ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆಗೆ ಸಿದ್ಧತೆ


Team Udayavani, Feb 20, 2020, 3:00 AM IST

mahadeshwara-betta

ಚಾಮರಾಜನಗರ: ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಫೆ.20ರಿಂದ 24ರವರೆಗೆ ನಡೆಯಲಿರುವ ಮಹಾ ಶಿವರಾತ್ರಿ ಜಾತ್ರೆಗೆ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಸಕಲ ಸಿದ್ಧತೆ ಕೈಗೊಂಡಿದೆ. ಲಕ್ಷಾಂತರ ಭಕ್ತಾದಿಗಳು ಜಾತ್ರೆಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸನ್ನದ್ಧವಾಗಿದೆ.

ಫೆ.20ರಿಂದ ಮಹಾ ಶಿವರಾತ್ರಿ ಜಾತ್ರೆ ಆರಂಭವಾಗಲಿದೆ. ಫೆ.21ರಂದು ಶ್ರೀಸ್ವಾಮಿಗೆ ಎಣ್ಣೆಮಜ್ಜನ ವಿಶೇಷ ಸೇವೆ ಉತ್ಸವ ನಡೆಯಲಿದೆ. 22 ಹಾಗೂ 23ರಂದು ಅಮಾವಾಸ್ಯೆ ವಿಶೇಷ ಸೇವೆ ಉತ್ಸವ ಜರುಗಲಿದೆ. 24ರ ಬೆಳಗ್ಗೆ 9.50ರಿಂದ 11 ಗಂಟೆಯವರೆಗೆ ಮಹಾರಥೋತ್ಸವ, ರಾತ್ರಿ ಅಭಿಷೇಕ, ಪೂಜೆ ನಂತರ ಕೊಂಡೋತ್ಸವ ನಡೆಯಲಿದೆ. ಭಕ್ತಾದಿಗಳಿಗೆ ಬೆಳಗ್ಗೆ 6.30ರಿಂದ ಸಂಜೆ 5.30ರವರೆಗೆ ಹಾಗೂ ರಾತ್ರಿ 8.30ರಿಂದ ಬೀಗಮುದ್ರಯಾಗುವವರಿಗೆ ಧರ್ಮ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ.

ಸುಗಮ ಸಂಚಾರಕ್ಕೆ ವ್ಯವಸ್ಥೆ: ಶ್ರೀಕ್ಷೇತ್ರಕ್ಕೆ ಆಗಮಿಸುವ ಪಾದಯಾತ್ರಿಗಳಿಗೆ ಕೌದಳ್ಳಿಯಿಂದ ಶ್ರೀಕ್ಷೇತ್ರದವರೆಗೆ 10 ಸ್ಥಳಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದೆ. ತಾಳಬೆಟ್ಟದಿಂದ ಮಹಾದ್ವಾರದ ರಸ್ತೆಯನ್ನು ವಾಹನ ರಹಿತ ಮಾಡಿ ಭಕ್ತಾದಿಗಳಿಗೆ ಪೂಜಾ ವಿಧಿವಿಧಾನಗಳಿಗೆ ಅವಕಾಶ ಕಲ್ಪಿಸಿ, ಭಕ್ತಾದಿಗಳಿಂದ ಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಲಾಗಿದೆ. ತಾಳಬೆಟ್ಟದಿಂದ ಶ್ರೀಕ್ಷೇತ್ರದವರೆಗೆ ಪಾದಚಾರಿ ರಸ್ತೆಯ ಮೆಟ್ಟಿಲು ಮತ್ತು ರಸ್ತೆ ಬದಿಯ ಗಿಡಗಂಟೆಗಳನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಆನೆತಲೆ ದಿಂಬಂನಿಂದ ಶ್ರೀಕ್ಷೇತ್ರದವರೆಗೆ ಪಾದಚಾರಿ ರಸ್ತೆಯಲ್ಲಿ ದೀಪಾಲಂಕಾರ ಮತ್ತು ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಜಾತ್ರೆಗಾಗಿ ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್‌: ಸಾರಿಗೆ ವ್ಯವಸ್ಥೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಹೆಚ್ಚುವರಿಯಾಗಿ 400 ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ಹಾಗೂ ತಮಿಳುನಾಡು ಕಡೆಯಿಂದ 100 ಟಿಎನ್‌ಎಸ್‌ಟಿಸಿ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್‌ ವ್ಯವಸ್ಥೆ ಶಿವರಾತ್ರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಫೆ.20ರಿಂದ 24ರವರೆಗೆ ಬೆಟ್ಟದಲ್ಲಿ ವಿವಿಧ ರೀತಿಯ ವಾಹನಗಳಿಗೆ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಆನೆಹೊಲದಲ್ಲಿ ವಾಹನ ಪಾರ್ಕ್‌ ಮಾಡುವ ಭಕ್ತಾದಿಗಳಿಗೆ ಪ್ರಾಧಿಕಾರದಿಂದ ಉಚಿತ ಬಸ್‌ ಸೌಲಭ್ಯ ಕಲ್ಪಿಸಲಾಗಿದೆ.

ಪಾರ್ಕಿಂಗ್‌ ಸ್ಥಳಗಳು: ಆನೆಹೊಲ 1ನೇ ಪಾರ್ಕಿಂಗ್‌ನಲ್ಲಿ ದ್ವಿಚಕ್ರ ವಾಹನಗಳಿಗೆ, ಆನೆಹೊಲ 2ನೇ ಪಾರ್ಕಿಂಗ್‌ನಲ್ಲಿ ಲಾರಿ ಮತ್ತು ಗೂಡ್ಸ್‌ ಆಟೋ ವಾಹನಗಳಿಗೆ ನಿಲುಗಡೆ ವ್ಯವಸ್ಥೆ ಕಲ್ಪಿಸಿದೆ. ಹುಲಿಗೂಡು ಪಾರ್ಕಿಂಗ್‌ನಲ್ಲಿ ಮತ್ತು ಪಿಡಬ್ಲೂಡಿ ಕಚೇರಿ ಎಡಭಾಗದಲ್ಲಿ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್‌ ಸೌಲಭ್ಯವಿದೆ. ಆಸ್ಪತ್ರೆ ಪಾರ್ಕಿಂಗ್‌ ಬಳಿ ಕಾರು, ಬಸ್ಸು, ಮಿನಿ ಬಸ್‌ಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಮಹದೇಶ್ವರ ಶಾಲೆ ಮೈದಾನದಲ್ಲಿ ಕಾರು, ಮಿನಿಬಸ್ಸು ಹಾಗೂ ಲಘು ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಕಲ್ಪಿಸಿದೆ. ಜೇನುಮಲೆ ಭವನ ಮುಂಭಾಗ ಕೆಎಸ್‌ಆರ್‌ಟಿಸಿ ಬಸ್ಸು ಹಾಗೂ ಪಾಲಾರ್‌ ಪಾರ್ಕಿಂಗ್‌ನಲ್ಲಿ ತಮಿಳುನಾಡಿನ ಸರ್ಕಾರಿ ಬಸ್ಸುಗಳ ನಿಲುಗಡೆ ಮಾಡಲು ವ್ಯವಸ್ಥೆ ಇದೆ.

ವಿವಿಧೆಡೆ ನಲ್ಲಿ ಅಳವಡಿಕೆ: ಕುಡಿಯುವ ನೀರು ಮತ್ತು ಸ್ನಾನದ ನೀರಿನ ವ್ಯವಸ್ಥೆಯನ್ನು ಅರಳಿ ಮಠದ ಮುಂಭಾಗ, ಬಲಮುರಿ ಗಣಪತಿ ದೇವಸ್ಥಾನದ ಮುಂಭಾಗ, ಲಾಡು ಕೌಂಟರ್‌ ಪಕ್ಕ, ರಂಗಮಂದಿರದ ಆವರಣ, ಬಸ್‌ ನಿಲ್ದಾಣದ ಮಾಹಿತಿ ಕೇಂದ್ರದ ಪಕ್ಕದಲ್ಲಿ, ಶ್ರೀಶೈಲ ಭವನ ಮುಂಭಾಗ, ಸಂಕಮ್ಮ ನಿಲಯ ಮುಂಭಾಗ, ಅಂತರಗಂತೆ ಹತ್ತಿರ ಸೇರಿ ಒಟ್ಟು 8 ಸ್ಥಳಗಳಲ್ಲಿ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆಗೆ ವಿವಿಧ ಸ್ಥಳಗಳಲ್ಲಿ ನಲ್ಲಿಗಳನ್ನು ಅಳವಡಿಸಲಾಗಿದೆ. ಸರದಿ ಸಾಲಿನಲ್ಲಿಯೂ ಸಹ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಪರ್ವ ಮಾಡುವ ಭಕ್ತರಿಗೆ ಕಲ್ಯಾಣ ಮಂಟಪದ ಮುಂಭಾಗ ಸ್ಥಳಾವಕಾಶ ಕಲ್ಪಿಸಿ, ಪಾತ್ರೆ ತೊಳೆಯಲು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ಪ್ರತ್ಯೇಕ ಷವರ್‌ ವ್ಯವಸ್ಥೆ: ಅಂತರಗಂಗೆ ಪಕ್ಕದಲ್ಲಿ ಬೃಹತ್‌ ಶೌಚಾಲಯದ ಹಿಂಭಾಗದಲ್ಲಿ ಪ್ರತಿ ಗಂಟೆಗೆ ಸುಮಾರು 400 ಭಕ್ತರು ಏಕಕಾಲದಲ್ಲಿ ಸ್ನಾನ ಮಾಡಲು ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಷವರ್‌ ವ್ಯವಸ್ಥೆ ಕಲ್ಪಿಸಿದೆ. ಅಂತರಗಂಗೆಯಲ್ಲಿ ಹೊಸದಾಗಿ ನಿರ್ಮಿಸಿರುವ ಕಲ್ಯಾಣಿಯಲ್ಲಿ ಪವಿತ್ರ ಸ್ನಾನ ಮಾಡಲು ಮತ್ತು ಕಲ್ಯಾಣಿ ಪಕ್ಕದಲ್ಲಿ ಬಟ್ಟೆ ಬದಲಾಯಿಸಲು ವ್ಯವಸ್ಥೆ ಮಾಡಲಾಗಿದೆ. ಅಂತರಗಂಗೆ ಪಕ್ಕದಲ್ಲಿರುವ ಬೃಹತ್‌ ಶೌಚಾಲಯದ ಕಟ್ಟಡದಲ್ಲಿಯೂ ಸ್ನಾನದ ವ್ಯವಸ್ಥೆ ಇರಲಿದೆ. ಭಕ್ತಾದಿಗಳು ಕೈಕಾಲು ತೊಳೆಯಲು ಅರಳಿ ಮರದ ಮುಂಭಾಗ, ರಾಜಗೋಪುರದ ಬಲಭಾಗ, ಬಸ್‌ ನಿಲ್ದಾಣದ ಶೌಚಾಲಯದ ಪಕ್ಕ ಸೇರಿದಂತೆ 3 ಕಡೆಗಳಲ್ಲಿ ನಲ್ಲಿಗಳನ್ನು ಅಳವಡಿಸಿ ಕ್ರಮ ವಹಿಸಲಾಗಿದೆ.

ನೆರಳು, ನೀರಿಗೆ ತುರ್ತು ಕ್ರಮ: ಜಾತ್ರೆಗೆ ಬರುವ ಭಕ್ತಾದಿಗಳಿಗೆ ನೆರಳಿನ ವ್ಯವಸ್ಥೆಯನ್ನು ಮಾಲಾಗಿದೆ. ರಾಜಗೋಪುರದ ಮುಂಭಾಗ ಎಡ ಮತ್ತು ಬಲ ಭಾಗದ ಖಾಲಿ ಮೈದಾನದಲ್ಲಿ ಪ್ರತ್ಯೇಕವಾಗಿ 2 ಕಡೆ ಶಾಮಿಯಾನ ಹಾಕಲಾಗಿದೆ. ಸರತಿ ಸಾಲಿನಲ್ಲಿ ದರ್ಶನ ಮಾಡುವ ಭಕ್ತರಿಗೆ ನೆರಳಿಗಾಗಿ ದೇವಸ್ಥಾನದ ಸುತ್ತ, ವಿಶೇಷ ದಾಸೋಹದಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ಮುಂಭಾಗದ ಆವರಣದಲ್ಲಿ ಶಾಮಿಯಾನ ಹಾಕಲಾಗಿದೆ. ಇತರೆ ಅವಶ್ಯಕತೆ ಕಂಡುಬಂದ ಸ್ಥಳಗಳಲ್ಲಿ ಶಾಮಿಯಾನ ಅಳವಡಿಸಲಾಗುವುದು. ತುರ್ತು ಸಂದರ್ಭದಲ್ಲಿ ಅವಶ್ಯಕತೆ ಇರುವ ಕಡೆಗಳಲ್ಲಿ ನೆರಳು ಮತ್ತು ನೀರಿನ ವ್ಯವಸ್ಥೆಯನ್ನು ತುರ್ತಾಗಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.

ಶೌಚಾಲಯ ಸೌಲಭ್ಯ: ಪ್ರಾಧಿಕಾರದ ಮಾಸ್ಟರ್‌ ಪ್ಲಾನ್‌ ಆವರಣದ ಅಂತರಗಂತೆ ಸಮೀಪ ಬೃಹತ್‌ ಶೌಚಾಲಯ, ಪಾಲಾರ್‌ ರಸ್ತೆ, ಅರಳಿಮರದ ರಸ್ತೆ, ಬಸ್‌ ನಿಲ್ದಾಣ, ಶಿವದರ್ಶಿನಿ ಅತಿಥಿಗೃಹದ ಪಕ್ಕ, ಮುಡಿ ಶೆಡ್‌ ಹಿಂಭಾಗ, ದಾಸೋಹದ ಒಳ ಆವರಣ ಹಾಗೂ ಎಸಿ ಶೀಟ್‌ ಮಳಿಗೆಗಳ ಪಕ್ಕ ಸೇರಿದಂತೆ ಒಟ್ಟು 11 ಸ್ಥಳಗಳಲ್ಲಿ ಖಾಯಂ ಆಗಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಭಕ್ತಾದಿಗಳು ಉಚಿತವಾಗಿ ಉಪಯೋಗಿಸಬಹುದಾಗಿದೆ. ದೇವಸ್ಥಾನದ ಮುಂಭಾಗ, ರಾಜಗೋಪುರದ ಬಲಭಾಗದ ತಗ್ಗಿನಲ್ಲಿ 60 ಶೌಚಾಲಯಗಳನ್ನು ಹೊಂದಿದ ಸಮುಚ್ಚಯ ಹಾಗೂ ಆಸ್ಪತ್ರೆ ಮುಂಭಾಗದಲ್ಲಿ ಪಾರ್ಕಿಂಗ್‌ ಆವರಣದಲ್ಲಿ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಇದಲ್ಲದೆ ತಾತ್ಕಾಲಿಕವಾಗಿ ಶೌಚಾಲಯಗಳನ್ನು ಸಂಕಮ್ಮ ನಿಲಯದ ಹತ್ತಿರ, ಅಂತರಗಂಗೆ ಡ್ಯಾಂ ರಸ್ತೆ ಹಾಗೂ ಪಾಲಾರ್‌ ರಸ್ತೆಯಲ್ಲಿಯೂ ಸಹ ಕಲ್ಪಿಸಲಾಗಿದೆ.

ನಿರಂತರ ದಾಸೋಹ: ಭಕ್ತಾದಿಗಳಿಗೆ ದಾಸೋಹದಲ್ಲಿ ಬೆಳಗ್ಗೆ 7 ಗಂಟೆಯಿಂದ ಮಧ್ಯರಾತ್ರಿಯವರೆಗೆ ನಿರಂತರವಾಗಿ ದಾಸೋಹ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಊಟದ ಸಮಯದಲ್ಲಿ ಹಬ್ಬದ ಊಟ ಉಳಿದಂತೆ ತಿಂಡಿ ಬಡಿಸುವ ವ್ಯವಸ್ಥೆ ಮಾಡಲಾಗಿದೆ. ವಿಶೇಷ ದಾಸೋಹದ ವ್ಯವಸ್ಥೆ ಸಹ ಕಲ್ಪಿಸಲಾಗಿದೆ. ಮಾಹಿತಿ ಕೇಂದ್ರ ಭಕ್ತಾದಿಗಳಿಗೆ ಮಾಹಿತಿ ನೀಡಲು ಅನುಕೂಲವಾಗುವಂತೆ ಮಾಹಿತಿ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ. ಪೆಟ್ರೋಲ್‌ ಬಂಕ್‌ ಬಳಿ ಭಕ್ತಾದಿಗಳು ಇಳಿಯುವ ಸ್ಥಳದಲ್ಲಿ, ಬಸ್‌ ನಿಲ್ದಾಣದ ಬಳಿ ಇರುವ ವಾಣಿಜ್ಯ ಮಳಿಗೆಯಲ್ಲಿ, ಜಡೆಕಲ್ಲು ಮಂಟಪ ದೇವಸ್ಥಾನದ ಪಕ್ಕದಲ್ಲಿ, ರಾಜಗೋಪುರ ಮುಂಭಾಗ, ಅಂತರಗಂಗೆ ಬಳಿ ಮಾಹಿತಿ ಕೇಂದ್ರ ತೆರೆಯಲಾಗಿದೆ.

ಮಾಹಿತಿ ಕೇಂದ್ರಗಳಲ್ಲಿ ಕ್ಷೇತ್ರದಲ್ಲಿ ಒದಗಿಸಲಾಗುತ್ತಿರುವ ಸೌಲಭ್ಯಗಳು ಹಾಗೂ ದೇವಸ್ಥಾನದಲ್ಲಿ ನಡೆಯುವ ಪೂಜಾ ಕಾರ್ಯಕ್ರಮಗಳ ಕುರಿತು ಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ. ಈ ಮಾಹಿತಿ ಕೇಂದ್ರಗಳಲ್ಲಿ ತಪ್ಪಿಸಿಕೊಂಡವರ ಬಗ್ಗೆ, ವಸ್ತುಗಳನ್ನು ಕಳೆದುಕೊಂಡಿರುವ ಬಗ್ಗೆ ತಿಳಿಸಿದಲ್ಲಿ ಧ್ವನಿವರ್ಧಕಗಳ ಮೂಲಕ ಪ್ರಚಾರ ಮಾಡಲಾಗುವುದು. ಈ ಮಾಹಿತಿ ಕೇಂದ್ರಗಳಲ್ಲಿ ಭಕ್ತಾಧಿಗಳು ಕಾಣಿಕೆ ಹಾಗೂ ದವಸ ಧಾನ್ಯಗಳನ್ನು ಸ್ವಾಮಿಯವರಿಗೆ ಅರ್ಪಿಸಿ ಅಧಿಕೃತ ರಸೀತಿಗಳನ್ನು ಪಡೆಯಬಹುದಾಗಿದೆ.

ಲಗೇಜ್‌ ಕೌಂಟರ್‌ ವ್ಯವಸ್ಥೆ: ಶ್ರೀಕ್ಷೇತ್ರಕ್ಕೆ ಆಗಮಿಸುವ ಭಕ್ತರು ತಮ್ಮ ಸಾಮಗ್ರಿಗಳನ್ನು ಇಡಲು ಅಂತರಗಂಗೆಯ ದರ್ಶಿನಿ ಹತ್ತಿರ, ಜಡೆಕಲ್ಲು ದೇವಸ್ಥಾನದ ಹತ್ತಿರ ಹಾಗೂ ಬಸ್‌ ನಿಲ್ದಾಣಗಳ ಮಾಹಿತಿ ಕೇಂದ್ರದ ಪಕ್ಕದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಸ್ವಾಮಿಯ ದರ್ಶನ ಸೌಲಭ್ಯ
ಧರ್ಮದರ್ಶನ: ಭಕ್ತಾದಿಗಳಿಗೆ 3ನೇ ನಂಬರ್‌ಗೆಟ್‌ ಮುಖಾಂತರ ನೆರಳಿನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಜತೆ ಹೆಚ್ಚುವರಿ ಸರತಿ ಸಾಲು ವ್ಯವಸ್ಥೆ ಮಾಡಲಾಗಿದೆ.

ನೇರದರ್ಶನ: ರಾಜಗೋಪುರದ ಮುಂಭಾಗದ ಗೇಟಿನ ಮೂಲಕ 500 ರೂ.ಗಳನ್ನು ನೀಡಿ ಪ್ರವೇಶ ಪಡೆಯಬಹುದು. 2 ಲಾಡು, 1 ತೆಂಗಿನ ಕಾಯಿ ಪ್ರಸಾದ ನೀಡಲಾಗುವುದು.

ಆರೋಗ್ಯ ಕೇಂದ್ರ: ಹಾಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಜತೆಗೆ ಬಸ್‌ ನಿಲ್ದಾಣದ ಮಾಹಿತಿ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ವ್ಯವಸ್ಥೆ ಹಾಗೂ ತಾಳಬೆಟ್ಟದಲ್ಲಿ ತಾತ್ಕಾಲಿಕ ಆಸ್ಪತ್ರೆ ತೆರೆದು ಪ್ರಥಮ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲಾಗಿದೆ.

ಲಾಡು, ಕಲ್ಲು ಸಕ್ಕರೆ, ತೀರ್ಥ ಪ್ರಸಾದ ಮಾರಾಟ ವ್ಯವಸ್ಥೆ 4 ಮಾರಾಟ ಕೌಂಟರ್‌ಗಳು ಬೆಳಗ್ಗೆ 5.30 ರಿಂದ ರಾತ್ರಿ 10.30ರವರೆಗೆ ಜಾತ್ರಾ ಸಮಯದಲ್ಲಿ ಕಾರ್ಯ ನಿರ್ವಹಿಸುತ್ತವೆ. ರಾತ್ರಿ 10.30 ರಿಂದ ಬೆಳಗ್ಗೆ 5.30ರವರೆಗೆ 2 ಮಾರಾಟ ಕೌಂಟರ್‌ಗಳು ಕಾರ್ಯ ನಿರ್ವಹಿಸುತ್ತವೆ.

ಸೇವಾ ಕೌಂಟರ್‌: ಬೆಳಗ್ಗೆ 2ರಿಂದ 4 ಗಂಟೆಯವರೆಗೆ, ಸಂಜೆ 4ರಿಂದ 7 ಗಂಟೆಯವರೆಗೆ, ರಾತ್ರಿ 8ರಿಂದ 11 ಗಂಟೆಯವರೆಗೆ ಲಭ್ಯವಿದೆ.

ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಲು ದೂರವಾಣಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರಾಧಿಕಾರದ ಆಡಳಿತ ಕಚೇರಿ ದೂ.ಸಂ. 08226-272128, ಪೊಲೀಸ್‌ ಠಾಣೆ ದೂ.ಸಂ. 08225-272141, ಪ್ರಾಥಮಿಕ ಆರೋಗ್ಯ ಕೇಂದ್ರ ದೂ.ಸಂ. 08225-272155 ಸಂಪರ್ಕಿಸಿ ಮಾಹಿತಿ ಹಾಗೂ ಸೌಲಭ್ಯ ಪಡೆಯಬಹುದಾಗಿದೆ.

ಟಾಪ್ ನ್ಯೂಸ್

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-wr3

Record; ಮಲೆ ಮಹದೇಶ್ವರ ಬೆಟ್ಟ ಹುಂಡಿ ಎಣಿಕೆ: 25 ದಿನಗಳಲ್ಲಿ 3.13 ಕೋಟಿ!

Chamarajanagar; ಆನೆ ದಾಳಿಗೆ ಬಲಿಯಾದ ಯುವಕ

Chamarajanagar; ಆನೆ ದಾಳಿಗೆ ಬಲಿಯಾದ ಯುವಕ

Election Boycott: ಮತದಾನ ಬಹಿಷ್ಕಾರದಿಂದ ಹಿಂದೆ ಸರಿಯಲ್ಲ; ಗ್ರಾಮಸ್ಥರು

Election Boycott: ಮತದಾನ ಬಹಿಷ್ಕಾರದಿಂದ ಹಿಂದೆ ಸರಿಯಲ್ಲ; ಗ್ರಾಮಸ್ಥರು

Lok Sabha Election: ಯಾರಿಗೆ ದೊರಕಲಿದೆ ಚಾ.ನಗರ ಲೋಕಸಭೆ ಕಾಂಗ್ರೆಸ್‌ ಟಿಕೆಟ್‌?

Lok Sabha Election: ಯಾರಿಗೆ ದೊರಕಲಿದೆ ಚಾ.ನಗರ ಲೋಕಸಭೆ ಕಾಂಗ್ರೆಸ್‌ ಟಿಕೆಟ್‌?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.