ಜ್ವರ ಬಂದರೆ ಪರೀಕ್ಷೆಗೊಳಗಾಗಿ
Team Udayavani, Apr 18, 2021, 2:33 PM IST
ಚಾಮರಾಜನಗರ: ಶೀತ, ಜ್ವರದಂತಹ ಯಾವುದೇಲಕ್ಷಣಗಳು ಕಂಡು ಬಂದರೂ ಉದಾಸೀನ ಮಾಡದೇತಪಾಸಣೆಗೆ ಒಳಗಾಗಿ ಕೋವಿಡ್ ಪರೀಕ್ಷೆಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ, ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.ಕೋವಿಡ್ ನಿಯಂತ್ರಣ ತಡೆಯುವಉದ್ದೇಶದಿಂದ ಕೋವಿಡ್ ಪರೀಕ್ಷೆಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ.
ಜಿಲ್ಲೆಯಲ್ಲಿ ಕೊರೊನಾವ್ಯಾಪಿಸದಂತೆ ಅಗತ್ಯಮುಂಜಾಗ್ರತಾ ಕ್ರಮವಾಗಿಕೋವಿಡ್ ಪರೀಕ್ಷೆಗೆ ಜನರುಸ್ವಯಂ ಪ್ರೇರಿತರಾಗಿ ಮುಂದೆಬರಬೇಕು ಎಂದರು.ತೀವ್ರ ಉಸಿರಾಟದಂತಹ (ಸಾರಿ)ತೊಂದರೆ ಅನುಭವಿಸುತ್ತಿರುವವರು,ಶೀತದಂತಹ ಲಕ್ಷಣದಿಂದ ಬಳಲುತ್ತಿರುವವರನ್ನು(ಐ.ಎಲ್.ಐ), ಮೊದಲ ಆದ್ಯತೆ ನೀಡಿ ಕೋವಿಡ್‌ಪರೀಕ್ಷೆಗೆ ಒಳಪಡಿಸಲಾಗು ತ್ತದೆ. ಅಲ್ಲದೇ ವಿವಿಧಕಾಯಿಲೆಗಳು ಹಾಗೂ ಗಂಭೀರ ಆರೋಗ್ಯಸಮಸ್ಯೆಗಳಿಂದ ಬಳಲುತ್ತಿರುವ 60 ವರ್ಷಮೇಲ್ಪಟ್ಟವರನ್ನು ಪ್ರಥಮ ಆದ್ಯತೆಯಾಗಿಪರಿಗಣಿಸಿದ್ದು ಇವರೆಲ್ಲರ ಗಂಟಲು ದ್ರವ ಸಂಗ್ರಹಿಸಿಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ.
ರೋಗ ಲಕ್ಷಣಇಲ್ಲದವರನ್ನೂ ಸಹ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.ಕೋವಿಡ್-19 ದೃಢೀಕೃತ ಪ್ರಕರಣಗಳಲ್ಲಿಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರೆಂದುಗುರುತಿಸಲಾ ಗುವ ವ್ಯಕ್ತಿಗಳಿಗೆ ಕೋವಿಡ್ ಪರೀಕ್ಷೆಕೈಗೊಳ್ಳಲಾಗುತ್ತಿದೆ. ಸ್ವಯಂ ಪ್ರೇರಿತರಾಗಿ ಕೋವಿಡ್‌ಪರೀಕ್ಷೆಗಾಗಿ ಮುಂದೆ ಬರುವವರಿದಂಲೂ ಗಂಟಲುಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತಿದೆ ಎಂದುಹೇಳಿದರು.ಸಂಗ್ರಹಿಸಲಾದ ಗಂಟಲು ಮಾದರಿಯನ್ನುಪರೀಕ್ಷೆಗಾಗಿ ನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿಕಾರ್ಯನಿರ್ವಹಿಸುತ್ತಿರುವ ಸುಸಜ್ಜಿತ ಆರ್‌ಟಿಪಿಸಿಆರ್ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತಿದೆ.
ಪ್ರತಿದಿನ 2 ಸಾವಿರ ಮಾದರಿಯನ್ನುಪರೀಕ್ಷಿಸುವ ಸಾಮರ್ಥ್ಯವುಳ್ಳ ಈ ಪ್ರಯೋಗಾಲಯದಲ್ಲಿ ನಿಗದಿತ ಅವಧಿಯೊಳಗೆ ಪರೀಕ್ಷೆ ನಡೆಸಿವರದಿ ನೀಡಲಾಗುತ್ತಿದೆ ಎಂದರು.