ಕೃಷಿ ಭೂಮಿ ಖರೀದಿ ಸಡಿಲಿಕೆಗೆ ವಿರೋಧ
Team Udayavani, Jun 14, 2020, 5:02 AM IST
ಯಳಂದೂರು: ಕೃಷಿ ಭೂಮಿ ಖರೀದಿಗೆ ನಿರ್ಬಂಧ ಸಡಿಲಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ನನ್ನ ವಿರೋಧವಿದೆ ಎಂದು ಶಾಸಕ ಮಹೇಶ್ ತಿಳಿಸಿದರು. ತಾಲೂಕಿನ ಕೊಮಾರನಪುರ ಗ್ರಾಮದಲ್ಲಿ ಕಣಿಯ ಸಮುದಾಯ ಭವನಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಸಣ್ಣ ಹಾಗೂ ಅತಿ ಸಣ್ಣ ರೈತರು ತುಂಡು ಭೂಮಿಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.
ಮಳೆಯ ಅಭಾವದಿಂದ ಇತ್ತೀಚೆಗೆ ರೈತರು ವ್ಯವಸಾಯದಿಂದ ವಿಮುಖರಾಗಿದ್ದರು. ಇದರಿಂದ ಹಣವಂತರು ಭೂಮಿ ಖರೀದಿಗೆ ಕೇಳಿದರೆ ಸುಲಭ ವಾಗಿ ಭೂಮಿ ಉಳ್ಳವರ ಪಾಲಾಗುತ್ತದೆ. ರೈತ ಮತ್ತೆ ಬಡತನಕ್ಕೆ ಸಿಲುಕುವ ಅಪಾಯವಿದೆ. ಈ ಬಾರಿ ಉತ್ತಮ ಮಳೆಯಾಗುತ್ತಿದೆ. ವ್ಯವಸಾಯಕ್ಕೆ ಉತ್ತಮ ವಾತಾವರಣವಿದೆ. ಈ ಕಾಯ್ದೆ ಬಗ್ಗೆ ವಿಧಾನಸಭೆಯಲ್ಲಿ ಚರ್ಚಿಸಿ ಸರ್ಕಾರಕ್ಕೆ ಮನದಟ್ಟು ಮಾಡಿಕೊಡುತ್ತೇನೆ ಎಂದು ಹೇಳಿದರು.
ಕಣಿಯ ಸಮಾಜ ಚಿಕ್ಕ ಸಮುದಾಯವಾಗಿದೆ. ಇವರು ಸಮುದಾಯ ಭವನ ನಿರ್ಮಿಸಿಕೊಳ್ಳಲು 12.50 ಲಕ್ಷ ರೂ. ಅಂದಾಜು ಮಾಡಲಾಗಿದೆ. ಇದರಲ್ಲಿ ಸರ್ಕಾರ 10 ಲಕ್ಷ ರೂ. ಬಿಡುಗಡೆ ಮಾಡಲಿದೆ. ಉಳಿದ 2.5 ಲಕ್ಷ ರೂ.ಗಳನ್ನು ನನ್ನ ಅನುದಾನದಿಂದ ನೀಡುತ್ತೇನೆ. ಈಗಾಗಲೇ 2.5 ಲಕ್ಷ ರೂ. ಹಣ ಬಿಡು ಗಡೆಯಾಗಿದ್ದು ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ತಾಪಂ ಪ್ರಭಾರ ಅಧ್ಯಕ್ಷೆ ಭಾಗ್ಯ, ಗ್ರಾಪಂ ಅಧ್ಯಕ್ಷೆ ಗೌರಮ್ಮ, ಸದಸ್ಯರಾದ ರಂಗಸ್ವಾಮಿ, ಪುಟ್ಟಯ್ಯ,ನಾಗರಾಜು ನಿರ್ಮಿತಿ ಕೇಂದ್ರದ ಜೆಇ ನಂದೀಶ್, ಪಿಡಿಒ ಮಹೇಶ್, ಗೋವಿಂದ, ಮಹಾ ದೇವಸ್ವಾಮಿ, ಕೃಷ್ಣಕುಮಾರ್, ಕಣಿಯರ ಸಂಘದ ಅಧ್ಯಕ್ಷ ಚೆಲುವರಾಜು, ರೇವಣ್ಣ, ವೃಷಭೇಂದ್ರ, ತಿಲಕ್, ಚೆನ್ನರಾಜು ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸೈಕ್ಲೋನ್: ಮುಂಗಾರು ಕೈಕೊಡುವ ಸಾಧ್ಯತೆ
ಕುರಾನ್ ಓದಲಿ,ಆದರೆ ಮದರಸಾಗಳ ಶಿಕ್ಷಣ ಅಸ್ತಿತ್ವದಲ್ಲಿರಬಾರದು: ಹಿಮಂತ ಬಿಸ್ವಾ
ಬಾಡಿಗೆ ಮನೆ ಕೇಳುವ ನೆಪದಲ್ಲಿ ಮಾಲೀಕರ ಕೈ-ಕಾಲು ಕಟ್ಟಿ ಚಿನ್ನಾಭರಣ ಲೂಟಿ: ಮೂವರ ಬಂಧನ
ತೈಲ ಬೆಲೆ 110 ಡಾಲರ್ ನಲ್ಲಿದ್ದರೆ ಹಣದುಬ್ಬರಕ್ಕಿಂತಲೂ ಹೆಚ್ಚು ಸಮಸ್ಯೆಯಾಗಲಿದೆ: ಸಚಿವ ಪುರಿ
ರೇವ್ ಪಾರ್ಟಿಗೆ ಪೊಲೀಸರ ದಾಳಿ; ಡ್ರಗ್ಸ್ ನಶೆ ಹೆಚ್ಚಾಗಿ ಕುಸಿದು ಬಿದ್ದ ಯುವಕ ಸಾವು