Udayavni Special

ಕೊನೆಗೂ ಕೆಸ್ತೂರು ಶಾಲೆಗೆ ದಾಸೋಹದ ಬಿಸಿಯೂಟ


Team Udayavani, Jul 30, 2019, 3:00 AM IST

konegu

ಸಂತೆಮರಹಳ್ಳಿ: ಕೆಸ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಿಸಿಯೂಟದಲ್ಲಿ ಹಲ್ಲಿ ಬಿದ್ದಿದ್ದ ಹಿನ್ನೆಲೆಯಲ್ಲಿ ಜೆಎಸ್‌ಎಸ್‌ ಅಕ್ಷರ ದಾಸೋಹದಿಂದ ಬರುತ್ತಿದ್ದ ಬಿಸಿಯೂಟ ಸ್ಥಗಿತಗೊಂಡಿತ್ತು. ಆದರೆ ಸೋಮವಾರ ಮತ್ತೆ ಇಲ್ಲಿನ ಪೋಷಕರ ಮನವೊಲಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದು ಮತ್ತೆ ಇಲ್ಲಿಗೆ ಊಟ ಸರಬರಾಜಾಗುತ್ತಿದೆ.

ಹಲ್ಲಿ ಬಿದ್ದಿತ್ತು: ಇಡೀ ಯಳಂದೂರು ತಾಲೂಕಿನ ಸರ್ಕಾರಿ, ಅನುದಾನಿತ ಶಾಲೆಗಳಿಗೆ ಜೆಎಸ್‌ಎಸ್‌ ಅಕ್ಷರ ದಾಸೋಹದ ವತಿಯಿಂದ ಮಧ್ಯಾಹ್ನದ ಬಿಸಿಯೂಟ ಹಾಗೂ ಕ್ಷೀರಭಾಗ್ಯ ಯೋಜನೆಯಡಿಯಲ್ಲಿ ಹಾಲು ವಿತರಿಸಲಾಗುತ್ತದೆ. ಆದರೆ ಜು.2 ರಂದು 5ನೇ ತರಗತಿ ವಿದ್ಯಾರ್ಥಿಗೆ ಬಿಸಿಯೂಟದ ಸಾಂಬರ್‌ನಲ್ಲಿ ಹಲ್ಲಿ ಕಾಣಿಸಿಕೊಂಡಿತ್ತು. ಈತ ಕೂಡಲೇ ಎಚ್ಚೆತ್ತು ಶಿಕ್ಷಕರಿಗೆ ಈ ವಿಷಯ ತಿಳಿಸಿದ್ದರಿಂದ ಅಂದು ಯಾರಿಗೂ ಊಟವನ್ನು ಕೊಟ್ಟಿರಲಿಲ್ಲ.

ಗ್ರಾಮಸ್ಥರು ಒಪ್ಪುತ್ತಿರಲಿಲ್ಲ: ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿಗಳು ಭೇಟಿ ನೀಡಿ ಎಸ್‌ಡಿಎಂಸಿ ಸದಸ್ಯರು ಹಾಗೂ ಪೋಷಕರ ದೂರುಗಳನ್ನು ಸ್ವೀಕರಿಸಿ ಅವರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೆ ಬಿಸಿಯೂಟವನ್ನು ಶಾಲೆಯಲ್ಲೇ ಅಡುಗೆ ಸಹಾಯಕರಿಂದ ತಯಾರಿಸಿ ಕೊಡಬೇಕು. ಇಲ್ಲವಾದಲ್ಲಿ ನಾವು ಇದನ್ನು ಬಹಿಷ್ಕರಿಸುತ್ತೇವೆ ಎಂದು ಪೋಷಕರು ಎಚ್ಚರಿಕೆ ನೀಡಿದ್ದರು. ಅಂದಿನಿಂದ ಈ ಶಾಲೆಯಲ್ಲಿ ಜೆಎಸ್‌ಎಸ್‌ ಅಕ್ಷರ ದಾಸೋಹದಿಂದ ವಿತರಣೆಯಾಗುವ ಬಿಸಿಯೂಟ ಹಾಗೂ ಹಾಲು ಸರಬರಾಜು ಮಾಡಲು ಗ್ರಾಮಸ್ಥರು ಒಪ್ಪುತ್ತಿರಲಿಲ್ಲ.

ಮನವೊಲಿಸಿದರೂ ಒಪ್ಪಿರಲಿಲ್ಲ: ಹಾಲು ಹಾಗೂ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವುದು ಕಡ್ಡಾಯವಾಗಿದೆ. ಆದರೆ ಹಲ್ಲಿ ಬಿದ್ದ ಪ್ರಕರಣದಿಂದ ಮಕ್ಕಳ ಪೋಷಕರು ದಾಸೋಹದ ಊಟ ಬೇಡ ಇಲ್ಲೇ ತಯಾರಿಸಿ ಬಡಿಸಬೇಕು ಎಂದು ಪಟ್ಟು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ನಮ್ಮ ಇಲಾಖೆಯ ಅಧಿಕಾರಿಗಳು, ದಾಸೋಹದ ಅಧಿಕಾರಿಗಳು ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಇದಕ್ಕೆ ಪೋಷರಕು ಸಮ್ಮತಿಸಿರಲಿಲ್ಲ.

ಸಿಇಒ ಸೂಚನೆ ಮೇರೆಗೆ ಬಿಸಿಯೂಟ: ಮಕ್ಕಳಿಗೆ ಯಾವುದೇ ಕಾರಣಕ್ಕೂ ಮಧ್ಯಾಹ್ನದ ಬಿಸಿಯೂಟ ನಿಲ್ಲಿಸಬಾರದು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲತಾ ಕುಮಾರಿ ಸೂಚನೆ ನೀಡಿದ್ದರಿಂದ ಚಾಮರಾಜನಗರದಿಂದಲೇ ಅಡುಗೆ ಪದಾರ್ಥಗಳನ್ನು ತೆಗೆದುಕೊಂಡು ಹೋಗಿ ಅಲ್ಲೇ ಅಡುಗೆ ತಯಾರಿಸಿ ಮಕ್ಕಳಿಗೆ ನೀಡಲಾಗುತ್ತಿತ್ತು. ಆದರೆ ಕಳೆದ ಮೂರು ದಿನಗಳಿಂದ ಇಲ್ಲಿ ಅಡುಗೆ ಮಾಡುತ್ತಿರಲಿಲ್ಲ.

ಈಗ ಜಿಪಂ ಸಿಇಒ ಸೂಚನೆ ಮೇರೆಗೆ ಮತ್ತೆ ಜೆಎಸ್‌ಎಸ್‌ ಅಕ್ಷರ ದಾಸೋಹದಿಂದಲೇ ಊಟ ಸರಬರಾಜು ಮಾಡಲು ಪೋಷಕರು ಒಪ್ಪಿದ್ದಾರೆ. ಹಾಗಾಗಿ ಮತ್ತೆ ಇದಕ್ಕೆ ಚಾಲನೆ ನೀಡಲಾಗಿದೆ ಎಂದು ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಉದಯ್‌ಕುಮಾರ್‌ ಮಾಹಿತಿ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿ.ತಿರುಮಲಾಚಾರಿ ಶಿಕ್ಷಣ ಸಂಯೋಜಕ ಶಿವಲಂಕಾರ್‌, ಸಿಆರ್‌ಪಿ ಚಿಕ್ಕನಂಜಯ್ಯ ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್‌ ಸದಸ್ಯರು ಸೇರಿದಂತೆ ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಇದ್ದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

SIGANDOOR

ಸಿಗಂದೂರು ವಿವಾದ ಸುಖಾಂತ್ಯ: ನ್ಯಾಯಾಲಯದ ಮಧ್ಯಸ್ತಿಕೆಯಲ್ಲಿ ಆಡಳಿತಮಂಡಳಿ-ಅರ್ಚಕರ ನಡುವೆ ರಾಜಿ

maharatysra

CBI ತನಿಖೆಗಿದ್ದ ‘ಸಾಮಾನ್ಯ ಒಪ್ಪಿಗೆ’ಯನ್ನು ಹಿಂಪಡೆದ ಠಾಕ್ರೆ ಸರ್ಕಾರ: ಏನಿದು ಬೆಳವಣಿಗೆ ?

ಸರಕಾರ ನಿಮ್ಮೊಂದಿಗಿದೆ ; ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಸಿಎಂ ಅಭಯ

ಸರಕಾರ ನಿಮ್ಮೊಂದಿಗಿದೆ ; ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಸಿಎಂ ಅಭಯ

ಉದಯವಾಣಿ ಸಂದರ್ಶನ : ವರಿಷ್ಠರ ವಿಶ್ವಾಸಕ್ಕೆ ಚ್ಯುತಿಯಾಗದಂತೆ ಕಾರ್ಯನಿರ್ವಹಣೆ

ಉದಯವಾಣಿ ಸಂದರ್ಶನ : ವರಿಷ್ಠರ ವಿಶ್ವಾಸಕ್ಕೆ ಚ್ಯುತಿಯಾಗದಂತೆ ಕಾರ್ಯನಿರ್ವಹಣೆ

ಬದುಕಿನ ಬಂಡಿಗೆ ಗುಜರಿ ಅಂಗಡಿಯ ಸಾಥ್‌

ಬದುಕಿನ ಬಂಡಿಗೆ ಗುಜರಿ ಅಂಗಡಿಯ ಸಾಥ್‌

ಉದಯವಾಣಿ ಸಂದರ್ಶನ: ಶಕ್ತಿ ತುಂಬಿದವರ ಕತ್ತು ಕೊಯ್ಯುವುದು ಕಾಂಗ್ರೆಸ್‌ ಚಾಳಿ!

ಉದಯವಾಣಿ ಸಂದರ್ಶನ: ಶಕ್ತಿ ತುಂಬಿದವರ ಕತ್ತು ಕೊಯ್ಯುವುದು ಕಾಂಗ್ರೆಸ್‌ ಚಾಳಿ!

ಬದುಕು, ಬದುಕಲು ಗೊತ್ತಿರುವವರದು

ಬದುಕು, ಬದುಕಲು ಗೊತ್ತಿರುವವರದು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chmarajanagara

ಚಾಮರಾಜನಗರ: 74 ಹೊಸ ಕೋವಿಡ್ ಪ್ರಕರಣ, 52 ಮಂದಿ ಗುಣಮುಖ

ಕಿಡಿಗೇಡಿಗಳಿಂದ ಅವಹೇಳನಕಾರಿ ಫ್ಲೆಕ್ಸ್ : ಕ್ರಮಕ್ಕೆ ಒತ್ತಾಯಿಸಿ ಪೊಲೀಸರಿಗೆ ದೂರು

ಕಿಡಿಗೇಡಿಗಳಿಂದ ಅವಹೇಳನಕಾರಿ ಫ್ಲೆಕ್ಸ್ : ಕ್ರಮಕ್ಕೆ ಒತ್ತಾಯಿಸಿ ಪೊಲೀಸರಿಗೆ ದೂರು

cn-tdy-2

ಸಾಲು ಸಾಲು ರಜೆ: ಪ್ರವಾಸಿ ತಾಣಗಳಲ್ಲಿ ಕೋವಿಡ್‌ ಪರೀಕ್ಷೆ

ಮತ್ತೂಂದು ಕೋವಿಡ್‌ ಆರೋಗ್ಯ ಕೇಂದ್ರ

ಮತ್ತೂಂದು ಕೋವಿಡ್‌ ಆರೋಗ್ಯ ಕೇಂದ್ರ

chamarajamagara-‘

ಚಾಮರಾಜನಗರ: ಸೋಂಕಿನಿಂದ 120 ಮಂದಿ ಗುಣಮುಖ; 60 ಹೊಸ ಪ್ರಕರಣಗಳು

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್ಹೊಸ ಸೇರ್ಪಡೆ

SIGANDOOR

ಸಿಗಂದೂರು ವಿವಾದ ಸುಖಾಂತ್ಯ: ನ್ಯಾಯಾಲಯದ ಮಧ್ಯಸ್ತಿಕೆಯಲ್ಲಿ ಆಡಳಿತಮಂಡಳಿ-ಅರ್ಚಕರ ನಡುವೆ ರಾಜಿ

maharatysra

CBI ತನಿಖೆಗಿದ್ದ ‘ಸಾಮಾನ್ಯ ಒಪ್ಪಿಗೆ’ಯನ್ನು ಹಿಂಪಡೆದ ಠಾಕ್ರೆ ಸರ್ಕಾರ: ಏನಿದು ಬೆಳವಣಿಗೆ ?

ಸರಕಾರ ನಿಮ್ಮೊಂದಿಗಿದೆ ; ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಸಿಎಂ ಅಭಯ

ಸರಕಾರ ನಿಮ್ಮೊಂದಿಗಿದೆ ; ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಸಿಎಂ ಅಭಯ

ಉದಯವಾಣಿ ಸಂದರ್ಶನ : ವರಿಷ್ಠರ ವಿಶ್ವಾಸಕ್ಕೆ ಚ್ಯುತಿಯಾಗದಂತೆ ಕಾರ್ಯನಿರ್ವಹಣೆ

ಉದಯವಾಣಿ ಸಂದರ್ಶನ : ವರಿಷ್ಠರ ವಿಶ್ವಾಸಕ್ಕೆ ಚ್ಯುತಿಯಾಗದಂತೆ ಕಾರ್ಯನಿರ್ವಹಣೆ

ಸರಕಾರಿ ನೌಕರರ ಸದ್ಬಳಕೆಯಾಗಲಿ

ಸರಕಾರಿ ನೌಕರರ ಸದ್ಬಳಕೆಯಾಗಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.