Udayavni Special

ಕನ್ನಡ ಸಾಹಿತ್ಯ ದಿಗ್ಗಜರು ಇಲ್ಲಿ ನೆನಪಿಗೇ ಇಲ್ಲ!

ಷಡಕ್ಷರ ದೇವ, ಮುಪ್ಪಿನ ಷಡಕ್ಷರಿ, ಸಂಚಿ ಹೊನ್ನಮ್ಮ, ಅಗರಂ , ನಾಟಕಕಾರ ಸಂಸರ ಕೊಡುಗೆ ಸ್ಮರಿಸಿ

Team Udayavani, Nov 1, 2020, 3:51 PM IST

ಕನ್ನಡ ಸಾಹಿತ್ಯ ದಿಗ್ಗಜರು ಇಲ್ಲಿ ನೆನಪಿಗೇ ಇಲ್ಲ!

ಯಳಂದೂರು: ಇಡೀ ರಾಜ್ಯದಲ್ಲಿ ಅತ್ಯಂತ ಚಿಕ್ಕ ತಾಲೂಕು, ಚಿಕ್ಕಪಟ್ಟಣವಾಗಿ ಗುರುತಿಸಿಕೊಂಡಿರುವ ಯಳಂದೂರು ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಭೌಗೋಳಿಕವಾಗಿ ಅತ್ಯಂತ ಮಹತ್ವ ಪಡೆದಿದೆ.

ಇಲ್ಲಿನ ಷಡಕ್ಷರ ದೇವ, ಮುಪ್ಪಿನ ಷಡಕ್ಷರಿ, ಸಂಚಿ ಹೊನ್ನಮ್ಮ, ಅಗರಂ ರಂಗಯ್ಯ, ನಾಟಕಕಾರ ಸಂಸ ಸೇರಿದಂತೆ ಅನೇಕ ಸಾಹಿತ್ಯ ದಿಗ್ಗಜರನ್ನು ನಾಡಿಗೆ ನೀಡಿದ ಕೀರ್ತಿ ಈ ತಾಲೂಕಿನದ್ದು. ಇದರೊಂದಿಗೆ ಸೋಲಿಗರ ಜಾನಪದ ಸಾಹಿತ್ಯ, ಪಟ್ಟಣದ ಬಳೇಮಂಟಪ, ದಿವಾನ್‌ ಪೂರ್ಣಯ್ಯ ವಸ್ತುಸಂಗ್ರಹಾಲಯ ಸೇರಿದಂತೆ ಅನೇಕ ದೇಗುಲಗಳು, ಮಠಗಳು ಇಲ್ಲಿನ ಕಲಾ ಶ್ರೀಮಂತಿಕೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಆದರೆ, ಇಂತಹ ಸಾಹಿತ್ಯ ದಿಗ್ಗಜರು ಹಾಗೂ ಜೈನ ಸಂತಮುನಿಗಳ ನೆಲವೀಡಾಗಿದ್ದ ಯಳಂದೂರು ಪಟ್ಟಣ ಹಾಗೂ ತಾಲೂಕಿನಲ್ಲಿ ಇವರ ಇರುವಿಕೆ ಇತ್ತೆಂಬುದಕ್ಕೆ ಸಾಕ್ಷಿಯಾಗುವ ಯಾವ ಕೆಲಸಗಳೂ ನಡೆದಿಲ್ಲ. ಇಲ್ಲಿನ ಒಂದು ರಸ್ತೆಗೂ ಇವರ ಹೆಸರಿಟ್ಟು ಸ್ಮರಿಸುವ ಕಾರ್ಯವಾಗಿಲ್ಲ.

ಯಳಂದೂರಿನ ಹೆಮ್ಮೆ ಷಡಕ್ಷರ ದೇವ: ಮಳವಳ್ಳಿ ತಾಲೂಕಿನ ಧನಗೂರು ಗ್ರಾಮದವರಾದ ಷಡಕ್ಷರ ದೇವ ಯಳಂದೂರಿನಲ್ಲಿ ನೆಲೆಸಿ ಶಬರಶಂಕರ ವಿಳಾಸ, ರಾಜಶೇಖರ ವಿಳಾಸ, ವೃಷಬೇಂದ್ರ ವಿಜಯದಂತಹ ಮಹಾನ್‌ ಗ್ರಂಥಗಳನ್ನು ರಚಿಸಿದ್ದಾರೆ. ತಿರುಕನೋರ್ವನೂರ ಮುಂದೆ, ಮುರುಕು ಧರ್ಮಶಾಲೆಯಲ್ಲಿ ಒರಗಿರುತ್ತಲೊಂದು ಕನಸು ಕಂಡನೆಂತೆನೆ ಎಂಬ ತತ್ವ ಪದಗಳನ್ನು ತಮ್ಮ ಸುಬೋಧರ ಸಾರ ಕೃತಿಯಲ್ಲಿ ರಚಿಸಿದ ಮುಪ್ಪಿನ ಷಡಕ್ಷರಿ 16ನೇ ಶತಮಾನದಲ್ಲಿ ಜೀವಿಸಿದ್ದರು. ಇವರು ಯಳಂದೂರು ಪಟ್ಟಣದ ಯರಗಂಬಳ್ಳಿ ಗ್ರಾಮದಲ್ಲಿ ಇದ್ದರು ಎಂಬುದಕ್ಕೆ ಇನ್ನೂ ಕೂಡ ಇಲ್ಲಿ ಮಠವನ್ನು ಕಾಣಬಹುದು.

ಸಂಚಿಹೊನ್ನಮ್ಮ: 17ನೇ ಶತಮಾನದಲ್ಲಿ ಚಿಕ್ಕದೇವರಾಜ ಒಡೆಯರ ಆಸ್ಥಾನದಲ್ಲಿ ಸಂಚಿಯ ಊಳಿಗದಲ್ಲಿ ಇದ್ದ ಮಹಿಳೆ ಹೊನ್ನಮ್ಮ ಸಂಚಿಹೊನ್ನಮ್ಮಳೆಂದೇ ಖ್ಯಾತಿ ಪಡೆದಿದ್ದಾರೆ. ಪೆಣ್ಣಲ್ಲವೆ ತಮ್ಮನೆಲ್ಲ ಪಡೆದ ತಾಯಿ, ಪೆಣ್ಣಲ್ಲವೆ ಪೊರೆದವಳು, ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವರು, ಕಣ್ಣು ಕಾಣದ ಗಾವಿಲರು ಎಂದು ಸ್ತ್ರೀ ಸಮಾನತೆ ಬಗ್ಗೆ ಅಕ್ಕಮಹಾದೇವಿಯ ನಂತರ ಧ್ವನಿ ಎತ್ತಿದ ಏಕೈಕ ನಾರಿಮಣಿಯಾಗಿದ್ದಾಳೆ. ಇವರೆಲ್ಲರೂ ನಡುಗನ್ನಡದಲ್ಲಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಕವಿಗಳಾಗಿದ್ದಾರೆ. ಇದರೊಂದಿಗೆ ಸಾಧ್ವಿ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ ಅಗರಂ ರಂಗಯ್ಯ ತಾಲೂಕಿನ ಅಗರ ಗ್ರಾಮದವರಾಗಿದ್ದಾರೆ.

ಹೆಮ್ಮೆಯ ನಾಟಕಕಾರ ಸಂಸ: ಕನ್ನಡ ನಾಡಿನ ಶ್ರೇಷ್ಠ ನಾಟಕಕಾರರಲ್ಲಿ ಒಬ್ಬರಾಗಿದ್ದ ಎ.ಎನ್‌. ಸ್ವಾಮಿ ವೆಂಕಟಾದ್ರಿ ಅಯ್ಯರ್‌ ಅವರು ಸಂಸ ಎಂದೇ ಖ್ಯಾತಿ ಪಡೆದ ನಾಟಕಕಾರರಾಗಿದ್ದು, ಕನ್ನಡ ಭಾಷೆಗೆ ಬಿರುದಂತೆಂಬರ ಗಂಡ, ಸುಗುಣ ಗಂಭೀರ, ಬೆಟ್ಟದ ಅರಸು, ವಿಗಡ ವಿಕ್ರಮರಾಯ, ಮಂತ್ರಶಕ್ತಿ, ವಿಜಯನಾರಸಿಂಹ ಸೇರಿದಂತೆ 23 ನಾಟಕಗಳನ್ನು ರಚಿಸಿದ್ದಾರೆ. ಇಂತಹ ಮಹಾನ್‌ ನಾಟಕರಾರರ ಬಗ್ಗೆ ಪಟ್ಟಣದಲ್ಲಿ ಅಥವಾ ತಾಲೂಕಿನ ಯಾವ ಗ್ರಾಮಗಳಲ್ಲೂ ಇವರ ಇರುವಿಕೆಯನ್ನು ಗುರುತಿಸುವ ಕೆಲಸವೂ ನಡೆದಿಲ್ಲ. ಇತಿಹಾಸ ಹೇಳುವಂತೆ ಶೃಂಗಾರ ಪ್ರಧಾನ ಕಾವ್ಯವಾಗಿದ್ದ ನೇಮಿಚಂದ್ರನ ಲೀಲಾವತಿ ಪ್ರಬಂಧ ಗ್ರಂಥವನ್ನು ಯಳಂದೂರು ಪಟ್ಟಣದಲ್ಲಿ ಆನೆಯ ಮೇಲಿಟ್ಟು, ಇವರ ಶೃಂಗಾರ ರಸವು ಸೋರಿ ಹೋಗದಂತೆ ಆನೆಯ ಹೊಟ್ಟೆಯ ತಳಭಾಗದಲ್ಲಿ ತೊಟ್ಟಿಲು ಕಟ್ಟಿದ್ದರು. ಇಷ್ಟು ಸಾಹಿತ್ಯ ಕಾಳಜಿ ಇಲ್ಲಿನ ಜನರಲ್ಲಿತ್ತು ಎನ್ನುತ್ತದೆ ಐತಿಹ್ಯ.

ಮಹಾನ್‌ ವ್ಯಕ್ತಿಗಳ ಒಂದು ಸ್ಮಾರಕವೂ ಇಲ್ಲ :  ಯಳಂದೂರು ತಾಲೂಕು ಚಿಕ್ಕದಾಗಿದ್ದರೂ ಕನ್ನಡ ನಾಡು ನುಡಿಯನ್ನು ಶ್ರೀಮಂತಗೊಳಿಸಿದ ಮಹಾನ್‌ ವ್ಯಕ್ತಿಗಳನ್ನು ಕಡೆಗಣಿಸಲಾಗಿದೆ. ಯಾವ ರಾಜಕಾರಣಿ, ಜನಪ್ರತಿನಿಧಿಗಳಿಗೂ ಇವರುಗಳನ್ನು ಸ್ಮರಿಸುವ ಕಾಳಜಿ ಇಲ್ಲವಾಗಿದೆ. ಇಂತಹ ಸಾಹಿತ್ಯದ ಮೇರು ರತ್ನಗಳನ್ನು ಪರಿಚಯಿಸುವ ಗೋಜಿಗೆ ಯಾರೂ ಹೋಗಿಲ್ಲ. ತಾಲೂಕಿನಲ್ಲಿ ಯಾವುದೇ ಮೂಲೆಯಲ್ಲೂ ಇವರ ಸ್ಮಾರಕಗಳನ್ನಾಗಲಿ, ಇವರ ಹೆಸರು ಇರುವ ಬೀದಿ, ಬಡಾವಣೆಗಳಾಗಲಿ ಕಾಣಸಿ ಗುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟವರು ಕಾಳಜಿ ವಹಿಸಬೇಕು ಎಂಬುದು ಸಾಹಿತಿ ಮದ್ದೂರು ದೊರೆಸ್ವಾಮಿ ಸೇರಿದಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

 

ಫೈರೋಜ್‌ಖಾನ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಭಯ ಬೇಡ, ದೂರುದಾರರ ಹೆಸರನ್ನು ಗೌಪ್ಯವಾಗಿಡುವೆವು…

ಭಯ ಬೇಡ, ದೂರುದಾರರ ಹೆಸರನ್ನು ಗೌಪ್ಯವಾಗಿಡುವೆವು…

ಕುತೂಹಲ ಕೆರಳಿಸಿದ ಬಿ.ಎಲ್‌. ಸಂತೋಷ್‌ ಮಂಗಳೂರು ಭೇಟಿ

ಕುತೂಹಲ ಕೆರಳಿಸಿದ ಬಿ.ಎಲ್‌. ಸಂತೋಷ್‌ ಮಂಗಳೂರು ಭೇಟಿ

ವಿದ್ಯಾಗಮ ಪುನರಾರಂಭಿಸಿ: ಶಿಕ್ಷಕರ ಆಗ್ರಹ

ವಿದ್ಯಾಗಮ ಪುನರಾರಂಭಿಸಿ: ಶಿಕ್ಷಕರ ಆಗ್ರಹ

ದತ್ತು ಪರಿಕಲ್ಪನೆ ದೇಶಕ್ಕೆ ಪ್ರೇರಣೆ: ಯಡಿಯೂರಪ್ಪ

ದತ್ತು ಪರಿಕಲ್ಪನೆ ದೇಶಕ್ಕೆ ಪ್ರೇರಣೆ: ಯಡಿಯೂರಪ್ಪ

bsy

ಯಡಿಯೂರಪ್ಪ , ವಿಜಯೇಂದ್ರ ಆಪ್ತರಿಗೇ ನಿಗಮ, ಮಂಡಳಿ ಮಣೆ

ದಶಕದ ಶ್ರೇಷ್ಠ ಕ್ರಿಕೆಟಿಗ ಸ್ಪರ್ಧೆಯಲ್ಲಿ ಕೊಹ್ಲಿ, ಅಶ್ವಿ‌ನ್‌

ದಶಕದ ಶ್ರೇಷ್ಠ ಕ್ರಿಕೆಟಿಗ ಸ್ಪರ್ಧೆಯಲ್ಲಿ ಕೊಹ್ಲಿ, ಅಶ್ವಿ‌ನ್‌

ಎಸ್‌ಟಿಗೆ ಕುರುಬ ಸಮುದಾಯ ಸೇರ್ಪಡೆ; ಕೇಂದ್ರ ಸಚಿವರ ಭೇಟಿ ಮಾಡಿದ ಈಶ್ವರಪ್ಪ ನೇತೃತ್ವದ ನಿಯೋಗ

ಎಸ್‌ಟಿಗೆ ಕುರುಬ ಸಮುದಾಯ ಸೇರ್ಪಡೆ; ಕೇಂದ್ರ ಸಚಿವರ ಭೇಟಿ ಮಾಡಿದ ಈಶ್ವರಪ್ಪ ನೇತೃತ್ವದ ನಿಯೋಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8 ತಿಂಗಳ ಬಳಿಕ ಬಾಗಿಲು ತೆರೆದರೂ ಬರುತ್ತಿಲ್ಲ

8 ತಿಂಗಳ ಬಳಿಕ ಬಾಗಿಲು ತೆರೆದರೂ ಬರುತ್ತಿಲ್ಲ

ಮತಾಂತರ ವಿರೋಧಿಸಿ ಸಂಘಟನೆಗಳ ಪ್ರತಿಭಟನೆ

ಮತಾಂತರ ವಿರೋಧಿಸಿ ಸಂಘಟನೆಗಳ ಪ್ರತಿಭಟನೆ

ತಾಲೂಕಿನಲ್ಲಿ ಮಿತಿ ಮೀರಿದ ಭ್ರಷ್ಟಾಚಾರ: ಗಣೇಶ್‌

ತಾಲೂಕಿನಲ್ಲಿ ಮಿತಿ ಮೀರಿದ ಭ್ರಷ್ಟಾಚಾರ: ಗಣೇಶ್‌

ಗೋದಾಮಿನಿಂದ 50 ಲಕ್ಷ ಮೌಲ್ಯದ ಪಾನ್ ಮಸಾಲಾ ಕಳ್ಳತನ: 12 ಗಂಟೆಯೊಳಗೆ ಆರೋಪಿ ಬಂಧನ

ಗೋದಾಮಿನಿಂದ 50 ಲಕ್ಷ ಮೌಲ್ಯದ ಪಾನ್ ಮಸಾಲಾ ಕಳ್ಳತನ: 12 ಗಂಟೆಯೊಳಗೆ ಆರೋಪಿ ಬಂಧನ

ವರ್ಷ ಕಳೆದರೂ ಚಾ.ನಗರಕ್ಕೆ ಬಾರದ ಸಿಎಂ

ವರ್ಷ ಕಳೆದರೂ ಚಾ.ನಗರಕ್ಕೆ ಬಾರದ ಸಿಎಂ

MUST WATCH

udayavani youtube

ಮಂಗಳೂರು: ಉಪ್ಪುನೀರು ತಡೆ ಅಣೆಕಟ್ಟು ಕಾಮಗಾರಿ ವೀಕ್ಷಿಸಿದ ಸಚಿವ ಮಾಧುಸ್ವಾಮಿ

udayavani youtube

ಕರಾವಳಿಯಲ್ಲೂ ಪರಿಚಯವಾಯಿತು ಜಪಾನಿನ ಕೊಕೆಡಾಮ ಕಲೆ

udayavani youtube

ಕೊರೊನಾ ಪರಿಣಾಮ ಅಧ್ಯಯನಕ್ಕಾಗಿ ರೋಡ್ ಆಶ್ರಮ್ ಅಭಿಯಾನ

udayavani youtube

Auto Rickshaw driver feeds stray dogs in Surathkal | Umesh Devadiga | Udayavani

udayavani youtube

ಸುರತ್ಕಲ್ ನ ಪ್ರಥಮ ರಿಕ್ಷಾ ಚಾಲಕಿ

ಹೊಸ ಸೇರ್ಪಡೆ

ಭಯ ಬೇಡ, ದೂರುದಾರರ ಹೆಸರನ್ನು ಗೌಪ್ಯವಾಗಿಡುವೆವು…

ಭಯ ಬೇಡ, ದೂರುದಾರರ ಹೆಸರನ್ನು ಗೌಪ್ಯವಾಗಿಡುವೆವು…

ಕಚ್ಚಾ ತೈಲಾಗಾರದ 210 ಎಕರೆ ಭೂಸ್ವಾಧೀನಕ್ಕೆ “ಕ್ಯಾಡಸ್ಟ್ರಲ್‌ ಸರ್ವೇ’

ಕಚ್ಚಾ ತೈಲಾಗಾರದ 210 ಎಕರೆ ಭೂಸ್ವಾಧೀನಕ್ಕೆ “ಕ್ಯಾಡಸ್ಟ್ರಲ್‌ ಸರ್ವೇ’

ಮಂಗಳೂರಿನ 20 ಕಡೆ ಬೃಹತ್‌ ಜಲ ಸಂಗ್ರಹಾಗಾರ ಸ್ಥಾವರ

ಮಂಗಳೂರಿನ 20 ಕಡೆ ಬೃಹತ್‌ ಜಲ ಸಂಗ್ರಹಾಗಾರ ಸ್ಥಾವರ

ಪ್ರತಿದಿನ ಗೊಬ್ಬರವಾಗುತ್ತಿದೆ 8 ಸಾವಿರ ಮನೆಗಳ ಹಸಿಕಸ

ಪ್ರತಿದಿನ ಗೊಬ್ಬರವಾಗುತ್ತಿದೆ 8 ಸಾವಿರ ಮನೆಗಳ ಹಸಿಕಸ

ಬೈಂದೂರು ಕ್ಷೇತ್ರದ 59,000 ಮನೆಗಳಿಗೆ ಗಂಗೆ: ರಾಘವೇಂದ್ರ

ಬೈಂದೂರು ಕ್ಷೇತ್ರದ 59,000 ಮನೆಗಳಿಗೆ ಗಂಗೆ: ರಾಘವೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.