27 ಕೋಟಿ ವೆಚ್ಚದ 10 ಕಾಮಗಾರಿ ಲೋಕಾರ್ಪಣೆ


Team Udayavani, Apr 24, 2021, 3:54 PM IST

27 ಕೋಟಿ ವೆಚ್ಚದ 10 ಕಾಮಗಾರಿ ಲೋಕಾರ್ಪಣೆ

ಹನೂರು: ತಾಲೂಕು ವ್ಯಾಪ್ತಿಯಲ್ಲಿ ಶಿಕ್ಷಣ, ಆರೋಗ್ಯ, ವಿದ್ಯುತ್‌ ಸೇರಿದಂತೆ ವಿವಿಧ ಇಲಾಖೆಗಳ 27 ಕೋಟಿ ರೂ. ವೆಚ್ಚದ 10 ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ ಕುಮಾರ್‌ ತಿಳಿಸಿದರು.

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಶೈಕ್ಷಣಿಕ ಅಭಿವೃದ್ಧಿಗಾಗಿ ಒತ್ತು ನೀಡಲಾಗುತ್ತಿದ್ದು 2 ಕೋಟಿ ರೂ. ವೆಚ್ಚದ ಐಟಿಐ ಕಾಲೇಜು,5.79 ಕೋಟಿ ವೆಚ್ಚದಲ್ಲಿ ನೆಕ್ಕುಂದಿಯಲ್ಲಿ ಆಶ್ರಮಶಾಲೆ, 3.25 ಕೋಟಿ ರೂ. ವೆಚ್ಚದಲ್ಲಿ ಹಾಸ್ಟೆಲ್‌ಗ‌ಳನ್ನುತೆರೆಯಲಾಗಿದ್ದು, ಬಂಡಳ್ಳಿಯಲ್ಲಿ 1.94 ಕೋಟಿ ರೂ. ವೆಚ್ಚದಲ್ಲಿ ಪ್ರಯೋಗಾಲಯ ಕಟ್ಟಡವನ್ನು ಲೋಕಾರ್ಪಣೆ ಗೊಳಿಸಲಾಗಿದೆ ಎಂದರು.

ಇದೇ ವೇಳೆ ತಾಲೂಕಿನ ಲಾಸರ್‌ದೊಡ್ಡಿಯಲ್ಲಿ 1.90 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಬ್ರಿಡ್ಜ್ ಕಂ ಬ್ಯಾರೇಜ್‌ ಕಾಮಗಾರಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಇದೊಂದು ಬಹುಮುಖ್ಯವಾದ ಕಾಮಗಾರಿ ಯಾಗಿದ್ದು ಈ ಕಾಮಗಾರಿಯಿಂದ ಲಾಸರ್‌ ದೊಡ್ಡಿಯ ಸಾರ್ವಜನಿಕರಿಗೆ ಸೇತುವೆ ದೊರೆತಂತಾಗಿದೆ ಎಂದರು. ಇದೇ ವೇಳೆ 50 ಲಕ್ಷ ರೂ. ವೆಚ್ಚದಲ್ಲಿ ಹನೂರು ಪಟ್ಟಣದ ರೈತ ಸಂಪರ್ಕ ಕೇಂದ್ರ, 44 ಲಕ್ಷ ರೂ.ವೆಚ್ಚದಲ್ಲಿ ರಾಮಾಪುರ ರೈತ ಸಂಪರ್ಕ ಕೇಂದ್ರವನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ರಾಮಾಪುರಗ್ರಾಮದಲ್ಲಿ 2.10 ಕೋಟಿ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿರುವ ಆರೋಗ್ಯ ಕೇಂದ್ರ, ಅಜ್ಜೀಪರದಲ್ಲಿ 4.89 ಕೋಟಿ ವೆಚ್ಚದ ವಿದ್ಯುತ್‌ ವಿತರಣಾ ಉಪಕೇಂದ್ರ ಮತ್ತು 4.25 ಕೋಟಿ ವೆಚ್ಚದ ನಾಲಾರೋಡ್‌ ಸೇತುವೆಯನ್ನು ಲೋಕಾರ್ಪಣೆಗೊಳಿಸಿದರು.

ಇದೇ ವೇಳೆ ಶಾಸಕ ನರೇಂದ್ರ ಮಾತನಾಡಿ, ನಾಲಾರೋಡ್‌ ಸಮೀಪ ಹರಿಯುವ ಹಳ್ಳಕ್ಕೆ ಸೇತುವೆನಿರ್ಮಾಣ ಮಾಡಬೇಕು ಎಂಬುದು ಈ ಭಾಗದ ಹೂಗ್ಯಂ, ಮೀಣ್ಯಂ ಗ್ರಾಮಗಳ ಜನರ ಬಹುದಿನದಬೇಡಿಕೆಯಾಗಿತ್ತು. ಇದೀಗ ಲೋಕಾರ್ಪಣೆಗೊಳ್ಳುತ್ತಿರುವುದು ಸಂತಸದ ವಿಚಾರ ಎಂದರು.

ಸಚಿವರ ಕಾರ್ಯಕ್ರಮಕ್ಕೆ ನಿಯಮ ಅನ್ವಯ ಇಲ್ಲವೇ?  :

ಸೋಂಕು ತಡೆಗೆ ಸರ್ಕಾರ ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕುಎಂದು ಆದೇಶಿಸಿದೆ. ಕೋವಿಡ್‌ಮಾರ್ಗಸೂಚಿ ಉಲ್ಲಂ ಸಿದ ಸಾರ್ವಜನಿಕರವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ,ಸಚಿವರು ಆಯೋಜಿಸುವ ಕಾರ್ಯಕ್ರಮಗಳಲ್ಲಿಇವುಗಳನ್ನು ಉಲ್ಲಂ ಸಿದರೆ ಏಕೆ ಕ್ರಮ ಇಲ್ಲಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ ಕುಮಾರ್‌ ಶುಕ್ರವಾರ ವಿವಿಧ ಕಾಮಗಾರಿಗಳನ್ನುಉದ್ಘಾಟಿಸಿದ ಸಂದರ್ಭದಲ್ಲಿ ಕೆಲವರು ಮಾಸ್ಕ್ ಧರಿಸಿರಲಿಲ್ಲ. ಸಾಮಾಜಿಕಅಂತರವಂತೂ ಇರಲೇ ಇಲ್ಲ. ಗಣ್ಯರಿಗೆ ಒಂದು ನಿಯಮ, ಜನಸಾಮಾನ್ಯರಿಗೆಒಂದು ನಿಯಮ ಇದಿಯಾ, ಏಕೆ ತಾರತಮ್ಯನೀತಿ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಟಾಪ್ ನ್ಯೂಸ್

we will come to power in all the place says CT Ravi

ದಕ್ಷಿಣದ ರಾಜ್ಯ ಮಾತ್ರವಲ್ಲ ಬೇರೆ‌ ಕಡೆಗಳಲ್ಲೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ: ಸಿ.ಟಿ.ರವಿ

ಬಿಡುಗಡೆ ಭರಾಟೆ ಜೋರು: ಜುಲೈ 8ಕ್ಕೆ 9 ಚಿತ್ರಗಳು ತೆರೆಗೆ

ಬಿಡುಗಡೆ ಭರಾಟೆ ಜೋರು: ಜುಲೈ 8ಕ್ಕೆ 9 ಚಿತ್ರಗಳು ತೆರೆಗೆ

ಜುಲೈ 8ರಂದು ತೆರೆಗೆ; ವಿಕ್ರಂ ಪ್ರಭು ಕನಸಿನ ಕೂಸು ‘ವೆಡ್ಡಿಂಗ್ ಗಿಫ್ಟ್’

ಜುಲೈ 8ರಂದು ತೆರೆಗೆ; ವಿಕ್ರಂ ಪ್ರಭು ಕನಸಿನ ಕೂಸು ‘ವೆಡ್ಡಿಂಗ್ ಗಿಫ್ಟ್’

ಸಿ.ಟಿ.ರವಿ

ಬಿಜೆಪಿ ಬೆಳವಣಿಗೆ ಜಾತಿವಾದಿ ತುಷ್ಟೀಕರಣ ವಾದಕ್ಕೆ ಕೊಡಲಿ ಪೆಟ್ಟು ಕೊಟ್ಟಿದೆ: ಸಿ.ಟಿ.ರವಿ

6death

ಬೈರಂಪಳ್ಳಿ: ಹೊಲದಲ್ಲಿ ಕೆಲಸ ಮಾಡುವಾಗ ಜಾರಿ ಬಿದ್ದು ಯುವ ಕೃಷಿಕ ಸಾವು

ಮಹಾರಾಷ್ಟ್ರದಲ್ಲಿ ಶಿಂಧೆ ದರ್ಬಾರ್ ಶುರು: ವಿಶ್ವಾಸಮತ ಗೆದ್ದ ಮುಖ್ಯಮಂತ್ರಿ ಏಕನಾಥ ಶಿಂಧೆ

ಮಹಾರಾಷ್ಟ್ರದಲ್ಲಿ ಶಿಂಧೆ ದರ್ಬಾರ್ ಶುರು: ವಿಶ್ವಾಸಮತ ಗೆದ್ದ ಮುಖ್ಯಮಂತ್ರಿ ಏಕನಾಥ ಶಿಂಧೆ

ಎರಡು ತಿಂಗಳ ನಂತರ ನನ್ನ ಮುಂದಿನ ರಾಜಕೀಯ ತೀರ್ಮಾನ: ಜಿಟಿ ದೇವೇಗೌಡ

ಎರಡು ತಿಂಗಳ ನಂತರ ನನ್ನ ಮುಂದಿನ ರಾಜಕೀಯ ತೀರ್ಮಾನ: ಜಿಟಿ ದೇವೇಗೌಡಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sf-s-fdf

ಪ್ರಧಾನಿ ಕಚೇರಿ ಅಧಿಕಾರಿ ಎಂದು ಡಿಸಿಗೆ ಕರೆ : ದೂರು ದಾಖಲು!

ಸೂರಿಲ್ಲದ 24 ಸಾವಿರ ಕುಟುಂಬಕ್ಕೆ ಮನೆ ಭಾಗ್ಯ

ಸೂರಿಲ್ಲದ 24 ಸಾವಿರ ಕುಟುಂಬಕ್ಕೆ ಮನೆ ಭಾಗ್ಯ

ಗುಂಡ್ಲುಪೇಟೆ: ರೈತರ ಮೇಲೆ ದಾಳಿ ನಡೆಸಿದ್ದ ಹುಲಿ ಸೆರೆ

ಗುಂಡ್ಲುಪೇಟೆ: ರೈತರ ಮೇಲೆ ದಾಳಿ ನಡೆಸಿದ್ದ ಹುಲಿ ಸೆರೆ

1-sffsfs

ಗುಂಡ್ಲುಪೇಟೆಯಲ್ಲಿ ಹುಲಿ ದಾಳಿ; ರೈತನಿಗೆ ತೀವ್ರ ಗಾಯ

ಮಹದೇಶ್ವರ ಬೆಟ್ಟದಲ್ಲಿ ಧೂಪ ಮಾರುತ್ತಿದ್ದ ಮಹಿಳೆಯ ಹಣ,ಚಿನ್ನಾಭರಣ ಕಳವು: ದೂರು ದಾಖಲು

ಮಹದೇಶ್ವರ ಬೆಟ್ಟದಲ್ಲಿ ಧೂಪ ಮಾರುತ್ತಿದ್ದ ಮಹಿಳೆಯ ಹಣ,ಚಿನ್ನಾಭರಣ ಕಳವು: ದೂರು ದಾಖಲು

MUST WATCH

udayavani youtube

ಇಬ್ಬರು ಶಸ್ತ್ರ ಸಜ್ಜಿತ ಲಷ್ಕರ್ ಉಗ್ರರನ್ನು ಹಿಡಿದು ಕೊಟ್ಟ ಕಾಶ್ಮೀರದ ಗ್ರಾಮಸ್ಥರು

udayavani youtube

ಜಿಂಕೆಯನ್ನು ನುಂಗಿದ್ದ 80 ಕೆ.ಜಿ. ತೂಕದ 14 ಅಡಿ ಉದ್ದದ ಹೆಬ್ಬಾವು!

udayavani youtube

ವಿಟ್ಲದ ಈ ವಿದ್ಯಾರ್ಥಿನಿಯ ಕಾರ್ಯಕ್ಕೊಂದು ಮೆಚ್ಚುಗೆ ಇರಲಿ…

udayavani youtube

ಕೊಪ್ಪಳ : ರೌಡಿಶೀಟರ್ ಗಳಿಗೆ ಖಡಕ್ ವಾರ್ನಿಂಗ್ ನೀಡಿದ ಎಸ್ಪಿ

udayavani youtube

ಮದ್ರಸಾದಿಂದ ಮನೆಗೆ ಬರುತ್ತಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್…

ಹೊಸ ಸೇರ್ಪಡೆ

we will come to power in all the place says CT Ravi

ದಕ್ಷಿಣದ ರಾಜ್ಯ ಮಾತ್ರವಲ್ಲ ಬೇರೆ‌ ಕಡೆಗಳಲ್ಲೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ: ಸಿ.ಟಿ.ರವಿ

5

ಪಟ್ಟಣ ಪಂಚಾಯತ್‌ ಬೇಡಿಕೆ ಇನ್ನಾದರೂ ಈಡೇರಲಿ

ಬಿಡುಗಡೆ ಭರಾಟೆ ಜೋರು: ಜುಲೈ 8ಕ್ಕೆ 9 ಚಿತ್ರಗಳು ತೆರೆಗೆ

ಬಿಡುಗಡೆ ಭರಾಟೆ ಜೋರು: ಜುಲೈ 8ಕ್ಕೆ 9 ಚಿತ್ರಗಳು ತೆರೆಗೆ

7road

ರಸ್ತೆಗೆ ತಗ್ಗು-ಗುಂಡಿ ತೋಡಿ ಮುಳ್ಳು ಬಡಿತ!

4

ಸುತ್ತ ನದಿ ಇದ್ದರೂ ಕುಡಿಯುವ ನೀರಿನದ್ದೇ ಚಿಂತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.