ವಿದ್ಯುತ್‌ ಸಮಸ್ಯೆ ಬಗೆಹರಿಸಲು ರೈತರ ಆಗ್ರಹ

Team Udayavani, Oct 4, 2019, 4:15 PM IST

ಕೊಳ್ಳೇಗಾಲ: ತಾಲೂಕು ಮತ್ತು ಹನೂರು ತಾಲೂಕು ಗಳಲ್ಲಿ ರೈತರು ವಿದ್ಯುತ್‌ ಸಮಸ್ಯೆ ತಲೆದೋರಿದ್ದು, ಕೂಡಲೇ ಪರಿಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಎರಡು ತಾಲೂಕು ಘಟಕದ ರೈತ ಮುಖಂಡರು ಸೆಸ್ಕ್ ಕಾರ್ಯಪಾಲಕ ಅಭಿಯಂತರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಎರಡು ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತ ಮುಖಂಡರು ಪಟ್ಟಣದ ಆರ್‌ಎಂಸಿ ಆವರಣದಲ್ಲಿ ಸೇರಿ ನಂತರ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ರೈತರಿಗೆ ಎದುರಾಗಿರುವ ಸಮಸ್ಯೆ ಪರಿಹರಿಸ ಬೇಕು. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.

ಕಿರುಕುಳ ತಪ್ಪಿಸಿ: ಇದೇ ವೇಳೆ ರೈತ ಮುಖಂಡರು ಮಾತ ನಾಡಿ, ವಿದ್ಯುತ್‌ ಬಿಲ್‌ ಕಟ್ಟದೆ ಕರ ನಿರಾಕರಣೆ ಚಳವಳಿ ಮಾಡುತ್ತಿರುವ ರೈತರ ವಿದ್ಯುತ್‌ ಬಿಲ್‌ ಬಾಕಿಯನ್ನು ವಸೂಲಿ ಮಾಡದೆ ಹಳೆಯ ಮೀಟರ್‌ಗಳನ್ನು ತೆಗೆದು ಹೊಸ ಮೀಟರ್‌ ಅಳವಡಿಸಬೇಕು. ರೈತರ ಮನೆಗಳಿಗೆ ತೆರಳಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ ಕಿರುಕುಳ ನೀಡುತ್ತಿರುವುದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ಕಠಿಣ ಕ್ರಮಕ್ಕೆ ಆಗ್ರಹ: ಎರಡು ತಾಲೂಕುಗಳಲ್ಲಿ ಸೆಸ್ಕ್ಇ ಲಾಖೆ ವತಿಯಿಂದ ನೇಮಕಗೊಂಡಿರುವ ಅಧಿಕಾರಿ ಗಳು ಮತ್ತು ಲೈನ್‌ಮ್ಯಾನ್‌ಗಳು ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಇರಬೇಕು. ವಾಸ್ತವ್ಯ ಇರದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಇಲಾಖೆಯಲ್ಲಿ ಮೂರು ವರ್ಷಕ್ಕಿಂತ ಹೆಚ್ಚು ವರ್ಷಗಳ ಕಾಲ ಕೆಲಸ ನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬದಲಾಯಿಸಿ ರೈತರ ಕೆಲಸ ಕಾರ್ಯಗಳು ಸುಗಮಗೊಳ್ಳುವಂತೆ ಮಾಡ ಬೇಕು ಎಂದು ಆಗ್ರಹಿಸಿದರು.

ಸಮಸ್ಯೆ ಬಗೆಹರಿಸಿ: ವಿದ್ಯುತ್‌ ಪರಿವರ್ತಕ ಕೆಟ್ಟ ವೇಳೆ ಅದನ್ನು ಬದಲಾಯಿಸಲು ಇಲಾಖೆಯಿಂದ ನೂತನ ಪರಿಕರವನ್ನು ರೈತರು ವಾಹನದಲ್ಲಿ ಸಾಗಿಸಲು ಮತ್ತು ಇಳಿಸಲು ರೈತರಿಂದ ಹಣವನ್ನು ಕೇಳುತ್ತಾರೆ ಮತ್ತು ಪರಿವರ್ತಕದಲ್ಲಿ ಆಯಿಲ್‌ ರೈತರೇ ತರುವಂತೆ ಒತ್ತಾಯಿಸುತ್ತಾರೆ. ರಾತ್ರಿ ವೇಳೆ ವಿದ್ಯುತ್‌ ಕಡಿತವಾದ ಪಕ್ಷದಲ್ಲಿ ಸಂಬಂಧಪಟ್ಟ ಲೈನ್‌ಮ್ಯಾನ್‌ಗಳಿಗೆ ಪೋನ್‌ ಮಾಡಿದರೆ ನೀವೆ ಸರಿಪಡಿಸಿಕೊಳ್ಳಿ ಎಂದು ಹೇಳುತ್ತಾರೆ. ರೈತರು ರಿಪೇರಿ ಮಾಡುವ ವೇಳೆ ಅಪಘಾತ ಸಂಭವಿಸಿದರೆ ನಿಮ್ಮನ್ನು ಕೆಲಸ ಮಾಡುವಂತೆ ಯಾರು ಹೇಳಿದರು ಧಮಕಿ ಹಾಕುತ್ತಾರೆ ಎಂದು ಆರೋಪಿಸಿದರು.

ಪವರ್‌ ಸ್ಟೇಷನ್‌ ಪೂರ್ಣಗೊಳಿಸಿ: ವಿದ್ಯುತ್‌ ಪರಿ ವರ್ತಕಗಳು ಸುಟ್ಟುಹೋದರೆ 72 ಗಂಟೆಯಲ್ಲಿ ಸರಿಪಡಿಸಬೇಕೆಂಬ ಸರ್ಕಾರದ ನಿಯಮವಿದ್ದರೂ ಸಹ ತಿಂಗಳುಗಟ್ಟಲೆ ಸರಿಪಡಿಸದೆ ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ಹನೂರು ತಾಲೂಕಿನ ಕಾಡಂಚಿನ ಗ್ರಾಮಗಳಿಗೆ ಕಳಪೆ ವಿದ್ಯುತ್‌ ಪೂರೈಕೆಯಿಂದ ರೈತರು ನಷ್ಟಕ್ಕೆ ಒಳಗಾಗುತ್ತಿದ್ದು, ಉತ್ತಮ ಗುಣಮಟ್ಟದ ವಿದ್ಯುತ್‌ ಪೂರೈಕೆ ಮಾಡಬೇಕು ಮತ್ತು ಹನೂರು ತಾಲೂಕಿನ

ಅಜ್ಜೀಪುರದಲ್ಲಿ ಪವರ್‌ ಸ್ಟೇಷನ್‌ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು. ರೈತ ಮುಖಂಡರ ಸಮಸ್ಯೆಗಳನ್ನು ಆಲಿಸಿದ ಮೈಸೂರಿನ ಸೂಪರಿಟೆಂಡೆಂಟ್‌ ಎಂಜಿನಿಯರ್‌ ಮಹದೇವ ಪ್ರಸನ್ನ ರೈತರ ದೂರುಗಳನ್ನು ಆಲಿಸಿದ ಬಳಿಕ ಮಾತನಾಡಿ, ಕೂಡಲೇ ಸಮಸ್ಯೆಗಳ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಕಾನೂನು ಕ್ರಮದ ಭರವಸೆ: ಕೆಟ್ಟಿರುವ ವಿದ್ಯುತ್‌ ಪರಿವರ್ತಕಗಳನ್ನು 24 ಗಂಟೆಯೊಳಗಾಗಿ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಮತ್ತು ಕಳೆದ ಮೂರು ತಿಂಗಳ ಹಿಂದೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಲೈನ್‌ಮ್ಯಾನ್‌ಗಳು ಕೇಂದ್ರ ಸ್ಥಾನದಲ್ಲಿ ಇರಬೇಕೆಂದು ಸೂಕ್ತ ನಿರ್ದೇಶನ ನೀಡಿದ್ದು, ಇದರ ಬಗ್ಗೆ ಸಮಗ್ರವಾಗಿ ಪರಿಗಣಿಸಿ ಕಾನೂನು ಕ್ರಮಕೈಗೊಳ್ಳುವ ಭರವಸೆ ನೀಡಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಶಿವರಾಮು, ಕಾರ್ಯಾಧ್ಯಕ್ಷ ಶೈಲೇಂದ್ರ, ತಾಲೂಕು ಅಧ್ಯಕ್ಷ ಗೌಡೇಗೌಡ, ಉಪಾಧ್ಯಕ್ಷ ಬಸವರಾಜು, ರೈತ ಮುಖಂಡರಾದ ಜೋಯಲ್‌, ಭಾಸ್ಕರ್‌, ಚೌಡಶೆಟ್ಟಿ, ಏಲಕ್ಕಿಗೌಡ, ಬಸವರಾಜು, ನಾಗೇಂದ್ರ, ರಾಜಣ್ಣ,

ಸೋಮಣ್ಣ, ಶಿವಮ್ಮ, ರಾಣಿ, ಕೆಂಪಣ್ಣ, ಮುಳ್ಳೂರು ಶಿವಮಲ್ಲು, ಸೆಸ್ಕ್ ಇಇ ಪ್ರದೀಪ್‌, ಹನೂರು ಎಇಇ ಶಂಕರ್‌, ಕೊಳ್ಳೇಗಾಲ ಎಇಇ ಲಿಂಗರಾಜು ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಹನೂರು: ಧಾರಾಕಾರ ಮಳೆಯಿಂದ ಉಕ್ಕಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋಗಿ ಮೂವರು ಮಕ್ಕಳು ಮೃತಪಟ್ಟಿದ್ದ ರಾಮೇಗೌಡನದೊಡ್ಡಿ ಗ್ರಾಮಕ್ಕೆ ಶಾಸಕ ನರೇಂದ್ರ,...

  • ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಹಾದು ಹೋಗಿರುವ ತಮಿಳುನಾಡು ಮತ್ತು ಕೇರಳದ ಹೆದ್ದಾರಿಯಲ್ಲಿ ಹಗಲು ಸಂಚಾರ ನಿರ್ಭಂದಿಸದಂತೆ...

  • ಕೊಳ್ಳೇಗಾಲ: ವೀರಶೈವ ಸಮಾಜ ತುಳಿತಕ್ಕೆ ಒಳಗಾಗುತ್ತಿದ್ದು, ಸಮಾಜದ ಸಂಘಟನೆಗಳು ಸಂಘಟಿತರಾಗಿ ಸಮಾಜವನ್ನು ಮತ್ತಷ್ಟು ಮೇಲೆತ್ತುವ ಪ್ರಯತ್ನ ಮಾಡಬೇಕು ಎಂದು ರಾಷ್ಟ್ರೀಯ...

  • ಹನೂರು: ಆದಿಕವಿ, ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಯಣ ಗ್ರಂಥದಲ್ಲಿ ಅಡಕವಾಗಿರುವಂತಹ‌ ಪಿತೃವಾಕ್ಯ ಪರಿಪಾಲನೆ, ಸೋದರ ಬಾಂಧವ್ಯ ಸಂಬಂಧಗಳ ಅಂಶಗಳನ್ನು ಇಂದಿನ...

  • ಚಾಮರಾಜನಗರ: ಬಂಡೀಪುರ ಅರಣ್ಯದಂಚಿನ ಗ್ರಾಮದಲ್ಲಿ ಇಬ್ಬರ ಸಾವಿಗೆ ಕಾರಣವಾಗಿದ್ದ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಯಶಸ್ವಿಯಾಗಿದ್ದಾರೆ. ಭಾನುವಾರ ...

ಹೊಸ ಸೇರ್ಪಡೆ