಿ ಬೆಲೆಗಿಂತ ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು, ಔಷಧಿ ಅಂಗಡಿಗಳ ಮೇಲೂ ನಿಗಾ ಇಟ್ಟು ಹೆಚ್ಚಿನ ಬೆಲೆಗೆ ಕಾಳಸಂತೆ ಮಾರಾಟ ಮಾಡುವವರ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ.

ನಿಗದಿಪಡಿಸಿದ ಬೆಲೆಗೆ ಮಾರಾಟ: ಕೊರೊನಾವೈರಸ್‌ ಹರಡದಂತೆ ಸಾರ್ವಜನಿಕರು ಮತ್ತು ಮಕ್ಕಳು ಮಾಸ್ಕ್ ಮತ್ತು ಹ್ಯಾಂಡ್‌ ಸ್ಯಾನಿಟೈಜರ್‌ಗಳನ್ನು ಬಳಕೆ ಮಾಡಬೇಕು. ಸಾಮಗ್ರಿಗಳ ಮೇಲೆ ನಿಗದಿಪಡಿಸಿದ ಬೆಲೆಗೆ ಮಾರಾಟವಾಗುತ್ತಿದೆ. ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ ಎಂದು ಕೇವಲ ಔಷಧಿ ಅಂಗಡಿಗಳ ಮೇಲೆ ವದಂತಿಗಳು ಹರಡಿದೆ ಎಂದು ಸಪ್ತಗಿರಿ ಮೆಡಿಕಲ್‌ ಮಾಲೀಕ ಸುದರ್ಶನ್‌ ಕುಮಾರ್‌ ಹೇಳಿದ್ದಾರೆ.

ನಗರಸಭೆಗೆ ಸೇರಿದ 31 ವಾರ್ಡ್‌ಗಳಲ್ಲಿ ಕೊರೊನಾ ವೈರಸ್‌ ಬಗ್ಗೆ ಆಟೋಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಸಾರ್ವಜನಿಕರು ಸ್ವತ್ಛತೆಗೆ ಹೆಚ್ಚು ಮಹತ್ವ ನೀಡಬೇಕು. ನಗರಸಭೆ ಕೈಗೊಳ್ಳುವ ಎಲ್ಲಾ ಸ್ವತ್ಛತೆಯ ಕಾರ್ಯಗಳಲ್ಲಿ ಸಾರ್ವಜನಿಕರು ಸಹಕರಿಸಿದಾಗ ಮಾತ್ರ ಮಹಾಮಾರಿ ಕೊರೊನಾ ವೈರಸ್‌ ಹರಡದಂತೆ ತಡೆಯಲು ಸಾಧ್ಯ.
-ನಾಗಶೆಟ್ಟಿ, ನಗರಸಭೆ ಪೌರಾಯುಕ್ತ

ಕೊರೊನಾ ವೈರಸ್‌ ಹರಡದಂತೆ ಎಲ್ಲೆಡೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೊರೊನಾ ವೈರಸ್‌ ಯಾರಿಗಾದರೂ ತಗುಲಿದ ಪಕ್ಷದಲ್ಲಿ ಅಂತಹವರಿಗೆ ತುರ್ತು ಚಿಕಿತ್ಸೆಗಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಔಷಧಿ ಅಂಗಡಿಗಳಲ್ಲಿ ಮಾಸ್ಕ್ ಮತ್ತು ಇನ್ನಿತರ ಉಪಕರಣಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ದೂರು ನೀಡಿದ ಕೂಡಲೇ ಅಂತಹ ಔಷಧಿ ಅಂಗಡಿಗಳ ಮಾಲೀಕರ ಮೇಲೆ ಕಾನೂನು ಕ್ರಮಕೈಗೊಳ್ಳಲಾಗುವುದು.
-ಡಾ.ಗೋಪಾಲ್‌, ತಾಲೂಕು ಆರೋಗ್ಯಾಧಿಕಾರಿ

* ಡಿ.ನಟರಾಜು

ಟಾಪ್ ನ್ಯೂಸ್

ಇಂದು ದ್ವಿತೀಯ ಏಕದಿನ: ಭಾರತದ ಮೇಲೆ ಸರಣಿ ಸಮಬಲ ಒತ್ತಡ

ಇಂದು ದ್ವಿತೀಯ ಏಕದಿನ: ಭಾರತದ ಮೇಲೆ ಸರಣಿ ಸಮಬಲ ಒತ್ತಡ

ಕರ್ಫ್ಯೂ ಪರಿಷ್ಕರಣೆ?: ಇಂದು ಮುಖ್ಯಮಂತ್ರಿ  ನೇತೃತ್ವದಲ್ಲಿ ಮಹತ್ವದ ಸಭೆ ನಿಗದಿ

ಕರ್ಫ್ಯೂ ಪರಿಷ್ಕರಣೆ?: ಇಂದು ಮುಖ್ಯಮಂತ್ರಿ  ನೇತೃತ್ವದಲ್ಲಿ ಮಹತ್ವದ ಸಭೆ ನಿಗದಿ

ಪಿಯು: ಈ ಬಾರಿ ಹೆಚ್ಚುವರಿ ಪ್ರಶ್ನೆಗಳು

ಪಿಯು: ಈ ಬಾರಿ ಹೆಚ್ಚುವರಿ ಪ್ರಶ್ನೆಗಳು

ಕೋವಿಡ್: ಸಾವಿನ ಪ್ರಮಾಣ ಗಣನೀಯ ಕುಸಿತ

ಕೋವಿಡ್: ಸಾವಿನ ಪ್ರಮಾಣ ಗಣನೀಯ ಕುಸಿತ

ಪಂಚ ಚುನಾವಣೆಗೆ ಕಣ ಬಿರುಸು

ಪಂಚ ಚುನಾವಣೆಗೆ ಕಣ ಬಿರುಸು

2021: ಅತೀ ಉಷ್ಣದ ವರ್ಷ

2021: ಅತೀ ಉಷ್ಣದ ವರ್ಷ

ಮನೆಯಲ್ಲೇ ಚಿಕಿತ್ಸೆ ಪಡೆಯುವವರ ಮೇಲೆ ನಿಗಾ ಅಗತ್ಯ

ಮನೆಯಲ್ಲೇ ಚಿಕಿತ್ಸೆ ಪಡೆಯುವವರ ಮೇಲೆ ನಿಗಾ ಅಗತ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಲದಲ್ಲೇ ಬೆಲೆ ಸಿಗುವಾಗ, ಖರೀದಿ ಕೇಂದ್ರ ಏಕೆ ?

ಹೊಲದಲ್ಲೇ ಬೆಲೆ ಸಿಗುವಾಗ, ಖರೀದಿ ಕೇಂದ್ರ ಏಕೆ ?

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣ :  ಶಾಲೆಗೆ ರಜೆ ಘೋಷಿಸಲು ಪೋಷಕರ ಒತ್ತಾಯ

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣ :  ಶಾಲೆಗೆ ರಜೆ ಘೋಷಿಸಲು ಪೋಷಕರ ಒತ್ತಾಯ

drowned

ಚಾಮರಾಜನಗರ: ಜಲಾಶಯದಲ್ಲಿ ಮುಳುಗಿ ಎಸೆಸೆಲ್ಸಿ ವಿದ್ಯಾರ್ಥಿನಿ ಸಾವು

ಹಗಲು ವೇಳೆ ಸಮರ್ಪಕ ತ್ರಿಫೇಸ್‌ ವಿದ್ಯುತ್‌ ನೀಡಿ

ಹಗಲು ವೇಳೆ ಸಮರ್ಪಕ ತ್ರಿಫೇಸ್‌ ವಿದ್ಯುತ್‌ ನೀಡಿ

ಡೀಸಿ ಗೈರು, 2 ಗಂಟೆಗೆ ಸೀಮಿತ ಗ್ರಾಮ ವಾಸ್ತವ್ಯ

ಡೀಸಿ ಗೈರು, 2 ಗಂಟೆಗೆ ಸೀಮಿತ ಗ್ರಾಮ ವಾಸ್ತವ್ಯ

MUST WATCH

udayavani youtube

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

udayavani youtube

ಆಕರ್ಷಕ ಕುರ್ತಿ(1000 – 1500 Rs. Only!!)| Umbrella Kurthis

udayavani youtube

ದಾಂಡೇಲಿಯ ಬೈಲುಪಾರಿನಲ್ಲಿ ವಿದ್ಯುತ್ ತಂತಿಯ ಮೇಲಿಂದ ಬಿದ್ದು ಗಾಯ ಮಾಡಿಕೊಂಡ ಕೋತಿ

udayavani youtube

ವಾಕಿಂಗ್‌ ವಿಚಾರಕ್ಕೆ ಪ್ರಾಂಶುಪಾಲ-ಪ್ರಾಧ್ಯಾಪಕ ಫೈಟಿಂಗ್‌-ವಿಡಿಯೋ ವೈರಲ್‌

udayavani youtube

ನಾಳೆ ರಾಜ್ಯದ ಕರ್ಫ್ಯೂ ಭವಿಷ್ಯ ನಿರ್ಧಾರ : ಇಕ್ಕಟ್ಟಿಗೆ ಸಿಲುಕಿದ ಸಿಎಂ

ಹೊಸ ಸೇರ್ಪಡೆ

ಇಂದು ದ್ವಿತೀಯ ಏಕದಿನ: ಭಾರತದ ಮೇಲೆ ಸರಣಿ ಸಮಬಲ ಒತ್ತಡ

ಇಂದು ದ್ವಿತೀಯ ಏಕದಿನ: ಭಾರತದ ಮೇಲೆ ಸರಣಿ ಸಮಬಲ ಒತ್ತಡ

ಜಗತ್ತಿನ ಪ್ರವಾಸಿ ತಾಣಗಳಲ್ಲಿ ದಿಲ್ಲಿ, ಜೈಪುರ

ಜಗತ್ತಿನ ಪ್ರವಾಸಿ ತಾಣಗಳಲ್ಲಿ ದಿಲ್ಲಿ, ಜೈಪುರ

Untitled-1

ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುವಾಗಲೇ ಎದ್ದು ಕುಳಿತ ವ್ಯಕ್ತಿ! 

ಬಾಹ್ಯಾಕಾಶದಲ್ಲಿ ಇಳಯರಾಜಾ ಹಾಡುಗಳ ಮೇಳ!

ಬಾಹ್ಯಾಕಾಶದಲ್ಲಿ ಇಳಯರಾಜಾ ಹಾಡುಗಳ ಮೇಳ!

ಗೂಬೆಯ ಫೋಟೋಗಳಿಗೆ ಫಿದಾ

ಗೂಬೆಯ ಫೋಟೋಗಳಿಗೆ ಫಿದಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.