ಮಳೆಗೆ ನಾಗರಹೊಳೆ ಉದ್ಯಾನಕ್ಕೆ ಜೀವಕಳೆ…ಕಾಡಿನಲ್ಲಿರುವ ಕೆರೆ ಕಟ್ಟೆಗಳು ಭರ್ತಿ

ಈ ಬಾರಿ ಮುಂಗಾರು ಮಳೆ ಬೇಗನೆ ಆರಂಭವಾಗಿದ್ದು, ಕಾನನದಲ್ಲಿ ಹಸಿರು ಇಮ್ಮಡಿಸಿದೆ

Team Udayavani, May 24, 2022, 6:27 PM IST

ಮಳೆಗೆ ನಾಗರಹೊಳೆ ಉದ್ಯಾನಕ್ಕೆ ಜೀವಕಳೆ…ಕಾಡಿನಲ್ಲಿರುವ ಕೆರೆ ಕಟ್ಟೆಗಳು ಭರ್ತಿ

ಹುಣಸೂರು: ಆಸಾನಿ ಚಂಡ ಮಾರುತದ ಪರಿಣಾಮ ವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ನಾಗರಹೊಳೆ ಉದ್ಯಾನಕ್ಕೆ ಜೀವಕಳೆ ಬಂದಿದೆ. ಕಾಡಿನಲ್ಲಿರುವ ಕೆರೆ ಕಟ್ಟೆಗಳು ಭರ್ತಿ ಆಗಿದ್ದು, ವನ್ಯ ಪ್ರಾಣಿಗಳ ಸ್ವಚ್ಛಂದ ವಿಹಾರಕ್ಕೆ ಪಾರವೇ ಇಲ್ಲದಂತಾಗಿದೆ.

ಬೇಸಿಗೆ ಬಂತೆಂದರೆ ಮೇವು, ನೀರಿಗೆ ಹಾಹಾಕಾರ ಉಂಟಾಗಿ, ವನ್ಯಪ್ರಾಣಿಗಳು ರೈತರ ಜಮೀನಿಗೆ, ಊರುಗಳಿಗೆ ದಾಂಗುಡಿ ಇಡುತ್ತಿದ್ದವು. ಆದರೆ, ಆಸಾನಿ ಚಂಡಮಾರುತ ಇದಕ್ಕೆ ಬ್ರೇಕ್‌ ಹಾಕಿದೆ. ಉದ್ಯಾನದ ಎಲ್ಲಾ ವಲಯಗಳಲ್ಲೂ ಭಾರೀ ಮಳೆ ಬಿದ್ದಿದೆ. ಇದರಿಂದ ಮೇವು, ನೀರು ಯಥೇಚ್ಛವಾಗಿ ದೊರೆಯುತ್ತಿದೆ. ವನ್ಯ ಪ್ರಾಣಿಗಳು ಮೇವು ಮೇಯುತ್ತಾ ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿವೆ.

ನಿಟ್ಟುಸಿರು ಬಿಟ್ಟ ಅರಣ್ಯಾಧಿಕಾರಿಗಳು: ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಹಗಲು ರಾತ್ರಿ ಎನ್ನದೇ ಬೆಂಕಿಯಿಂದ ಅರಣ್ಯವನ್ನು ಕಾಯುತ್ತಿದ್ದರು. ಕೆಲವೊಮ್ಮೆ ಸಫಾರಿಯೂ ಸ್ಥಗಿತಗೊಳಿಸಲಾಗುತ್ತಿತ್ತು. ಈ ಬಾರಿ ಮುಂಗಾರು ಮಳೆ ಬೇಗನೆ ಆರಂಭವಾಗಿದ್ದು, ಕಾನನದಲ್ಲಿ ಹಸಿರು ಇಮ್ಮಡಿಸಿದೆ. ಪ್ರವಾಸಿಗರಿಗೆ, ವನ್ಯಪ್ರಿಯರಿಗೆ ನಾಗರಹೊಳೆ ಉದ್ಯಾನವನ ಹೇಳಿ ಮಾಡಿಸಿದ ತಾಣವಾಗಿದ್ದರೆ, ಬೇಸಿಗೆಯಲ್ಲೇ ಬಂದ ಮಳೆಯಿಂದಾಗಿ ಅರಣ್ಯಾಧಿಕಾರಿಗಳು ನಿಟ್ಟುಸಿರು ಬಿಡುವಂತಾಗಿದೆ.

ನಾಗರಹೊಳೆಗೆ ದಾರಿ: ಮೈಸೂರು, ಬೆಂಗಳೂರು ಕಡೆಯಿಂದ ಬರುವವರು ಹುಣಸೂರು, ವೀರನಹೊಸಹಳ್ಳಿಗೆ ಬರಬೇಕು. ಅಥವಾ ಮೈಸೂರಿನಿಂದ ಎಚ್‌.ಡಿ.ಕೋಟೆಯ ಹ್ಯಾಂಡ್‌ ಪೋಸ್ಟ್‌ ಮಾರ್ಗವಾಗಿ ದಮ್ಮನಕಟ್ಟೆಗೆ ತೆರಳಬೇಕು. ಬೆಂಗಳೂರಿನಿಂದ 189 ಕಿ. ಮೀ. ಮೈಸೂರಿನಿಂದ 60 ಕಿ.ಮೀ.

ಸಫಾರಿ ಕೇಂದ್ರಗಳು: ನಾಗರಹೊಳೆ ಉದ್ಯಾನದ ಹುಣಸೂರು ತಾಲೂಕಿನ ವೀರನಹೊಸಹಳ್ಳಿ, ಎಚ್‌ .ಡಿ.ಕೋಟೆಯ ದಮ್ಮನಕಟ್ಟೆ, ಕೊಡಗಿನ ವಿರಾಜಪೇಟೆ ತಾಲೂಕಿನ ಕುಟ್ಟಬಳಿಯ ನಾಣಚ್ಚಿ ಗೇಟ್‌ನಿಂದ ಸಫಾರಿ ವ್ಯವಸ್ಥೆ ಇದ್ದು, ಪ್ರವಾಸಿಗರು ಆನ್‌ಲೈನ್‌ ಮೂಲಕವೂ ಬುಕ್‌ ಮಾಡಬಹುದು. ಜಂಗಲ್‌ ಲಾಡ್ಸ್‌ನ ಜೆ.ಎಲ್‌. ಆರ್‌ ಮೂಲಕವೂ ಸಫಾರಿಗೆ ಅವಕಾಶವಿದೆ.

ಸಂಪತ್‌ ಕುಮಾರ್‌

ಟಾಪ್ ನ್ಯೂಸ್

ನ್ಯೂಯಾರ್ಕ್‌ನಲ್ಲಿ ಶೂಟೌಟ್: ಭಾರತೀಯ ಮೂಲದ ವ್ಯಕ್ತಿಯ ಹತ್ಯೆ

ನ್ಯೂಯಾರ್ಕ್‌ನಲ್ಲಿ ಶೂಟೌಟ್: ಭಾರತೀಯ ಮೂಲದ ವ್ಯಕ್ತಿಯ ಹತ್ಯೆ

ಲೈಂಗಿಕ ದೌರ್ಜನ್ಯ ಆರೋಪ : ಮಲಯಾಳಂ ನಟ ವಿಜಯ್ ಬಾಬು ಬಂಧನ

ಲೈಂಗಿಕ ದೌರ್ಜನ್ಯ ಆರೋಪ : ಮಲಯಾಳಂ ನಟ ವಿಜಯ್ ಬಾಬು ಬಂಧನ

1-fgfg

ಪಠ್ಯ ಪುಸ್ತಕದಲ್ಲಿ ಕನಕದಾಸರ ಕಡೆಗಣನೆ : ಕಾಗಿನೆಲೆ ಶ್ರೀ ಆಕ್ರೋಶ

M B Patil

ಬಿಜೆಪಿಯವರು ಯಾಕೆ ದಲಿತರನ್ನ ಸಿಎಂ ಮಾಡಲಿಲ್ಲ?: ಎಂ.ಬಿ ಪಾಟೀಲ್

Uddhav

ಮಹಾಬಲದ ಜಟಾಪಟಿ: 9 ಬಂಡಾಯ ಸಚಿವರ ಖಾತೆಗಳು ವಜಾ

ಮಣ್ಣೆತ್ತಿನ ಅಮವಾಸ್ಯೆ: ಬಸವ ಮೂರ್ತಿಗಳ ಆರಾಧನೆ; ಕೃಷಿಕರ ಮುಂಗಾರಿನ ಮೊದಲ ಹಬ್ಬ

ಮಣ್ಣೆತ್ತಿನ ಅಮವಾಸ್ಯೆ: ಬಸವ ಮೂರ್ತಿಗಳ ಆರಾಧನೆ; ಕೃಷಿಕರ ಮುಂಗಾರಿನ ಮೊದಲ ಹಬ್ಬ

Rohit Sharma can be relieved as captain from T20s: Virender Sehwag

ರೋಹಿತ್ ಶರ್ಮಾ ನಾಯಕತ್ವ ತ್ಯಜಿಸಬೇಕು: ಸಲಹೆ ನೀಡಿದ ಸೆಹವಾಗ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ವಾತಂತ್ರ್ಯಕ್ಕೆ ಕರ್ನಾಟಕದ ಕೊಡುಗೆ ಅಪಾರ

ಸ್ವಾತಂತ್ರ್ಯಕ್ಕೆ ಕರ್ನಾಟಕದ ಕೊಡುಗೆ ಅಪಾರ

ಅಗ್ನಿಪಥ್‌: ಯುವಕರ ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್‌

ಅಗ್ನಿಪಥ್‌: ಯುವಕರ ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್‌

ಚಾಮರಾಜನಗರ ನಂದು.. ಇಲ್ಲಿ ಯಾರೇ ಬರಬೇಕಾದರೂ ನನ್ನ ಪರ್ಮಿಷನ್ ಪಡೆದೇ ಬರಬೇಕು. . . !

ಚಾಮರಾಜನಗರ ನಂದು.. ಇಲ್ಲಿ ಯಾರೇ ಬರಬೇಕಾದರೂ ನನ್ನ ಪರ್ಮಿಷನ್ ಪಡೆದೇ ಬರಬೇಕು. . . !

ತೆಂಗಿನಕೆರೆ ಹತ್ತಿರ ಬೀಡು ಬಿಟ್ಟ ಕಾಡಾನೆ: ಗ್ರಾಮಸ್ಥರಲ್ಲಿ ಆತಂಕ

ತೆಂಗಿನಕೆರೆ ಹತ್ತಿರ ಬೀಡು ಬಿಟ್ಟ ಕಾಡಾನೆ: ಗ್ರಾಮಸ್ಥರಲ್ಲಿ ಆತಂಕ

ಮಾದಪ್ಪನ ಬೆಟ್ಟದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 48 ಜೋಡಿ

ಮಾದಪ್ಪನ ಬೆಟ್ಟದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 48 ಜೋಡಿ

MUST WATCH

udayavani youtube

ಚಿಕ್ಕಮಗಳೂರು : ವೀಲಿಂಗ್ ಶೋಕಿ ಮಾಡಿದವರಿಗೆ ಖಾಕಿಗಳ ಬುಲ್ಡೋಜರ್ ಟ್ರೀಟ್ಮೆಂಟ್

udayavani youtube

ರಸ್ತೆ ಮಧ್ಯೆಯೇ ಪ್ರವಾಸಿಗರ ಸೆಲ್ಪಿ… ಚಾರ್ಮಾಡಿ ಘಾಟ್ ನಲ್ಲಿ ವಾಹನ ಸವಾರರ ಪರದಾಟ

udayavani youtube

ವರ್ಷದ ಬಳಿಕ ತಾಯಿ ಮಡಿಲು ಸೇರಿದ ಮಗ: ವಿಳಾಸ ಪತ್ತೆಗೆ ನೆರವಾಯಿತು ಫೇಸ್‌ ಬುಕ್

udayavani youtube

ಉಡುಪಿ : ಆಟೋರಿಕ್ಷಾ ಬಳಿ ತೆರಳಿ ಪ್ರಕರಣ ಇತ್ಯರ್ಥಪಡಿಸಿದ ನ್ಯಾಯಾಧೀಶರು

udayavani youtube

ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ, ಗೋಡೆ ಬಿರುಕು

ಹೊಸ ಸೇರ್ಪಡೆ

15

ದೂರು ಪ್ರಾಧಿಕಾರದ್ದೇ ದೊಡ್ಡ ದೂರು!

tdy-18

ಮನೆ ರಸ್ತೆ ಸಂಪರ್ಕಕ್ಕಾಗಿ ಗ್ರಾಪಂ ಕಚೇರಿ ಮುಂದೆ ಧರಣಿ

ನ್ಯೂಯಾರ್ಕ್‌ನಲ್ಲಿ ಶೂಟೌಟ್: ಭಾರತೀಯ ಮೂಲದ ವ್ಯಕ್ತಿಯ ಹತ್ಯೆ

ನ್ಯೂಯಾರ್ಕ್‌ನಲ್ಲಿ ಶೂಟೌಟ್: ಭಾರತೀಯ ಮೂಲದ ವ್ಯಕ್ತಿಯ ಹತ್ಯೆ

ಲೈಂಗಿಕ ದೌರ್ಜನ್ಯ ಆರೋಪ : ಮಲಯಾಳಂ ನಟ ವಿಜಯ್ ಬಾಬು ಬಂಧನ

ಲೈಂಗಿಕ ದೌರ್ಜನ್ಯ ಆರೋಪ : ಮಲಯಾಳಂ ನಟ ವಿಜಯ್ ಬಾಬು ಬಂಧನ

1-fgfg

ಪಠ್ಯ ಪುಸ್ತಕದಲ್ಲಿ ಕನಕದಾಸರ ಕಡೆಗಣನೆ : ಕಾಗಿನೆಲೆ ಶ್ರೀ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.