ವಿದ್ಯುತ್ ಸ್ವಿಚ್ ಬೋರ್ಡ್ ಕೈ ಹಾಕಿದ 11 ತಿಂಗಳ ಮಗು ಸಾವು
Team Udayavani, May 22, 2022, 2:01 PM IST
ಯಳಂದೂರು: ತಾಲೂಕಿನ ವೈ.ಕೆ.ಮೋಳೆ ಗ್ರಾಮದದಲ್ಲಿ ಭಾನುವಾರ ಬೆಳಿಗಿನ ಜಾವದಲ್ಲಿ ಮಗುವೊಂದು ವಿದ್ಯುತ್ ಸ್ವಿಚ್ ಬೋರ್ಡ್ ಗೆ ಕೈ ಹಾಕಿದ ಪರಿಣಾಮ ಮೃತಪಟ್ಟಿರುವ ಘಟನೆ ಜರುಗಿದೆ.
ಗ್ರಾಮದ ರಂಗಸ್ವಾಮಿ- ಲಕ್ಷ್ಮಿ ದಂಪತಿಯ 11 ತಿಂಗಳ ಪುತ್ರ ಗಗನ್ ಭಾನುವಾರ ಎಂದಿನಂತೆ ತಮ್ಮನ ಮನೆಯವರ ಜೊತೆ ಆಟವಾಡಿದ್ದಾನೆ. ನಂತರ ಸ್ನಾನ ಮಾಡಿಸಿ ಮನೆಯಲ್ಲಿ ಪೋಷಕರು ಮಲಗಿಸಿದ್ದಾರೆ. ನಂತರ ಎಚ್ಚರಗೊಂಡಾಗ ವಿದ್ಯುತ್ ಸ್ವಿಚ್ ಬೋರ್ಡ್ ಗೆ ಕೈ ಹಾಕಿದೆ. ಮಗು ಕಿರುಚುವುದನ್ನು ಗಮನಿಸಿದ ಮಗುವಿನ ಚಿಕ್ಕಮ್ಮ ಮಗುವನ್ನು ಬಿಡಿಸಲು ತೆರಳಿದಾಗ ಅವರಿಗೂ ವಿದ್ಯುತ್ ಶಾಕ್ ಹೊಡೆದಿದೆ.
ಇದನ್ನೂ ಓದಿ:ಕಾರು-ಬೈಕ್ ಢಿಕ್ಕಿ: ಓರ್ವ ಸಾವು; ಮತ್ತೋರ್ವನ ಸ್ಥಿತಿ ಗಂಭೀರ
ಇಬ್ಬರನ್ನು ತಕ್ಷಣ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕರೆದೊಕೊಂಡು ಹೋಗಿದ್ದಾರೆ. ಆದರೆ ಮಗು ಮೃತಪಟ್ಟಿದೆ.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…