ಮಾದಪ್ಪನ ದರ್ಶನ ಪಡೆದ ಶಾಸಕ ಡಾ|ಯತೀಂದ್ರ
Team Udayavani, Nov 29, 2020, 1:38 PM IST
ಹನೂರು: ಮಲೆ ಮಹದೇಶ್ವರ ಬೆಟ್ಟ ಮತ್ತು ನಾಗಮಲೆ ಕ್ಷೇತ್ರಗಳಿಗೆ ವರುಣಾ ಕ್ಷೇತ್ರದ ಶಾಸಕ ಡಾ| ಯತೀಂದ್ರ ಸಿದ್ದರಾಮಯ್ಯ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಬೆಟ್ಟಕ್ಕೆಶುಕ್ರವಾರ ತಡರಾತ್ರಿಯೇ ಆಗಮಿಸಿದ್ದ ಯತೀಂದ್ರ ರಾಷ್ಟ್ರಪತಿ ಭವನದಲ್ಲಿ ವಾಸ್ತವ್ಯ ಹೂಡಿದ್ದರು. ಶನಿವಾರ ಬೆಳಗ್ಗೆ 6 ಗಂಟೆಯ ವೇಳೆಗೆ ಮಲೆ ಮಾದಪ್ಪನ ದರ್ಶನ ಪಡೆದರು. ಬಳಿಕ ಯತೀಂದ್ರ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಮತ್ತು ಗ್ರಾಪಂ ಮಾಜಿ ಉಪಾಧ್ಯಕ್ಷ ಮಾದೇಶ್ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರ ಜೊತೆ ಇಂಡಿಗನತ್ತ ಗ್ರಾಮದವರೆಗೆ ಜೀಪ್‌ನಲ್ಲಿ ತೆರಳಿ, ನಂತರ ಕಾಲ್ನಡಿಗೆಯ ಮೂಲಕ ನಾಗಮಲೆ ಕ್ಷೇತ್ರಕ್ಕೆ ತೆರಳಿ ಸ್ವಾಮಿಯ ದರ್ಶನ ಪಡೆದರು. ಬಳಿಕ ನಾಗಮಲೆ ಕ್ಷೇತ್ರದಿಂದ ಬೆಟ್ಟ ಇಳಿದು ವಾಹನದ ಮೂಲಕ ಗೋಪಿನಾಥಂಗೆ ತೆರಳಿ ಅಲ್ಲಿಂದ ಮಲೆ ಮಹದೇಶ್ವರ ಬೆಟ್ಟ ತಲುಪಿದರು.
ಕಾಂಗ್ರೆಸ್ ಬೆಂಬಲಿಸಿ: ಬೆಟ್ಟಕ್ಕೆ ಯತೀಂದ್ರ ಸಿದ್ದರಾಮಯ್ಯ ಆಗಮಿಸಿರುವುದನ್ನು ತಿಳಿದ ಕೆಲ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಅವರನ್ನು ಮಾತನಾಡಿಸಲು ಶ್ರೀ ಕ್ಷೇತ್ರದಲ್ಲಿ ಕಾದು ಕುಳಿತಿದ್ದರು. ಈ ವೇಳೆಗೆ ಆಗಮಿಸಿದ ಯತೀಂದ್ರ ಕುಶಲೋಪರಿ ವಿಚಾರಿಸಿ ಔಪಚಾರಿಕ ಚರ್ಚೆ ನಡೆಸಿ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಬೆಂಬಲಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದರು. ಈ ವೇಳೆ ಕೆಲ ಮುಖಂಡರು, ಕಾರ್ಯಕರ್ತರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದದ್ದು ಕಂಡು ಬಂದಿತು. ಬಳಿಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಾಮರಾಜನಗರ: 8 ಕೋವಿಡ್ ಪ್ರಕರಣ ದೃಢ
ಸಿಎಂಗೆ ಧೈರ್ಯ ಇದ್ದರೆ ಚಾಮರಾಜನಗರದಲ್ಲಿ ಪ್ರಗತಿ ಪರಿಶೀಲನಾಸಭೆ ನಡೆಸಲಿ :ಧ್ರುವನಾರಾಯಣ ಸವಾಲು
ಶಾಲಾ ಕಾಲೇಜುಗಳ ಪಠ್ಯ ಪುಸ್ತಕಗಳಲ್ಲಿ ಶೇ. 30ರಷ್ಟು ಕಡಿತ: ಸುರೇಶ್ ಕುಮಾರ್
ಕಾಂಗ್ರೆಸ್ ಪಕ್ಷಕ್ಕೆ ಈ ಮೂರು ಶಾಪ ತಟ್ಟಿದೆ ; ಚಾಮರಾಜನಗರದಲ್ಲಿ ನಳಿನ್ ಕುಮಾರ್ ವಾಗ್ದಾಳಿ
7 ತಿಂಗಳ ಬಳಿಕ ಚಾ.ನಗರ ಜಿಲ್ಲೆಯಲ್ಲಿ ಶೂನ್ಯ ಕೋವಿಡ್ ಪ್ರಕರಣ!