Udayavni Special

ಆಲಹಳ್ಳಿಯಲ್ಲಿ ಕುಡಿವ ನೀರಿಗೆ ಪರದಾಟ

ನೀರಿಗಾಗಿ ಕೋಟ್ಯಂತರ ರೂ.ವೆಚ್ಚ ಮಾಡಿದರೂ ಪ್ರಯೋಜನವಿಲ್ಲ • ಅಂತರ್ಜಲ ಸಂಪೂರ್ಣ ಕುಸಿತ

Team Udayavani, Aug 2, 2019, 11:22 AM IST

cm-tdy-1

ಕೊಳ್ಳೇಗಾಲ: ಆಡಳಿತಕ್ಕೆ ಯಾವುದೇ ಸರ್ಕಾರ ಬಂದರೂ ಕುಡಿಯುವ ನೀರಿನ ಭವಣೆ ಇಳಿಸುವ ಭರವಸೆಯನ್ನು ನೀಡುತ್ತಾರೆ. ಮತ್ತೆ ಕುಡಿಯುವ ನೀರಿಗಾಗಿ ಕೋಟ್ಯಂತರ ರೂಪಾಯಿಗಳನ್ನು ಹರಿಸುತ್ತಾರೆ. ಆದರೆ, ತಾಲೂಕಿನ ಟಗರಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಆಲಹಳ್ಳಿ ಗ್ರಾಮದಲ್ಲಿ ಕುಡಿಯಲು ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಟಗರಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಏಳು ಗ್ರಾಮಗಳ ಪೈಕಿ ಆಲಹಳ್ಳಿ ಗ್ರಾಮ ಎಲ್ಲಾ ಸಮಾಜವನ್ನು ಹೊಂದಿರುವ ಬಹುದೊಡ್ಡ ಗ್ರಾಮವಾಗಿದೆ. ಗ್ರಾಮದಲ್ಲಿ ಸುಮಾರು 800ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿದ್ದು, ಗ್ರಾಮಸ್ಥರು ದೈನಂದಿನ ವ್ಯವಸಾಯ ಮತ್ತು ಕೂಲಿ ಇವರ ಕಾಯಕವಾಗಿದೆ.

ಏಳು ನೀರಿನ ತೊಂಬೆ ನಿರ್ಮಾಣ: ಗ್ರಾಮ ಪಂಚಾಯ್ತಿ ವತಿಯಿಂದ ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಕೆ ಮಾಡುವ ಸಲುವಾಗಿ ವಿವಿಧ ಸಮಾಜದ ಬಡಾವಣೆಗಳಲ್ಲಿ ಸುಮಾರು ಏಳು ನೀರಿನ ತೊಂಬೆಗಳನ್ನು ನಿರ್ಮಾಣ ಮಾಡಲಾಗಿದೆ. ಅಂತರ್ಜಲ ಸಂಪೂರ್ಣ ಕುಸಿದಿರುವ ಹಿನ್ನಲೆಯಲ್ಲಿ ನೀರಿನ ತೊಂಬೆಗಳಲ್ಲಿ ಕುಡಿಯುವ ನೀರಿಲ್ಲದೇ ಒಣಗುತ್ತಿವೆ.

ಬತ್ತಿಹೋಗಿವೆ ಕೊಳವೆ ಬಾವಿಗಳು: ನೀರಿನ ತೊಂಬೆಗಳು ಮತ್ತು ಕೊಳವೆ ಬಾವಿಗಳಿಂದಲೂ ಸಹ ನೀರು ಪೂರೈಕೆ ಮಾಡುವ ಸಲುವಾಗಿ ಹಲವೆಡೆಗಳಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ, ಕೊಳವೆ ಬಾವಿಗಳನ್ನು ಕೊರೆಸಿದ್ದರೂ ಸಹ, ಕೊಳವೆ ಬಾವಿಯಲ್ಲಿ ನೀರು ಬತ್ತಿಹೋಗಿ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.

ಕೊಳವೆ ಬಾವಿ ದುರಸ್ತಿಯಾಗಿಲ್ಲ: ಕೊಳವೆ ಬಾವಿಗಳು ಕೆಟ್ಟು ನಿಂತಿದ್ದು, ಅದರ ಮೋಟಾರ್‌ಗಳನ್ನು ಸರಿಪಡಿಸಲು ತೆಗೆದುಕೊಂಡು ಹೋದ ಗ್ರಾಮ ಪಂಚಾಯ್ತಿಯ ಸಿಬ್ಬಂದಿಗಳು ಇದುವರೆವಿಗೂ ದುರಸ್ತಿ ಮಾಡಿ, ಮೋಟಾರ್‌ ಜೋಡಣೆಯಲ್ಲಿ ಅಧಿಕಾರಿಗಳು ವಿಫ‌ಲರಾದ ಪರಿಣಾಮ ಜನರು ಮತ್ತಷ್ಟು ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ.

ಗ್ರಾಮದಲ್ಲಿ ಕುಡಿಯುವ ನೀರು ನಲ್ಲಿಗಳ ಪೈಪ್‌ಗ್ಳ ಮೂಲಕ ಸಣ್ಣದಾಗಿ ಸ್ವಲ್ಪ ಹೊತ್ತು ಮಾತ್ರ ಬರುತ್ತದೆ. ನಂತರ ನೀರು ನಿಂತು ಹೋದ ಪಕ್ಷದಲ್ಲಿ ಮತ್ತೆ ನೀರು ಕಾಣಬೇಕಾದರೆ ಮಾರನೇ ದಿನವನ್ನೇ ಕಾಯಬೇಕಾಗಿದೆ. ನೀರು ದಿನಬಳಕೆಗೆ ಮತ್ತು ಕುಡಿಯಲು ಸಾಲದೆ ಅಪಾರ ಸಂಕಷ್ಟವನ್ನು ಎದುರಿಸುವಂತೆ ನೀರಿನ ಸಮಸ್ಯೆ ತಲೆದೋರಿದೆ ಎಂದು ಗ್ರಾಮದ ವೃದ್ಧ ಮಹಿಳೆ ಮಾದೇವಮ್ಮ ಅಳಲು.

ಶೌಚಾಲಯಕ್ಕೂ ನೀರಿಲ್ಲ: ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ಸಮಸ್ಯೆ ಒಂದೆಡೆಯಾದರೆ, ಮತ್ತೂಂದೆಡೆ ಜಾನುವಾರುಗಳಿಗೂ ನೀರು ಇಲ್ಲದೇ ಪಕ್ಕದ ಗ್ರಾಮಗಳಿಗೆ ಹೋಗಿ ನೀರು ತಂದು ಜಾನುವಾರುಗಳಿಗೆ ನೀಡುವಂತಾಗಿದೆ. ಸರ್ಕಾರ ಶೌಚಾಲಯಗಳನ್ನು ಬಳಸಬೇಕು ಎಂದು ಅಪಾರ ಪ್ರಚಾರದಲ್ಲಿ ತೊಡಗಿರುವ ಜಿಲ್ಲಾಡಳಿತ ಶೌಚಾಲಯಕ್ಕೂ ನೀರಿನ ಬರ ಎದುರಾಗಿದೆ. ಗ್ರಾಮಸ್ಥರು ಜಮೀನುಗಳಲ್ಲಿರುವ ಪಂಪ್‌ಸೆಟ್‌ಗಳಲ್ಲಿ ಬರುವ ನೀರನ್ನೇ ಬಳಕೆ ಮಾಡಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮದ ಆಲಯ್ಯ ದೂರಿದ್ದಾರೆ.

ಜಲ ಸಂಗ್ರಹಕ್ಕೆ ಗ್ರಾಪಂ ವಿಫ‌ಲ: ಗ್ರಾಮದಲ್ಲಿ ಕೆರೆಯೊಂದಿದ್ದು, ಕೆರೆಯಲ್ಲಿರುವ ಹೂಳನ್ನು ಇದುವ ರೆವಿಗೂ ಎತ್ತಿಸಿಲ್ಲ. ಕೆರೆಗೆ ತಡೆಗೋಡೆಗಳನ್ನು ನಿರ್ಮಾಣ ಮಾಡಿ, ಕೆರೆಯಲ್ಲಿ ಅಂತರ್ಜಲ ಶೇಖರಣೆ ಮಾಡುವಲ್ಲಿ ಗ್ರಾಮ ಪಂಚಾಯ್ತಿ ಸಂಪೂರ್ಣ ವಿಫ‌ಲವಾಗಿದೆ. ಕೆರೆಯು ಮಣ್ಣುಗಳಿಂದ ಮತ್ತು ಗಿಡಗಂಟೆಗಳಿಂದ ಆವೃತಗೊಳ್ಳುತ್ತಿದೆ. ಕೂಡಲೇ ಅಧಿಕಾರಿಗಳು ಕೆರೆಯನ್ನು ಅಭಿವೃದ್ಧಿಪಡಿಸಿ ಕೆರೆಗೆ ನೀರು ಭರ್ತಿಗೊಳಿಸುವ ಮೂಲಕ ಅಂತರ್ಜಲವನ್ನು ಹೆಚ್ಚಿಸುವ ಪ್ರಯತ್ನವನ್ನು ಅಧಿಕಾರಿಗಳು ಮಾಡಬೇಕಾಗಿದೆ.

 

● ಡಿ.ನಟರಾಜು

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಟ್ರಂಪ್‌ ಭರವಸೆಗಳ ಕಥೆಯೇನು?

ಟ್ರಂಪ್‌ ಭರವಸೆಗಳ ಕಥೆಯೇನು?

ಮನೆಯೊಳಗೆ ಬಿದ್ದ ಸೂಜಿ, ಹುಡುಕಾಟ ಹೊರಗೆ!

ಮನೆಯೊಳಗೆ ಬಿದ್ದ ಸೂಜಿ, ಹುಡುಕಾಟ ಹೊರಗೆ!

Paddy

ಬೆಂಬಲ ಬೆಲೆಯ ಭತ್ತ ಖರೀದಿ ಕೇಂದ್ರ ಈಗ ಆರಂಭವಾದರಷ್ಟೇ ಪ್ರಯೋಜನ

26 ದಿನಗಳ ಬಳಿಕ 60 ಕಿ.ಮೀ. ಕ್ರಮಿಸಿ ಮನೆಗೆ ಬಂದ ಶ್ವಾನ

26 ದಿನಗಳ ಬಳಿಕ 60 ಕಿ.ಮೀ. ಕ್ರಮಿಸಿ ಮನೆಗೆ ಬಂದ ಶ್ವಾನ

ನಾನು ಗೆದ್ದರೆ ಅಮೆರಿಕ ಜಯ ಗಳಿಸಿದಂತೆ: ಟ್ರಂಪ್‌

ನಾನು ಗೆದ್ದರೆ ಅಮೆರಿಕ ಜಯ ಗಳಿಸಿದಂತೆ: ಟ್ರಂಪ್‌

ಗ್ರಾಮ ಪಂಚಾಯತ್ ನಲ್ಲಿನ್ನು ಆನ್‌ಲೈನ್‌ ಲೆಕ್ಕ ಪರಿಶೋಧನೆ !

ಗ್ರಾಮ ಪಂಚಾಯತ್ ನಲ್ಲಿನ್ನು ಆನ್‌ಲೈನ್‌ ಲೆಕ್ಕ ಪರಿಶೋಧನೆ !

ಭಾರತ-ಅಮೆರಿಕ ನಿಕಟ ; ಮಹತ್ವದ 5 ಒಪ್ಪಂದಗಳಿಗೆ ಉಭಯ ದೇಶಗಳ ಸಹಿ

ಭಾರತ-ಅಮೆರಿಕ ನಿಕಟ ; ಮಹತ್ವದ 5 ಒಪ್ಪಂದಗಳಿಗೆ ಉಭಯ ದೇಶಗಳ ಸಹಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಾಮರಾಜನಗರ: 54 ಹೊಸ ಕೋವಿಡ್ ಪ್ರಕರಣ: ಒಟ್ಟು 323 ಸಕ್ರಿಯ

ಚಾಮರಾಜನಗರ: 54 ಹೊಸ ಕೋವಿಡ್ ಪ್ರಕರಣ: ಒಟ್ಟು 323 ಸಕ್ರಿಯ

ಮಲೆ ಮಹದೇಶ್ವರ ಬೆಟ್ಟ: ಭಕ್ತಾದಿಗಳ ನಿಷೇಧದ ನಡುವೆಯೂ ಸರಳ ಮತ್ತು ಸಂಭ್ರಮದ ತೆಪ್ಪೋತ್ಸವ

ಮಲೆ ಮಹದೇಶ್ವರ ಬೆಟ್ಟ: ಭಕ್ತಾದಿಗಳ ನಿಷೇಧದ ನಡುವೆಯೂ ಸರಳ ಮತ್ತು ಸಂಭ್ರಮದ ತೆಪ್ಪೋತ್ಸವ

cn-tdy-3

ಗೌರೇಶ್ವರ, ಪಾರ್ವತಾಂಬೆ ಉತ್ಸವ

cn-tdy-2

ಗ್ರಾಪಂಗಳಲ್ಲಿ ಗ್ರಂಥಾಲಯಕ್ಕೆ ಸ್ಥಳ ಕಲ್ಪಿಸಿ

cn-tdy-1

ದೇಗುಲಗಳ ಅಭಿವೃದ್ಧಿ ಕಾಮಗಾರಿ ಪೂರ್ಣಕ್ಕೆ ಗಡುವು

MUST WATCH

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!ಹೊಸ ಸೇರ್ಪಡೆ

ಟ್ರಂಪ್‌ ಭರವಸೆಗಳ ಕಥೆಯೇನು?

ಟ್ರಂಪ್‌ ಭರವಸೆಗಳ ಕಥೆಯೇನು?

ಮನೆಯೊಳಗೆ ಬಿದ್ದ ಸೂಜಿ, ಹುಡುಕಾಟ ಹೊರಗೆ!

ಮನೆಯೊಳಗೆ ಬಿದ್ದ ಸೂಜಿ, ಹುಡುಕಾಟ ಹೊರಗೆ!

Paddy

ಬೆಂಬಲ ಬೆಲೆಯ ಭತ್ತ ಖರೀದಿ ಕೇಂದ್ರ ಈಗ ಆರಂಭವಾದರಷ್ಟೇ ಪ್ರಯೋಜನ

26 ದಿನಗಳ ಬಳಿಕ 60 ಕಿ.ಮೀ. ಕ್ರಮಿಸಿ ಮನೆಗೆ ಬಂದ ಶ್ವಾನ

26 ದಿನಗಳ ಬಳಿಕ 60 ಕಿ.ಮೀ. ಕ್ರಮಿಸಿ ಮನೆಗೆ ಬಂದ ಶ್ವಾನ

ನಾನು ಗೆದ್ದರೆ ಅಮೆರಿಕ ಜಯ ಗಳಿಸಿದಂತೆ: ಟ್ರಂಪ್‌

ನಾನು ಗೆದ್ದರೆ ಅಮೆರಿಕ ಜಯ ಗಳಿಸಿದಂತೆ: ಟ್ರಂಪ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.