ಇನ್ನೆಷ್ಟು ವರ್ಷ ಅಶುದ್ಧ ನೀರು ಸೇವಿಸಬೇಕು?

ಒಡಲಲ್ಲಿ ಕಾವೇರಿ ನದಿ ಇದ್ದರೂ ಜನರಿಗೆ ಶುದ್ಧ ನೀರಿಲ್ಲ ದಾಸನಪುರ, ಹಳೇ ಅಣಗಳ್ಳಿ ಗ್ರಾಮಸ್ಥರ ಅಳಲು

Team Udayavani, Oct 5, 2020, 3:37 PM IST

cn-tdy-2

ಕೊಳ್ಳೆಗಾಲ: ತಾಲೂಕಿನ ಹರಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ದಾಸನಪುರ ಮತ್ತುಹಳೇ ಅಣಗಳ್ಳಿಯ ಜನರಿಗೆ ಶುದ್ಧಕುಡಿಯುವ ನೀರು ಮರೀಚಿಕೆಯಾಗಿದೆ. ಹಲವು ವರ್ಷಗಳಿಂದ ಅಶುದ್ಧ ನೀರನ್ನೇ ಸೇವಿಸು ತ್ತಿರುವ ಗ್ರಾಮಸ್ಥರು, ಇನ್ನೇಷ್ಟು ವರ್ಷ ಇಂತಹ ಅವ್ಯವಸ್ಥೆಯಲ್ಲೇ ಜೀವನ ನಡೆಸಬೇಕು ಎಂದು ಪ್ರಶ್ನಿಸಿದ್ದಾರೆ. ಗ್ರಾಮದ ಒಡಲಿನಲ್ಲಿ ಸದಾ ಕಾವೇರಿ ನದಿ ಹರಿಯುತ್ತಿದ್ದರೂ ಶುದ್ಧ ನೀರನ್ನು ಕುಡಿಯುವ ಭಾಗ್ಯ ಇಲ್ಲವಾಗಿದೆ.

ತಾಲೂಕಿನ ದಾಸನಪುರವು ಕಾವೇರಿ ನದಿಯ ತೀರದ ತಪ್ಪಲಿನಲ್ಲಿ ಇದ್ದು,ಗ್ರಾಮದಲ್ಲಿಸುಮಾರು 600-700 ಜನಸಂಖ್ಯೆ ಇದೆ. ದಲಿತರು, ವೀರಶೈವರು, ಕುರುಬ ಸಮುದಾಯ ದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗ್ರಾಮದ ಜನರು ಲಗಾಯ್ತಿನಿಂದಲೂ ಕಾವೇರಿ ನದಿಯ ನೀರನ್ನೇ ಸೇವಿಸುವಂತಹ ಪರಿಸ್ಥಿತಿ ಇದೆ.

ಶುದ್ಧ ನೀರಿನಘಟಕ ಸ್ಥಾಪಿಸಿ: ಕಾವೇರಿ ನದಿಯ ನೀರನ್ನು ಶುದ್ಧೀಕರಿಸಿ ನಂತರ ಗ್ರಾಮಸ §ರಿಗೆ ಕುಡಿಯಲು ಪೂರೈಕೆ ಮಾಡಬೇಕು. ಆದರೆ, ಹಲವು ದಶಕದಿಂದಲೂ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಲಭ್ಯವಾಗಿಲ್ಲ. ಕಾವೇರಿ ನದಿಯ ನೀರನ್ನು ಶುದ್ಧೀಕರಿಸಿ ಕೊಡದಿದ್ದರೂ ಕನಿಷ್ಠ ಪಕ್ಷ ಗ್ರಾಮದಲ್ಲಿ ಶುದ್ಧ ನೀರಿನ ಘಟಕಗಳನ್ನಾದರೂ ತೆರೆಯಬೇಕಿದೆ. ಶುದ್ಧ ಕುಡಿಯುವ ನೀರನ್ನು ನಗರ ಪ್ರದೇಶಗಳಿಗೆ ಸರಬರಾಜು ಮಾಡಲಾಗುತ್ತಿದ್ದು, ಗ್ರಾಮೀಣ ಪ್ರದೇಶದನಾವು ಇನ್ನು ಎಷ್ಟು ವರ್ಷ ಅಶುದ್ಧ ನೀರನ್ನೇ ಸೇವಿಸಬೇಕು, ಅಶುಚಿತ್ವದಲ್ಲೇ ಕಾಲ ಕಳೆಯಬೇಕೆ?, ನಾವು ನಾಗರಿಕರಲ್ಲವೇ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

ಚುನಾವಣೆ ವೇಳೆ ಮತಕ್ಕಾಗಿ ದುಂಬಾಲು ಬೀಳುವ ಜನಪ್ರತಿನಿಧಿಗಳು ನಮ್ಮ ಕಷ್ಟಕ್ಕೆ ‌ ಸ್ಪಂದಿಸಬೇಕು. ಆದರೆ, ಯಾವುಬ್ಬ ಜನಪ್ರತಿನಿಧಿ ಕೂಡ ನಮಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವ ವ್ಯವಸ್ಥೆಯನ್ನು ಮಾಡಲಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಟ್ಟು ನಿಂತಿರುವ ನೀರಿನ ತೊಂಬೆ: ಹಳೆ ಅಣಗಳ್ಳಿ ಗ್ರಾಮದಲ್ಲಿ ನೀರು ಪೂರೈಕೆ ಮಾಡಲು ನೀರಿನ ತೊಂಬೆಯನ್ನು (ಮಿನಿ ಟ್ಯಾಂಕ್‌) ಪಂಚಾಯಿತಿ ವತಿಯಿಂದ ನಿರ್ಮಿಸಲಾಗಿದ್ದು, ಈ ತೊಂಬೆ ಸಂಪೂರ್ಣವಾಗಿ ಪಾಚಿಯಿಂದ ಕೂಡಿದ್ದು,ಕೆಟ್ಟು ನಿಂತಿರುವಕಾರಣಜನರು ನೀರಿಗಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.

ಜನಪ್ರತಿನಿಧಿಗಳ ನಿರ್ಲಕ್ಷ್ಯ: ಗ್ರಾಮದ ಸನಿಹವೇ ಯಾವಾಗಲೂ ನದಿ ನೀರು ಹರಿ ಯುತ್ತಿರುತ್ತದೆ. ಆದರೆ, ಕುಡಿಯಲು ನೀರು ಮಾತ್ರ ಸಿಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಗ್ರಾಮಸ್ಥರು ಇದ್ದಾರೆ. ಶಾಸಕರು, ಸಂಸದರು ಸೇರಿದಂತೆ ಜನಪ್ರತಿನಿಧಿಗಳಿಗೆ ಗ್ರಾಮಕ್ಕೆ ಹಲವಾರು ಬಾರಿ ಭೇಟಿ ನೀಡಿದ್ದರೂ‌ ನಮ್ಮ ಸಮಸ್ಯೆಗಳು ಮಾತ್ರ ಬಗೆಹರಿಯುತ್ತಿಲ್ಲ. ಪರಿಹರಿಸುವಪ್ರಯತ್ನವನ್ನೂ ಮಾಡಿಲ್ಲ ಎಂದು ರೈತ ಮುಖಂಡರಾದ ಅಣ ಗಳ್ಳಿ ಬಸವರಾಜು, ಜಿ.ಮುತ್ತುರಾಜು(ಕಾಶಿ) ಸೇರಿದಂತೆ ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಶೀಘ್ರಶುದ್ಧ ಕುಡಿವ ನೀರು ಸಿಗಲು ಮಾರ್ಗೋಪಾಯ :  ದಾಸನಪುರದ ಜನರು ಹಲವಾರು ವರ್ಷಗಳಿದ ಅಶುದ್ಧ ನೀರನ್ನೇ ಸೇವಿಸುತ್ತಿದ್ದಾರೆ. ಕಾವೇರಿ ನದಿ ನೀರನ್ನು ಶುದ್ಧೀಕರಿಸುವ ವ್ಯವಸ್ಥೆ ಇಲ್ಲವಾಗಿದೆ. ಹೀಗಾಗಿ ಶುದ್ಧ ನೀರನ್ನು ಕಲ್ಪಿಸಲು ಶುದ್ಧ ನೀರಿನ ಘಟಕತೆರೆಯಬೇಕಾಗುತ್ತದೆ. ಇದಕ್ಕೆ 20 ಲಕ್ಷಕ್ಕೂ ಅಧಿಕ ಹಣ ಬೇಕಾಗಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಇದು ಕಷ್ಟದ ಕೆಲಸ. ತ್ವರಿತವಾಗಿ ಹಾಗೂ ಸುಲಭವಾಗಿ ಶುದ್ಧ ನೀರು ಪೂರೈಸಲು ಮಾರ್ಗವೊಂದಿದೆ. ಸುಮಾರು3ಕಿ.ಮೀ. ದೂರದಕೊಳ್ಳೇಗಾಲದಲ್ಲಿ ನಗರಸಭಾ ವತಿಯಿಂದ ಶುದ್ಧೀಕರಣ ಘಟಕವನ್ನು ನಿರ್ಮಿಸಿ, ನೀರನ್ನು ಶುದ್ಧೀಕರಿಸಿನಗರದಜನತೆ ಪೂರೈಸಲಾಗುತ್ತಿದೆ. ಇಲ್ಲಿಂದ ಪೈಪ್‌ಗಳ ಮೂಲಕ ದಾಸನಪುರಕ್ಕೆ ನೀರನ್ನು ಸರಬರಾಜು ಮಾಡಬಹುದಾಗಿದೆ. ಕೇವಲ 3 ಕಿ.ಮೀ. ಪೈಪ್‌ಲೈನ್‌ ಮಾತ್ರ ಅಳವಡಿಸಬೇಕಾಗಿರುವುದರಿಂದ ಅಷ್ಟಾಗಿ ದೊಡ್ಡ ಮೊತ್ತದ ಹಣ ಬೇಕಾಗಿಲ್ಲ. ಕಡಿಮೆ ಖರ್ಚಿನಲ್ಲಿ ಸುಲಭವಾಗಿ ದಾಸನಪುರಕ್ಕೆ ನೀರನ್ನು ಕಲ್ಪಿಸಬಹುದಾಗಿದೆ. ಈ ಕುರಿತು ಕ್ಷೇತ್ರದ ಶಾಸಕರಾದ ಎನ್‌.ಮಹೇಶ್‌ ಗಮನ ಹರಿಸಿ ನಮ್ಮ ಗ್ರಾಮಕ್ಕೆ ಶುದ್ಧ ನೀರನ್ನು ಪೂರೈಕೆ ಮಾಡಬೇಕು ಎಂದು ದಾಸನಪುರದ ಗ್ರಾಮಸ್ಥರು ಆಗ್ರಹಿಸಿದ್ದಾರೆ.

 

ಡಿ.ನಟರಾಜು

ಟಾಪ್ ನ್ಯೂಸ್

Father’s Day: ತುಂಬಾ ಕೆಲಸ ಬಾಕಿ ಉಳಿದಿತ್ತು ಅಪ್ಪಾ…

Father’s Day: ತುಂಬಾ ಕೆಲಸ ಬಾಕಿ ಉಳಿದಿತ್ತು ಅಪ್ಪಾ…

Amit Shah high level meeting on Jammu and Kashmir security

Security Review; ಜಮ್ಮು ಕಾಶ್ಮೀರದ ಭದ್ರತೆಯ ಬಗ್ಗೆ ಅಮಿತ್ ಶಾ ಉನ್ನತ ಮಟ್ಟದ ಸಭೆ

5-bantwala

Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಬಸ್

Team India; ಅಶಿಸ್ತಿನ ಕಾರಣದಿಂದ ತಂಡದಿಂದ ಹೊರಬಿದ್ದರೇ ಗಿಲ್; ಸ್ಪಷ್ಟನೆ ನೀಡಿದ ಕೋಚ್

Team India; ಅಶಿಸ್ತಿನ ಕಾರಣದಿಂದ ತಂಡದಿಂದ ಹೊರಬಿದ್ದರೇ ಗಿಲ್; ಸ್ಪಷ್ಟನೆ ನೀಡಿದ ಕೋಚ್

ʼಪುಷ್ಪ-2ʼ ರಿಲೀಸ್‌ ಮುಂದೂಡಿಕೆ ಬೆನ್ನಲ್ಲೇ ‘Double iSmart’ ರಿಲೀಸ್‌ ಡೇಟ್‌ ಅನೌನ್ಸ್

ʼಪುಷ್ಪ-2ʼ ರಿಲೀಸ್‌ ಮುಂದೂಡಿಕೆ ಬೆನ್ನಲ್ಲೇ ‘Double iSmart’ ರಿಲೀಸ್‌ ಡೇಟ್‌ ಅನೌನ್ಸ್

4-

ಮಕ್ಕಳಲ್ಲಿ ಆಟಿಸಂ ಉಂಟಾಗುವುದಕ್ಕೆ ಸಂಬಂಧಿಸಿದ ಹೆತ್ತವರ ಮಾನಸಿಕ ಅನಾರೋಗ್ಯಗಳು

3

Jaipur: ಎಸಿ ಸ್ಪೋಟದಿಂದ ಬೆಂಕಿ; ಉಸಿರುಗಟ್ಟಿ ದಂಪತಿ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap ಈಚರ್ ವಾಹನ-ಬೈಕ್ ನಡುವೆ ಅಪಘಾತ: ಸವಾರ ಮೃತ್ಯು

Road Mishap ಈಚರ್ ವಾಹನ-ಬೈಕ್ ನಡುವೆ ಅಪಘಾತ: ಸವಾರ ಮೃತ್ಯು

Actor Darshan: ನ್ಯಾಯ ಕೇಳಲು ಹೋಗಿದ್ದಕ್ಕೆ ನಾಯಿಗಳನ್ನು ಛೂ ಬಿಟ್ಟಿದ್ದ ದರ್ಶನ್‌!

Actor Darshan: ನ್ಯಾಯ ಕೇಳಲು ಹೋಗಿದ್ದಕ್ಕೆ ನಾಯಿಗಳನ್ನು ಛೂ ಬಿಟ್ಟಿದ್ದ ದರ್ಶನ್‌!

Chamarajanagar: ಚುಡಾ ಅಧ್ಯಕ್ಷರಾಗಿ ಮಹಮ್ಮದ್ ಅಸ್ಗರ್ ಮುನ್ನಾ ನೇಮಕ

Chamarajanagar: ಚುಡಾ ಅಧ್ಯಕ್ಷರಾಗಿ ಮಹಮ್ಮದ್ ಅಸ್ಗರ್ ಮುನ್ನಾ ನೇಮಕ

3-gundlupete

Gundlupete: ವಿದ್ಯುತ್ ಕಂಬಕ್ಕೆ ಡಿಕ್ಕಿ: ಬೈಕ್ ಸವಾರ ಸಾವು

Vadeyanapura; ಬೋನಿಗೆ ಬಿದ್ದ ಚಿರತೆ; ನಿಟ್ಟುಸಿರು ಬಿಟ್ಟ ಜನತೆ

Vadeyanapura; ಬೋನಿಗೆ ಬಿದ್ದ ಚಿರತೆ; ನಿಟ್ಟುಸಿರು ಬಿಟ್ಟ ರೈತರು

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

Father’s Day: ತುಂಬಾ ಕೆಲಸ ಬಾಕಿ ಉಳಿದಿತ್ತು ಅಪ್ಪಾ…

Father’s Day: ತುಂಬಾ ಕೆಲಸ ಬಾಕಿ ಉಳಿದಿತ್ತು ಅಪ್ಪಾ…

Reporters: ಪತ್ರಿಕಾ ವರದಿಗಾರನ ಮೇಲೆ ನಾಲ್ವರಿಂದ ಹಲ್ಲೆ; ಆರೋಪ

Reporters: ಪತ್ರಿಕಾ ವರದಿಗಾರನ ಮೇಲೆ ನಾಲ್ವರಿಂದ ಹಲ್ಲೆ; ಆರೋಪ

6

Bengaluru: ಬಕ್ರೀದ್‌ ನಿಮಿತ್ತ ನಾಳೆ ಹಲವೆಡೆ ಸಂಚಾರ ನಿರ್ಬಂಧ

5

Bengaluru City: ಬೆಂಗಳೂರು ವಿಭಜನೆ ಅಲ್ಲ, ವಿಸ್ತಾರಕ್ಕೆ ಶಿಫಾರಸು

Amit Shah high level meeting on Jammu and Kashmir security

Security Review; ಜಮ್ಮು ಕಾಶ್ಮೀರದ ಭದ್ರತೆಯ ಬಗ್ಗೆ ಅಮಿತ್ ಶಾ ಉನ್ನತ ಮಟ್ಟದ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.