Udayavni Special

ಸೋಂಕಿತ ಮಹಿಳೆ ಸಾವು : ಸಂಬಂಧಿಕರಿಂದ ಆಸ್ಪತ್ರೆಯಲ್ಲಿ ದಾಂಧಲೆ

ಸಾರ್ವಜನಿಕ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ ಆಸ್ಪತ್ರೆ! ಕಿಟಕಿ ಗಾಜು ಹಾನಿ

Team Udayavani, May 14, 2021, 2:45 PM IST

1305gpt03_1305bg_2

ಗುಂಡ್ಲುಪೇಟೆ: ಕೋವಿಡ್‌ ಸೋಂಕಿತ ಮಹಿಳೆ ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟ ಹಿನ್ನೆಲೆ ಆಕೆಯ ಸಂಬಂಧಿಕರು ಆಸ್ಪತ್ರೆಗೆ ಧಾವಿಸಿಸಿ ದಾಂಧಲೆ ನಡೆಸಿರುವ ಘಟನೆ ಗುರುವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜರುಗಿದೆ.

ಪಟ್ಟಣದ ನಿವಾಸಿ ಗಂಗಮ್ಮ (52) ಕೊರೊನಾ ದಿಂದ ಬುಧವಾರ ತಡರಾತ್ರಿ ಮೃತರಾದರು. ಇದರ ಪರಿಣಾಮ ಸಂಬಂಧಿಕರು ಆಸ್ಪತ್ರೆಗೆ ಆಗಮಿಸಿ, ಸರಿ ಯಾದ ಚಿಕಿತ್ಸೆ ನೀಡಿಲ್ಲ, ಆಕ್ಸಿಜನ್‌ ವ್ಯವಸ್ಥೆ ಮಾಡಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಗಿರೀಶ್‌ ಎಂಬಾತ ಆಕ್ಸಿಜನ್‌ ಸಿಲಿಂಡರ್‌ ನಿಂದ ಹಲ್ಲೆಗೆ ಯತ್ನಿಸಿ ಆಸ್ಪತ್ರೆಯ ಕಿಟಕಿಯ ಗಾಜನ್ನು ಹೊಡೆದು ಹಾಕಿ ಗಲಾಟೆ ಮಾಡಿದ್ದು, ಕಿಟಕಿಗೆ ಹೊಡೆದ ರಭಸಕ್ಕೆ ಗಿರೀಶ್‌ಗೆ ಕೈಗೆ ಗಾಜು ಚುಚ್ಚಿ ತೀವ್ರ ರಕ್ತಸ್ರಾವವಾಗಿದೆ. ಆತನನ್ನು ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರಕ್ಕೆ ಕರೆದೊಯ್ಯಲಾಗಿದೆ.

ಕರ್ತವ್ಯದಿಂದ ಹೊರ ನಡೆದ ವೈದ್ಯರು, ಸಿಬ್ಬಂದಿ: ಘಟನೆಯಿಂದ ವೈದ್ಯರು, ಸಿಬ್ಬಂದಿ ಆತಂಕಗೊಂಡು ಕರ್ತವ್ಯ ನಿರ್ವಹಿಸುವುದಿಲ್ಲ. ನಾವು ಅವರನ್ನು ಆದಷ್ಟು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದೇವೆ. ಆದರೆ, ಇದನ್ನು ತಿಳಿಯದೆ ನಮ್ಮ ಮೇಲೆ ಹಲ್ಲೆ ಮಾಡಲು ಮುಂದಾದರೆ ಹೇಗೆ ನಮಗೆ ರಕ್ಷಣೆ ಇಲ್ಲದ ಮೇಲೆ ಏಕೆ ಕರ್ತವ್ಯ ನಿರ್ವಸಬೇಕು ಎಂದು ಆಸ್ಪತ್ರೆಯಿಂದ ಹೊರ ನಡೆದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್‌ ರವಿಶಂಕರ್‌, ಪೊಲೀಸ್‌ ಇನ್ಸ್‌ಪೆಕ್ಟರ್‌ ಮಹದೇವಸ್ವಾಮಿ, ಸಬ್‌ ಇನ್ಸ್‌ಪೆಕ್ಟರ್‌ ರಾಜೇಂದ್ರ ಮಧ್ಯ ಪ್ರವೇಶಿಸಿ ಪರಿಸ್ಥಿತಿ ಯನ್ನು ತಿಳಿಗೊಳಿಸಿ ಆಸ್ಪತ್ರೆಯ ಸಿಬ್ಬಂದಿಯನ್ನು ಸಮಾಧಾನಪಡಿಸಿದರು. ನಂತರ ಕರ್ತವ್ಯಕ್ಕೆ ಹಾಜ ರಾಗುವಂತೆ ಮನವಿ ಮಾಡಿದ ಹಿನ್ನೆಲೆ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಘಟನೆ ನಂತರ ಮಹಿಳೆ ಮೃತ ದೇಹವನ್ನು ಅವರ ಜಮೀನಿಗೆ ರವಾನಿಸಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ದೂರು ನೀಡಿದರೆ ಕ್ರಮ: ಘಟನೆ ಸಂಬಂಧ ಪ್ರತಿ ಕ್ರಿಯಿಸಿರುವ ಸಬ್‌ಇನ್ಸ್‌ಪೆಕ್ಟರ್‌ ಜೆ.ರಾಜೇಂದ್ರ, ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿ ಕಿಟಕಿ ಗಾಜುಗಳನ್ನು ಹೊಡೆದು ಹಾಕಿದ ವ್ಯಕ್ತಿ ಕೈಗೆ ಗಾಯ ವಾಗಿದ್ದು, ಸದ್ಯ ಚಾಮರಾಜನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆತನ ಮೇಲೆ ಆಸ್ಪತ್ರೆ ಸಿಬ್ಬಂದಿ ದೂರು ನೀಡಿಲ್ಲ. ದೂರು ನೀಡಿದರೆ ದಾಖ ಲಿಸಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

ಟಾಪ್ ನ್ಯೂಸ್

09

ಕೋವಿಡ್ : ರಾಜ್ಯದಲ್ಲಿಂದು 9768 ಸೋಂಕಿತರು ಗುಣಮುಖ; 3979 ಹೊಸ ಪ್ರಕರಣ ಪತ್ತೆ

ದ್ಗಹಹಗ್ಗಹಗಹನಗಗ್ದಸ

ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ!

ಜಾರ್ಖಂಡ್: ಎರಡು ತಿಂಗಳಲ್ಲಿ ಪುಂಡಾನೆ ಅಟ್ಟಹಾಸಕ್ಕೆ 16 ಮಂದಿ ಗ್ರಾಮಸ್ಥರು ಬಲಿ

ಜಾರ್ಖಂಡ್: ಎರಡು ತಿಂಗಳಲ್ಲಿ ಪುಂಡಾನೆ ಅಟ್ಟಹಾಸಕ್ಕೆ 16 ಮಂದಿ ಗ್ರಾಮಸ್ಥರು ಬಲಿ

fghjhgfdsasdfghjhgfdsadfghjhgfdfghjhgf

ಶಿರಸಿ : ಅಂದರ್ ಬಾಹರ್ ಆಡುತ್ತಿದ್ದ ಗುಂಪಿನ ಮೇಲೆ ದಾಳಿ : 7 ಜನರ ಬಂಧನ

SSLC, ಪಿಯುಸಿ ಪರೀಕ್ಷೆ ಗೊಂದಲ: ಜೂ.25ರಂದು ವಿದ್ಯಾರ್ಥಿಗಳ ಪ್ರಶ್ನೆಗೆ ಪೋಖ್ರಿಯಾಲ್ ಉತ್ತರ

SSLC, ಪಿಯುಸಿ ಪರೀಕ್ಷೆ ಗೊಂದಲ: ಜೂ.25ರಂದು ವಿದ್ಯಾರ್ಥಿಗಳ ಪ್ರಶ್ನೆಗೆ ಪೋಖ್ರಿಯಾಲ್ ಉತ್ತರ

dfghjjhgfd

ಮತ್ತಿಘಟ್ಟ-ಜಾಜಿಗುಡ್ಡೆ ಪುನಶ್ಚೇತನಕ್ಕೆ ಅನಂತ ಹೆಗಡೆ ಅಶೀಸರ ಒತ್ತಾಯ

Uttara Kannada News

ಗೋಡೆ ಕುಸಿದು ಕಾರ್ಮಿಕ‌ ಸಾವು, ಮತ್ತೊಬ್ಬನಿಗೆ ಗಂಭೀರ ಗಾಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

wergtrertytr

ನೆರೆ ಬಂದಾಗ ನೆನಪಾಗುವ ಗುರ್ಜಾಪುರ!

sdfghjhgfdfghjhgfd

ಶಿಕ್ಷಣಕ್ಕೆ 2 ಕೋಟಿ ವಿನಿಯೋಗಿಸಲು ಚಿಂತನೆ

werfewefdew

ಬಸವನಾಡಲ್ಲಿ ಆನ್‌ಲೈನ್‌ ವಂಚಕರ ಹಾವಳಿ

09

ಕೋವಿಡ್ : ರಾಜ್ಯದಲ್ಲಿಂದು 9768 ಸೋಂಕಿತರು ಗುಣಮುಖ; 3979 ಹೊಸ ಪ್ರಕರಣ ಪತ್ತೆ

ಟಡೆರತಗರೆಡೆರತತರೆಡೆರತಹಜ

ಪದವಿ ಸೆಮಿಸ್ಟರ್‌ ಪರೀಕ್ಷೆಗೆ ವಿದ್ಯಾರ್ಥಿಗಳ ವಿರೋಧ

MUST WATCH

udayavani youtube

ಕೊಮೆ : ಮೀನುಗಾರರಿಂದ ಸಮುದ್ರ ಪೂಜೆ

udayavani youtube

ನಾನು ಸೋತು ಹೋಗಿದ್ದೇನೆ ಸ್ವಾಮಿ; ಜವಳಿ ವ್ಯಾಪಾರಿಯ ನೋವಿನ ಮಾತು

udayavani youtube

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

udayavani youtube

ನೇಗಿಲು ಹಿಡಿದು ಉಳುಮೆ ಮಾಡಿದ ಶಾಸಕ ರೇಣುಕಾಚಾರ್ಯ

udayavani youtube

ಖಾಸಗಿ TECHIE, ದೇಸಿ ದನ ಸಾಕಣೆಯಲ್ಲಿ ಯಶಸ್ಸು ಕಂಡಿದ್ದು ಹೇಗೆ ?

ಹೊಸ ಸೇರ್ಪಡೆ

wergtrertytr

ನೆರೆ ಬಂದಾಗ ನೆನಪಾಗುವ ಗುರ್ಜಾಪುರ!

sdfghjhgfdfghjhgfd

ಶಿಕ್ಷಣಕ್ಕೆ 2 ಕೋಟಿ ವಿನಿಯೋಗಿಸಲು ಚಿಂತನೆ

werfewefdew

ಬಸವನಾಡಲ್ಲಿ ಆನ್‌ಲೈನ್‌ ವಂಚಕರ ಹಾವಳಿ

09

ಕೋವಿಡ್ : ರಾಜ್ಯದಲ್ಲಿಂದು 9768 ಸೋಂಕಿತರು ಗುಣಮುಖ; 3979 ಹೊಸ ಪ್ರಕರಣ ಪತ್ತೆ

ಟಡೆರತಗರೆಡೆರತತರೆಡೆರತಹಜ

ಪದವಿ ಸೆಮಿಸ್ಟರ್‌ ಪರೀಕ್ಷೆಗೆ ವಿದ್ಯಾರ್ಥಿಗಳ ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.