ಚಾಮರಾಜನಗರದಲ್ಲಿ ಮುಂಬೈ ಯುವಕನಿಗೆ ಕೋವಿಡ್‌ 19 ಸೋಂಕು

Team Udayavani, Jun 10, 2020, 5:31 AM IST

chamaraja-corona

ಚಾಮರಾಜನಗರ: ಮುಂಬೈ ನಿವಾಸಿ, ವೈದ್ಯಕೀಯ ವಿದ್ಯಾರ್ಥಿ ಜಿಲ್ಲೆಗೆ ಬಂದಿದ್ದು ಆತನಿಗೆ ಕೋವಿಡ್‌ 19 ಸೋಂಕು ದೃಢಪಟ್ಟಿದೆ. ಆತ ಮುಂಬೈ ವಾಸಿಯಾದ್ದ ರಿಂದ ಜಿಲ್ಲೆಯವನು ಎಂದು ಪರಿಗಣಿಸ ಲಾಗುವುದಿಲ್ಲ. ರಾಜ್ಯದಲ್ಲಿರುವ ಜಿಲ್ಲಾ ವಾರು ಕೋವಿಡ್‌ ಪ್ರಕರಣಗಳ ಪಟ್ಟಿ ಯಲ್ಲಿ ಇದು ಇತರೆ ವರ್ಗಕ್ಕೆ ಸೇರುತ್ತದೆ. ಹೀಗಾಗಿ ಚಾಮರಾಜನಗರ ಜಿಲ್ಲೆ ಈಗಲೂ ಹಸಿರು ವಲಯವಾಗಿಯೇ ಉಳಿದಿದೆ.

ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಜಿಲ್ಲಾಧಿಕಾರಿ ಡಾ.  ಎಂ.ಆರ್‌.ರವಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು. ಮುಂಬೈನಿಂದ ಬೆಂಗಳೂರು ಮಾರ್ಗವಾಗಿ ಶುಕ್ರವಾರ ರಾತ್ರಿ ಮಾರ್ಟಳ್ಳಿಯ ಪಾಲಿಮೇಡು ಗ್ರಾಮಕ್ಕೆ ತಾಯಿ ಮತ್ತು ಇಬ್ಬರು ಗಂಡು ಮಕ್ಕಳು ಬಂದಿದ್ದಾರೆ. ಇವರು ಮುಂಬೈನಲ್ಲೇ  ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಅದಕ್ಕೆ ಅಲ್ಲಿನ ಆಧಾರ್‌ ಕಾರ್ಡ್‌ ಸಾಕ್ಷಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮಾಹಿತಿ ನೀಡಿಲ್ಲ: ಇವರು ಜಿಲ್ಲೆಗೆ ಬರುವಾಗ ಸರ್ಕಾರದ ನಿಯಮದ ಪ್ರಕಾರ ಸೇವಾ ಸಿಂಧುವಿನಲ್ಲಿ ರಿಜಿಸ್ಟರ್‌ ಮಾಡಿ  ಕೊಳ್ಳ ಬೇಕು. ಹಾಗೆ ಮಾಡದೇ ರೈಲಿನಲ್ಲಿ ಬಂದಿದ್ದಾರೆ. ರೈಲ್ವೆಯಿಂದಲೂ ಜಿಲ್ಲೆಗೆ ಮಾಹಿತಿ ನೀಡಿಲ್ಲ. ಯುವಕನ  ಸೋದರಮಾವ ಮೂವರನ್ನೂ ಬೆಂಗಳೂರಿನಿಂದ ಶುಕ್ರವಾರ ಕರೆತಂದಿದ್ದಾರೆ. ಶುಕ್ರವಾರ ರಾತ್ರಿ ಯುವಕನ ತಾಯಿ ಮನೆ ಪಾಲಿಮೇಡು  ನಲ್ಲಿದ್ದು, ಶನಿವಾರ ಕೊಳ್ಳೇಗಾಲ ದ ಫೀವರ್‌ ಕ್ಲಿನಿಕ್‌ನಲ್ಲಿ ಪರೀಕ್ಷಿಸಿ ನಂತರ ಹನೂರಿನ  ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈ ನಲ್ಲಿರಿಸಲಾಗಿದೆ.

ಕೋವಿಡ್‌ ಪರೀಕ್ಷೆಯಲ್ಲಿ ತಾಯಿ ಮತ್ತು ಹಿರಿಯ ಮಗನಿಗೆ ನೆಗೆಟಿವ್‌ ಬಂದಿದ್ದು, 22 ವರ್ಷದ ಕಿರಿಯ ಪುತ್ರ  ನಿಗೆ ಪಾಸಿಟಿವ್‌ ದೃಢಪಟ್ಟಿದೆ. ಈತನಿಗೆ ಪ್ರಸ್ತುತ  ಚಾಮರಾಜನಗರದ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದರು. ಯುವಕನ ತಾಯಿ, ತಮ್ಮ, ಮತ್ತು ಮಾವ ಪ್ರಾಥಮಿಕ ಸಂಪರ್ಕ ಹೊಂದಿದ್ದು ಇವರನ್ನು ಕ್ವಾರಂಟೈನ್‌  ಕೇಂದ್ರದಲ್ಲಿರಿಸ ಲಾಗಿದೆ. ಮಾವನ ಕುಟುಂಬದವರು ದ್ವಿತೀಯ ಸಂಪರ್ಕದವರಾಗಿದ್ದು, ಅವ ರನ್ನೂ ಕ್ವಾರಂಟೈನ್‌ನಲ್ಲಿರಿಸಲಾಗಿದೆ ಎಂದರು. ಎಸ್ಪಿ ಆನಂದಕುಮಾರ್‌, ಡಿ ಎಚ್‌ಒ ಡಾ.ಎಂ.ಸಿ.ರವಿ ಇದ್ದರು.

ಚಾಮರಾಜನಗರ ಹಸಿರು ವಲಯ: ಬೇರೆ ರಾಜ್ಯದಿಂದ ಮತ್ತು ಹೊರ ದೇಶದಿಂದ ಜಿಲ್ಲೆಗೆ ಬಂದವರನ್ನು ಆ ಜಿಲ್ಲೆಗೆ ಸೇರಿದವರು ಎಂದು ಪರಿಣಿಸಲಾಗುವುದಿಲ್ಲ. ಯುವಕನ ತಾಯಿಗೆ ಮಧುಮೇಹ ಇದ್ದು, ಅವರನ್ನು ಮಾರ್ಟಳ್ಳಿಯಲ್ಲಿ  ಬಿಟ್ಟು ಹೋಗಲು ಬಂದಾಗ ಈ ಪ್ರಕರಣ ವರದಿಯಾಗಿದೆ. ಈ ಪ್ರಕರಣ ರಾಜ್ಯದ ಪಟ್ಟಿಯಲ್ಲಿ ಚಾಮರಾಜ ನಗರ ಜಿಲ್ಲೆಗೆ ಸೇರುವುದಿಲ್ಲ ಇತರ ವಿಭಾಗಕ್ಕೆ ಸೇರುತ್ತದೆ ಎಂದು ಜಿಲ್ಲಾ ಧಿಕಾರಿ ಡಾ.ರವಿ ಸ್ಪಷ್ಟಪಡಿಸಿದರು.

ಅಂತಾರಾಜ್ಯದಿಂದ  ಬರುವವರು ಸೇವಾ ಸಿಂಧು ದಾಖಲಾತಿ ಮಾಡಿಸಿ ನಂತರ ಬರಬೇಕು. ಆದರೆ ಇವರು ರಿಜಿಸ್ಟರ್‌ ಮಾಡಿಸದೇ ಬಂದದ್ದ ರಿಂದ ಈ ಅಚಾತುರ್ಯ ನಡೆದಿದೆ. ಯುವಕನಿಗೆ ಇಲ್ಲೇ ಚಿಕಿತ್ಸೆ ನೀಡಲಾ ಗುತ್ತಿದೆ. ಗುಣಮುಖನಾದ ಬಳಿಕ ಮುಂಬಯಿಗೆ  ಕಳುಹಿಸಲಾಗುವುದು ಎಂದು ಹೇಳಿದರು.

ಟಾಪ್ ನ್ಯೂಸ್

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೇಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೇಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಾಮರಾಜನಗರ ಕ್ಷೇತ್ರದ ಜನರ ಧ್ವನಿಯಾಗುವೆ : ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌

ಚಾಮರಾಜನಗರ ಕ್ಷೇತ್ರದ ಜನರ ಧ್ವನಿಯಾಗುವೆ : ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌

Tiger attack; ಹೊನ್ನೇಗೌಡನಹಳ್ಳಿ: ಹುಲಿ ದಾಳಿ; ಯುವಕನಿಗೆ ಗಾಯ

Tiger attack; ಹೊನ್ನೇಗೌಡನಹಳ್ಳಿ: ಹುಲಿ ದಾಳಿ; ಯುವಕನಿಗೆ ಗಾಯ

Kollegala; ಪ್ರಧಾನಿ ಮೋದಿಯವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ: ಸಿದ್ದರಾಮಯ್ಯ

Kollegala; ಪ್ರಧಾನಿ ಮೋದಿಯವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ: ಸಿದ್ದರಾಮಯ್ಯ

ಸತ್ತೇಗಾಲ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದ 1.58 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶ

ಸತ್ತೇಗಾಲ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದ 1.58 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶ

1-weeeqwe

ಯಳಂದೂರು: ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ ಅಕ್ರಮ ಮದ್ಯ ವಶ

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೇಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೇಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.