ಸಂಘದ ಅಭಿವೃದ್ಧಿಗೆ ಸದಸ್ಯರು ಸಹಕರಿಸಿ

Team Udayavani, Sep 24, 2019, 3:00 AM IST

ಕೊಳ್ಳೇಗಾಲ: ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತದ ಸಂಸ್ಥೆಗೆ ಸಾಕಷ್ಟು ಬದಲಾವಣೆ ತಂದು ಅಭಿವೃದ್ಧಿ ಪಡಿಸಲು ಸಂಸ್ಥೆಯ ಎಲ್ಲಾ ಸದಸ್ಯರು ಸಹಕರಿಸಬೇಕು ಎಂದು ಸಂಸ್ಥೆಯ ಅದ್ಯಕ್ಷ ಮೆಹಬೂಬ್‌ ಷರೀಫ್ ಹೇಳಿದರು.

ಪಟ್ಟಣದ ಗುರುಭವನದಲ್ಲಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ 2018-19ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ಸಂಸ್ಥೆಯಲ್ಲಿ ಉತ್ತಮವಾಗಿ ನಡೆಯುತ್ತಿತ್ತು. ಗೋಡೋನ್‌ನಲ್ಲಿ ಅವ್ಯವಹಾರದಿಂದಾಗಿ ಗೋಡೋನ್‌ ಮುಚ್ಚಿದ ಪರಿಣಾಮ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಎತ್ತುವಳಿಗೆ ಕಡಿವಾಣ ಬಿದ್ದ ಪರಿಣಾಮ ಸುಮಾರು 4 ಲಕ್ಷ ನಷ್ಟ ರೂ. ಉಂಟಾಗಿದೆ ಎಂದರು.

ಸದಸ್ಯತ್ವ ರದ್ದು ಮಾಡಿ: ಸಂಸ್ಥೆಯ ಸದಸ್ಯ ಸೋಮಶೇಖರ್‌ ಟಿಎಪಿಸಿಎಂಎಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಯದರ್ಶಿ ಮತ್ತು ಸಿಬ್ಬಂದಿಯನ್ನು ಸಂಪೂರ್ಣ ಬದಲಾಯಿಸಬೇಕು ಮತ್ತು ಹನೂರು ಶಾಸಕ ಆರ್‌.ನರೇಂದ್ರ ಸಂಸ್ಥೆಯ ನಿರ್ದೇಶಕರಾಗಿದ್ದು, ಕಳೆದ 5 ವರ್ಷಗಳಿಂದ ಸಭೆಗೆ ಗೈರು ಹಾಜರಾಗಿರುತ್ತಾರೆ. ಅವರ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂದು ದೂರಿದರು.

ಏನು ಕ್ರಮ ಕೈಗೊಂಡಿದ್ದೀರಿ?: ಸದಸ್ಯ ಸತ್ತೇಗಾಲ ಗ್ರಾಮದ ರಾಜಶೇಖರ್‌ ಗೋಡೋನಿನಲ್ಲಿ ಆಗಿರುವ ಅವ್ಯವಹಾರದ ತನಿಖೆ ನಡೆದು, ಗೋಡಾನಿನ ಅಧಿಕಾರಿ ಅಮಾನತುಗೊಂಡು ಪ್ರಕರಣವು ನ್ಯಾಯಾಲಯದಲ್ಲಿ ಇದೆ. ನ್ಯಾಯಾಲಯದಲ್ಲಿ ಪ್ರಕರಣ ಏನಾಯಿತು ಮತ್ತು ಪ್ರಕರಣಕ್ಕೆ ಈಗಾಗಲೇ ಕಾರಣರಾಗಿರುವ ಕಾರ್ಯದರ್ಶಿಗಳ ಮೇಲೆ ಯಾವ ರೀತಿ ಕ್ರಮ ಜರುಗಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ.

ಸಂಸ್ಥೆ ಹಣ ದುರ್ಬಳಕೆ: ಅದೇ ರೀತಿ ಪಾಳ್ಯ ಗ್ರಾಮ ರಂಗಸ್ವಾಮಿ ಮಾತನಾಡಿ, ಸಂಸ್ಥೆಯಲ್ಲಿ ಹಣ ದುಬಳìಕೆಯಾಗಿದ್ದು, ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೆಲವರಿಗೆ ಮಾತ್ರ ಬೋನಸ್‌ ನೀಡಲಾಗಿದೆ. ಉಳಿದವರಿಗೆ ಯಾಕೆ ನೀಡಿಲ್ಲ. ಇದೆಲ್ಲವನ್ನು ತನಿಖೆ ನಡೆಸುವಂತೆ ಸಿಒಡಿಗೆ ದೂರು ನೀಡುವ ಬೆದರಿಕೆ ಒಡ್ಡಿದ್ದಾರೆ.

ದೂರುಗಳ ಸುರಿಮಳೆ: ಮತ್ತೂರ್ವ ಸದಸ್ಯ ಶಿವಮೂರ್ತಿ ಸಂಸ್ಥೆ ನಡೆಸುತ್ತಿರುವ ಪೆಟ್ರೋಲ್‌ ಬಂಕ್‌ನಲ್ಲಿ ಹಣ ದುಬಳಕೆಯಾಗಿದೆ. ಸೊಸೈಟಿಯ ಹಣವನ್ನು ಸಹ ದುಬಳಕೆಯಾಗಿದ್ದು, ಕೂಡಲೇ ತನಿಖೆಯಾಗಬೇಕು. ತನಿಖೆ ಮುಗಿಯುವವರೆಗೆ ಸಂಸ್ಥೆಯ ಕಾರ್ಯದರ್ಶಿ ಲೂಸಿ ಪ್ಲಾರಿನ್‌ ಅವರನ್ನು ಅಮಾನತಿನಲ್ಲಿಟ್ಟು ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು ಎಂದು ದೂರಿನ ಸುರಿಮಳೆಯನ್ನು ಸದಸ್ಯರು ಮಾಡಿದ್ದಾರೆ.

ಸಭೆಯಲ್ಲಿ ಪ್ರತಿಭಟನೆ: ಪಾಳ್ಯ ಗ್ರಾಮದ ಸದಸ್ಯ ಪರಶಿವ ಟಿಎಪಿಸಿಎಂಎಸ್‌ನಲ್ಲಿ ಸಾಕಷ್ಟು ಹಣ ದುರ್ಬಳಕೆಯಾಗಿದೆ ಹೊರತು ಸದಸ್ಯರಿಗೆ ಯಾವುದೇ ತರಹದ ಅನುಕೂಲ ಆಗಿಲ್ಲ. ಸಂಸ್ಥೆಯ ಪದಾಧಿಕಾರಿಗಳು ಹಣವನ್ನು ನುಂಗಿ ಸಂಸ್ಥೆಯ ಕಾರ್ಯದರ್ಶಿ ಕೆಲಸ ಕಳೆದುಕೊಳ್ಳುವಂತೆ ಆಗಿದ್ದು, ಈ ಎಲ್ಲಾ ಅವ್ಯವಹಾರಕ್ಕೆ ಅಧ್ಯಕ್ಷರು ಸೂಕ್ತ ಉತ್ತರ ನೀಡಬೇಕೆಂದು ಸಭೆಯ ಮುಂಭಾಗ ಪ್ರತಿಭ ಟಿಸಿ ಧರಣಿ ಕುಳಿತರು.

ಸದಸ್ಯರ ದೂರಿನಂತೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಂಡು ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದ ಅಧ್ಯಕ್ಷರು, ಸಂಸ್ಥೆ ವತಿಯಿಂದ ನೂತನವಾಗಿ ನಿರ್ಮಿಸಿರುವ ಮಳಿಗೆಯಲ್ಲಿ ಸಣ್ಣಪುಟ್ಟ ಕೆಲಸ ಪೂರ್ಣಗೊಳ್ಳುತ್ತಿದ್ದಂತೆ ಸಾರ್ವಜನಿಕರ ಉಪಯೋಗಕ್ಕೆ ಉದ್ಘಾಟಿಸಲಾಗುವುದು ಎಂದರು.

ನೂತನ ಕಲ್ಯಾಣ ಮಂಟಪ: ಸರ್ವಸದಸ್ಯರು ಟಿಎಪಿಸಿಎಂಎಸ್‌ ವತಿಯಿಂದ ನೂತನ ಕಲ್ಯಾಣ ಮಂಟಪವೊಂದನ್ನು ನಿರ್ಮಿಸುವಂತೆ ಸಲಹೆ ನೀಡಿದ್ದು, ಕೂಡಲೇ ಕಲ್ಯಾಣ ಮಂಟಪವೊಂದನ್ನು ನಿರ್ಮಾಣ ಮಾಡಿ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಕೊಡಲಾಗುವುದು ಎಂದು ತಿಳಿಸಿದರು.

ಸಂಸ್ಥೆಯನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ದಿವಂಗತ ಜಿ.ರಾಜೂಗೌಡರು ಮತ್ತು ಮಾಜಿ ಸಚಿವ ಎಚ್‌.ನಾಗಪ್ಪ ಅವರು ಸ್ಥಾಪಿಸಿದ ಈ ಸಂಸ್ಥೆಗೆ ಯಾವುದೇ ತರಹದ ಕಪ್ಪುಚುಕ್ಕೆ ಬರದ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು ಎಂದು ಸದಸ್ಯರ ಸದ್ದುಗದ್ದಲದೊಂದಿಗೆ ಸಭೆ ಮುಕ್ತಾಯಗೊಳಿಸಿದರು. ಉಪಾಧ್ಯಕ್ಷೆ ಉತ್ತಮ್ಮ, ನಿರ್ದೇಶಕರಾದ ಮಹದೇವಸ್ವಾಮಿ, ಲಿಂಗರಾಜು, ಮಹದೇವಸ್ವಾಮಿ, ಮಾದೇಶ, ಗೋಪಾಲನಾಯ್ಡು, ಮಂಜುನಾಥ, ಇತರರು ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಹನೂರು: ಕಳೆದ 15 ದಿನಗಳಿಂದ ಪೋಡಿನಲ್ಲಿ ಕಾಣಿಸಿಕೊಂಡಿರುವ ಕಾಯಿಲೆಯಿಂದ 30ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ. ಅಲ್ಲದೆ, 50ಕ್ಕೂ ಹೆಚ್ಚು ಮೇಕೆಗಳು ಮೃತಪಟ್ಟಿರುವ...

  • ಚಾಮರಾಜನಗರ: ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಉಮಾಶಂಕರ್‌ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್‌ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಮಾತನಾಡಿದ್ದು, ಅವರನ್ನು...

  • ಚಾಮರಾಜನಗರ: ಚಾಮರಾಜನಗರ ಹಾಲು ಉತ್ಪಾದಕರ ಒಕ್ಕೂಟ (ಚಾಮುಲ್‌) ದಲ್ಲಿ ಖಾಲಿಯಿರುವ 72 ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ಹಣ ನೀಡಿದ...

  • ಚಾಮರಾಜನಗರ: ಜಿಲ್ಲೆಯ ತಲಾ ಒಂದು ಜಿಪಂ ಕ್ಷೇತ್ರ, ತಾಪಂ ಕ್ಷೇತ್ರ, ನಗರಸಭಾ ವಾರ್ಡ್‌ ಹಾಗೂ ನಾಲ್ಕು ಗ್ರಾಪಂ ಕ್ಷೇತ್ರಗಳಿಗೆ ಮಂಗಳವಾರ ಶಾಂತಿಯುತ ಚುನಾವಣೆ ನಡೆಯಿತು....

  • ಕೊಳ್ಳೇಗಾಲ: ಸರ್ಕಾರಗಳು ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಎಂದು ಹೇಳುತ್ತಿರುವಾಗಲೇ ಇಲ್ಲೊಂದು ಗ್ರಾಮದಲ್ಲಿ ರಸ್ತೆ, ಚರಂಡಿ ಇಲ್ಲದೆ,...

ಹೊಸ ಸೇರ್ಪಡೆ