- Tuesday 10 Dec 2019
ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿ
Team Udayavani, Sep 14, 2019, 3:00 AM IST
ಚಾಮರಾಜನಗರ: ಶಿಕ್ಷಣದಲ್ಲಿ ಸಾಧಿಸುವುದರ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಒಬ್ಬ ವಿದ್ಯಾರ್ಥಿ ವೈಯಕ್ತಿಕ ನೆಲೆಯಲ್ಲಿ ವಿಕಾಸಗೊಳ್ಳಲು ಸಾಧ್ಯ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಎಲ್ಲಾ ಕೋರ್ಸ್ ಲಭ್ಯ: ಹಿಂದೆ ಉನ್ನತ ಶಿಕ್ಷಣವನ್ನರಸಿ ನಮ್ಮ ಜಿಲ್ಲೆಯ ಮಕ್ಕಳು ಮೈಸೂರು, ಬೆಂಗಳೂರಿಗೆ ಹೋಗಬೇಕಾಗಿತ್ತು. ಆದರೆ ಇಂದು ಚಾಮರಾಜನಗರದಲ್ಲೇ ಎಲ್ಲಾ ಕೋರ್ಸ್‌ಗಳು ಲಭ್ಯವಿದೆ. ನಮ್ಮ ಜಿಲ್ಲೆ ಸಹ ಶೈಕ್ಷಣಿಕವಾಗಿ ವರ್ಧಮಾನಕ್ಕೆ ಬರುತ್ತಿದೆ ಎಂದರು.
ಹೆಣ್ಣುಮಕ್ಕಳು ಸಬಲರಾಗಲಿ: ಹೆಣ್ಣು ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ಅರಿತು ಜಿಲ್ಲೆಯಲ್ಲಿ ಹೆಣ್ಣುಮಕ್ಕಳಿಗಾಗಿ ಸರ್ಕಾರಿ ಕಾಲೇಜನ್ನು ಆರಭಿಸಲಾಯಿತು. ಅಲ್ಪಸಂಖ್ಯೆಯಿಂದ ಪ್ರಾರಂಭವಾದ ಈ ಕಾಲೇಜು ಇಂದು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ಅಲ್ಲದೇ ವಸತಿ ನಿಲಯಗಳನ್ನು ಸಹ ನಿರ್ಮಿಸಲಾಗಿದೆ. ಇದರಿಂದ ಶೈಕ್ಷಣಿಕವಾಗಿ ಹೆಣ್ಣುಮಕ್ಕಳು ಸಬಲರಾಗಲಿದ್ದಾರೆ ಎಂದು ತಿಳಿಸಿದರು.
ಪಠ್ಯೇತರ ಚಟುವಟಿಕೆ ಸಹಕಾರಿ: ಗುಂಡ್ಲುಪೇಟೆ ಜೆಎಸ್‌ಎಸ್ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಎನ್. ಮಹದೇವಸ್ವಾಮಿ ಮಾತನಾಡಿ, ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ವಿದ್ಯಾರ್ಥಿಯಲ್ಲಿರುವ ಸೃಜನಾತ್ಮಕ ಚಿಂತನೆಯನ್ನು ಹೊರಗೆಳೆಯುವುದಲ್ಲದೇ, ಅವರ ವ್ಯಕ್ತಿತ್ವ ವಿಕಸನದಲ್ಲೂ ಸಹಾಯ ಮಾಡುತ್ತದೆ ಎಂದರು.
ಪೋಷಕರ ಬಗ್ಗೆ ಕಾಳಜಿ ಇರಲಿ: ಸರ್ಕಾರಿ ರೇಷ್ಮೆ ಬಿತ್ತನೆ ಕೋಠಿಯ ರೇಷ್ಮೆ ಕೃಷಿ ಉಪನಿರ್ದೇಶಕ ಲಕ್ಷ್ಮೀ ನರಸಿಂಹಯ್ಯ ಮಾತನಾಡಿ, ಪ್ರತಿಯೊಬ್ಬ ಮಕ್ಕಳಿಗೂ ತಾನು ಶಿಕ್ಷಣದ ನಂತರ ಏನು ಮಾಡಬೇಕು, ಯಾವ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಅರಿವಿರಬೇಕು. ಆಗ ಓದಿದ ವಿದ್ಯೆ ಸಾರ್ಥಕಗೊಳ್ಳುತ್ತದೆ. ಮಕ್ಕಳ ಒಳಿತಿಗೆ ಸದಾ ಶ್ರಮಿಸುವ ಪೋಷಕರ ಬಗ್ಗೆ ಕಾಳಜಿ ಇರಬೇಕಾದ್ದು ಬಹು ಮುಖ್ಯ. ಈ ಎಲ್ಲದರ ಪಾಲನೆಯಿಂದ ಒಬ್ಬ ಉತ್ತಮ ನಾಗರಿಕ ರೂಪುಗೊಳ್ಳುತ್ತಾನೆ ಎಂದು ಹೇಳಿದರು.
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಎಂ. ಆರ್. ಸುಮತಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿದ್ದ ನಮ್ಮ ಕಾಲೇಜು ಇಂದು ಬೃಹದಾಕಾರವಾಗಿ ಬೆಳೆದಿದೆ. ಶೈಕ್ಷಣಿಕವಾಗಿ ಅಷ್ಟೇ ಅಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲೂ ನಮ್ಮ ವಿದ್ಯಾರ್ಥಿನಿಯರು ಮುಂಚೂಣಿಯಲ್ಲಿದ್ದಾರೆ. ಇದೆಲ್ಲಾ ನಮ್ಮ ಕಾಲೇಜು ತೋರಿದ ಒಗ್ಗಟ್ಟಿನಿಂದ ಸಾಧ್ಯವಾಗಿದೆ ಎಂದರು. ಕಾಲೇಜಿಗೆ ಒದಗಿಸಬೇಕಾಗಿರುವ ಸೌಕರ್ಯಗಳ ಕುರಿತು ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಸದಾಶಿವಮೂರ್ತಿ, ಸಾಂಸ್ಕೃತಿಕ ಸಂಚಾಲಕ ಟಿ. ಆರ್. ಜಯಣ್ಣ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಚಾಲಕಿ ಡಾ. ಎಂ. ಸಿ. ಪ್ರಭಾವತಿ, ಕ್ರೀಡಾ ಮತ್ತು ರೆಡ್‌ಕ್ರಾಸ್ ಸಂಚಾಲಕ ಹೆಗಡೆ ಮಂಜುನಾಥ್ ಗಣಪತಿ, ರಾಷ್ಟ್ರೀಯ ಸೇವಾ ಯೋಜನೆ ಸಂಚಾಲಕಿ ಎಂ. ಪಾರ್ವತಿ ಉಪಸ್ಥಿತರಿದ್ದರು.
ಈ ವಿಭಾಗದಿಂದ ಇನ್ನಷ್ಟು
-
ಗುಂಡ್ಲುಪೇಟೆ: ಬಂಡೀಪುರ ಹುಲಿ ಯೋಜನೆಯ ವ್ಯಾಪ್ತಿಯಲ್ಲಿರುವ ತಾಲೂಕಿನ ಆಡಿನಕಣಿವೆ ಗಿರಿಜನ ಕಾಲೋನಿಯಲ್ಲಿ ಅಗತ್ಯ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಮಂಗಲ ಗ್ರಾಮ...
-
ಯಳಂದೂರು: ರೇಷ್ಮೆ ಬೆಳೆ ಮೊದಲಿನಷ್ಟು ಜಟಿಲವಾಗಿಲ್ಲ. ಇದನ್ನು ಬೆಳೆಯುವುದು ಸುಲಭ. ಇದಕ್ಕೆ ಉತ್ತಮ ಬೆಲೆಯೂ ಇದೆ. ರೈತರು ಈ ಕೃಷಿಗೆ ವಾಲಿದರೆ ಆರ್ಥಿಕವಾಗಿ ಸಬಲರಾಗಬಹುದು...
-
ಯಳಂದೂರು: ದೀಪದ ಕೆಳಗೆ ಕತ್ತಲು ಎಂಬ ಗಾದೆ ಮಾತಿನಂತೆ ಗ್ರಾಮಗಳ ರಸ್ತೆ, ಚರಂಡಿ, ಕಟ್ಟಡ ನಿರ್ಮಾಣ ಮಾಡಿ, ಅಭಿವೃದ್ಧಿಪಡಿಸುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು...
-
ಚಾಮರಾಜನಗರ: ಒಂದೆಡೆ ಜನಸಂಖ್ಯೆ ಮಿತಿ ಮೀರಿ ಕಾಣುತ್ತಿದ್ದರೆ, ಇನ್ನೊಂದೆಡೆ ಜಿಲ್ಲೆಯಲ್ಲಿ ರೈತನ ಜೀವನಾಡಿಗಳೆನಿಸಿದ ದನಕರುಗಳು, ಎಮ್ಮೆಗಳ ಸಂಖ್ಯೆ ಇಳಿಮುಖವಾಗುತ್ತಿದೆ....
-
ಗುಂಡ್ಲುಪೇಟೆ: ಕೂಲಿ ಕಾರ್ಮಿಕರು ತಮ್ಮ ವೃದ್ಧಾಪ್ಯದಲ್ಲಿ ತಮ್ಮ ಕುಟುಂಬ ನಿರ್ವಹಣೆ ಮಾಡಲು ಕಷ್ಟವಾಗಬಾರದು ಎಂಬ ಸದುದ್ದೇಶದಿಂದ ಕೇಂದ್ರ ಸರ್ಕಾರದ ಕಾರ್ಮಿಕ...
ಹೊಸ ಸೇರ್ಪಡೆ
-
ಮಣಿಪಾಲ: ಉಪ ಚುನಾವಣೆಯಲ್ಲಿ ಮತದಾರರು ನೀಡಿದ ಸ್ಪಷ್ಟ ತೀರ್ಪಿನ ಕುರಿತು ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಪ್ರತಿಕ್ರಿಯೆಗಳು...
-
ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಉತ್ತರ ಈಶಾನ್ಯ ವಿದ್ಯಾರ್ಥಿ ಸಂಘಟನೆ 11ಗಂಟೆಗಳ ಬಂದ್ ಗೆ ಕರೆ ಕೊಟ್ಟಿದ್ದು, ಈ...
-
ತುಮಕೂರು: ಒಂದೂವರೆ ವರ್ಷದೊಳಗೆ ಗ್ರಾಮಾಂತರ ಕ್ಷೇತ್ರಕ್ಕೆ 300 ಕೋಟಿಗೂ ಹೆಚ್ಚು ಅನುದಾನ ತಂದಿದ್ದೇನೆ. ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದರೆ ಸಾಕಷ್ಟು ಅನುದಾನ...
-
ಮಧುಗಿರಿ: ರಾಮಾಯಣದಲ್ಲಿ ನಿಷ್ಠೆ ಹಾಗೂ ನಂಬಿಕೆಗೆ ಅರ್ಹವಾಗಿದ್ದ ಏಕೈಕ ದೇವರು ಹನುಮಂತ. ಇಂದು ಅಂತಹ ನಿಷ್ಠೆ ಯುವ ಜನತೆ ಹೊಂದಬೇಕಿದೆ ಎಂದು ಕಸಾಪ ಅಧ್ಯಕ್ಷ ಚಿ.ಸೂ....
-
ಕನಕಪುರ: ಪ್ರತಿ ವರ್ಷದಂತೆ ಈ ವರ್ಷವೂ ಸಹ ಹನುಮ ಜಯಂತಿ ಅಂಗವಾಗಿ ನಗರದ ಹನುಮ ದೇವಾಲಯಗಳಲ್ಲಿ ವಿಶೇಷ ಪೂಜೆ ಅನ್ನಸಂತರ್ಪಣೆ ಏರ್ಪಡಿಸಿ ಅದ್ಧೂರಿಯಾಗಿ ಹನುಮ ಜಯಂತಿ...