ಪ್ರೇಮ ಪ್ರಕರಣ: ಪೊಲೀಸ್‌ ಜೀಪ್‌ನಿಂದ ಹಾರಿ ವ್ಯಕ್ತಿ ಸಾವು

Team Udayavani, Nov 30, 2022, 3:03 PM IST

tdy-13

ಯಳಂದೂರು: ತಾಲೂಕಿನ ಯರಿಯೂರು ಗ್ರಾಮದ ಬಳಿ ಪೊಲೀಸ್‌ ವಶದಲ್ಲಿದ್ದ ವ್ಯಕ್ತಿ ಜೀಪ್‌ ನಲ್ಲಿ ಕರೆದೊಯ್ಯುತ್ತಿದ್ದಾಗ ಹಾರಿ ಸಾವನಪ್ಪಿರುವ ಘಟನೆ ಮಂಗಳವಾರ ಮಧ್ಯಾಹ್ನ ಜರುಗಿದ್ದು, ಇದು ಸಾವಲ್ಲ ಕೊಲೆ ಎಂದು ಈತನ ಪೋಷಕರು ದೂರಿದ್ದಾರೆ.

ಸಮೀಪದ ಕುಂತೂರು ಮೋಳೆ ಗ್ರಾಮದ ನಿಂಗರಾಜು(24) ಎಂಬ ವ್ಯಕ್ತಿಯೇ ಮೃತಪಟ್ಟ ದುರ್ದೈವಿ.

ಏನಿದು ಪ್ರಕರಣ: ಸಮೀಪದ ಕುಂತೂರು ಮೋಳೆ ಗ್ರಾಮದ ಉಪ್ಪಾರ ಬಡಾವಣೆಯ ನಂಜುಂಡಶೆಟ್ಟಿ ಎಂಬುವವರ ಮಗ ನಿಂಗರಾಜು ಇದೇ ಗ್ರಾಮದ ಇದೇ ಸಮುದಾಯದ 16.8 (ತಿಂಗಳು) ವರ್ಷದ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ನ.23 ರಿಂದ ಇವರು ಗ್ರಾಮದಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಯುವತಿಯ ತಂದೆ ಮಾದೇಶ್‌ ಎಂಬುವವರು ತಾಲೂಕಿನ ಮಾಂಬಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ನನ್ನ ಮಗಳು ಬಹಿರ್ದೆಸೆಗೆ ತೆರಳಿ ಮನೆಗೆ ವಾಪಸ್‌ ಬಂದಿಲ್ಲ.

ಈ ಹಿಂದೆ ನನ್ನ ಮಗಳನ್ನು ನಿಂಗರಾಜು ಎಂಬುವವರ ತಂದೆ ಮದುವೆ ಮಾಡಿಕೊಡಿ ಎಂದು ಕೇಳಿದ್ದರು. ಆದರೆ, ಈಕೆಗೆ 18 ವರ್ಷ ತುಂಬಿಲ್ಲ ಎಂದು ನಾನು ನಿರಾಕರಿಸಿದ್ದೆ. ಹಾಗಾಗಿ ನಿಂಗರಾಜು ಎಂಬುವವನೇ ನನ್ನ ಮಗಳನ್ನು ಕರೆದೊಯ್ದಿದ್ದಾನೆ ಎಂದು ಅನುಮಾನವಿದೆ ಎಂದು ದೂರು ನೀಡಿದ್ದರು. ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ನಿಂಗರಾಜು ನ.29 ರಂದು ಪತ್ತೆ ಹಚ್ಚಿದ್ದಾರೆ.

ನಂತರ ಇವರ ಜೀಪ್‌ನಲ್ಲಿ ಯಳಂದೂರು ಪೊಲೀಸ್‌ ಠಾಣೆಗೆ ಕರೆತಂದಿದ್ದಾರೆ. ಇಲ್ಲಿ ವಿಚಾರಣೆ ನಡೆಸಿ ಮಾಂಬಳ್ಳಿ ಪೊಲೀಸ್‌ ಠಾಣೆಗೆ ಜೀಪ್‌ನಲ್ಲಿ ಕರೆದೊತ್ತುತ್ತಿದ್ದ ವೇಳೆ ಈತ ಯರಿಯೂರು ಗ್ರಾಮದ ಬಳಿ ಜೀಪ್‌ನಿಂದ ನೆಗೆದಿದ್ದು, ಈತನ ತಲೆ ಸೇರಿ ದೇಹದ ಇತರ ಭಾಗಗಳಿಗೆ ಪೆಟ್ಟಾಗಿದೆ. ಕೂಡಲೇ ಪೊಲೀಸರು ಜೀಪ್‌ನಲ್ಲಿ ಯಳಂದೂರಿನ ಸಾರ್ವ ಜನಿಕ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ, ಇಷ್ಟೊತ್ತಿಗಾಗಲೇ ನಿಂಗರಾಜು ಮೃತಪಟ್ಟಿರುವುದು ದೃಢಪಟ್ಟಿದೆ.

ಇದು ಆತ್ಮಹತ್ಯೆಯಲ್ಲಿ ಕೊಲೆ: ನಿಂಗರಾಜು ಜೀಪ್‌ ನಿಂದ ಹಾರಿ ಮೃತಪಟ್ಟಿಲ್ಲ. ಈತನಿಗೆ ಯಳಂದೂರು ಪೊಲೀಸ್‌ ಠಾಣೆಯಲ್ಲಿ ವಿಚಾರಣೆಗೆ ಕರೆತಂದು ಹಿಗ್ಗಾಮಗ್ಗ ಥಳಿಸಲಾಗಿದೆ. ಅಲ್ಲೇ ಈತನ ಪ್ರಾಣ ಹೋಗಿದೆ. ನಂತರ ಮಾಂಬಳ್ಳಿ ಠಾಣೆಗೆ ಈತನನ್ನು ಜೀಪ್‌ನಲ್ಲಿ ಕುಳ್ಳಿರಿಸಿ, ಇವರೇ ಬೇಕೆಂತಲೇ ಜೀಪ್‌ ನಿಂದ ತಳ್ಳಿದ್ದಾರೆ ಎಂದು ಗ್ರಾಮಸ್ಥರು, ಉಪ್ಪಾರ ಮುಖಂಡರು ಆರೋಪಿಸಿ ಠಾಣೆ ಮುಂದೆ ಪ್ರತಿಭಟಿಸಿದರು.

ತನಿಖೆ ನಡೆಯಲಿ: ಅಲ್ಲದೆ, ವಿಚಾರಣೆ ವೇಳೆಯಲ್ಲಿ ಒಬ್ಬ ವ್ಯಕ್ತಿಯ ಪ್ರಾಣ ಹೋಗಿರುವುದು ಹಲವು ಅನುಮಾನಗಳಿಗೆ ಆಸ್ಪದ ನೀಡುವಂತಿದೆ. ಇದರ ಬಗ್ಗೆ ತನಿಖೆಯಾಗಬೇಕು. ಈ ಸಾವು ಹಲವು ಅನುಮಾನಗಳಿಗೆ ಆಸ್ಪದ ನೀಡುವಂತಿದೆ. ಹಾಗಾಗಿ ಮೃತನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು, ಪರಿಹಾರ ನಿಡಬೇಕು ಎಂದು ಆಗ್ರಹಿಸಿ ಪ್ರತಿಭಟಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್‌ ಈ ಬಗ್ಗೆ ತನಿಖೆ ನಡೆಸಿ, ಪೊಲೀಸರಿಂದ ತಪ್ಪಾಗಿದ್ದಲ್ಲಿ ಕಾನೂನು ಕ್ರಮ ವಹಿಸುವ ಭರವಸೆ ನೀಡಿದರು.

ಟಾಪ್ ನ್ಯೂಸ್

one plus 1

ಹೊರಬರಲಿದೆ ಒನ್‌ ಪ್ಲಸ್‌ ಕಂಪನಿಯ ಮೊದಲ ಟ್ಯಾಬ್‌.. ಏನಿದರ ವಿಶೇಷತೆ..?

Health Tips: ಜೇನು ತುಪ್ಪ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ…

Health Tips: ಜೇನು ತುಪ್ಪ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ…

ಲಂಚಕ್ಕೆ ಬೇಡಿಕೆ: ಕೇಂದ್ರ ಪುರಾತತ್ವ ಇಲಾಖೆಯ ಮೂವರು ಅಧಿಕಾರಿಗಳು ಸಿಬಿಐ ಬಲೆಗೆ

ಲಂಚಕ್ಕೆ ಬೇಡಿಕೆ: ಕೇಂದ್ರ ಪುರಾತತ್ವ ಇಲಾಖೆಯ ಮೂವರು ಅಧಿಕಾರಿಗಳು ಸಿಬಿಐ ಬಲೆಗೆ

ಆನೆಗೊಂದಿ-ಸಾಣಾಪೂರ ಭಾಗದ ಅನಧಿಕೃತ ಹೊಟೇಲ್‌ಗಳ ತೆರವಿಗೆ ಮುಂದಾದ ಅಧಿಕಾರಿಗಳು

ಆನೆಗೊಂದಿ-ಸಾಣಾಪೂರ ಭಾಗದ ಅನಧಿಕೃತ ಹೊಟೇಲ್‌ಗಳ ತೆರವಿಗೆ ಮುಂದಾದ ಅಧಿಕಾರಿಗಳು

ಆರಕ್ಕೇರದೆ ಮೂರಕ್ಕಿಳಿಯದ ರಾಹುಲ್; ಟ್ಯಾಲೆಂಟೆಡ್ ಹುಡುಗನಿಗೆ ಕಡಿಮೆಯಾಗಿದ್ದೇನು?

ಆರಕ್ಕೇರದೆ ಮೂರಕ್ಕಿಳಿಯದ ರಾಹುಲ್; ಟ್ಯಾಲೆಂಟೆಡ್ ಹುಡುಗನಿಗೆ ಕಡಿಮೆಯಾಗಿದ್ದೇನು?

tdy-1

ಬಾಲಕಿಗೆ ಲೈಂಗಿಕ ಕಿರುಕುಳ: 18 ವರ್ಷ ಸಜೆ, ದಂಡ  

ವಿಟ್ಲ: 5 ವಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಮಹಿಳೆಯ ಬಂಧನ

ವಿಟ್ಲ: 5 ವಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಮಹಿಳೆಯ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗುಂಡ್ಲುಪೇಟೆ: ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಹುಲಿ ಮೃತದೇಹ ಪತ್ತೆ

ಗುಂಡ್ಲುಪೇಟೆ: ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಹುಲಿ ಮೃತದೇಹ ಪತ್ತೆ

ಮಾದಾಪಟ್ಟಣ ವಿರಕ್ತ ಮಠದ ಸದಾಶಿವ ಸ್ವಾಮೀಜಿ ಲಿಂಗೈಕ್ಯ

ಮಾದಾಪಟ್ಟಣ ವಿರಕ್ತ ಮಠದ ಸದಾಶಿವ ಸ್ವಾಮೀಜಿ ಲಿಂಗೈಕ್ಯ

tdy-13

ನಗರದ ರಸ್ತೆ ವೃತ್ತಕ್ಕೆ ಪ್ರೊ. ಎಂಡಿಎನ್‌ ಹೆಸರು ನಾಮಕರಣ

tdy-15

ಬೆಂಬಲ ಬೆಲೆಯಲ್ಲಿ ಅರಿಶಿಣ ಖರೀದಿಗೆ ಆಗ್ರಹ

ದಂಡದಲ್ಲಿ ಶೇ.50 ರಿಯಾಯಿತಿ

ದಂಡದಲ್ಲಿ ಶೇ.50 ರಿಯಾಯಿತಿ

MUST WATCH

udayavani youtube

ಪಾಂಗಳ: ಕೋಲದಲ್ಲಿ ಭಾಗಿಯಾಗಿದ್ದ ಯುವಕನನ್ನು ಕರೆಸಿ ಹತ್ಯೆಗೈದರೇ ಪರಿಚಿತರು?

udayavani youtube

ಮೀನುಗಾರಿಕಾ ಬೋಟ್ ನ ಒಳಗೆ ಹೇಗಿರುತ್ತೆ ನೋಡಿ|

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

ಹೊಸ ಸೇರ್ಪಡೆ

one plus 1

ಹೊರಬರಲಿದೆ ಒನ್‌ ಪ್ಲಸ್‌ ಕಂಪನಿಯ ಮೊದಲ ಟ್ಯಾಬ್‌.. ಏನಿದರ ವಿಶೇಷತೆ..?

Health Tips: ಜೇನು ತುಪ್ಪ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ…

Health Tips: ಜೇನು ತುಪ್ಪ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ…

ಲಂಚಕ್ಕೆ ಬೇಡಿಕೆ: ಕೇಂದ್ರ ಪುರಾತತ್ವ ಇಲಾಖೆಯ ಮೂವರು ಅಧಿಕಾರಿಗಳು ಸಿಬಿಐ ಬಲೆಗೆ

ಲಂಚಕ್ಕೆ ಬೇಡಿಕೆ: ಕೇಂದ್ರ ಪುರಾತತ್ವ ಇಲಾಖೆಯ ಮೂವರು ಅಧಿಕಾರಿಗಳು ಸಿಬಿಐ ಬಲೆಗೆ

ಆನೆಗೊಂದಿ-ಸಾಣಾಪೂರ ಭಾಗದ ಅನಧಿಕೃತ ಹೊಟೇಲ್‌ಗಳ ತೆರವಿಗೆ ಮುಂದಾದ ಅಧಿಕಾರಿಗಳು

ಆನೆಗೊಂದಿ-ಸಾಣಾಪೂರ ಭಾಗದ ಅನಧಿಕೃತ ಹೊಟೇಲ್‌ಗಳ ತೆರವಿಗೆ ಮುಂದಾದ ಅಧಿಕಾರಿಗಳು

ಆರಕ್ಕೇರದೆ ಮೂರಕ್ಕಿಳಿಯದ ರಾಹುಲ್; ಟ್ಯಾಲೆಂಟೆಡ್ ಹುಡುಗನಿಗೆ ಕಡಿಮೆಯಾಗಿದ್ದೇನು?

ಆರಕ್ಕೇರದೆ ಮೂರಕ್ಕಿಳಿಯದ ರಾಹುಲ್; ಟ್ಯಾಲೆಂಟೆಡ್ ಹುಡುಗನಿಗೆ ಕಡಿಮೆಯಾಗಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.