ಪಾಚಿ ಕಟ್ಟಿರುವ ನೀರಿನ ತೊಂಬೆ ದುರಸ್ತಿ ಪಡಿಸಿ
Team Udayavani, Apr 7, 2021, 1:04 PM IST
ಕೊಳ್ಳೇಗಾಲ: ಪಟ್ಟಣದ ನಾಯಕರ ದೊಡ್ಡ ಬೀದಿ ಬಡಾವಣೆಯ ರಾಜ್ಯಹೆದ್ದಾರಿ ಮಗ್ಗುಲಲ್ಲೇ ನಗರಸಭೆಯಿಂದ ಕುಡಿಯುವ ನೀರಿನ ತೊಂಬೆ(ಮಿ ನಿಟ್ಯಾಂಕ್) ನಿರ್ಮಿಸಿದ್ದು, ತೊಂಬೆ ಸಂಪೂರ್ಣ ಪಾಚಿ ಕಟ್ಟಿ ಕುಡಿಯಲು ಮತ್ತು ಮನೆ ಬಳಕೆಗೆ ಯೋಗ್ಯವಲ್ಲವಾಗಿದೆ. ನಗರಸಭೆ ಅಧಿಕಾರಿಗಳು ನೀರಿನ ತೊಂಬೆಯನ್ನು ಪರಿಶೀಲಿಸಿ, ದುರಸ್ತಿಪಡಿಸಬೇಕು ಎಂದು ಬಡಾವಣೆ ನಿವಾಸಿಗಳು ಆಗ್ರಹಿಸಿದ್ದಾರೆ.
ನೀರಿನ ತೊಂಬೆ ಮೇಲ್ಭಾಗದಲ್ಲಿಸಂಪೂರ್ಣ ಪಾಚಿ ಕಟ್ಟಿದೆ. ತೊಂಬೆಯನೀರನ್ನು ಬಳಕೆ ಮಾಡಲು ಭಯವಾಗುತ್ತಿದ್ದು, ನೀರಿನ ತೊಂಬೆಯ ಒಳಭಾಗದಲ್ಲಿಇನ್ನು ಯಾವ ರೀತಿ ಪಾಚಿ ಕಟ್ಟಿ ಅಶುದ್ಧವಾಗಿರಬಹುದೆಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ನೀರಿನ ತೊಂಬೆಯ ಕಲುಷಿತವಾಗುವುದರ ಜೊತೆಗೆ ಅದರ ಸುತ್ತ ಮುತ್ತಲು ಕಸಕಡ್ಡಿಗಳು ಬಿದ್ದು ಗಬ್ಬುನಾರುತ್ತಿದೆ. ಕೂಡಲೇ ಪೌರ ಕಾರ್ಮಿಕರಿಂದ ನೀರಿನ ತೊಂಬೆ ಸುತ್ತ ಬೆಳೆದಿರುವಗಿಡಗಂಟಿಗಳನ್ನು ತೆರವು ಮಾಡಿ ಕ್ರಿಮಿನಾಶಕಗಳನ್ನು ಸಿಂಪಡಿಸಿ ಸ್ವತ್ಛಗೊಳಿಸಬೇಕಿದೆ.ನೀರಿನ ತೊಂಬೆ ಒಳಗೆ ಮತ್ತು ಹೊರಗೆಪಾಚಿಯಿಂದ ಶೇಖರಣೆಯಾಗಿದ್ದು,ಇದರ ನೀರು ಬಳಕೆ ಮಾಡಿದರೆಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಇಂತಹ ಘಟನೆಗಳುಜರುಗಿದರೆ ನಗರಸಭೆ ಹೊಣೆಹೊರಬೇಕಾಗುತ್ತದೆ. ಕೂಡಲೇಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತೊಂಬೆಯನ್ನು ದುರಸ್ತಿಪಡಿಸಿ, ಶುದ್ಧನೀರನ್ನು ಪೂರೈಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಕ್ರಮ ಮರಳುಗಾರಿಕೆ ಸಂದರ್ಭ ಅವಘಡ : ದೋಣಿ ಮಗುಚಿ ಬಿದ್ದು ಓರ್ವ ಕಾರ್ಮಿಕ ನಾಪತ್ತೆ
ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೈದ ಪ್ರಕರಣ : ಮೂವರ ವಿರುದ್ಧ ಪ್ರಕರಣ ದಾಖಲು
ಹಿರಿಯ ನಟಿ, ರಂಗಭೂಮಿ ಕಲಾವಿದ ಗುಬ್ಬಿವೀರಣ್ಣ ಪುತ್ರಿ ಹೇಮಲತಾ ನಿಧನ
ದೆಹಲಿಯಲ್ಲಿ ದುಷ್ಕರ್ಮಿಗಳಿಂದ ಗುಂಡಿಕ್ಕಿ ಬಿಲ್ಡರ್ ಬರ್ಬರ ಹತ್ಯೆ
ಕುಣಿಗಲ್ : ಲಾರಿ ಢಿಕ್ಕಿ ಹೊಡೆದು ಬೈಕ್ ಸವಾರ ಸಾವು