Udayavni Special

ರಸ್ತೆ ಕಾಮಗಾರಿ ಸ್ಥಗಿತದಿಂದ ಸಂಚಾರಕ್ಕೆ ತೊಂದರೆ


Team Udayavani, Aug 17, 2019, 3:00 AM IST

rastegala

ಸಂತೆಮರಹಳ್ಳಿ: ಯಳಂದೂರು ತಾಲೂಕಿನ ಗೌಡಹಳ್ಳಿ ಗ್ರಾಮದಿಂದ ಚಾಮಲಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯು ಹಲವು ತಿಂಗಳಿಂದಲ್ಲೂ ಆಮೆ ವೇಗದಲ್ಲಿ ಸಾಗಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಕೊಳ್ಳೇಗಾಲ ಲೋಕೋಪಯೋಗಿ ಉಪ ವಿಭಾಗ ಇಲಾಖೆ ವ್ಯಾಪ್ತಿಯಲ್ಲಿ ಗೌಡಹಳ್ಳಿ ಗ್ರಾಮದಿಂದ ಚಾಮಲಾಪುರಕ್ಕೆ ಸಂಪರ್ಕ ಕಲ್ಪಿಸುವ 2.ಕಿ.ಮಿ. ರಸ್ತೆ ಇದಾಗಿದೆ. ಗೌಡಹಳ್ಳಿ ಗ್ರಾಮದಲ್ಲಿ 600 ಮೀಟರ್‌ ಚರಂಡಿ ನಿರ್ಮಾಣ ಹಾಗೂ ಬನ್ನಿಸಾರಿಗೆ ಗ್ರಾಮದಿಂದ ಗೌಡಹಳ್ಳಿ ಗ್ರಾಮಕ್ಕೆ ಸಂಪರ್ಕ 950 ಮೀಟರ್‌ ರಸ್ತೆ ಅಭಿವೃದ್ಧಿ ಸೇರಿ ಎರಡು ಕಾಮಗಾರಿಗಳಿಂದ ಒಟ್ಟು 2.60 ಕೋಟಿ ರೂ. ಗಳ ಅನುದಾನವನ್ನು ಜಿಲ್ಲಾ ಮುಖ್ಯ ಸುಧಾರಣೆ ಯೋಜನೆಯಲ್ಲಿ ಅನುದಾನ ಬಿಡುಗಡೆಯಾಗಿದೆ.

ಮೇಲೆದ್ದಿವೆ ಜಲ್ಲಿಕಲ್ಲು: ಕಳೆದ ಹಲವು ತಿಂಗಳ ಹಿಂದೆ ಕಾಮಗಾರಿಯನ್ನು ಯಾವುದೇ ಜನಪ್ರತಿನಿಧಿಗಳು ಗುದ್ದಲಿ ಪೂಜೆ ಸಲ್ಲಿಸದೇ ಕಾಮಗಾರಿಯು ನಡೆಯುತ್ತಿದೆ. ಹಳ್ಳಕೊಳ್ಳದಿಂದ ಬಿದ್ದಿದ್ದ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆಯಾಗಿತ್ತು. ಈಗ ಕೆಲ ತಿಂಗಳಿಂದ ಕಾಮಗಾರಿ ಶುರುವಾಗಿ ರಸ್ತೆಗೆ ಜಲ್ಲಿ ಸುರಿದು ಮೆಟ್ಲಿಂಗ್‌ ಮಾಡಲಾಗಿದೆ. ಮೆಟ್ಲಿಂಗ್‌ ಸಮರ್ಪಕವಾಗಿ ಮಾಡದ ಹಿನ್ನಲೆಯಲ್ಲಿ ಜಲ್ಲಿಕಲ್ಲು ಮೇಲೆದ್ದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.

ರಸ್ತೆ ಕಾಮಗಾರಿ ಸ್ಥಗಿತ: ನಾಲ್ಕು ತಿಂಗಳ ಹಿಂದೆ ಪ್ರಾರಂಭವಾದ ಕಾಮಗಾರಿ ಜಲ್ಲಿ ಹಾಕಿ ವಾಹನ ಸಂಚಾರಕ್ಕೆ ಕಷ್ಟ ಪಡಬೇಕಾಗಿದೆ. ರಸ್ತೆ ಕಾಮಗಾರಿ ಸ್ಥಗಿತಗೊಂಡ ಹಿನ್ನಲೆಯಲ್ಲಿ ಜಲ್ಲಿ ಕಲ್ಲನ್ನು ತುಳಿದುಕೊಂಡು ಸಂಚಾರ ಮಾಡುವಂತಾಗಿದೆ. ಇದರಿಂದ ದಿನ ನಿತ್ಯ ಸಂಚಾರ ಮಾಡುವ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಕಾಮಗಾರಿಯನ್ನು ಕೈಗೆತ್ತಿಕೊಂಡ ನಂತರ ಅದನ್ನು ಸಕಾಲಕ್ಕೆ ಪೂರ್ಣಗೊಳಿಸಬೇಕು. ಕಾಮಗಾರಿ ವಿಳಂಬ ಮಾಡಿದರೆ ಸಾರ್ವಜನಿಕರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗುತ್ತದೆ. ರಸ್ತೆ ಡಾಂಬರೀಕರಣ ಮಾಡುವವರೆಗಾದರೂ ಮೆಟ್ಲಿಂಗ್‌ಗೆ ನೀರು ಹಾಕಿಸಿ, ರಸ್ತೆಯನ್ನು ಸಮತಟ್ಟು ಮಾಡಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಸಂಬಂಧಪಟ್ಟ ಇಲಾಖೆಯವರು ಗುತ್ತಿದಾರರಿಗೆ ಸೂಚನೆ ನೀಡಬೇಕು.

ಸವಾರರಿಗೆ ಸಂಕಷ್ಟ: ದೊಡ್ಡ ವಾಹನಗಳು ಸಂಚಾರ ಮಾಡುವಾಗ ಚಕ್ರಗಳಿಗೆ ಕಲ್ಲು ಸಿಲುಕಿ ಸಿಡಿಯುತ್ತಿದೆ. ಸಣ್ಣಪುಟ್ಟ ವಾಹನಗಳ ಸಾವರರು ಹಾಗೂ ಪಾದಚಾರಿಗಳು ಆತಂಕದಿಂದಲೇ ಸಂಚಾರ ಮಾಡುವಂತಾಗಿದೆ. ದ್ವಿಚಕ್ರ ವಾಹನಗಳು ರಸ್ತೆ ಮಧ್ಯೆ ಸಂಚಾರಿಸುವ ಪರಿಸ್ಥಿತಿ ಇಲ್ಲ. ರಸ್ತೆ ಬದಿಯಲ್ಲಿ ಸ್ವಲ್ಪ ಮಾತ್ರ ಜಾಗವಿದೆ, ಅದರಲ್ಲಿಯೂ ಜಲ್ಲಿಕಲ್ಲು ಹರಡಿದೆ. ಸ್ವಲ್ಪ ಯಾಮಾಡಿದರೂ ಬೀಲಬೆಕಾದ ದುಸ್ಥಿತಿ ಉಂಟಾಗಿದೆ. ಈ ರಸ್ತೆಯಲ್ಲಿ ರಾತ್ರಿ ವೇಳೆಯಲ್ಲಿ ಸಂಚಾರ ಮಾಡುವುದು ಮತ್ತಷ್ಟು ಕಷ್ಟದ ಕೆಲಸವಾಗಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಮೆಲಾಧಿಕಾರಿಗಳು ಕೂಡಲೇ ಡಾಂಬರೀಕರಣವನ್ನು ಮುಗಿಸುವ ಮೂಲಕ ಅನುಕೂಲವನ್ನು ಕಲ್ಪಿಸಬೆಕಾಗಿದೆ.

ಗೌಡಹಳ್ಳಿ ಹಾಗೂ ಬನ್ನಿಸಾರಿಗೆ ಗ್ರಾಮಗಳಲ್ಲಿ ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿಯು ಸ್ಥಗಿತಗೊಂಡಿರುವ ಬಗ್ಗೆ ಗ್ರಾಮಸ್ಥರಿಂದ ದೂರುಗಳು ಕೇಳಿಬಂದಿವೆ. ಈ ಬಗ್ಗೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಿದ್ದು, ಕೂಲಿ ಕಾರ್ಮಿಕರ ಕೊರೆತೆಯಿಂದ ಕೆಲಸವು ವಿಳಂಬವಾಗಿದೆ. ಜೊತೆಗೆ ಮುಂದಿನ 15 ದಿನಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳ್ಳಿಸುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ಸೂಚಿಸಲಾಗಿದೆ.
-ಸತೀಶ್‌, ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ, ಕೊಳ್ಳೇಗಾಲ ವಿಭಾಗ

* ಫೈರೋಜ್‌ ಖಾನ್‌

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪೇಜಾವರ ಶ್ರೀಗಳು ಇಂದು ಅಯೋಧ್ಯೆಗೆ

ಪೇಜಾವರ ಶ್ರೀಗಳು ಇಂದು ಅಯೋಧ್ಯೆಗೆ

ಮುಂದೂಡಲ್ಪಟ್ಟಿದ್ದ ಸಪ್ತಪದಿಗೆ ಕೂಡಿಬಂತು ಮುಹೂರ್ತ!

ಮುಂದೂಡಲ್ಪಟ್ಟಿದ್ದ ಸಪ್ತಪದಿಗೆ ಕೂಡಿಬಂತು ಮುಹೂರ್ತ!

IPLಪಂಜಾಬ್‌ಗ ಸೋಲಿನ ಪಂಚ್‌ ನೀಡಿದ ರಾಜಸ್ಥಾನ್‌

ಪಂಜಾಬ್‌ಗ ಸೋಲಿನ ಪಂಚ್‌ ನೀಡಿದ ರಾಜಸ್ಥಾನ್‌

ಕಾಲೇಜಿನಲ್ಲಿ ಪ್ರಾಯೋಗಿಕ ತರಗತಿಗೆ ಆದ್ಯತೆ

ಕಾಲೇಜಿನಲ್ಲಿ ಪ್ರಾಯೋಗಿಕ ತರಗತಿಗೆ ಆದ್ಯತೆ

ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಅಧಿಕಾರ: ಸುಧಾಕರ್

ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಅಧಿಕಾರ: ಸುಧಾಕರ್

ಯುವಕನ ಆತ್ಮಹತ್ಯೆ- ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ಹಣ ಕಳೆದುಕೊಂಡಿರುವ ಶಂಕೆ

ಯುವಕನ ಆತ್ಮಹತ್ಯೆ- ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ಹಣ ಕಳೆದುಕೊಂಡಿರುವ ಶಂಕೆ

ಪಿಎಂ ಕಿಸಾನ್‌ ಯೋಜನೆ : ನಕಲಿ ಫಲಾನುಭವಿಗಳಿಗೆ ಜಿಲ್ಲಾಡಳಿತ ನೋಟಿಸ್‌

ಪಿಎಂ ಕಿಸಾನ್‌ ಯೋಜನೆ : ನಕಲಿ ಫಲಾನುಭವಿಗಳಿಗೆ ಜಿಲ್ಲಾಡಳಿತ ನೋಟಿಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೊದಲ ಬಾರಿಗೆ ಬಿಎಸ್ಪಿ-ಬಿಜೆಪಿ ಮೈತ್ರಿಗೆ ಅಧಿಕಾರ

ಮೊದಲ ಬಾರಿಗೆ ಬಿಎಸ್ಪಿ-ಬಿಜೆಪಿ ಮೈತ್ರಿಗೆ ಅಧಿಕಾರ

cham-covid19

ಚಾಮರಾಜನಗರದಲ್ಲಿ ಕೋವಿಡ್ ಪ್ರಕರಣಗಳು ಗಣನೀಯ ಇಳಿಮುಖ

chamarajanagar

ಚಾಮರಾಜನಗರ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಚಾಮರಾಜನಗರ ಜಿಲ್ಲೆಯ ಬಂಗಾರಾಚಾರ್ ಮತ್ತು ಡಾ.ರಾಮಕೃಷ್ಣ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

ಚಾಮರಾಜನಗರ ಜಿಲ್ಲೆಯ ಬಂಗಾರಾಚಾರ್ ಮತ್ತು ಡಾ.ರಾಮಕೃಷ್ಣ ಅವರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

cn-tdy-1

ಪೊಲೀಸ್‌ ಇಲಾಖೆ ರೀತಿ ಅರಣ್ಯ ಇಲಾಖೆಯಲ್ಲೂ ಮೀಸಲು ಪಡೆ

MUST WATCH

udayavani youtube

ಬೆಳ್ತಂಗಡಿ: ಕಾಡಿನಿಂದ ನಾಡಿಗೆ ಆಹಾರ ಅರಸಿಬಂದ ಎರಡು ತಿಂಗಳ ಆನೆ ಮರಿ

udayavani youtube

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

udayavani youtube

Peoples take on reopening of schools | ಶಾಲೆ ಯಾಕೆ ಬೇಕು? ಯಾಕೆ ಬೇಡ ? | Udayavani

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

ಹೊಸ ಸೇರ್ಪಡೆ

An outrage against people who don’t have the basic infrastructure

ಮೂಲ ಸೌಕರ್ಯ ಕಲ್ಪಿಸದ ಜನಪ್ರತಿನಿಧಿಗಳ ವಿರುದ್ಧ ಜನಾಕ್ರೋಶ

MLR

ಕುಂಟುತ್ತಾ ಸಾಗುತ್ತಿದೆ ಪಚ್ಚನಾಡಿ ರೈಲ್ವೇ ಮೇಲ್ಸೇತುವೆ ಕಾಮಗಾರಿ

Vote

ಪಂಚಾಯತ್‌ ಚುನಾವಣೆಗೆ ತಾಲೀಮು

ಪೇಜಾವರ ಶ್ರೀಗಳು ಇಂದು ಅಯೋಧ್ಯೆಗೆ

ಪೇಜಾವರ ಶ್ರೀಗಳು ಇಂದು ಅಯೋಧ್ಯೆಗೆ

ಹುಲಿ ಹೆಜ್ಜೆ ಗುರುತು ಗ್ರಾಮಸ್ಥರು ಆತಂಕ

ಹುಲಿ ಹೆಜ್ಜೆ ಗುರುತು ಗ್ರಾಮಸ್ಥರು ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.